ನಿವೇದಿತಾ ಶಿವರಾಜ್‌ಕುಮಾರ್ ಅವರು ಅಂಡಮಾನ್ ಚಿತ್ರದ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ತಮಗಾದ ಹೊಟ್ಟೆಕಿಚ್ಚಿನ ಅನುಭವ ಹೇಳಿದ್ದಾರೆ. ಏನದು?
ನಟ ಶಿವರಾಜ್‌ಕುಮಾರ್ ಮಗಳು ನಿವೇದಿತಾ ತಮ್ಮ ಮೊದಲ ನಿರ್ಮಾಣದ ಸಿನಿಮಾ ಫಯರ್ ಫ್ಲೈ ರಿಲೀಸ್‌ಗೆ ಸಜ್ಜಾಗಿದೆ. ಶ್ರೀ ಮುದ್ದು ಪ್ರೊಡಕ್ಷನ್ ಹೌಸ್‌ನಲ್ಲಿ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದ ಭರ್ಜರಿ ಪ್ರಮೋಷನ್ ನಡೆಯುತ್ತಿದೆ. ಇಷ್ಟು ದಿನ ಕ್ಯಾಮೆರಾ ಹಿಂದೆ ಇದ್ದ ನಿರ್ಮಾಪಕ ಈಗ ಕ್ಯಾಮೆರಾ ಮುಂದೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಇದೀಗ ವಿವಿಧ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ನಿವೇದಿತಾ ನಾಲ್ಕು ವರ್ಷದ ಮಗು ಇದ್ದಾಗಲೇ ʻಅಂಡಮಾನ್ʼ ಸಿನಿಮಾದಲ್ಲಿ ತಂದೆ ಜೊತೆ ನಟಿಸಿದ್ದರು. ಅದಾದ ಮೇಲೆ ಮತ್ಯಾವ ಸಿನಿಮಾಗಳಲ್ಲೂ ನಟಿಸಲಿಲ್ಲ. ಇದೀಗ ಅಂಡಮಾನ್ ಚಿತ್ರದ ಶೂಟಿಂಗ್ ವೇಳೆ ತಮಗೆ ಆದ ಹೊಟ್ಟೆಕಿಚ್ಚಿನ ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಿವೇದಿತಾ, ನನಗೆ ಸರಿಯಾಗಿ ನೆನಪಿಲ್ಲ. ಆದರೆ ನನ್ನ ಅಮ್ಮ ಹೇಳ್ತಿದ್ರು. ಅಲ್ಲಿ ಸ್ವಿಮ್ಮಿಂಗ್ ಸೀನ್ ಇತ್ತು. ನನಗೆ ಸ್ವಿಮ್ಮಿಂಗ್ ಬರ್ತಾ ಇರಲಿಲ್ಲ. ಬೋಟ್ನಲ್ಲಿ ಹೋಗಬೇಕಿತ್ತು. ಆದ್ದರಿಂದ ನನ್ನ ಬದಲು ಒಬ್ಬಳು ಬಾಲನಟಿಯನ್ನು ಡ್ಯೂಪ್ ಆಗಿ ಪಡೆದುಕೊಂಡಿದ್ರು. ನನ್ನಪ್ಪ ಶಿವರಾಜ್ ಕುಮಾರ್, ಆ ಹುಡುಗಿಯನ್ನು ಹಿಡಿದುಕೊಂಡರು. ನನಗೆ ಆಗ ಸಿಕ್ಕಾಪಟ್ಟೆ ಹೊಟ್ಟೆಕಿಚ್ಚಾಗಿತ್ತಂತೆ. ಆ ಹುಡುಗಿಯನ್ನು ವಾಪಸ್ ಕರೆಸಿ ನಾನೇ ಆ ದೃಶ್ಯದ ಶೂಟಿಂಗ್ ಮಾಡಿದೆ ಎಂದು ನೆನಪಿಸಿಕೊಂಡಿದ್ದಾರೆ. ಇದೇ ವೇಳೆ, ಎಷ್ಟೇ ಬಿಜಿ ಇದ್ದರೂ ಅಪ್ಪ ತಮಗಾಗಿ ಸಮಯ ಮೀಸಲು ಇರಿಸುತ್ತಿದ್ದುದರ ಬಗ್ಗೆ ಮಾತನಾಡಿದ್ದಾರೆ ನಿವೇದಿತಾ.
ಸೆಲ್ಫಿ ಕೊಟ್ರೆ ಹೆಗಲ ಮೇಲೆನೇ ಕೈಹಾಕೋದಾ ಅಂಕಲ್ಲು! ಸುಮ್ನೆ ಇರ್ತಾರಾ ನಟಿ ರಾಧಿಕಾ ಪಂಡಿತ್?
'ಇನ್ನು ಹೊರ ದೇಶದಲ್ಲಿ ಶೂಟಿಂಗ್ ಹೋದಾಗ ನಾವು ಹೋಗುತ್ತಿದ್ವಿ. ಸ್ಕೂಲ್‌ನಲ್ಲಿ ನಡೆಯುತ್ತಿದ್ದ ಪೇರೆಂಟ್ಸ್ ಮೀಟಿಂಗ್‌ಗಳಲ್ಲಿ ಅಮ್ಮ ಭಾಗಿಯಾಗುತ್ತಿದ್ದರು ಅಪ್ಪ ಬರುತ್ತಿರಲಿಲ್ಲ ಆದರೆ ಸ್ಕೂಲ್‌ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು ಅದರಲ್ಲೂ ಸ್ಕೂಲ್ ಡೇ ಮತ್ತು ಮಕ್ಕಳ ದಿನಾಚರಣೆಯಲ್ಲಿ ಮಿಸ್ ಮಾಡುತ್ತಿರಲಿಲ್ಲ. ನಮ್ಮ ಕಾಲೇಜ್ ಫೆಸ್ಟ್‌ನಲ್ಲಿ ಕೂಡ ಇದ್ದರು. ಸ್ಕೂಲ್‌ನಲ್ಲಿ ಜೊತೆಗಿದ್ದ ಸ್ನೇಹಿತರೇ ಕಾಲೇಜ್‌ವರೆಗೂ ಬಂದಿರುವುದು ಹೀಗಾಗಿ ಎಲ್ಲಾದರೂ ಸಿಕ್ಕಾಗ ಅಥವಾ ಮನೆಗೆ ಬಂದಾಗ ತಂದೆ ಜೊತೆ ತೆಗೆಸಿಕೊಂಡಿದ್ದಾರೆ ಎಂದರು. ತುಂಬಾ ಜನ ಅಂದುಕೊಳ್ಳುತ್ತಾರೆ ಅವರು ಫುಲ್ ಬ್ಯುಸಿಯಾಗಿರುತ್ತಾರೆ ಫ್ಯಾಮಿಲಿಗೆ ಸಮಯ ಕೊಡುವುದಿಲ್ಲ ಎಂದು ಆದರೆ ಆ ತರ ಅಲ್ಲ. ಅವರು ಎಷ್ಟೇ ಬ್ಯುಸಿ ಆಗಿದ್ದರೂ ಫ್ಯಾಮಿಲಿಗೆ ಸಮಯ ಕೊಟ್ಟೇ ಕೊಡುತ್ತಾರೆ. ನಮ್ಮ ಸ್ಕೂಲ್‌ಗೆ ಡ್ರಾಪ್ ಮಾಡಿದ್ದಾರೆ, ಡಾಕ್ಟರ್ ಅಪಾಯಿಂಟ್ಮೆಂಟ್ ಇದ್ದಾಗ ಕರೆದುಕೊಂಡು ಹೋಗಿದ್ದಾರೆ ಡೆಂಟಿಸ್ಟ್‌ಗೆ ಕರೆದುಕೊಂಡು ಹೋಗೋದಾಗಿರಲಿ ಎಲ್ಲಾ ಮಾಡ್ತಾ ಇದ್ರು ಹೀಗಾಗಿ ಫ್ಯಾಮಿಲಿ ಮಕ್ಕಳಿಗೆ ಸಮಯ ಕೊಡುತ್ತಿಲ್ಲ ಅನಿಸಲಿಲ್ಲ ಎಂದು ಅಪ್ಪನ ಪರ ಹೇಳಿದ್ದಾರೆ ನಿವೇದಿತಾ.
ಇನ್ನು ಮದುವೆಯ ಕುರಿತು ಈ ಹಿಂದೆ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದ ನಿವೇದಿತಾ ಅವರು, 'ನನ್ನ ಮದುವೆ ವಿಚಾರದ ಬಗ್ಗೆ ಐಡಿಯಾನೇ ಇಲ್ಲ ಆದರೆ go with the flow ಅಷ್ಟೇ. ಹುಡುಗ ಹೇಗಿರಬೇಕು ಅನ್ನೋ ಡ್ರೀಮ್ ಎಲ್ಲರಿಗೂ ಇರುತ್ತೆ ಆದರೆ ಏನ್ ಆಗುತ್ತದೆ ನೋಡಬೇಕು.ಇದೇ ತರ ಇರಬೇಕು ಅನ್ನೋದು ಏನ್ ಇಲ್ಲ ಆದರೆ ಸಿಂಪಲ್ ಆಗಿ ಒಳ್ಳೆ ಮನಸ್ಸು ಇರುವ ಹುಡುಗ ಆದರೆ ಸಾಕು ನನ್ನ ಕೆಲಸಗಳಿಗೆ ಸಪೋರ್ಟ್ ಮಾಡಬೇಕು' ಎಂದಿದ್ದರು. ಇನ್ನು ಇಂಡಸ್ಟ್ರಿಯಲ್ಲಿ ಇರುವ ವ್ಯಕ್ತಿ ಅಥವಾ ಹೊರಗಡೆ ಇರುವ ವ್ಯಕ್ತಿಯನ್ನು ಮದುವೆ ಆಗ್ತೀರಾ? ಎಂದು ಪ್ರಶ್ನೆ ಮಾಡಿದಾಗ ಗೊತ್ತಿಲ್ಲ ಎಂದು ನಕ್ಕಿದ್ದರು. ನನಗೂ ಸೆಲೆಬ್ರಿಟಿ ಕ್ರಶ್‌ಗಳು ತುಂಬಾ ಇದಾರೆ. ಕನ್ನಡದಲ್ಲಿ ಹೇಳಬೇಕು ಅಂದ್ರೆ ಯಶ್ ತುಂಬಾನೇ ಇಷ್ಟ. ಇದನ್ನು ಹೊರತುಪಡಿಸಿ ತುಂಬಾ ಭಾಷೆಗಳಲ್ಲಿ ಬೇರೆ ಬೇರೆ ಸೆಲೆಬ್ರಿಟಿ ಕ್ರಷ್ ಇದ್ದಾರೆ ಎಂದಿದ್ದರು.
ಕಿಸ್ ಮಾಡಲು ಹೋದ್ರೆ ಅಲ್ಲಿ ಮುಟ್ಬೇಡಿ, ಇಲ್ಲಿ ಮುಟ್ಬೇಡಿ ಅಂತಾರೆ! ದುಃಖ ತೋಡಿಕೊಂಡ ಕಿಚ್ಚ ಸುದೀಪ್