ಸೆಂಚುರಿ ಸಿಡಿಸಿದ ಪತಿ ಡಾರ್ಲಿಂಗ್ ಕೃಷ್ಣಗೆ ಮಿಲನಾ ನಾಗರಾಜ್ ಸರ್ಪ್ರೈಸ್

Published : Feb 19, 2025, 10:06 AM ISTUpdated : Feb 19, 2025, 10:40 AM IST
ಸೆಂಚುರಿ ಸಿಡಿಸಿದ ಪತಿ ಡಾರ್ಲಿಂಗ್ ಕೃಷ್ಣಗೆ ಮಿಲನಾ ನಾಗರಾಜ್ ಸರ್ಪ್ರೈಸ್

ಸಾರಾಂಶ

ಸಿಸಿಎಲ್‌ನಲ್ಲಿ ಶತಕ ಸಿಡಿಸಿದ ಕೃಷ್ಣಗೆ ಪತ್ನಿ ಮಿಲನಾ ಸರ್ಪ್ರೈಸ್‌ ನೀಡಿದ್ದಾರೆ. ಹೈದರಾಬಾದ್‌ನಲ್ಲಿ ಮುಂಬೈ ಹೀರೋಸ್ ವಿರುದ್ಧ 36 ಎಸೆತಗಳಲ್ಲಿ 111 ರನ್ ಗಳಿಸಿದ ಕೃಷ್ಣಗೆ ಮನೆಯಲ್ಲಿ ಬಲೂನ್‌ಗಳಿಂದ ಅಲಂಕರಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮಿಲನಾ ಅವರನ್ನು ಹಾಡಿ ಹೊಗಳಿದ್ದಾರೆ.

ಸ್ಯಾಂಡಲ್ವುಡ್ ಡಾರ್ಲಿಂಗ್ ಕೃಷ್ಣ (Sandalwood Darling Krishna) ಸಿಸಿಎಲ್ (CCL) ನಲ್ಲಿ ಅಬ್ಬರಿಸಿರೋದು ನಿಮಗೆಲ್ಲ ಗೊತ್ತೆ ಇದೆ. ಫೆಬ್ರವರಿ 15ರಂದು ನಡೆದ ಸಿಸಿಎಲ್ ಪಂದ್ಯದಲ್ಲಿ ಡಾರ್ಲಿಂಗ ಕೃಷ್ಣ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕೃಷ್ಣ, ಮುಂಬೈ ಹೀರೋಸ್  ವಿರುದ್ಧ ಸೆಂಚುರಿ ಸಿಡಿಸಿದ್ದಾರೆ. ಕೃಷ್ಣ ಸೆಂಚೂರಿಯನ್ನು, ನಟಿ ಹಾಗೂ ಪತ್ನಿ ಮಿಲನಾ ನಾಗರಾಜ್ (Milana Nagaraj) ಸಂಭ್ರಮಿಸಿದ್ದಾರೆ. ಹೈದ್ರಾಬಾದ್ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಪಂದ್ಯ ಮುಗಿಸಿ, ಮನೆಗೆ ವಾಪಸ್ ಆದ ಕೃಷ್ಣ ಅವರಿಗೆ ಮಿಲನಾ ನಾಗರಾಜ್ ಸರ್ಪ್ರೈಸ್ ನೀಡಿದ್ದಾರೆ. ಈ ಸರ್ಪ್ರೈಸ್ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ನನ್ನ ಸೂಪರ್ ಸ್ಟಾರ್ ಜೊತೆ ಸೆಂಚೂರಿ ಸೆಲಬ್ರೇಷನ್ ಅಂತ ಶೀರ್ಷಿಕೆ ಹಾಕಿರುವ ಮಿಲನಾ, ವಿಡಿಯೋದ ಆರಂಭದಲ್ಲಿ, ಕೃಷ್ಣ ಶತಕ ಸಿಡಿಸ್ತಾರೆ ಅನ್ನೋದು ಗೊತ್ತಿತ್ತು. ಆದ್ರೆ ಯಾವಾಗ ಅನ್ನೋದು ಗೊತ್ತಿರಲಿಲ್ಲ. ಮೊನ್ನೆ ಸಿಸಿಎಲ್ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಹಾಗಾಗಿ ಅವರಿಗೆ  ಸರ್ಪ್ರೈಸ್ ಪ್ಲಾನ್ ಮಾಡಿದ್ದೇವೆ ಎನ್ನುತ್ತಾರೆ ಮಿಲನಾ. ಮನೆಯನ್ನು ಬಲೂನ್ ನಿಂದ ಅಲಂಕಾರ ಮಾಡಲಾಗಿದೆ. ನಾಟ್ ಔಟ್, 100 ಅಂತ ಬಲೂನ್ ನಲ್ಲಿ ಸಿಂಗಾರ ಮಾಡಿರೋದನ್ನು ನೀವು ನೋಡ್ಬಹುದು. ಅಲ್ಲದೆ ಕೇಕ್ ಕೂಡ ಮಿಲನಾ ತಂದಿದ್ದಾರೆ. ಮನೆಗೆ ಬಂದ ಕೃಷ್ಣ, ಮಗಳು ಹಾಗೂ ನಾಯಿ ಜೊತೆ ಆಟವಾಡೋದಲ್ಲದೆ, ಸರ್ಪ್ರೈಸ್ ಗೆ ಖುಷಿಯಾಗ್ತಾರೆ. ಕೇಕ್ ಕತ್ತರಿಸಿ ಸಂಭ್ರಮಿಸುವ ಕುಟುಂಬ, ಕೃಷ್ಣಗೆ ವಿಶ್ ಮಾಡಿದೆ. ಈ ವಿಡಿಯೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಕೃಷ್ಣ ಇದಕ್ಕೆ ಯೋಗ್ಯರು, ಸೂಪರ್, ಕಂಗ್ರಾಜ್ಯುಲೇಷನ್ ಎನ್ನುವ ಕಮೆಂಟ್ ಬಂದಿದೆ. ಇಷ್ಟೇ ಅಲ್ಲ ಮಿಲನಾ ಕೆಲಸವನ್ನು ಫ್ಯಾನ್ಸ್ ಶ್ಲಾಘಿಸಿದ್ದಾರೆ. ನಿಮ್ಮಂದ ಪತ್ನಿ ಇದ್ರೆ ಪತಿ ಏನು ಬೇಕಾದ್ರೂ ಮಾಡ್ತಾರೆ ಅಂತ ಕಮೆಂಟ್ ಮಾಡಿದ್ದಾರೆ.

ಸಿಸೇರಿಯನ್ ಆಗಿದ್ದಕ್ಕೆ ಸ್ವಲ್ಪ ದಿನ ಕಷ್ಟ ಆಯ್ತು ಆದ್ರೆ 2 ತಿಂಗಳಿಗೆ ಸಿನಿಮಾ ಆಫರ್ ಬಂತು: ಮಿಲನಾ ನಾಗರಾಜ್

ಈ ಹಿಂದೆ ಮಿಲನಾ ನಾಗರಾಜ್, ತಮ್ಮ ಮಗಳ ಜೊತೆ ಕ್ರಿಕೆಟ್ ನೋಡ್ತಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು. ಅದ್ರಲ್ಲಿ ಅವರ ಮುದ್ದು ಮಗಳು, ತಂದೆ ಸಿಕ್ಸರ್ ಬಾರಿಸ್ತಾ ಇದ್ದಂತೆ ಪರಿ, ಕೇಕ್ ಹಾಕಿದ್ದಳು. ಈ ವಿಡಿಯೋ ಜೊತೆ ಮದುವೆ ವಾರ್ಷಿಕೋತ್ಸವದ ಶುಭಕೋರಿದ್ದರು ಮಿಲನಾ ನಾಗರಾಜ್. ಹೈದ್ರಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಡಾರ್ಲಿಂಗ್ ಕೃಷ್ಣ ಉತ್ತಮ ಪ್ರದರ್ಶನ ತೋರಿದ್ದರು. ಮುಂಬೈ ಹೀರೋಸ್ ಬೌಲರ್ ಗಳ ಬೆವರಿಳಿಸಿದ್ದರು ಕೃಷ್ಣ. 36 ಎಸೆತಕ್ಕೆ 6 ಸಿಕ್ಸರ್, 11 ಬೌಂಡರಿ ಬಾರಿಸಿದ್ದ ಕೃಷ್ಣ, 111 ರನ್ ಗಳಿಸಿದ್ದರು. ಮುಂಬೈ ಹೀರೋಸ್ ಗೆ ಕರ್ನಾಟಕ ಬುಲ್ಡೋಜರ್ ಈ ಪಂದ್ಯದಲ್ಲಿ 171 ರನ್ ಗಳ ಟಾರ್ಗೆಟ್ ನೀಡಿತ್ತು. ಆದ್ರೆ ಮುಂಬೈ ಹಿರೋಸ್, ಕರ್ನಾಟಕ ಬುಲ್ಡೋಜರ್ ದಾಳಿಗೆ ತತ್ತರಿಸಿತ್ತು. ಕೇವಲ 100 ರನ್ ಗಳಿಸಿ ಸೋಲೊಪ್ಪಿಕೊಂಡಿತ್ತು.

ಸಿಸೇರಿಯನ್ ಆಗಿದ್ದಕ್ಕೆ ಸ್ವಲ್ಪ ದಿನ ಕಷ್ಟ ಆಯ್ತು ಆದ್ರೆ 2 ತಿಂಗಳಿಗೆ ಸಿನಿಮಾ ಆಫರ್ ಬಂತು: ಮಿಲನಾ ನಾಗರಾಜ್

ಮೊದಲಿನಿಂದ್ಲೂ ಕರ್ನಾಟಕ ಬುಲ್ಡೋಜರ್ ತಂಡದ ಭಾಗವಾಗಿರುವ ಡಾರ್ಲಿಂಗ್ ಕೃಷ್ಣ ಸದ್ಯ ಸಿಸಿಎಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಬಾರಿ ಕಿಚ್ಚ ಸುದೀಪ್ ಟೀಂ ಉತ್ತಮ ಪ್ರದರ್ಶನ ನೀಡ್ತಿದೆ. ಇತ್ತ ಮಿಲನಾ ನಾಗರಾಜ್ ಕೂಡ ನಿಧಾನವಾಗಿ ವೃತ್ತಿಗೆ ಮರಳುತ್ತಿದ್ದಾರೆ. ಪ್ರೆಗ್ನೆನ್ಸಿ ಕೊನೆ ದಿನಗಳವರೆಗೂ ಸಿನಿಮಾ ಡಬ್ಬಿಂಗ್ ನಲ್ಲಿ ಬ್ಯುಸಿಯಿದ್ದ ಮಿಲನಾ ನಾಗರಾಜ್, ಹೆರಿಗೆಯಾಗಿ ಕೆಲವೇ ದಿನಕ್ಕೆ ಸಿನಿಮಾ ಪ್ರಚಾರ ಶುರು ಮಾಡಿದ್ದರು. ಸಿನಿಮಾ ಬಿಡುಗಡೆಯಾಗ್ತಿದ್ದಂತೆ ಕೆಲ ಸಮಯ ಮಗಳು ಪರಿ ಜೊತೆ ಸಮಯ ಕಳೆದಿದ್ದ ಮಿಲನಾ ನಾಗರಾಜ್ ಗೆ ಮತ್ತೆ ಆಫರ್ ಗಳು ಬರ್ತಾ ಇವೆ. ಮಿಲನಾ ಸದ್ಯ ಬೆಲ್ಲ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅರ್ಜುನ್ ಜನ್ಯಾ ನಿರ್ದೇಶನ, ಶಿವಣ್ಣ-ಉಪೇಂದ್ರ ಜೋಡಿಯ '45' ಟ್ರೈಲರ್ ನೋಡಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹೇಳಿದ್ದೇನು?
BBK 12 ಫಿನಾಲೆಗೆ ಕೆಲವೇ ದಿನಗಳು ಬಾಕಿ; ವೀಕ್ಷಕರ ಇಚ್ಛೆಯಂತೆ Top 5 ಸ್ಪರ್ಧಿಗಳಿವರು; ಗೆಲ್ಲೋರಾರು?