
ಕೆಡಿ ಹಾಡಿನ ವಿವಾದಕ್ಕೆ ನೋರಾ ಫತೇಹಿ (Nora Fatehi) ಸ್ಪಷ್ಟನೆ: ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ಕೊಟ್ಟ ನೋರಾ ಫತೇಹಿ 'ನಾನು ಈ ಹಾಡನ್ನು 3 ವರ್ಷಗಳ ಹಿಂದೆ ಕನ್ನಡ ಭಾಷೆಯಲ್ಲಿ ಚಿತ್ರೀಕರಿಸಿದ್ದು. ಸಂಜಯ್ ದತ್ ದೊಡ್ಡ ಕಲಾವಿದರು ಇರುವ ದೊಡ್ಡ ಸಿನಿಮಾ ಎಂಬ ಕಾರಣಕ್ಕೆ ನಾನು ಒಪ್ಪಿಕೊಂಡಿದ್ದೆ. ಕನ್ನಡ ಭಾಷೆ ನನಗೆ ತಿಳಿಯುವುದಿಲ್ಲ. ಶೂಟಿಂಗ್ ಮಾಡುವಾಗ ಹಾಡಿನ ಅರ್ಥ ತಿಳಿಯಲು ನಾನು ಚಿತ್ರತಂಡದ ಮೇಲೆ ಅವಲಂಬಿತಳಾಗಿದ್ದೆ. ಭಾಷಾಂತರ ಮಾಡಿ ಹೇಳಿದಾಗ ನನಗೆ ಯಾವುದೂ ಅಸಭ್ಯ ಅಂತ ಅನಿಸಿರಲಿಲ್ಲ
ಆದರೆ ಈಗ ಹಿಂದಿಗೆ ಭಾಷಾಂತರ ಮಾಡಿರುವುದು ತುಂಬ ಆಕ್ಷೇಪಾರ್ಹವಾಗಿದೆ. ಅದರ ಬಗ್ಗೆ ನನಗೆ ಮಾಹಿತಿಯೇ ಇರಲಿಲ್ಲ. ನನ್ನ ಅನುಮತಿಯನ್ನು ಚಿತ್ರತಂಡದವರು ಪಡೆದುಕೊಂಡಿಲ್ಲ. ಹಾಡು ಬಿಡುಗಡೆಗೆ ನನ್ನನ್ನು ಕರೆದಾಗ ನನ್ನ ಫೋಟೋಗಳನ್ನು ಬಳಸಿದ ರೀತಿ ಕಂಡು ನನಗೆ ಬೇಸರ ಆಯಿತು. ನನ್ನ ಮತ್ತು ಸಂಜಯ್ ದತ್ ಅವರ ಫೋಟೋಗಳನ್ನು ಎಐ ಮೂಲಕ ಸೃಷ್ಟಿಸಿ ಬಳಸಿದ್ದಾರೆ. ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲೇ ನನಗೆ ಕಿರಿಕಿರಿ ಆಯಿತು ಎಂದಿದ್ದಾರೆ ನೋರಾ ಫತೇಹಿ.
ಈಗಾಗಲೇ ಹೊತ್ತಿ ಉರಿಯುತ್ತಿರುವ ಈ ಹಾಡಿನ ವಿವಾದ ಇದೀಗ ಮತ್ತೊಂದು ಮಜಲು ಪಡೆದುಕೊಳ್ಳುವುದು ಖಾತ್ರಿ ಎಂಬಂತಾಗಿದೆ. ಮುಂದೆ ನಟಿ ನೋರಾ ಫತೇಹಿ ಹಾಗೂ ಸಿನಿಮಾ ಟೀಮ್ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.