ಮತ್ತೆ ಹೆದರಿಸಲು ಬರ್ತಿದಾರೆ ಅದೇ ಜೋಡಿ; ಯಾವುದಕ್ಕೂ ಎಲ್ರೂ ಹುಶಾರಾಗಿರಿ ಆಯ್ತಾ!

By Shriram Bhat  |  First Published Jan 27, 2024, 1:45 PM IST

ಸತ್ಯ ಮತ್ತು ಸುಳ್ಳಿನ ನಡುವೆ ಇರುವ ಸಾಮಾಜಿಕ ಬದ್ಧತೆ ಸುತ್ತ ಸಾಗುವ ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ ಟೈನರ್ ಕಥಾಹಂದರ ಹೊಂದಿರುವ ಚಿತ್ರಕ್ಕೆ  ಅಂಕಿತ್ ಸಿನಿಮಾಸ್ ಅಡಿಯಲ್ಲಿ ಅಂಕಿತ್ ಸೋನಿಗಾರ ಚಿತ್ರ ನಿರ್ಮಿಸಿಸುತ್ತಿದ್ದು,   ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. 


ಕನ್ನಡ ಚಿತ್ರರಂಗದಲ್ಲಿ ‘ರಂಗಿತರಂಗ’ ಚಿತ್ರ ಮಾಡಿದ ಸಾಧನೆ ದೊಡ್ಡದು. 2015 ಜುಲೈ 3ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಅಂದು ಟಾಕ್ ಆಫ್‌ ದಿ ಸ್ಟೇಟ್ ಎಂಬಂತಿತ್ತು. ರಂಗಿತರಂಗ ಬಿಡುಗಡೆಯಾಗಿ 10 ವರ್ಷಕ್ಕೆ ಸಮೀಪವಾಗಿದೆ. ಬಾಹುಬಲಿಯಂತಹ ದೊಡ್ಡ ಸಿನಿಮಾದ ಎದುರು ಗೆದ್ದು ಬೀಗಿದ್ದ ಈ ಸಿನಿಮಾದಲ್ಲಿ, ನಾಯಕನಾಗಿ ಅಮೋಘವಾಗಿ ನಟಿಸಿದ್ದ ನಿರೂಪ್ ಭಂಡಾರಿ ಎದುರು ಖಳನಾಯಕನಾಗಿ ಸಾಯಿಕುಮಾರ್ ಅತ್ಯದ್ಭುತ ಪ್ರದರ್ಶನ ತೋರಿಸಿದ್ದರು.  

ಪೋಸ್ಟ್ ಮ್ಯಾನ್ ಕಾಳಿಂಗನಾಗಿ ಅಬ್ಬರಿಸಿದ್ದ ಸಾಯಿಕುಮಾರ್ ಹಾಗೂ ನಿರೂಪ್ ಈಗ  ಮತ್ತೆ ಕೈ ಜೋಡಿಸಿದ್ದಾರೆ, ಒಂದೇ ಸಿನಿಮಾದಲ್ಲಿ ಜತೆಯಾಗಿದ್ದಾರೆ. ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಯುವ ಪ್ರತಿಭೆ ಸಚಿನ್ ವಾಲಿ ಸಾರಥ್ಯದ ಹೊಸ ಸಿನಿಮಾದಲ್ಲಿ ನಿರೂಪ್ ಭಂಡಾರಿ ಹಾಗೂ ಸಾಯಿಕುಮಾರ್ ಒಟ್ಟಿಗೆ ನಟಿಸ್ತಿದ್ದಾರೆ. ಈಗಾಗ್ಲೇ ಸಾಯಿಕುಮಾರ್ ಚಿತ್ರತಂಡ ಸೇರಿದ್ದು ಬಹಳ ವರ್ಷಗಳ ನಂತ್ರ ಈ ಕಾಂಬೋ ಮತ್ತೆ ಒಂದಾಗಿರುವುದು ಕುತೂಹಲ ಹೆಚ್ಚಿಸಿದೆ. 

Tap to resize

Latest Videos

ಜನುಮದ ಜೋಡಿ 'ಕನಕ' ಯಾಕೆ ಕೈ ಸುಟ್ಕೊಂಡ್ರು; ಎಲ್ಲಿದಾರೆ ಶಿಲ್ಪಾ, ಏನ್ಮಾಡ್ತಿದಾರೆ..?!

ಸಾಯಿಕುಮಾರ್ ಅವರು ನಿರೂಪ್ ಅವರ ತಂದೆ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರದ ಶೀರ್ಷಿಕೆ ಮತ್ತು ಪರ್ಸ್ಟ್ ಲುಕ್ ಫೆಬ್ರವರಿ 6ಕ್ಕೆ ಅನಾವರಣಗೊಳ್ಳುತ್ತಿದೆ. ಈ ಸುದ್ದಿ ಸ್ಯಾಂಡಲ್‌ವುಡ್ ಅಂಗಳದಲ್ಲಿ ಮತ್ತೆ ಮಿಂಚಿನ ಸಂಚಲನ ಮಾಡಲಿರುವುದಂತೂ ಪಕ್ಕಾ ಎನ್ನಬಹುದು. ಏಕೆಂದರೆ, ಅಂದು ರಂಗಿ ತರಂಗ ಮಾಡಿದ್ದ ಮೋಡಿಯನ್ನು ಯಾರು ಕೂಡ ಯಾವತ್ತೂ ಮರೆಯಲಾರರು.

ಮರಿ ಟೈಗರ್ ಮಾಸ್ 'ಮಾದೇವ' ಟೀಸರ್ ಲಾಂಚ್; ಕಾಟೇರ ಸೃಷ್ಟಿಕರ್ತ ಸೇರಿದಂತೆ ಹಲವರು ಸಾಥ್ !

ಸತ್ಯ ಮತ್ತು ಸುಳ್ಳಿನ ನಡುವೆ ಇರುವ ಸಾಮಾಜಿಕ ಬದ್ಧತೆ ಸುತ್ತ ಸಾಗುವ ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ ಟೈನರ್ ಕಥಾಹಂದರ ಹೊಂದಿರುವ ಚಿತ್ರಕ್ಕೆ  ಅಂಕೆತ್ ಸಿನಿಮಾಸ್ ಅಡಿಯಲ್ಲಿ ಅಂಕಿತ್ ಸೋನಿಗಾರ ಚಿತ್ರ ನಿರ್ಮಿಸಿಸುತ್ತಿದ್ದು,   ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. ಸಚಿನ್ ಬಸ್ರೂರ್ ಸಂಗೀತ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನ, ಉಲ್ಲಾಸ್ ಹೈದೂರು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಪುಟ್ಟಣ್ಣರ ಪತ್ನಿಯಾಗಿದ್ದ ನಟಿ ಆರತಿ ಅಮೆರಿಕಾದಲ್ಲಿ ಏನ್ಮಾಡ್ತಿದಾರೆ; ಕೋಲಾರಕ್ಕೆ ಯಾಕೆ ಬರ್ತಾರೆ!?

click me!