ಡಿ ಕಂಪನಿ ಅವಾಜ್: ಕಿಚ್ಚನಿಗೆ ಕೌಂಟರ್ ಕೊಟ್ರಾ ದರ್ಶನ್ ಶಿಷ್ಯ? ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಶುರುವಾಯ್ತಾ ಯುದ್ಧ?

Published : Feb 03, 2026, 07:01 PM IST
Darshan Thoogudeepa Dhanveer Gowda

ಸಾರಾಂಶ

'ಹಯಗ್ರೀವ' ಸಿನಿಮಾ ಕಾರ್ಯಕ್ರಮದಲ್ಲಿ ನಟ ಧನ್ವೀರ್, 'ಅಖಾಡಕ್ಕಿಳಿದು ಮಾತನಾಡಲು ಮೀಟರ್ ಬೇಕು' ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಿಚ್ಚ ಸುದೀಪ್‌ಗೆ ಟಾಂಗ್ ನೀಡಿದ್ದಾರೆ. ಈ ಹಿಂದೆ ಸುದೀಪ್ 'ಯುದ್ಧಕ್ಕೆ ಸಿದ್ಧ' ಎಂದಿದ್ದ ಹೇಳಿಕೆಗೆ ಪ್ರತಿಯಾಗಿ ದರ್ಶನ್ ಶಿಷ್ಯ ಧನ್ವೀರ್ ಕೌಂಟರ್ ಕೊಟ್ಟಿದ್ದಾರೆ.

ಮಾರ್ಕ್ ಸಿನಿಮಾ ರಿಲೀಸ್ ಟೈಂನಲ್ಲಿ ಕಿಚ್ಚ ಸುದೀಪ್ ಯುದ್ಧಕ್ಕೆ ಸಿದ್ದ ಅಂದಿದ್ದು ಕಿಚ್ಚು ಹತ್ತಿತ್ತು. ದರ್ಶನ್ ಗ್ಯಾಂಗ್ ಮತ್ತು ಕಿಚ್ಚನ ಪಡೆ ನಡುವೆ ವಾರ್ ನಡೆದಿತ್ತು. ಇದೀಗ ಮತ್ತೊಮ್ಮೆ ದರ್ಶನ್ ಪರ ಬ್ಯಾಟ್ ಬೀಸಿದ್ದು ಕಿಚ್ಚನಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ದಾಸನ ಶಿಷ್ಯ ಧನ್ವೀರ್ ಟಾಂಗ್ ಕೊಟ್ಟಿದ್ಯಾರಿಗೆ?

ಯೆಸ್ ಇತ್ತೀಚಿಗೆ ಕಿಚ್ಚ ಸುದೀಪ್ ಮಾರ್ಕ್ ಸಿನಿಮಾ ಇವೆಂಟ್‌ನಲ್ಲಿ ಯುದ್ಧಕ್ಕೆ ಸಿದ್ದ ಅಂದಿದ್ದು, ಅದಕ್ಕೆ ವಿಜಯ್ ಲಕ್ಷ್ಮೀ ಟಾಂಗ್ ಕೊಟ್ಟಿದ್ದು ಗೊತ್ತೇ ಇದೆ. ಈ ಇಬ್ಬರ ಮಾತಿನ ಯುದ್ಧ ಸ್ಯಾಂಡಲ್​ವುಡ್‌ನಲ್ಲಿ ಫ್ಯಾನ್ಸ್ ಯುದ್ಧಕ್ಕೂ ಕಾರಣ ಆಗಿತ್ತು. ಇದೀಗ ದರ್ಶನ್ ಶಿಷ್ಯ ಧನ್ವೀರ್ ಮತ್ತೊಮ್ಮೆ ಈ ವಿಚಾರ ಕೆದಕಿ ಕಿಚ್ಚು ಹಚ್ಚಿದ್ದಾರೆ. ಚಾಮರಾಜನಗರದಲ್ಲಿ ನಡೆದ ಹಯಗ್ರೀವ ಸಿನಿಮಾ ಇವೆಂಟ್​ನಲ್ಲಿ ದರ್ಶನ್ ಫೋಟೋ ಹಿಡಿದು ಅಖಾಡದಲ್ಲಿ ಮಾತನಾಡೋದಕ್ಕೆ ಮೀಟರ್ ಬೇಕು ಅಂತ ಅಬ್ಬರಿಸಿದ್ದಾರೆ.

ಯಾರನ್ನೂ ಬಾಸ್ ಅಂತ ಕರೆಯುವ ಅಭ್ಯಾಸ ನನಗಿಲ್ಲ ಎಂದಿದ್ದೇಕೆ ಧನ್ವೀರ್?

ಪ್ರಚಾರಕ್ಕಾಗಿ ಬಂದು ಯಾರನ್ನೂ ಬಾಸ್ ಅಂತ ಕರೆಯುವ ಅಭ್ಯಾಸ ನನಗಿಲ್ಲ. ಹಿಂದೆಯೂ ಇವರೇ, ಮುಂದೆಯೂ ಇವರೇ ನಮ್ಮ ಬಾಸ್ ಎಂದಿರುವ ಧನ್ವೀರ್ ಕ್ಯಾಮೆರಾ ಮುಂದೆ ಬಂದು ಮಾತನಾಡುವ ಗಂಡಸರನ್ನ ನಾವು ತುಂಬ ನೋಡಿದ್ದೇವೆ. ಆದರೆ ಅಖಾಡಕ್ಕಿಳಿದು ಮಾತನಾಡುವವರಿಗೆ ಮೀಟರ್ ಬೇಕು ಅಂದಿದ್ದಾರೆ.

ಧನ್ವೀರ್ ಇಲ್ಲಿ ಟಾಂಗ್ ಕೊಡ್ತಾ ಇರೋದು ಸುದೀಪ್‌ಗೆ ಅಂತ ಪ್ರತ್ಯೇಕವಾಗಿ ಹೇಳೋದೇ ಬೇಡ. ಈಗಾಗ್ಲೇ ಕಿಚ್ಚನ ಪಡೆ ಧನ್ವೀರ್ ಮೇಲೆ ಕೆಂಡ ಕಾರ್ತಾ ಇದೆ. ಧನ್ವೀರ್ ನಟನೆಯ ಹಯಗ್ರೀವ ಸಿನಿಮಾ ರಿಲೀಸ್​ಗೆ ರೆಡಿಯಾಗಿದ್ದು , ರಿಲೀಸ್ ಹೊಸ್ತಿಲಲ್ಲೇ ವಿವಾದದ ಕಿಡಿ ಹೊತ್ತಿಸಿದ್ದಾರೆ ಧನ್ವೀರ್.

ಒಟ್ನಲ್ಲಿ ಇತ್ತೀಚಿಗೆ ಸಿನಿಮಾ ರಿಲೀಸ್ ಟೈಂನಲ್ಲಿ ಈ ರೀತಿ ಡೈಲಾಗ್ ಹೊಡೆದು ಫ್ಯಾನ್ಸ್ ವಾರ್‌ಗೆ ಓಂಕಾರ ಹಾಡೋದು ಕಾಮನ್ ಆಗೋಗಿದೆ. ಇವರು ಹಚ್ಚಿದ ಕಿಡಿ ಇನ್ನೇನು ಕಿಚ್ಚು ಹಚ್ಚುತ್ತೋ ಕಾದುನೋಡಬೇಕಿದೆ.

ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ CCL ನಲ್ಲಿ ಕಿಚ್ಚನ ಬೊಂಬಾಟ್ ಆಟ, ಇತ್ತ ಜೈಲಲ್ಲಿ ದಾಸನ ಪರದಾಟ; ಹಿಂದೆ 2 ಬಾರಿ CCL ಗೆದ್ದಾಗ ತಂಡದ ಜೊತೆಗಿದ್ದ ದರ್ಶನ್!
Aradhana Ram Birthday: ಕುಟುಂಬ ಸಮೇತ ಕಾಲ್ನಡಿಗೆಯಲ್ಲಿ ತಿಮ್ಮಪ್ಪನ ದರ್ಶನ ಪಡೆದ ಮಾಲಾಶ್ರೀ