ಜನುಮದ ಜೋಡಿ 'ಕನಕ' ಯಾಕೆ ಕೈ ಸುಟ್ಕೊಂಡ್ರು; ಎಲ್ಲಿದಾರೆ ಶಿಲ್ಪಾ, ಏನ್ಮಾಡ್ತಿದಾರೆ..?!

Published : Jan 27, 2024, 01:10 PM ISTUpdated : Jan 27, 2024, 01:15 PM IST
ಜನುಮದ ಜೋಡಿ 'ಕನಕ' ಯಾಕೆ ಕೈ ಸುಟ್ಕೊಂಡ್ರು; ಎಲ್ಲಿದಾರೆ ಶಿಲ್ಪಾ, ಏನ್ಮಾಡ್ತಿದಾರೆ..?!

ಸಾರಾಂಶ

ಮಲಯಾಳಂನಲ್ಲಿ ಅವರು ಮಾಡಿದ ಎರಡು ಸೀರಿಯಲ್‌ಗಳು ಭಾರೀ ಸೂಪರ್ ಹಿಟ್ ಆದವು. ಸಿನಿಮಾದಲ್ಲಿ ಶಿಲ್ಪಾ ಫ್ಯಾಮಿಲಿ ಕಳೆದುಕೊಂಡ ಹಣ ಧಾರಾವಾಹಿಗಳಲ್ಲಿ ಬಡ್ಡಿ ಸಮೇತ ವಾಪಸ್ ಬಂತು ಎನ್ನಲಾಗಿದೆ. 

ಕನ್ನಡದ 'ಜನಮದ ಜೋಡಿ' ಸಿನಿಮಾದಲ್ಲಿ ನಟಿಸಿದ್ದರು ಶಿಲ್ಪಾ (Shilpa) ಎಂಬ ಕೇರಳದ ಚೆಲುವೆ. ನಟ ಶಿವರಾಜ್‌ಕುಮಾರ್ (Shiva Rajkumar )ಜೋಡಿಯಾಗಿ 'ಕನಕ' ಪಾತ್ರದಲ್ಲಿ ನಟಿಸಿದ್ದ ನಟಿ ಶಿಲ್ಪಾರನ್ನು ಅಂದು ಕನ್ನಡಿಗರು ತುಂಬಾ ಮೆಚ್ಚಿಕೊಂಡಿದ್ದರು. 1996ರಲ್ಲಿ ಟಿಎಸ್ ನಾಗಾಭರಣ (TS Nagabharana) ನಿರ್ದೇಶನದಲ್ಲಿ ಶಿವಣ್ಣ-ಶಿಲ್ಪಾ ಜೋಡಿಯಲ್ಲಿ 'ಜನುಮದ ಜೋಡಿ' (Janumada Jodi) ಸಿನಿಮಾ ತೆರೆಗೆ ಬಂದಿತ್ತು.  ವಿ ಮನೋಹರ್ (V Manohar) ಸಂಗೀತ ನಿರ್ದೇಶನದಲ್ಲಿ ಜನುಮದ ಜೋಡಿ ಹಾಡುಗಳು ಸೂಪರ್ ಹಿಟ್ ಆಗಿ ತುಂಬಾ ಮೋಡಿ ಮಾಡಿದ್ದವು. 

ಜನುಮದ ಜೋಡಿ ಬಳಿಕ ಶಿಲ್ಪಾ ಭೂಮಿತಾಯಿಯ ಚೊಚ್ಚಿಲು ಮಗ, ಮುಂಗಾರಿನ ಮಿಂಚು, ಧರ್ಮ ದೇವತೆ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬಳಿಕ ಅವರು ಕನ್ನಡ ಸಿನಿಮಾರಂಗ ಬಿಟ್ಟು ಮಲಯಾಳಂ ಚಿತ್ರರಂಗದತ್ತ ತಮ್ಮ ಗಮನವನ್ನು ಹೆಚ್ಚು ಕೇಂದ್ರೀಕರಿಸಿದರು ಎನ್ನಲಾಗಿದೆ. ಬಳಿಕ ಅವರು ನಿರ್ಮಾಣದತ್ತಲೂ ಒಲವು ತೋರಿಸುತ್ತ ಕೇರಳದಲ್ಲಿ ಸೆಟ್ಲ್ ಆಗಿಬಿಟ್ಟರು. 

ಎಂ ರಂಜಿತ್ ಹೆಸರಿನ ನಿರ್ಮಾಪಕರನ್ನು ಮದುವೆಯಾದ ಶಿಲ್ಪಾ ಹಲವಾರು ಮಲಯಾಳಂ ಸಿನಿಮಾಗಳನ್ನು ನಿರ್ಮಾಣ ಮಾಡಿ ಕೈ ಸುಟ್ಟುಕೊಂಡರು ಎನ್ನಲಾಗಿದೆ. ಹಣ ಕಳೆದುಕೊಂಡು ಕಂಗಾಲಾಗಿ ಕುಳಿತಿದ್ದ ನಟಿ ಶಿಲ್ಪಾ ಕುಟುಂಬಕ್ಕೆ ಅಂದು ಆಸರೆಯಾಗಿ ಬಂದಿದ್ದು ಸೀರಿಯಲ್ಸ್‌ ಎನ್ನಲಾಗಿದೆ. ಸಿನಿಮಾ ಉದ್ಯಮದಲ್ಲಿ ಲಾಸ್ ಮಾಡಿಕೊಂಡ ಶಿಲ್ಪಾ-ರಂಜಿತ್ ಬಳಿಕ ಸೀರಿಯಲ್ ನಿರ್ಮಾಣದಲ್ಲಿ ತೊಡಗಿಸಿಕೊಂಡರು. 

ವಿಜಯಲಕ್ಷ್ಮೀ ದರ್ಶನ್ ಜತೆ ಕಿತ್ತಾಡಿದ ಪವಿತ್ರಾ ಗೌಡ; ಯಾರಿವರು, ಏನ್ ಕೆಲ್ಸ ಮಾಡ್ತಿದಾರೆ..?!

ಮಲಯಾಳಂನಲ್ಲಿ ಅವರು ಮಾಡಿದ ಎರಡು ಸೀರಿಯಲ್‌ಗಳು ಭಾರೀ ಸೂಪರ್ ಹಿಟ್ ಆದವು. ಸಿನಿಮಾದಲ್ಲಿ ಶಿಲ್ಪಾ ಫ್ಯಾಮಿಲಿ ಕಳೆದುಕೊಂಡ ಹಣ ಧಾರಾವಾಹಿಗಳಲ್ಲಿ ಬಡ್ಡಿ ಸಮೇತ ವಾಪಸ್ ಬಂತು ಎನ್ನಲಾಗಿದೆ. ಈ ಮೂಲಕ ನಟಿ ಶಿಲ್ಪಾ ಒಮ್ಮೆ ಹಣದ ವಿಷಯದಲ್ಲಿ ಕೈ ಸುಟ್ಟುಕೊಂಡರೂ ಬಳಿಕ ಯಶಸ್ಸು ಪಡೆಯಿತು. ಸದ್ಯ ಶಿಲ್ಪಾ ಕುಟುಂಬದೊಂದಿಗೆ ಕೇರಳದಲ್ಲಿ ವಾಸವಿದ್ದಾರೆ. ಅವರಿಗೆ ಆವಂತಿಕಾ ಎಂಬ ಮಗಳಿದ್ದಾಳೆ. 

ಮಕ್ಳ ನಂಬ್ಕೊಂಡು ಗೌರಿ ಶ್ರೀನಿವಾಸ್ ಬರ್ತಿದಾರೆ, ಜಾಗ ಬಿಡಿ; ಮರಿಬೇಡಿ..,ಹೆಣ್ಮಕ್ಳೇ ಸ್ಟ್ರಾಂಗು ಗುರೂ!

ಮಗಳ ಹೆಸರಿನಲ್ಲಿ 'ಆವಂತಿಕಾ ಕ್ರಿಯೇಷನ್ಸ್' ನಿರ್ಮಾಣ ಸಂಸ್ಥೆಯ ಮೂಲಕವೇ ಶಿಲ್ಪಾ-ರಂಜಿತ್ ತಮ್ಮ ಸೀರಿಯಲ್ಸ್‌ ನಿರ್ಮಾಣವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ಗಂಡ ಹಣ ಕೂಡುತ್ತಿದ್ದರೆ ಶಿಲ್ಪಾ ಪ್ರೊಡಕ್ಷನ್‌ ಕೆಲಸವನ್ನು ನೋಡಿಕೊಂಡು ಜವಾಬ್ದಾರಿ ನಿರ್ವಹಿಸುತ್ತ ಸುಖ ಸಂಸಾರದಲ್ಲಿ ಬಾಳುವೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಜನುಮದ ಜೋಡಿ ಚಿತ್ರದ 'ಕನಕ'ರನ್ನು ಕನ್ನಡಿಗರು ಎಂದೂ ಮರೆಯಲಾರರು.

ಪುಟ್ಟಣ್ಣರ ಪತ್ನಿಯಾಗಿದ್ದ ನಟಿ ಆರತಿ ಅಮೆರಿಕಾದಲ್ಲಿ ಏನ್ಮಾಡ್ತಿದಾರೆ; ಕೋಲಾರಕ್ಕೆ ಯಾಕೆ ಬರ್ತಾರೆ!?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?