ಕಾವೇರಿ ಹೋರಾಟದ ದಿನ ಇದ್ದಕ್ಕಿದ್ದಂತೆ ವೇದಿಕೆಯಿಂದ ಎದ್ದು ಹೊರಟ ಧ್ರುವ ಸರ್ಜಾ; ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ ಪ್ರಥಮ್

Published : Oct 05, 2023, 03:16 PM IST
ಕಾವೇರಿ ಹೋರಾಟದ ದಿನ ಇದ್ದಕ್ಕಿದ್ದಂತೆ ವೇದಿಕೆಯಿಂದ ಎದ್ದು ಹೊರಟ ಧ್ರುವ ಸರ್ಜಾ; ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ ಪ್ರಥಮ್

ಸಾರಾಂಶ

ಧ್ರುವ ಸರ್ಜಾ ಮನಸ್ಸಿನಲ್ಲಿರುವ ನೋವು ಹೊರ ಹಾಕಲು ಹೀಗೆ ಮಾಡಿ ಎಂದು ಮನವಿ ಮಾಡಿಕೊಂಡ ಪ್ರಥಮ್...

ಸ್ಯಾಂಡಲ್‌ವುಡ್‌ ಯುವ ನಟ, ದಿವಂಗತ ಚಿರಂಜೀವಿ ಸರ್ಜಾ ಕೊನೆ ಸಿನಿಮಾ ರಾಜ ಮಾರ್ತಾಂಡ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತ್ತು. ಕಾರ್ಯಕ್ರಮದಲ್ಲಿ ಮೇಘನಾ ರಾಜ್ ಮತ್ತು ಧ್ರುವ ಸರ್ಜಾ ಆಗಾಗ ಭಾವುಕರಾಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ವೈರಲ್ ಆಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಒಳ್ಳೆ ಹುಡುಗ ಪ್ರಥಮ್ ಧ್ರುವ ಪರ ಬ್ಯಾಟಿಂಗ್ ಮಾಡಿದ್ದಾರೆ. 29 ಕರ್ನಾಟಕ ಬಂದ್ ದಿನ ಧ್ರುವ ಯಾಕೆ ಬೇಸರದಲ್ಲಿದ್ದರು ಯಾಕೆ.  

29 ಕರ್ನಾಟಕದಲ್ಲಿ ಕಾವೇರಿ ಬಂದ್ ಆಯ್ತು ಅದರ ಹಿಂದಿನ ದಿನ 28ರಂದು ಧ್ರುವ ಸರ್ಜಾ ಅಪ್ಪಟ ಅಭಿಮಾನಿ ರಘುನಾತ್ ಅವರು ಹಾಸನ್- ಬೆಂಗಳೂರು ರಸ್ತೆಯಲ್ಲಿ ಪ್ರಯಾಣ ಮಾಡುವಾಗ ರಸ್ತೆ ಅಪಘಾತದಲ್ಲಿ ಅಗಲಿದರು. ಕಾರಿನಲ್ಲಿದ್ದ ನಾಲ್ಕು ಜನರು ಅಗಲಿದ್ದರು. ಆ ವ್ಯಕ್ತಿಗೆ ಧ್ರುವ ಸರ್ಜಾ ಅವರನ್ನು ಒಮ್ಮೆ ಆದರೂ ಭೇಟಿ ಮಾಡಬೇಕು ಎಂದು ಆಸೆ ಇತ್ತಂತೆ. ಹೀಗಾಗಿ ಆಗಾಗ ಒಳ್ಳೆ ಹುಡುಗ ಪ್ರಥಮ್ ಕರೆ ಮಾಡಿ ಧ್ರುವ ನಿಮ್ಮ ಅಭಿಮಾನಿ ಇದ್ದರೆ ಅವರನ್ನು ಭೇಟಿ ಮಾಡಬೇಕು ಎನ್ನುತ್ತಿದ್ದಾರೆ ಎಂದು ಹೇಳಿದಾಗ..ಒಂದು ನಿಮಿಷವೂ ಯೋಚನೆ ಮಾಡದೆ ಸರ್ ಬರ್ತಡೇ ದಿನ ಕರೆದುಕೊಂಡು ಬನ್ನಿ ಎಂದರಂತೆ. ಅಷ್ಟರಲ್ಲಿ ಇಲ್ಲ ಧ್ರುವ ಅವರು ರಸ್ತೆ ಅಪಘಾತದಲ್ಲಿ ಅಗಲಿದರು ಎಂದು ಹೇಳಿದರಂತೆ. ಅಷ್ಟು ಪ್ರೀತಿ ಕೊಡುತ್ತಿದ್ದ ಅಭಿಮಾನಿಯನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ಧ್ರುವ ಬೇಸರ ಮಾಡಿಕೊಂಡು ಡಿಪ್ರೆಶನ್‌ಗೆ ಜಾರಿದ್ದರಂತೆ.  ಆ ಹುಡುಗ ಬಡ ಕುಟುಂಬದವರಾಗಿದ್ದು ಬೆಂಗಳೂರಿಗೆ ಬಂದು ಐಟಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಧ್ರುವ ಸರ್ಜಾ ಸಿನಿಮಾ ನಿರ್ದೇಶನ ಮಾಡಬೇಕು ಎಂದು ಕನಸು ಕಂಡರಂತೆ. ಆ ಅಪಘಾತದಲ್ಲಿ ಬಸ್‌ ಕೆಳಗೆ ಕಾರು ಸಿಲುಕಿಕೊಂಡಿದೆ ಸುಮಾರು 50 ನಿಮಿಷ ಆದರೂ ಕಾರು ಹೊರ ತೆಗೆಯಲು ಕಷ್ಟ ಪಟ್ಟಿದ್ದಾರೆ. 

ರಾತ್ರಿ ಎರಡು ಗಂಟೆಗೆ ಬಂದು ಬೆಳಗ್ಗೆವರೆಗೂ ಬಿಗ್ ಬಾಸ್ ನೋಡುತ್ತೀನಿ; STRESS ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್

ಕರ್ನಾಟದ ಬಂದ್ ದಿನ ಧ್ರುವ ಸರ್ಜಾ ತುಂಬಾ ಬೇಸರದಲ್ಲಿದ್ದರು. ಅವರಲ್ಲಿ ಯಾವ ಚೈತನ್ಯವೂ ಇರಲಿಲ್ಲ ಅಷ್ಟು ಡಿಪ್ರೆಸ್ ಆಗಿಬಿಟ್ಟರಂತೆ. ಆದರೆ ಜನರು ಏನ್ ಏನೋ ಮಾತನಾಡಿದ್ದರೆ. ಧ್ರುವ ಇದ್ದ ನೋವು ಯಾರಿಗೂ ಗೊತ್ತಿಲ್ಲ ನನಗೆ ಮಾತ್ರ ಗೊತ್ತು ಎಂದು ಒಳ್ಳೆ ಹುಡುಗ ಪ್ರಥಮ್ ಹೇಳಿದ್ದಾರೆ. ಧ್ರುವ ಮುಖದಲ್ಲಿ ಖುಷಿ ನೋಡಬೇಕು ಅಂದ್ರೆ ರಾಜ ಮಾರ್ತಾಂಡ ಸಿನಿಮಾ ನೋಡಿ ಅದೇ ಅವರಿಗೆ ನೀಡು ಕೊಡುವ ಉಡುಗೊರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
ನನಗೆ ಯಾರ ಜೊತೆಯೂ ಮನಸ್ತಾಪ ಇಲ್ಲ: ರಿಷಬ್ ಜೊತೆಗಿನ ಸಂಬಂಧ ಕುರಿತು ರಾಜ್ ಬಿ ಶೆಟ್ಟಿ ಹೇಳಿದ್ದೇನು?