
ಸ್ಯಾಂಡಲ್‌ವುಡ್ (Sandalwood) ಹಿರಿಯ ನಟ, ನಿರ್ದೇಶಕ ಮತ್ತು ವಿತರಕ ಎಸ್ ನಾರಾಯಣ್ (S Narayan) ಅವರಿಗೆ ಓಲ್ಡ್ ಮಾಂಕ್ (Old Monk) ಚಿತ್ರತಂಡ ಅವಮಾನ ಮಾಡಿದೆ. ಅವಮಾನ ಆದ ಸ್ಥಳದಲ್ಲೇ ನಿಂತುಕೊಂಡು, ಅವಮಾನ ಮಾಡಿದ ವ್ಯಕ್ತಿಗಳನ್ನು ತೋರಿಸಿದ್ದಾರೆ. ಸತ್ಯವೇನೆಂದರೆ ಹಿರಿಯ ನಟ ಸಿಹಿ ಕಹಿ ಚಂದ್ರು (Sihi Kahi Chandru) ಮತ್ತು ನಟಿ ಅದಿತಿ ಪ್ರಭುದೇವ (Aditi Prabhudeva) ಕೂಡ ಭಾಗಿಯಾಗಿದ್ದಾರೆ.
ನಾರಾಯಣ್ ಮಾತು:
'ನನ್ನ ಮನಸ್ಸಿಗೆ ಇವತ್ತು ತುಂಬಾನೇ ಬೇಸರವಾಗಿದೆ. ಸಿಕ್ಕಾಪಟ್ಟೆ ಬೇಜಾರು ಆಗಿದೆ. ಅದಕ್ಕೆ ಈ ವಿಡಿಯೋ ಮಾಡ್ತಿದ್ದೀನಿ. ನಿಮಗೆಲ್ಲಾ ಗೊತ್ತಿದೆ, ಚಿತ್ರರಂಗಕ್ಕೆ ನಾನು ಬಂದು ಮೂವತ್ತುನಾಲ್ಕು ವರ್ಷಗಳು ಆಯ್ತು. ನಿರ್ದೇಶಕನಾಗಿ (Director), ನಿರ್ಮಾಪಕನಾಗಿ, ಕಲಾವಿದನಾಗಿ, ಬರಹಗಾರನಾಗಿ, ಸಂಯೋಜಕನಾಗಿ, ವಿತರಕನಾಗಿ....ಚಿತ್ರರಂಗದ ಬಹುತೇಕ ಕ್ಷೇತ್ರಗಳಲ್ಲಿ ನಾನು ಕೆಲಸ ಮಾಡಿರುವೆ. ಚಿತ್ರರಂಗದ ಗಣ್ಯಾತಿ ಗಣ್ಯರ ಜೊತೆ ನಾನು ಕೆಲಸ ಮಾಡಿದ್ದೀನಿ. ದೊಡ್ಡ ದೊಡ್ಡ ಕಲಾವಿದರ ಜೊತೆ ಸಿನಿಮಾ ಮಾಡಿ ಯಶಸ್ಸು ಕಂಡಿದ್ದೀನಿ, ಒಳ್ಳೆ ತಂತ್ರಜ್ಞರ (Technicians) ಜೊತೆಯೂ ನಾನು ಕೆಲಸ ಮಾಡಿದ್ದೀನಿ. ಇವತ್ತಿನವರೆಗೂ ಚಿತ್ರರಂಗ ನನ್ನನ್ನು ಗೌರವದಿಂದ (Respect) ನಡೆಸಿಕೊಂಡು ಬಂದಿದೆ. ನನ್ನ ಶಕ್ತಿಗೆ ಮತ್ತು ಶ್ರದ್ಧೆಗೆ ಎಲ್ಲಿಯೂ ಭಂಗ ಬಾರದ ಹಾಗೆ ನನ್ನನ್ನು ಈ ಚಿತ್ರರಂಗ ಪೋಷಿಸಿದೆ,' ಎಂದು ನಾರಾಯಣ್ ಮಾತು ಆರಂಭಿಸಿದ್ದಾರೆ.
'ಯಾಕೆ ನಾನು ಇಷ್ಟೆಲ್ಲಾ ಹೇಳಬೇಕಾಗಿ ಬಂತು ಅಂದ್ರೆ, ನಾನು ಒಂದು ಸಿನಿಮಾದಲ್ಲಿ ನಟಿಸುತ್ತಿರುವೆ. ಓಲ್ಡ್ ಮಾಂಕ್ (Old Monk) ಅಂತ. ಈ ಹಿಂದೆ ಬಿರ್ಬಲ್ (Birbal) ಸಿನಿಮಾ ನಿರ್ದೇಶನ ಮಾಡಿದ ಶ್ರೀನಿ (Srini) ಅವರೇ ಇದಕ್ಕೂ ನಿರ್ದೇಶನ ಮಾಡಿದ್ದಾರೆ. ಸರ್ ನಿಮಗೆ ಒಳ್ಳೆಯ ಪಾತ್ರವಿದೆ, ಬಂದು ಮಾಡ್ಬೇಕು ಅಂತ ಹೇಳಿದ್ರು. ಸರಿ ಕಥೆ ಕೇಳಿದೆ. ಪಾತ್ರ ಚೆನ್ನಾಗಿತ್ತು ಅದಿಕ್ಕೆ ಬಂದೆ. ಈ ಸಿನಿಮಾದಲ್ಲಿ ಪಾರ್ಟ್ ಮಾಡ್ತಿದ್ದೀನಿ. ಆದರೆ, ಇಲ್ಲಿ ನಮಗೆ ಆಗಿರುವ ಅವಮಾನ (Insult) ಇದ್ಯಲ್ಲ ಖಂಡಿತಾ ನಾನು ಸಹಿಸಿಕೊಳ್ಳುವುದಿಲ್ಲ. ನನ್ನ ಇಡೀ ಮೂವತ್ತನಾಲ್ಕು ವರ್ಷಗಳ ಚಿತ್ರರಂಗದ ಜರ್ನಿಯಲ್ಲಿ ಯಾರೊಬ್ಬರೂ ಇಂತಹ ಅವಮಾನ (Insult) ಮಾಡಿರಲಿಲ್ಲ. ಬಹಳ ನೋವಾಗಿದೆ, ಸಿಕ್ಕಾಪಟ್ಟೆ ನೋವಾಗಿದೆ. ನಾನು ಹೇಳಿದರೆ ನಿಮಗೆ ಅರ್ಥವಾಗಲ್ಲ ನೀವೇ ನೀಡಬೇಕು,' ಎಂದು ಸ್ಥಳದಲ್ಲಿದ್ದ ವ್ಯಕ್ತಿಗಳನ್ನು ಹಾಗೂ ನಡೆದ ಘಟನೆಯನ್ನು ವಿವರಿಸಿದ್ದಾರೆ.
'ಇಲ್ಲಿ ನೋಡಿ ಎಂಥಾ ಅನ್ಯಾಯ ಆಗಿದೆ ಎಂದು. ನೋಡಿ ಇವ್ರುನ ಎರಡೂವರೆ ಕೆಜಿ ಪೈನeಪಲ್ ಕೇಕ್ (Pineapple Cake) ತಗೊಂಡು ಹೆಂಗ್ ಮುಕ್ತಾ ಇದ್ದಾರೆ ನೋಡಿ. ಈ ತರ ತಿಂದ್ರೆ ಇವರಿಗೆ ಬೇಧಿ (Loose Motion) ಬರಲ್ವಾ? ನೋಡಿ ಇವರು ನನಗೆ ಒಂದೇ ಒಂದು ಪೀಸ್ ಕೊಟ್ಟಿಲ್ಲ. ಕೇಕ್ ಖಾಲಿ ಆಗಿದೆ, ಕ್ರೀಮ್ ಇದೆ ಎಂದು ನಿರ್ದೇಶಕರು ಹೇಳುತ್ತಿದ್ದಾರೆ. ನೋಡಿ ಗ್ಯಾಪಿದ್ರೆ ಹಚ್ಚಿಕೊಳ್ಳಿ ಅಂತ ಕ್ರೀಮ್ ಕೊಡ್ತಿದ್ದಾರೆ,' ಎಂದು ಹೇಳಿ ಅಲ್ಲಿದ್ದ ಪ್ರತಿಯೊಬ್ಬರ ಮುಖವನ್ನೂ ಝೋಮ್ ಮಾಡಿ ತೋರಿಸಿದ್ದಾರೆ.
ಫೆ.25ರಂದು ಬಿಡುಗಡೆಯಾಗುತ್ತಿರುವ ಶ್ರೀನಿ ನಿರ್ದೇಶನ ಮತ್ತು ನಟನೆಯ ‘ಓಲ್ಡ್ ಮಾಂಕ್’ ಸಿನಿಮಾ ತಂಡ ವಿಭಿನ್ನವಾಗಿ ಚಿತ್ರದ ಪ್ರಚಾರ ಮಾಡುತ್ತಲೇ ಬರುತ್ತಿದ್ದು, ಈಗ ಅವರ ಮತ್ತೊಂದು ಐಡಿಯಾ ವೈರಲ್ ಆಗಿ ಜನರ ಮನ ಸೆಳೆದಿದೆ. ಸಣ್ಣ ಪುಟ್ಟ ಅಂಗಡಿಗಳಲ್ಲಿ ಚಿತ್ರತಂಡ ಕ್ಯೂ ಆರ್ ಕೋಡ್ ಸ್ಕ್ಯಾನರ್‌ಗಳಲ್ಲಿ (QR Scan code) ಓಲ್‌ಡ್ಮಾಂಕ್ ಸಿನಿಮಾದ ಪೋಸ್ಟರ್‌ಗಳನ್ನು ಅಂಟಿಸಿದೆ. ಅಂಗಡಿಗಳಿಗೆ ಬಂದ ಬಹುತೇಕರು ಸ್ಕ್ಯಾನರ್ ಬಳಸಿ ಹಣ ನೀಡುವುದರಿಂದ ಹೆಚ್ಚು ಮಂದಿಗೆ ಚಿತ್ರ ತಲುಪುವ ಭರವಸೆ ಚಿತ್ರತಂಡದ್ದು. ಕರ್ನಾಟಕದ ಬಹುತೇಕ ಪ್ರಮುಖ ನಗರಗಳ ಅಂಗಡಿಗಳ ಸ್ಕ್ಯಾನರ್‌ಗಳ ಮೇಲೆ ಓಲ್ಡ್ ಮಾಂಕ್ ಪೋಸ್ಟರ್ ಕಾಣಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಗರಗಳ ಅಂಗಡಿಗಳಿಗೆ ತಲುಪುವ ಉದ್ದೇಶ ಚಿತ್ರತಂಡಕ್ಕೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.