ರಶ್ಮಿಕಾ ಬಣ್ಣದ ಬದುಕಿಗೆ 8 ವರ್ಷ, ರಕ್ಷಿತ್ ಶೆಟ್ಟಿ ಕೊಟ್ಟ ಚಾನ್ಸ್, ಫ್ಯಾನ್ಸ್‌ಗೆ ಥ್ಯಾಂಕ್ಸ್!

By Roopa Hegde  |  First Published Dec 31, 2024, 12:25 PM IST

ಸ್ಯಾಂಡಲ್ವುಡ್ ನಿಂದ ಬಾಲಿವುಡ್ ವರೆಗೆ ತಮ್ಮ ಛಾಪು ಮೂಡಿಸಿರುವ ನಟಿ ರಶ್ಮಿಕಾ ಮಂದಣ್ಣ ಸಾಧನೆ ಕಡಿಮೆ ಏನಿಲ್ಲ. ವರ್ಷಕ್ಕೆರಡು ಸಿನಿಮಾ ಸೂಪರ್ ಹಿಟ್. ಕೋಟಿ ಕೋಟಿ ಸಂಪಾದನೆ ಜೊತೆ ಕೋಟ್ಯಾಂತರ ಅಭಿಮಾನಿಗಳ ಬಳಗವನ್ನು ನಟಿ ಹೊಂದಿದ್ದಾರೆ. 
 


ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (National Crush Rashmika Mandanna) ಬಣ್ಣದ ಲೋಕಕ್ಕೆ ಕಾಲಿಟ್ಟು ಎಂಟು ವರ್ಷ ಕಳೆದಿದೆ. ಸ್ಯಾಂಡಲ್ವುಡ್ ಸಿನಿಮಾ, ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ (Sandalwood Cinema Kirik Party) ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆದ ರಶ್ಮಿಕಾ, ಹಿಂತಿರುಗಿ ನೋಡ್ಲಿಲ್ಲ. ತಮಿಳು, ತೆಲುಗಿನಲ್ಲಿ ಹಿಟ್ ಮೇಲೆ ಹಿಟ್ ನೀಡಿ ಪ್ರಸಿದ್ಧಿ ಪಡೆದ ರಶ್ಮಿಕಾರನ್ನು ಬಾಲಿವುಡ್ ಕೈ ಬೀಸಿ ಕರೆದಿದೆ. ಶ್ರೀವಲ್ಲಿ ಎಂದೇ ಪ್ರಸಿದ್ಧಿ ಪಡೆದಿರುವ ರಶ್ಮಿಕಾ ಸಿನಿಮಾ ರಂಗದಲ್ಲಿ 8 ವರ್ಷ ಪೂರೈಸಿದ ಖುಷಿಯನ್ನು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಯಶಸ್ವಿಯಾಗಿ 8 ವರ್ಷ ಪೂರೈಸಿದ ಸಂತೋಷದಲ್ಲಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ ರಶ್ಮಿಕಾ ಮಂದಣ್ಣ. 

ಸಮುದ್ರ ಕಿನಾರೆಯ ಸುಂದರ ಫೋಟೋ ಮೇಲೆ ಧನ್ಯವಾದದ ಪೋಸ್ಟ್ ಹಾಕಿದ್ದಾರೆ. ಉದ್ಯಮದಲ್ಲಿ ಎಂಟು ವರ್ಷಗಳನ್ನು ಕಳೆದಿದ್ದೇನೆ. ನಾನು ಇಲ್ಲಿಯವರೆಗೆ ಏನು ಮಾಡಿದ್ದೇನೋ ಅದು ಸಾಧ್ಯವಾದದ್ದು ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ. ಧನ್ಯವಾದ ಎಂದು ಬರೆದಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಅಭಿನಂದನೆ, ಹೀಗೆ ನಿಮ್ಮ ಸಾಧನೆ ಮುಂದುವರೆಯಲಿ ಎಂದು ಫ್ಯಾನ್ಸ್ ಹರಸಿದ್ದಾರೆ.

Tap to resize

Latest Videos

ಸಿನಿಮಾ ಶೂಟಿಂಗ್ ವೇಳೆ 'ನಾಯಿ ಬಿಸ್ಕೆಟ್' ತಿನ್ನುತ್ತಿದ್ದ ನಟಿ ರಶ್ಮಿಕಾ ಮಂದಣ್ಣ!

8 ವರ್ಷಗಳಲ್ಲಿ 16 ಸೂಪರ್‌ಹಿಟ್‌ : ರಶ್ಮಿಕಾ ಮಂದಣ್ಣ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು 8 ವರ್ಷಗಳ ಹಿಂದೆ. ಕೇವಲ 8 ವರ್ಷಗಳಲ್ಲಿ 16 ಹಿಟ್ ಚಿತ್ರಗಳನ್ನು ನೀಡಿ ವಿಶ್ವದ ಮುಂದೆ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ ರಶ್ಮಿಕಾ. ರಶ್ಮಿಕಾ ಮಂದಣ್ಣ 2016 ರಲ್ಲಿ  ಕಿರಿಕ್ ಪಾರ್ಟಿ  ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಟ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಅವರಿಗೆ ಕಿರಿಕ್ ಪಾರ್ಟಿಯಲ್ಲಿ ಚಾನ್ಸ್ ನೀಡಿದ್ದರು. ಈ ಚಿತ್ರ ಕೇವಲ 4 ಕೋಟಿ ರೂಪಾಯಿಗೆ ತಯಾರಾಗಿತ್ತು. ಆದರೆ ಇದು ವಿಶ್ವದಾದ್ಯಂತ 50 ಕೋಟಿ ರೂಪಾಯಿ ಗಳಿಸಿತ್ತು. ಕಿರಿಕ್ ಪಾರ್ಟಿ ಚಿತ್ರಕ್ಕೂ 8 ವರ್ಷ ತುಂಬಿದೆ. ನಟ ರಕ್ಷಿತ್ ಶೆಟ್ಟಿ ಈ ಖುಷಿಯನ್ನು  ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಿರಿಕ್ ಪಾರ್ಟಿಗೆ 8 ವರ್ಷ ತುಂಬಿದೆ.  ಕಿರಿಕ್ ಪಾರ್ಟಿ ನನ್ನ ಮತ್ತು ನನ್ನ ತಂಡದ ಪ್ರಯಾಣದಲ್ಲಿ ಒಂದು ಮಹತ್ವದ ತಿರುವು. ಈ ಚಿತ್ರ ನಮ್ಮ ಹೃದಯದಲ್ಲಿ ಯಾವಾಗಲೂ ವಿಶೇಷ ಸ್ಥಾನವನ್ನು ಹೊಂದಿರುತ್ತದೆ ಎಂದು ಬರೆದಿದ್ದಾರೆ. 

ನ್ಯೂಯಾರ್ಕ್​ ಬಳಿಕ ಲಂಡನ್ ನೈಟ್​ ಕ್ಲಬ್​ನಲ್ಲಿ ನಿವೇದಿತಾ! ನೀನೇ ಸರಿ ಬಿಡು ಕಣಮ್ಮಾ

ಇನ್ನು 2017 ರಲ್ಲಿ ರಶ್ಮಿಕಾ ಲಕ್ ಬದಲಾಯ್ತು. ಒಂದೇ ವರ್ಷ ಮತ್ತೆರಡು ಸೂಪರ್ ಹಿಟ್ ಚಿತ್ರಗಳನ್ನು ಫ್ಯಾನ್ಸ್ ಗೆ ನೀಡಿದ್ದರು ರಶ್ಮಿಕಾ. ಅಂಜನಿಪುತ್ರ  ಮತ್ತು ಚಮಕ್ ನಲ್ಲಿ ರಶ್ಮಿಕಾ ನಟಿಸಿದ್ದರು. ಇದರ ನಂತರ, 2018 ರಲ್ಲಿ ರಶ್ಮಿಕಾ ಮಂದಣ್ಣ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡರು.  2019 ರಲ್ಲಿ, ರಶ್ಮಿಕಾ ಎರಡು ಚಿತ್ರಗಳಲ್ಲಿ ನಟಿಸಿದ್ದರು.  2020 ರಲ್ಲಿ ನಟಿ  ಸರಿಲೇರು ನೀಕೆವ್ವರು  ಮತ್ತು  ಭೀಷ್ಮ  ಸೂಪರ್‌ಹಿಟ್‌ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ರಶ್ಮಿಕಾ ಮಂದಣ್ಣ 2021 ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ  ಪೊಗರು, ತಮಿಳಿನ  ಸುಲ್ತಾನ್  ಮತ್ತು ತೆಲುಗು  ಪುಷ್ಪ: ದಿ ರೈಸ್  ನಲ್ಲಿ ಕಾಣಿಸಿಕೊಂಡಿದ್ದರು. 2023 ರಲ್ಲಿ ಅವರ ನಟನೆಯ  ಅನಿಮಲ್ ಸೂಪರ್ ಹಿಟ್ ಆದ್ರೆ ಈ ವರ್ಷ ಪುಷ್ಪಾ 2ನಲ್ಲಿ ರಶ್ಮಿಕಾ ಅಬ್ಬರಿಸಿದ್ದಾರೆ. ಇದಲ್ಲದೆ ,  ಕುಬೇರ್ ,  ಛಾವಾ  ಮತ್ತು  ಸಿಕಂದರ್ ನಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಸಿನಿಮಾ ಜೊತೆ ವೈಯಕ್ತಿಕ ವಿಷ್ಯಕ್ಕೆ ಸಾಕಷ್ಟು ಬಾರಿ ಟ್ರೋಲ್ ಆಗಿರುವ ರಶ್ಮಿಕಾ ಈಗ ಮದುವೆ ವಿಷ್ಯದಲ್ಲಿ ಚರ್ಚೆಯಲ್ಲಿದ್ದಾರೆ. 

ರಶ್ಮಿಕಾ ಮಂದಣ್ಣ ಗಳಿಕೆ : ಎಂಟು ವರ್ಷದಲ್ಲಿ ಉದ್ಯಮ ಆಳ್ತಿರುವ ನಟಿ ರಶ್ಮಿಕಾ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ರಶ್ಮಿಕಾ 42 ಕೋಟಿ ನಿವ್ವಳ ಆಸ್ತಿ ಹೊಂದಿದ್ದಾರೆ. ಪುಷ್ಪಾ 2 ಚಿತ್ರದಲ್ಲಿ ರಶ್ಮಿಕಾ 10 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. 
 

click me!