ಡಿಎನ್‌ಎ ಚಿತ್ರದಲ್ಲಿ ನೀನಾಸಂ ಸತೀಶ್ ಗಾಯನ

Suvarna News   | Asianet News
Published : Apr 07, 2021, 03:22 PM IST
ಡಿಎನ್‌ಎ ಚಿತ್ರದಲ್ಲಿ ನೀನಾಸಂ ಸತೀಶ್ ಗಾಯನ

ಸಾರಾಂಶ

ಪ್ರಕಾಶ್‌ರಾಜ್ ಮೇಹು ನಿರ್ದೇಶನದ ಹೊಸ ಚಿತ್ರ | ಡಿಎನ್‌ಎ ಚಿತ್ರದಲ್ಲಿ ನೀನಾಸಂ ಸತೀಶ್ ಗಾಯನ

25 ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲಿರುವ ಪ್ರಕಾಶ್ ರಾಜ್ ಸಾಹು ನಿರ್ದೇಶನದ ಹೊಸ ಚಿತ್ರ ‘ಡಿಎನ್‌ಎ’. ಇದರಲ್ಲಿ ಯೋಗರಾಜ್ ಭಟ್ ರಚನೆಯ ವಿಶಿಷ್ಟ ಹಾಡಿಗೆ ನೀನಾಸಂ ಸತೀಶ್ ದನಿಯಾಗಿದ್ದಾರೆ. ಮನುಷ್ಯನ ಡಿಎನ್‌ಎ ಗಿಂತಲೂ ಮನುಷ್ಯ ಸಂಬಂಧ ಅನ್ನೋದೇ ದೊಡ್ಡದು ಅನ್ನೋ ಸಂದೇಶ ಈ ಹಾಡಿನಲ್ಲಿದೆ.

ಇದಕ್ಕೆ ಪೂರಕವಾಗಿ ‘ಸಂಬಂಜ ಅನ್ನೋದು ದೊಡ್ದು ಕನಾ’ ಎಂಬ ದೇವನೂರು ಮಹಾದೇವ ಅವರ ಸಾಲು ಈ ಚಿತ್ರದ ಟ್ಯಾಗ್‌ಲೈನ್ ಆಗಿದೆ. ‘ಡಿಎನ್‌ಎ’ ಚಿತ್ರದ ಹಾಡುಗಳ ಪ್ರಮೋಶನ್‌ಗಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಕನ್ನಡ ಚಿತ್ರಗಳ ಬಿಡುಗಡೆಗೆ ಎರಡು ತಿಂಗಳು ಬ್ರೇಕ್..! 15 ಸಿನಿಮಾ ಅತಂತ್ರ

ನಿರ್ದೇಶಕ ಪ್ರಕಾಶ್‌ರಾಜ್ ಮೇಹು, ‘ಕಳೆದ 25 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಆದರೆ ನಿರ್ದೇಶಕನಾಗಿ ನನಗೆ ಅತ್ತ ಕಂಪ್ಲೀಟ್ ಕಮರ್ಷಿಯಲ್ ಅಲ್ಲದ, ಇತ್ತ ಆರ್ಟ್ ಮೂವಿಯೂ ಅಲ್ಲದ, ಇವೆರಡರ ನಡುವೆ ಬರುವ ಭಾವನಾತ್ಮಕ ಚಿತ್ರವನ್ನು ನಿರ್ದೇಶಿಸುವ ಹಂಬಲವಿತ್ತು. ಈ ಸಿನಿಮಾದ ಮೂಲಕ ಬಹು ದಿನಗಳ ಕನಸು ನೆರವೇರಿದೆ’ ಎಂದರು.

ಮಾತೃಶ್ರೀ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಮೈಲಾರಿ ಈ ಸಿನಿಮಾ ನಿರ್ಮಿಸಿದ್ದಾರೆ. ಮಕ್ಕಳ ಡಿಎನ್‌ಎ ಬದಲಾಗುವ ಕಥಾಹಂದರ ಈ ಚಿತ್ರದ್ದು. ಮುಖ್ಯ ಪಾತ್ರಗಳಲ್ಲಿರುವ ಅಚ್ಯುತ್, ಎಸ್ಟರ್ ನೊರೋನ್ಹಾ, ಸಂಗೀತ ನಿರ್ದೇಶಕ ಚೇತನ್ ಕೃಷ್ಣ, ಸಂಕಲನಕಾರ ಶಿವರಾಜ್, ಡಿಓಪಿ ಮಾಡಿರುವ ರವಿ ಕುಮಾರ್ ಉಪಸ್ಥಿತರಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?