ರಿಯಲ್ ಸ್ಟಾರ್ ಹೇಳಿರೋ ಈ ಕಥೆ ಗೊತ್ತಾ? ಉಪ್ಪಿನ ಸುಮ್ನೆ ಹೇಳಿಲ್ವಂತೆ ಬುದ್ಧಿವಂತ ಅಂತ!

By Shriram Bhat  |  First Published Nov 14, 2024, 3:40 PM IST

ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ಕಥೆಯೊಂದನ್ನು ಹೇಳಿದ್ದಾರೆ. ಈ ಕಥೆ ಈಗಾಗಲೇ ಕೇಳಿದವರು ಖಂಡಿತ ಬುದ್ಧಿವಂತರಾಗಿದ್ದಾರೆ. ಮುಂದೆ ಕೇಳುವವರು ಬ್ರಿಲಿಯಂಟ್ ಆಗುತ್ತಾರೆ... ಮತ್ಯಾಕೆ ತಡ, ಈಗ್ಲೇ ಓದಿ ಈ ಕಥೆ.. 


'ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಖ್ಯಾತಿಯ ನಟ ಉಪೇಂದ್ರ (Upendra) ಅವರು ಸಮಾರಂಭ ಒಂದರಲ್ಲಿ ಕಥೆಯಂದನ್ನು ಹೇಳಿದ್ದಾರೆ. ಆ ಮೂಲಕ ಅವರು ಸಂದೇಶವೊಂದನ್ನು ನೀಡಿದ್ದಾರೆ. ಅದೇನು ಅಂತ ಕುತೂಹಲ ಇದ್ದರೆ ಓದಿಕೊಂಡು ಹೋಗಿ, ಖಂಡಿತ ಬದಲಾಗುತ್ತೀರಿ..' ಇದು ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಜನರ ಅಭಿಪ್ರಾಯ! ಉಪೇಂದ್ರ ಅವರನ್ನು ಸುಮ್ಮನೇ ಬುದ್ಧಿವಂತ ಅಂತ ಕರೆಯೋದಿಲ್ಲ ಎಂದೂ ಅವರೇ ಹೇಳಿದ್ದಾರೆ, ನೀವೇನಂತೀರಿ? ಕಥೆ ನೋಡಿ, ಆಮೇಲೆ ಅಭಿಪ್ರಾಯ ಹೇಳಿ ಆಯ್ತಾ?...

ಓವರ್ ಟು ಉಪೇಂದ್ರ.. '  ಈಶ್ವರ (Shiva) ಹಾಗೂ ಪಾರ್ವತಿ (Parvathi) ಆಕಾಶದಲ್ಲಿ ಹೋಗ್ತಾ ಇದ್ರಂತೆ. ಕೆಳಗಡೆ ಒಂದು ಫ್ಯಾಮಿಲಿ. ಗಂಡ-ಹೆಂಡತಿ ಹಾಗು ಇಬ್ಬರು ಮಕ್ಕಳು. ಅವರಿರೋದು ಸ್ಲಮ್ಮು, ಗಲೀಜು ವಾತಾವರಣದಲ್ಲಿ.. ಕಿತ್ತಾಡ್ತಾ ಇದ್ರಂತೆ, ಎಮೋಶನಲೀ.. ಗಂಡ 'ಹೊಡೆದಾಕ್ಬಿಡ್ತೀನಿ, ಕತ್ರಿಸಿಹಾಕ್ಬಿಡ್ತೀನಿ ಲೇ ಅಂತೆಲ್ಲಾ.., ಹೆಂಡ್ತಿ, 'ಲೋ, ನಿನ್ನ ಮನೆ ಬಿಟ್ಟು ಓಡಿಸ್ಬಿಡ್ತೀನಿ, ಊಟಕ್ಕೇ ಹಾಕಲ್ಲಾ.. ಹಾಗೆ ಹೀಗೆ..' ಅಂತ ಜೋರಾಗಿ ಗಲಾಟೆ ನಡಿತಾ ಇತ್ತಂತೆ.. ಅವ್ರು ಮಕ್ಕಳು ಅಪ್ಪ-ಅಮ್ಮನ ಗಲಾಟೆ ನೋಡಿ ಜೋರಾಗಿ ಅಳ್ತಾ ಇದ್ವಂತೆ. 

Tap to resize

Latest Videos

undefined

ಜೊತೆಯಲ್ಲಿ ನಟಿಸಿರುವ ಡಾಲಿ ಧನಂಜಯ್ ನಟ ಶಿವಣ್ಣಗೆ 'ಅರವಟ್ಟಿಗೆ' ಅಂದಿದ್ಯಾಕೆ?

ಪಾರ್ವತಿ ಈಶ್ವರನಿಗೆ ಕೇಳಿದ್ಳಂತೆ, 'ಏನ್ ಶಿವಾ, ನೀನು ಜಗದೋದ್ಧಾರಕ ನೀನು.. ಅವ್ರಿಗೆ ಏನಾದ್ರೂ ಒಂದು ವರ ಕೊಟ್ಟರೆ ಒಳ್ಳೆಯದಾಗುತ್ತೆ ಅಲ್ವಾ?' ಅಂತ.. ಈಶ್ವರ ಹೇಳಿದ್ನಂತೆ, 'ಏನಿಲ್ಲ, ಅವ್ರಿಗೆ ವರ ಕೊಟ್ರೆ ಒಳ್ಳೇದಾದಲ್ಲ ಬಿಡು, ಬಾ ಹೋಗೋಣ ಮುಂದೆ..' ಅಂತ. ಪಾರ್ವತಿ ಹಠ ಹಿಡಿದ್ಳಂತೆ, 'ಇಲ್ಲ, ನೀನೇನಾದ್ರೂ ಮಾಡ್ಲೇಬೇಕು ಇವ್ರಿಗೆ ಅಂತ.. '. ಪಾರ್ವತಿ ಮಾತಿಗೆ ಒಪ್ಪಿದ ಈಶ್ವರ ಕೆಳಗಡೆ ಭೂಮಿಗೆ ಬಂದು ವೇಷ ಮರೆಸಿಕೊಂಡು ಆ ಫ್ಯಾಮಿಲಿ ಹತ್ತಿರ ಹೋದ್ನಂತೆ. 

ಜಗಳ ಮಾಡುತ್ತಿದ್ದ ಆ ಫ್ಯಾಮಿಲಿ ಗಂಡನ ಕರೆದು 'ನೀನಗೇನಾದ್ರೂ ವರ ಕೇಳು ಕೊಡ್ತೀನಿ' ಅಂದ್ನಂತೆ. ಅವ್ನೋ ತುಂಬಾ ಆವೇಶದಲ್ಲಿದ್ನಲ್ಲಾ, 'ವರ ಕೊಡ್ತೀಯಾ? ಅದು ಆಗುತ್ತಾ? ಈ ನನ್ನ ಹೆಂಡ್ತಿ ಹಂದಿ ಆಗೋಗ್ಲಿ' ಅಂದ್ನಂತೆ.. ಅವ್ನ ಹೆಂಡ್ತಿ ಹಂದಿ ಆಗೋದ್ಲಂತೆ.. ಆಗ ಹಂದಿ ರೂಪದಲ್ಲಿರೋ ಅವ್ನ ಹೆಂಡ್ತಿ ಬಳಿ ಹೋಗಿ, 'ನಿನಗೇನಾದ್ರೂ ವರ ಬೇಕಾದ್ರೆ ಕೇಳಮ್ಮಾ, ಕೊಡ್ತೀನಿ' ಅಂದ್ನಂತೆ ಶಿವ... ಅದಕ್ಕೆ ಅವ್ಳು, 'ನನ್ನ ಹಂದಿ ಮಾಡಿದ್ನಲ್ಲಾ ಈ ನನ್ ಗಂಡ, ಅವ್ನೂ ಹಂದಿ ಆಗೋಗ್ಬಿಡ್ಲಿ' ಅಂದ್ಲಂತೆ, ಅವ್ನೂ ಹಂದಿ ಆಗ್ಬಿಟ್ಟ!

ಇನ್ನು ಉಳಿದಿದ್ದು ಆ ಮಕ್ಳು.. ಅವ್ರ ಹತ್ರ ಹೋಗಿ ಶಿವ ನಿಮಗೇನು ವರ ಬೇಕು ಎಂದು ಕೇಳಲು ಅವ್ರು, 'ನಮ್ಮ ಅಪ್ಪ-ಅಮ್ಮ ಮೊದ್ಲಿನ ಥರ ಆಗ್ಲಿ ಅದ್ರಂತೆ. ಅದಕ್ಕೆ ಶಿವ ತಥಾಸ್ತು ಅಂದಾಗ ಅವ್ರಿಬ್ರೂ ಮೊದ್ಲಿನ ಥರ ಆಗಿ ಅದೇ ಥರ ಜಗಳ ಶುರು ಮಾಡ್ಕೊಂಡ್ರಂತೆ.. ಈಶ್ವರ ಹೇಳಿದ್ನಂತೆ ಪಾರ್ವತಿಗೆ, 'ನಾನು ಎಷ್ಟು ವರ ಕೊಟ್ಟೆ? ಮೂರು ವರ ಕೊಟ್ಟೆ. ಏನಾದ್ರೂ ಉಪಯೋಗ ಆಯ್ತಾ ಇವ್ರಿಗೆ? ಯಾಕಂದ್ರೆ, ಇವ್ರು ತಮ್ಮ ಬುದ್ಧಿನಾ ಎಮೋಶನ್‌ ಜೊತೆಗೆ ಕೊಟ್ಬಿಟ್ಟಿದಾರೆ..ಅದಕ್ಕೇ ಏನೂ ಯೂಸ್ ಆಗಲ್ಲ' ಅಂದ್ನಂತೆ ಶಿವ!

ಈ ಕನ್ನಡದ ನಟ ತೆಲುಗು ಬಿಗ್ ಸ್ಟಾರ್ ಆಗೋದು ಫಿಕ್ಸ್; ಭವಿಷ್ಯ ನುಡಿದ ಮೆಗಾ ಸ್ಟಾರ್!

ಹಾಗೇ, 'ಬಾ ಇನ್ನೊಂದ್ ಕಡೆ ಕರ್ಕೊಂಡು ಹೋಗ್ತನಿ ನಿನ್ನ' ಅಂದ್ನಂತೆ ಶಿವ.. ಯಾರೋ ಒಬ್ಬ ಯಂಗ್‌ಸ್ಟರ್‌ ಹತ್ರ ಹೋಗಿ 'ಒಂದೇ ಒಂದು ವರ ಕೊಡ್ತೀನಿ ನಿಂಗೆ ಏನ್ ಬೇಕು ಕೇಳು ಅಂದ್ನಂತೆ ಶಿವ.. ಅದಕ್ಕೆ ಆ ತರುಣ ಸ್ವಲ್ಪವೂ ಎಕ್ಸೈಟ್ ಆಗದೇ, 'ಒಂದು ವರ ಕೊಡ್ತೀಯಾ? ಇದು ಪಕ್ಕಾ ವರ್ಕೌಟ್ ಆಗುತ್ತಾ?' ಅಂತ ಕೇಳಿದ್ನಂತೆ. ಅದಕ್ಕೆ ಶಿವ 'ಖಂಡಿತ ಇದು ಕೆಲಸ ಮಾಡುತ್ತೆ, ಕೇಳು ಅಂದಾಗ, ಆತ 'ನಂಗೆ ಐದು ನಿಮಿಷ  ಟೈಮ್ ಕೊಡು' ಅಂತ ಹೇಳಿ ಮನೆಗೆ ಹೋದ್ನಂತೆ.. 

ಮನೆಗೆ ಹೋಗಿ ಅಪ್ಪ-ಅಮ್ಮ ಹಾಗೂ ಹೆಂಡ್ತಿನ ಕೇಳಿದ್ನಂತೆ 'ನಿಮಗೆಲ್ಲಾ ಏನು ಬೇಕು' ಅಂತ. ಅದಕ್ಕೆ ಹೆಂಡ್ತಿ 'ನಂಗೆ ಮಕ್ಕಳಾಗಿಲ್ಲ, ನಂಗೆ ಮಗು ಬೇಕು' ಅಂದಳಂತೆ.. ಅವ್ನ ಅಪ್ಪ-ಅಮ್ಮಂಗೆ ಕಣ್ಣು ಇಲ್ಲ, ಅವ್ರು 'ನಮಗೆ ಕಣ್ಣು ಬೇಕು, ನಾವು ಸಾಯೋ ಟೈಮ್‌ಗಾದ್ರೂ ನಮಗೆ ಜಗತ್ತು ನೋಡ್ಬೇಕು, ಅದಕ್ಕೇ ನಮಗೆ ಕಣ್ಣು ಬೇಕು' ಅಂದ್ರಂತೆ.. ಅವ್ನಿಗೆ ಬಡತನ ಇರೋದ್ರಂದ ದುಡ್ಡು ಬೇಕಿತ್ತಂತೆ.. ವಾಪಸ್ ಬರೋವಾಗ ಯೋಚ್ನೆ ಮಾಡ್ಕೋತಾ ಬಂದ್ನಂತೆ.. 

ಯೋಚ್ನೆ ಮಾಡ್ಕೊಂಡು ವಾಪಸ್ ಬಂದವ್ನು ಈಶ್ವರನ ಹತ್ರ ಏನ್ ಕೇಳೀದ್ನಂತೆ ಅಂದ್ರೆ 'ನಮ್ಮ ಅಪ್ಪ-ಅಮ್ಮ ನನ್ ಮಗೂನ ಚಿನ್ನದ ತೊಟ್ಟಿಲಲ್ಲಿ ನೋಡೋ ತರ ಆಶೀರ್ವಾದ ಮಾಡಪ್ಪ' ಅಂತ..'. ಶಿವ ಆಯ್ತು ಅಂತ ವರ ಕೊಟ್ಟೇಬಿಟ್ಟ!. ಆಗ ನೋಡಿದ್ರೆ ಅವ್ನ ಅಪ್ಪ-ಅಮ್ಮಂಗೆ ಕಣ್ಣು ಬಂತು, ಅವ್ನಿಗೆ ಮಗೂನೂ ಆಯ್ತು, ಚಿನ್ನದ ತೊಟ್ಟಲು ಬಂದಿದ್ದಕ್ಕೆ ಅವ್ನಿಗೆ ಬಡತನ ಹೋಗಿ ಶ್ರೀಮಂತಿಕೆ ಕೂಡ ಬಂತು. ಅದಕ್ಕೇ, ವಿಚಾರವಂತರಾಗಿ ಎಂದಿದ್ದಾರೆ ನಟ ಉಪೇಂದ್ರ. ಜೊತೆಗೆ, ವಿಚಾರ ಮಾಡಿ ನಿರ್ಧಾರ ತೆಗೆದುಕೊಳ್ಳೋ ದೇಶ ಯಾವತ್ತೂ ಚೆನ್ನಾಗಿರುತ್ತೆ. 

ನನಗೇನೂ ಗೊತ್ತಿಲ್ಲ ಎಂಬುದು ಚೆನ್ನಾಗಿ ಗೊತ್ತಾಗಿದೆ: ಯಾವಾಗ ಹೀಗೆ ಹೇಳಿದ್ರು ವಿಷ್ಣುವರ್ಧನ್?

ಈ ಭಾವನೆಗೆ ಬೆಲೆ ಕೊಡೋದಿದ್ಯಲ್ಲಾ ಅದು ಯಾವತ್ತೂ ಅಜ್ಞಾನದ ಫಲ ಅಹಂಕಾರ, ಅಹಂಕಾರದ ಫಲ ದ್ವೇಷ,  ದ್ವೇಷದ ಫಲ ಸರ್ವನಾಶ..!' ಎಂದು ಕಥೆಯನ್ನು ಮುಗಿಸಿದ್ದಾರೆ ಉಪೇಂದ್ರ. ಆದರೆ, ಇಲ್ಲಿ ಕಥೆ ಯಾವಾಗ ಹೇಳಿದ್ರು, ಯಾಕೆ ಹೇಳಿದ್ರು ಅನ್ನೋದಕ್ಕಿಂತ ಕಥೆಯಲ್ಲಿನ ಸಾರ ತುಂಬಾ ಚೆನ್ನಾಗಿದೆ ಎಂಬುದು ಹಲವರ ಅಭಿಪ್ರಾಯ. ಈ ಬಗ್ಗೆ ಬಹಳಷ್ಟು ಜನರು ಕಾಮೆಂಟ್‌ ಮೂಲಕ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಬಹಳಷ್ಟು ಮಂದಿ ಉಪೇಂದ್ರ ಬುದ್ಧಿವಂತ ಎಂಬುದು ಕನ್ಫರ್ಮ್..' ಎಂದಿದ್ದಾರೆ. 

click me!