
2019ರಲ್ಲಿ ತೆರೆ ಕಂಡ ಆಯುಷ್ಮಾನ್ ಭವ ಚಿತ್ರದ ನಂತರ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಸುಳಿವು ನೀಡದ ನಿಧಿ ಸುಬ್ಬಯ್ಯ ಏನು ಮಾಡುತ್ತಿದ್ದಾರೆ. 2021ರ ಪ್ಲಾನ್ ಏನು, ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ....
ನಿಧಿ ಅಪ್ಲೋಡ್ ಮಾಡುವ ಫೋಟೋಗಳನ್ನು ಕಂಡರೆ ನೆಟ್ಟಿಗರು ಕೇಳುವ ಮೊದಲ ಪ್ರಶ್ನೆಯೇ ಎಲ್ಲಿದ್ದೀರಾ ಎಂದು. ಕಮೆಂಟ್ಸ್‌ನಲ್ಲಿ ನೆಟ್ಟಿಗರು ಎಷ್ಟೇ ಪ್ರಶ್ನೆ ಕೇಳಿದರು ಉತ್ತರ ನೀಡಿಲ್ಲ ಹಾಗೆಯೇ ಅವರು ಕಾಮೆಂಟ್ ಮಾಡುವುದನ್ನು ನಿಲಿಸಿಲ್ಲ. ಇತ್ತೀಚಿಗೆ ನಿಧಿ ಶೇರ್ ಮಾಡಿಕೊಂಡ ಮಿರರ್ ಸೆಲ್ಫಿಗೆ ನೆಟ್ಟಿಗರು ಹಿಗ್ಗಾಮುಗ್ಗಾ ಕಮೆಂಟ್ ಮಾಡುತ್ತಿದ್ದಾರೆ.
ಪಂಚರಂಗಿ ಹುಡ್ಗಿ ನಿಧಿ ಸುಬ್ಬಯ್ಯ ಈಗೇನ್ ಮಾಡ್ತಿದ್ದಾರೆ ಗೊತ್ತಾ?
'Be your own kind of beautiful' ಎಂದು ಬರೆದುಕೊಂಡು ನಿಧಿ ಶರ್ಟ್ ಹಾಗೂ ಚಿಕ್ಕ ಚಡ್ಡಿ ಧರಿಸಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ನಿಧಿ ಧರಿಸಿರುವ ಚಡ್ಡಿ ತುಂಬಾನೇ ಶಾರ್ಟ್ ಆಗಿದೆ, ಕೆಲವರು ಆಕೆ ಏನೂ ಧರಿಸಿಲ್ಲ ಎನ್ನುವ ರೀತಿಯಲ್ಲಿ ಕಾಲೆಳೆಯುತ್ತಿದ್ದಾರೆ.
'ಚಡ್ಡಿ ಹಾಕಿದ್ಯಾಮ್ಮ','ಲಕ್ಷಗಟ್ಟಲೆ ದುಡಿದರೂ ಬಟ್ಟೆಗೆ ದುಡ್ಡಿಲ್ಲ ಅಲ್ವಾ' ಎಂದು ಕೆಲವರು ಕೇಳಿದರೆ ಇನ್ನೂ ಕೆಲವರು 'ಹಾಕೋದು ಹಾಕಿದ್ಯಾ ಸ್ವಲ್ಪ ದೊಡ್ಡದು ಚಡ್ಡಿ ಹಾಕೋಕೆ ಆಗಲ್ವಾ' ಎಂದು ಕೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.