
ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಅಷ್ಟೆಯಲ್ಲದೇ ಕೆಲ ಆಪ್ತರ ಪರವಾಗಿ ಪ್ರಚಾರ ಮಾಡುವುದಾಗಿ ಬಹಿರಂಗ ಪಡಿಸಿದ್ದಾರೆ. ಸುದೀಪ್ ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳುತ್ತಿದ್ದಂತೆ ಹಿರಿಯ ನಟ ಪ್ರಕಾಶ್ ರಾಜ್ ಪರೋಕ್ಷವಾಗಿ ಟಾಂಗ್ ಕೊಡುತ್ತಿದ್ದಾರೆ. ಸುದೀಪ್ ಅವರ ನಡೆಯನ್ನು ಕೆಣಕುತ್ತಿರುವ ಪ್ರಕಾಶ್ ರಾಜ್ ಸರಣಿ ಟ್ವೀಟ್ ಮಾಡಿದ್ದಾರೆ. ಸುದೀಪ್ ಬಿಜೆಪಿ ಸೇರುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆದ ಬೆನ್ನಲ್ಲೇ ಪ್ರಕಾಶ್ ರಾಜ್ ಇದು ಸುಳ್ಳು ಸುದ್ದಿ, ಸುದೀಪ್ ತಮ್ಮನ್ನು ತಾನು ಮಾರಿಕೊಳ್ಳುವವರಲ್ಲ ಎಂದು ಹೇಳಿದ್ದರು. ಪ್ರಕಾಶ್ ರಾಜ್ ಮಾತಿಗೆ ಕಿಚ್ಚ ಸುದೀಪ್ ಸುದ್ದಿಗೋಷ್ಠಿಯಲ್ಲೇ ಪ್ರತಿಕ್ರಿಯೆ ನೀಡಿದ್ದರು.
ಇದೀಗ ಮತ್ತೆ ಪ್ರಕಾಶ್ ರಾಜ್ ಸರಣಿ ಟ್ವೀಟ್ ಮೂಲಕ ಕಿಚ್ಚನ್ನು ಕೆಣಕುತ್ತಿದ್ದಾರೆ. ಎಲ್ಲರೂ ಪ್ರೀತಿಸುವ ಕಲಾವಿದರಾಗಿ ಜನರ ಧ್ವನಿಯಾಗುತ್ತೀರಿ ಎಂದು ನಾನು ನಿರೀಕ್ಷಿಸಿದ್ದೆ ಆದರೆ ರಾಜಕೀಯ ಪಕ್ಷವನ್ನು ಬಣ್ಣಿಸಲು ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಟಾಂಗ್ ನೀಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ ವ್ಯಂಗ್ಯ ಚಿತ್ರ ಶೇರ್ ಮಾಡಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ ನಿಮ್ ಮಾಮನೊ ನಿಮ್ ಅತ್ತೇನೊ ನಿಮ್ ಕಷ್ಟಕಾಲದಲ್ಲಿ ಸಹಾಯ ಮಾಡಿದ್ರೆ ನೀವು ದುಡಿದಿದ್ರಲ್ಲಿ ಕೋಡಿ ಸುದೀಪ್ ವಿರುದ್ಧ ಗುಡುಗಿದ್ದಾರೆ.
'ಸುದೀಪ್, ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ. ಆದರೆ ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲ್ಲ. ಇನ್ನು ಮುಂದೆ ನಿಮ್ಮನ್ನೂ ನಿಮ್ ಪಕ್ಷವನ್ನು ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ' ಎಂದು ಹೇಳಿದ್ದಾರೆ.
ಅವರ ಜೊತೆ ಮುಂದಿನ ಸಿನಿಮಾ ಮಾಡಲು ಕಾಯ್ತಿದ್ದೀನಿ: ಪ್ರಕಾಶ್ ರಾಜ್ ಹೇಳಿಕೆಗೆ ಕಿಚ್ಚ ಸುದೀಪ್ ರಿಯಾಕ್ಷನ್
ಮತ್ತೊಂದು ಟ್ವೀಟ್‌ನಲ್ಲಿ, 'ನೋಡ್ರಪ್ಪ ನಿಮ್ ಮಾಮನೊ ನಿಮ್ ಅತ್ತೇನೊ ನಿಮ್ ಕಷ್ಟಕಾಲದಲ್ಲಿ ಸಹಾಯ ಮಾಡಿದ್ರೆ ನೀವು ದುಡಿದಿದ್ರಲ್ಲಿ 10%..20% ಇಲ್ಲ 30 % ಕೊಡಿ. ಅದು ನಿಮ್ಮಿಷ್ಟ ಆದ್ರೆ ಪ್ರಜೆಗಳ 30% ಕೊಳ್ಳೆ ಹೊಡೆಯೊಕ್ ಬಿಡ್ಬೀಡಿ ಅಷ್ಟೆ ಅಷ್ಟೇ' ಎಂದು ಟಾಂಗ್ ನೀಡಿದ್ದಾರೆ.
ಮೋದಿಯಂಥ ಸ್ಟಾರ್ ನಟರೇ ಅಟ್ರ್ಯಾಕ್ಷನ್ ಮಾಡೋಕೆ ಆಗ್ತಿಲ್ಲ; ಸುದೀಪ್, ಪವನ್ ಕಲ್ಯಾಣ್ ಏನು ಮಾಡ್ತಾರೆ?: ಎಚ್‌ಡಿಕೆ ಲೇವಡಿ
ಸುದೀಪ್ ಅವರನ್ನು ಕೆಣಕುತ್ತಿದ್ದಂತೆ ನೆಟ್ಟಿಗರು ಪ್ರಕಾಶ್ ರಾಜ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವು ಮಾಡಿದ್ದು ಅದೇ ಬೇರೆಯವರಿಗೆ ಯಾಕೆ ಹೇಳುತ್ತೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಬೆಂಬಲ ಸೂಚಿಸಿದ ಪ್ರಕಾಶ್ ರಾಜ್ ಅವರ ಟ್ವೀಟ್ ಶೇರ್ ಮಾಡಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಕಾಂಗ್ರೇಸ್‌ನಿಂದ ನೀವು ಎಷ್ಟು ಹಣ ಪಡೆದಿದ್ದೀರಿ ಎಂದು ನೆಟ್ಟಿಗರೊಬ್ಬರು ಕೇಳಿದ್ದಾರೆ. ಭಾರತ್ ಜೋಡೋ ಯಾತ್ರಿಗೆ ಬೆಂಬಲ ನೀಡಿ ಟ್ವೀಟ್ ಮಾಡಿದ್ದ ಪ್ರಕಾಶ್ ರಾಜ್ ಅವರ ಸ್ಕ್ರೀನ್ ಶಾಟ್ ವೈರಲ್ ಆಗಿದೆ. ಪ್ರಕಾಶ್ ರಾಜ್ ಮಾತಿಗೆ ಸುದೀಪ್ ಉತ್ತರ ನೀಡುತ್ತಾರಾ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.