
‘ಎಷ್ಟೋ ಸಿನಿಮಾ ಬಿಡುಗಡೆ ಆಗೋದೇ ಜನರಿಗೆ ಗೊತ್ತಾಗಲ್ಲ. ಕೆಲವು ಕಡೆ ಧರ್ಮ ನಟನೆಯ ಸಿನಿಮಾ ಓಡಲ್ಲ ಅನ್ನೋ ಮಾತು ಕೇಳಿ ಬರ್ತಿದೆ. ಆಗ ಬಹಳ ನೋವಾಗುತ್ತೆ. ಚಿತ್ರತಂಡದವರು ಸಿನಿಮಾಕ್ಕೆ ಚೆನ್ನಾಗಿ ಪ್ರಚಾರ ಮಾಡಿ. ಜನ ಬಂದು ನೋಡಿ ಸಿನಿಮಾದ ಚೆನ್ನಾಗಿದೆಯೋ ಇಲ್ಲವೋ ತೀರ್ಮಾನಿಸಲಿ, ಪ್ರಚಾರಕ್ಕೆ ಆದ್ಯತೆ ನೀಡಿ’ ಎಂದು ನಟ ಧರ್ಮಕೀರ್ತಿ ರಾಜ್ ಹೇಳಿದ್ದಾರೆ.
ಇವರು ನಾಯಕನಾಗಿ ನಟಿಸಿರುವ ‘ರೋನಿ ದಿ ಹಂಟರ್’ ಪ್ಯಾನ್ ಇಂಡಿಯಾ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ನಿರ್ದೇಶಕ ಕಿರಣ್ ಆರ್ ಕೆ ಮಾತನಾಡಿ, ‘ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಕಷ್ಟಪಟ್ಟು ಇಷ್ಟಪಟ್ಟು ಸಿನಿಮಾ ಮಾಡಿದ್ದೇವೆ’ ಎಂದರು.
ಮುಂಬೈ ಮೂಲದ ನಟಿ ಋತ್ವಿ ಪಟೇಲ್ ನಾಯಕಿ. ತಿಲಕ್ ದ್ವಿತೀಯ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಾಯಿ ಪ್ರಧಾನ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಎಂ ರಮೇಶ್ ಹಾಗೂ ಪವನ್ ಕುಮಾರ್ ನಿರ್ಮಾಣ ಮಾಡಿದ್ದಾರೆ.
Khadak Movie Review; ಡ್ರಗ್ಸ್ ಮಾಫಿಯಾ ಕಥೆ ಸುತ್ತ ಖಡಕ್ ಚಿತ್ರ
ಸುಮಾರು 12-13 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿರುವ ಧರ್ಮ ಕೀರ್ತಿರಾಜ್‌ಗೆ ತಮ್ಮ ಕಷ್ಟದ ದಿನಗಳು ದೂರವಾಗಿಲ್ಲ ಅನ್ನೋ ಚೆನ್ನಾಗಿ ತಿಳಿದಿದೆ. 'ನನ್ನ ವೃತ್ತಿ ಜೀವನದಲ್ಲಿ ಬಿಗ್ ಬ್ರೇಕ್‌ಗೆ ಕಾಯುತ್ತಿರುವ ಇದರಿಂದ ನಾನೊಬ್ಬ ಕಮರ್ಷಿಯಲ್ ನಟನಾಗಿ ಗುರುತಿಸಿಕೊಳ್ಳಲು ಸಾಧ್ಯ. ಒಂದೊಳ್ಳೆ ಕನ್ನಡ ಸಿನಿಮಾ ಮಾಡಿ ಕನ್ನಡಿಗರಿಗೆ ಮನೋರಂಜನೆ ನೀಡಬೇಕು ಅವರೇ ನನ್ನನ್ನು ಒಪ್ಪಿಕೊಳ್ಳುತ್ತಾರೆ. ಆಗ ಜನರಿಗೆ ನನ್ನ ಮೇಲೆ ನಂಬಿಕೆ ಬರುತ್ತದೆ ಹಾಗೂ ನನ್ನ ಸಿನಿಮಾಗಳ ಮೇಲೆ ಬಂಡವಾಳ ಹಾಕಲು ಮುಂದಾಗುತ್ತಾರೆ...ಬಹುಷು ದೊಡ್ಡ ಮಟ್ಟದಲ್ಲಿ ಇಲ್ಲವಾದರೂ ಹಾಕಿದ ಬಂಡವಾಳ ವಾಪಸ್ ಬರುವಂತೆ ಮಾಡಬೇಕು. ನಾನು ಇನ್ನು ಆ ಹಂತ ತಲುಪಿಲ್ಲ ಏಕೆಂದರೆ ನಾನು ಆಯ್ಕೆ ಮಾಡಿಕೊಳ್ಳುತ್ತಿರುವ ಕಥೆಗಳಲ್ಲಿ ಎಡವುತ್ತಿರುವೆ ಅಥವಾ ತೆರೆ ಮೇಲೆ ಕಥೆಯನ್ನು ತೋರಿಸುತ್ತಿರುವ ರೀತಿಯಲ್ಲಿ ತಪ್ಪಿರಬಹುದು. ಹಿಂದೆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಗಳಿಸಿಲ್ಲ ಅಂದ್ರೂ ನಿರ್ಮಾಪಕರು ಸ್ಯಾಟಿಲೈಟ್ ಅಥವಾ ಡಬ್ಬಿಂಗ್‌ನಲ್ಲಿ ಹಣ ಮಾಡುತ್ತಿದ್ದರು. ಈಗ ಆ ದಿನಗಳು ಇಲ್ಲ. ಈಗ ಒಳ್ಳೆ ಕಥೆ ಬೇಕು ಎಂದು ವೀಕ್ಷಕರು ಡಿಮ್ಯಾಂಡ್ ಮಾಡುತ್ತಾರೆ.' ಎಂದು ಈ ಹಿಂದೆ ಧರ್ಮ ಹೇಳಿದ್ದರು ಎಂದು ಖಾಸಗಿ ಪೋರ್ಟಲ್ ಸುದ್ದಿ ಮಾಡಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.