
ಪುನೀತ್ ರಾಜ್‌ಕುಮಾರ್ ಮೊದಲ ಸಿನಿಮಾ ʼಅಪ್ಪುʼ ರೀ ರಿಲೀಸ್ ಆಯ್ತು. ರಕ್ಷಿತಾ ಪ್ರೇಮ್ ಅವರು ಮಗ ಸೂರ್ಯ ಜೊತೆಗೆ ಬಂದು ಬೆಂಗಳೂರಿನ ವೀರೇಶ್ ಥಿಯೇಟರ್‌ನಲ್ಲಿ ಸಿನಿಮಾ ನೋಡಿದರು. ಎಲ್ಲರೂ ಅಪ್ಪು ಅಪ್ಪು ಅಂತ ಕೂಗುತ್ತಿದ್ದರು, ಹಳೆಯ ದಿನಗಳನ್ನು ನೆನಪಿಸಿಕೊಂಡು ರಕ್ಷಿತಾ ಭಾವುಕರಾದರು. ಇನ್ನು ತಾಯಿ ಸಿನಿಮಾವನ್ನು ಸೂರ್ಯ ಅವರು ಮೊದಲ ಬಾರಿಗೆ ಥಿಯೇಟರ್‌ನಲ್ಲಿ ನೋಡಿದ್ದರು. ಈ ಬಗ್ಗೆ ಅವರು ಮಾತನಾಡಿದ್ದಾರೆ.
ರಕ್ಷಿತಾ ಪ್ರೇಮ್ ಮಗ ಏನಂದ್ರು?
“ಅಪ್ಪು ಸಿನಿಮಾವನ್ನು ಮೊದಲು ನೋಡಿದ್ದೆ. ಮೊದಲ ಬಾರಿಗೆ ನನ್ನ ತಾಯಿ ಸಿನಿಮಾವನ್ನು ಬಿಗ್‌ಸ್ಕ್ರೀನ್ ಮೇಲೆ ನೋಡಿದೆ. ಇದು ತುಂಬ ಖುಷಿ ಕೊಟ್ಟಿದೆ. ಮೊದಲ ಬಾರಿಗೆ ಅಪ್ಪು ಸರ್ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಿದ್ದೇನೆ, ತಾಯಿ ಹಾಗೂ ಅಭಿಮಾನಿಗಳ ಜೊತೆಗೆ ಸಿನಿಮಾ ನೋಡಿರೋದು ಖುಷಿ ಕೊಟ್ಟಿದೆ” ಸೂರ್ಯ ಪ್ರೇಮ್ ಅವರು ಹೇಳಿದ್ದಾರೆ.
ಆಕ್ಟಿಂಗ್ ಬಗ್ಗೆ ಪ್ರಶ್ನೆ ಕೇಳಿದಾಗ “ಎಲ್ಲ ಕಲಿಯಬೇಕು, ನಾವು ಮುಂದೆ ಚಿತ್ರರಂಗಕ್ಕೆ ಬಂದಮೇಲೆ ಕಲಿಯಬೇಕು” ಎಂದು ಸೂರ್ಯ ಹೇಳಿದ್ದಾರೆ. ಆಗ ರಕ್ಷಿತಾ ಅವರು “ಇಂಡಸ್ಟ್ರಿಗೆ ಬಂದ್ಮೇಲೆ ಅಲ್ಲ, ಈಗಲೂ ಕಲಿಯಬೇಕು” ಎಂದು ಹೇಳಿದ್ದಾರೆ. ಆಗ ಪತ್ರಕರ್ತರೊಬ್ಬರು “ಲವ್ ಮಾಡೋದು ಕಲಿತೀಯಾ? ಆಕ್ಟಿಂಗ್ ಮಾಡೋದು ಕಲಿತೀಯಾ?” ಎಂದು ಪ್ರಶ್ನೆ ಕೇಳಿದ್ದಾರೆ. ಆಗ ಸೂರ್ಯ ಅವರು ನಾಚಿಕೊಂಡು “ಎಲ್ಲ” ಎಂದು ಹೇಳಿದ್ದಾರೆ.
ʼಏನ್ ಸಾಧನೆ ಮಾಡಿದ್ದೀರಿ ಅಂತ ಸಂದರ್ಶನ ಕೊಡ್ತೀರಿ?ʼ- ಖಡಕ್ ಉತ್ತರ ಕೊಟ್ಟ ಕಿಚ್ಚ ಸುದೀಪ್ ಮಗಳು ಸಾನ್ವಿ!
ವರ್ಷಪೂರ್ತಿ ಓಡಿದ ಸಿನಿಮಾ!
ʼಅಪ್ಪುʼ ಸಿನಿಮಾ 100 ಡೇಸ್ ಓಡಿದೆ ಅಂತ ನಾವು ಆಚರಣೆ ಮಾಡಿರಬಹುದು. ಆದರೆ ಆ ಸಿನಿಮಾ ಒಂದು ವರ್ಷ ಓಡಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಮತ್ತೆ ಈ ಸಿನಿಮಾವನ್ನು ರೀ ರಿಲೀಸ್ ಮಾಡಿರೋದು ಖುಷಿ ಕೊಟ್ಟಿದೆ. ನಿಜಕ್ಕೂ ಇಂದಿನ ದಿನ ಖುಷಿ ಕೊಟ್ಟಿದೆ ಎಂದು ರಕ್ಷಿತಾ ಪ್ರೇಮ್ ಅವರು ಹೇಳಿಕೊಂಡಿದ್ದಾರೆ.
2002ರಲ್ಲಿ ಅಪ್ಪು ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಮೂಲಕ ಪುನೀತ್ ರಾಜ್‌ಕುಮಾರ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಚಿತ್ರ ಅದ್ದೂರಿ ಪ್ರದರ್ಶನ ಕಂಡಿತ್ತು. ಈ ಸಿನಿಮಾ ರಿಲೀಸ್ ಆಗಿ 14 ವರ್ಷಗಳ ಬಳಿಕ ಮತ್ತೆ ತೆರೆ ಕಂಡಿದೆ. ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ಹೀರೋಯಿನ್ ಆಗಿ ರಕ್ಷಿತಾ ಪ್ರೇಮ್ ಕಾಣಿಸಿಕೊಂಡಿದ್ದರು.
200 ಕೋಟಿ ಕೊಡ್ತೀನಿ ಆಸ್ಕರ್ ಪ್ರಶಸ್ತಿ ತರಿಸಿ ನೋಡೋಣ... ಟ್ರೋಲಿಗರ ವಿರುದ್ಧ ರೊಚ್ಚಿಗೆದ್ದ ಮಂಚು ವಿಷ್ಣು
ಅಪ್ಪು ಮೊದಲ ಸಿನಿಮಾ!
ಪಾರ್ವತಮ್ಮ ರಾಜ್‌ಕುಮಾರ್ ಅವರೇ ರಕ್ಷಿತಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ʼಅಪ್ಪುʼ ಸಿನಿಮಾಕ್ಕೆ ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದರು. ಪುರಿ ಜಗನ್ನಾಥ್ ಅವರೇ ಪುನೀತ್ ರಾಜ್‌ಕುಮಾರ್‌ರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿದ್ದರು. ʼಅಪ್ಪುʼ ಸಿನಿಮಾಕ್ಕೆ ಗುರುಕಿರಣ್ ಸಂಗೀತ ಸಂಯೋಜನೆ ಇದೆ. ಈ ಚಿತ್ರದ ಎಲ್ಲ ಹಾಡುಗಳು ಹಿಟ್ ಆಗಿವೆ. ಈ ಸಿನಿಮಾದಲ್ಲಿ ಅವಿನಾಶ್, ಸುಮಿತ್ರಾ, ಶ್ರೀನಿವಾಸ್ ಮೂರ್ತಿ ನಟಿಸಿದ್ದರು. ಈ ಚಿತ್ರ 100 ದಿನಗಳ ಯಶಸ್ವಿ ಪ್ರದರ್ಶನ ಕಂಡಾಗ ದೊಡ್ಡ ಆಚರಣೆ ಮಾಡಲಾಗಿತ್ತು. ಆ ವೇಳೆ ರಜನೀಕಾಂತ್ ಅವರೇ ಪುನೀತ್‌ರನ್ನು ಸಿಂಹದ ಮರಿ ಎಂದು ಬಿರುದು ಕೊಟ್ಟಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.