ಬೆರಕೆಗಳು ಸ್ವಲ್ಪ ದಿನ ಸ್ಟೇಷನ್‌ನಲ್ಲಿ ಅಲೆಯಲಿ; ದರ್ಶನ್ ಫ್ಯಾನ್ಸ್‌ ವಿರುದ್ಧ ದೂರು ಕೊಟ್ಟ ಪ್ರಥಮ್

Published : Feb 19, 2025, 10:45 AM ISTUpdated : Feb 19, 2025, 10:52 AM IST
 ಬೆರಕೆಗಳು ಸ್ವಲ್ಪ ದಿನ ಸ್ಟೇಷನ್‌ನಲ್ಲಿ ಅಲೆಯಲಿ; ದರ್ಶನ್ ಫ್ಯಾನ್ಸ್‌ ವಿರುದ್ಧ ದೂರು ಕೊಟ್ಟ ಪ್ರಥಮ್

ಸಾರಾಂಶ

ದರ್ಶನ್ ಅಭಿಮಾನಿಗಳ ನಿರಂತರ ಕಿರಿಕಿರಿಯಿಂದ ಬೇಸತ್ತ ಪ್ರಥಮ್, ಪೊಲೀಸ್ ದೂರು ನೀಡಿದ್ದಾರೆ. ಪದೇ ಪದೇ 'ಬಾಸ್' ಎಂದು ಕೂಗಿ ಕಾರ್ಯಕ್ರಮಗಳನ್ನು ಅಡ್ಡಿಪಡಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡುವುದನ್ನು ಪ್ರಥಮ್ ಖಂಡಿಸಿದ್ದಾರೆ. ಈ ಹಿಂದೆಯೂ ತಮ್ಮನ್ನು ನಿಂದಿಸಿದವರಿಗೆ ಕಾನೂನು ಕ್ರಮ ಜರುಗಿಸಿರುವುದನ್ನು ಸ್ಮರಿಸಿದ್ದಾರೆ. ದರ್ಶನ್ ಬಗ್ಗೆ ಗೌರವವಿದ್ದರೂ, ಅಭಿಮಾನಿಗಳ ವರ್ತನೆಯಿಂದ ಬೇಸರ ವ್ಯಕ್ತಪಡಿಸಿದ್ದಾರೆ.

ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ಒಳ್ಳೆ ಹುಡುಗ ಪ್ರಥಮ್ ತಾಳ್ಮೆ ಕಳೆದುಕೊಂಡಿದ್ದಾರೆ. ಅದಕ್ಕೆ ಕಾರಣವೇ ದರ್ಶನ್ ಅಭಿಮಾನಿಗಳು. ಪ್ರಥಮ್ ಎಲ್ಲೇ ಹೋದರೂ ಬಾಸ್ ಬಾಸ್ ಡಿ ಬಾಸ್ ಎಂದು ಜೈಗಾರ ಹಾಕಿ ನಡೆಯುತ್ತಿದ್ದ ಕಾರ್ಯಕ್ರಮಗಳನ್ನು ಹಾಳು ಮಾಡುವ ಪ್ರಯತ್ನ ಮಾಡಲಾಗುತ್ತದೆ. ಇತ್ತೀಚಿಗೆ ಧನಂಜಯ್ ಮದುವೆಯಲ್ಲಿ ಭಾಗಿಯಾಗಿದ್ದ ಪ್ರಥಮ್ ಶುಭ ಹಾರೈಸಿ ಮಾತನಾಡುತ್ತಿದ್ದರೆ ಅಲ್ಲೊಬ್ಬ ಮತ್ತೊಮ್ಮೆ ಜೈ ಕಾರ ಹಾಕಿದ್ದಾನೆ. ಆಗ ಕೂಡ ತಾಳ್ಮೆ ಕಳೆದುಕೊಳ್ಳದ ಪ್ರಥಮ್ ನಿಮ್ಮ ತಂದೆ ತಾಯಿಗೆ ಮೊದಲು ನೀವು ಬಾಸ್ ಆಗಬೇಕು ನಿಮಗೆ ನೀವು ಬಾಸ್ ಆಗಬೇಕು ಮತ್ತೊಬ್ಬರನ್ನು ಬಾಸ್ ಎಂದು ಕರೆದರೆ ನೀವು ಯಾವಾಗ ಬಳೆಯುವುದು' ಎಂದು ಬುದ್ಧಿ ಮಾತು ಹೇಳಿದ್ದಾರೆ. ಸಖತ್ ಪಾಸಿಟಿವ್ ಆಗಿ ಪ್ರಥಮ್ ಮಾತನಾಡಿದ್ದರೂ ಕೂಡ ಅದನ್ನು ನೆಗೆಟಿವ್ ಆಗಿ ತಿರುಗಿಸಲಾಗಿದೆ. 

ಹೀಗೆ ಪದೇ ಪದೇ ಕಾಟು ಕೊಡುತ್ತಿರುವ ಕೆಲವರ ವಿರುದ್ಧ ಪ್ರಥಮ್ ದೂರು ನೀಡಿರುವುದಾಗಿ ಬರೆದುಕೊಂಡಿದ್ದಾರೆ. 'Police Zen ಅಂತ ಸೋಷಿಯಲ್ ಮೀಡಿಯಾದಲ್ಲಿ ಬೆರಕೆಗಳಿಗೆ ಸನ್ಮಾನ ಮಾಡೋಕೆ ಅಂತ ಶುರುವಾಗಿದೆ. ಇತ್ತೀಚಿಗೆ ಬೆರಕೆಗಳು ತೇಜೋವಧೆ ಮಾಡೋದೇ ಕೆಲಸ. ಯಾರೆಲ್ಲಾ ನನ್ನ ಫೋಟೋ ವಿಡಿಯೋ ಮಾಡಿ ತೇಜೋವಧೆಗೆ ಪ್ರಯತ್ನಿಸುತ್ತಿದ್ದೀರೋ ವಿಡಿಯೋ ಸಮೇತ ಕೇಸ್ ಕೊಟ್ಟಾಯ್ತು. ಲಾಸ್ಟ್‌ ಟೈಮ್ ತೇಜೋವಧೆ ಮಾಡಿದವರ ಹಣೆಬರಹ ಏನಾಗಿದೆ ಅಂತ ಒಮ್ಮೆ ನಿಮ್ಮ ಗ್ರೂಪ್‌ಗಳಲ್ಲಿ ಕೇಳಿ ತಿಳಿದುಕೊಳ್ಳಿ. ಬಿಡೋ ಮಾತೇ ಇಲ್ಲ. ಸ್ವಲ್ಪ ದಿನ ಸ್ಟೇಷನ್‌ನಲ್ಲಿ ಅಲೆಯಲಿ. ನನಗೆ ನೂರಾರುಸಲ ಇರಿಟೇಟ್ ಮಾಡಿದ್ದಾರೆ. ಸ್ಟೇಜ್ ಮೇಲೆ ಮಾಡಿದ್ದಾಗ ಕೌಂಟರ್ ಕೊಟ್ಟಿದ್ದೀನಿ. ಉರಿ ಇದ್ದವರು ಉರಿದುಕೊಳ್ಳಿ. ಏನೂ ಪ್ರಾಬ್ಲಂ ಇಲ್ಲ' ಎಂದು ಪ್ರಥಮ್ ಬರೆದುಕೊಂಡಿದ್ದಾರೆ. 

ರಜತ್‌ ಒಳ್ಳೆಯ ಮನುಷ್ಯ, ನಾವು ಅಣ್ಣ ತಂಗಿ ರೀತಿ ಜಗಳವಾಡುತ್ತೀವಿ: ಚೈತ್ರಾ ಕುಂದಾಪುರ

ದರ್ಶನ್ ಅಭಿಮಾನಿಗಳ ವಿರುದ್ಧ ಆಕ್ಷನ್ ತೆಗೆದುಕೊಳ್ಳುತ್ತಿರುವ ಪ್ರಥಮ್ ಅವರ ಹುಟ್ಟುಹಬ್ಬಕ್ಕೆ ಹಾಕಿದ ಪೋಸ್ಟ್ ಕೂಡ ವೈರಲ್ ಆಗಿತ್ತು. 'ಮೊದಲು ನಾವು ಹೀಗಿದ್ವಿ. ಹಾಳಾದ್ ಸೋಷಿಯಲ್ ಮೀಡಿಯಾ ಬಂದು ನಾನ್ ಹೇಳಿದ್ದನ್ನು ಕೆಲವೇ ಕೆಲವು ಅನರಕ್ಷರಸ್ಥರು ಬೇರೆ ರೀತಿಯಲ್ಲಿ ತಿರುಚಿ ಸ್ವಲ್ಪ ಗೊಂದಲ ಸೃಷ್ಟಿ ಮಾಡಿದ್ದಾರೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೀನಿ. ಅಲ್ಲಿ ತನಕ ಈ ಗೊಂದಲ ಇದ್ದಿದ್ದೇ. ನನ್ನ ಪಾಡಿಗೆ ನಾನಿದ್ದಾಗ ಯಾರಾದರೂ ಸ್ಟೇಜ್ ಮೇಲೆ ಕೌಂಟರ್ ಕೊಟ್ಟಾಗ ನಾನು ಸ್ವಲ್ಪ ಕ್ಲಾಸ್ ತೆಗೊಂಡು ಬಿಸಿ ಮುಟ್ಟಿಸಿರ್ತೀನಿ ಅಷ್ಟೇ. ನಿಮ್ಮ ಬಗ್ಗೆ ಗೌರವ ಇದೆ ದರ್ಶನ್ ಸರ್' ಎಂದು ಪ್ರಥಮ್ ಬರೆದುಕೊಂಡಿದ್ದರು. 

ಥಿಯೇಟರ್‌ಗಳಲ್ಲಿ ಸೀಟ್‌ ಖಾಲಿ ಇದ್ರೆ ಕಾಲು ಹಾಕೋದು, ಉಗಿಯೋದು ಎಷ್ಟು ಸರಿ?; ಮಾಸ್ಟರ್

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಡಲ್ಲಿ ಸಾಕಷ್ಟು ಪ್ರಾಣಿಗಳು ಇರ್ತಾವೆ, ಆದ್ರೆ ಆ ಕಾಡಿಗೆ ರಾಜನಾಗಿ ಒಂದೇ ಸಿಂಹ ಇರುತ್ತೆ: ಧನ್ವೀರ್ ಗೌಡ ಪೋಸ್ಟ್ ವೈರಲ್!
ಕಿಂಗ್ ಖಾನ್‌ ಭಾರೀ ಗುಟ್ಟೊಂದನ್ನು ರಟ್ಟು ಮಾಡಿದ ಕರಣ್ ಜೋಹರ್.. ಶಾರುಖ್‌ಗೆ ಈ ಬಗ್ಗೆ ಸಿಕ್ಕಾಪಟ್ಟೆ OCD ಇದ್ಯಂತೆ!