ನಟಸಾರ್ವಭೌಮ ನಟಿ ಅನುಪಮಾಗೆ ಹೀಗೊಂದು ವಿಚಿತ್ರ ರೀತಿಯಲ್ಲಿ ಮಸಾಜ್ ಮಾಡಿಸಿಕೊಳ್ಳೋ ಆಸೆಯಂತೆ. ಏನದು?
ಗುಂಗುರು ಕೂದಲಿನ ಸುಂದರಿ ಅನುಪಮಾ ಪರಮೇಶ್ವರನ್ ಇದಾಗಲೇ ಕೆಲವೊಂದು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವರು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಕೋಟಿ ಕೊಟ್ಟರೂ ತಾವು ಇಂಥ ದೃಶ್ಯಗಳಲ್ಲಿ ನಟಿಸಲ್ಲ ಎಂದು ಕೆಲ ವರ್ಷಗಳ ಹಿಂದೆ ನಟಿ ಹೇಳಿದ್ದರು. ಇದಕ್ಕಾಗಿ ಸಿನಿ ಪ್ರಿಯರಿಂದ ಭೇಷ್ ಭೇಷ್ ಎನಿಸಿಕೊಂಡಿದ್ದರು. ಆದರೆ ಇದೀಗ ಸುದೀರ್ಘ ಲಿಪ್ಲಾಕ್ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಂಥದ್ದೊಂದು ದೃಶ್ಯದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹೆಸರು ‘ಟಿಲ್ಲು ಸ್ಕ್ವೇರ್’. ಇದರಲ್ಲಿ ಕಾರಿನಲ್ಲಿ ನಟನ ಜೊತೆ ಲಿಪ್ಲಾಕ್ ಮಾಡಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಳಿಕ ಬೇಡಿಕೆಯನ್ನೂ ಕುದುರಿಸಿಕೊಂಡಿರೋ ನಟಿ ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿದ್ದಾರೆ.
ಇದೀಗ ವಿಚಿತ್ರ ರೀತಿಯ ಮಸಾಜ್ ಬೇಡಿಕೆಯೊಂದನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ. ತಮಗೆ ಬೆನ್ನು ನೋವಿದೆ, ಅದಕ್ಕಾಗಿ ಮಸಾಜ್ ಬೇಕಿದೆ ಎಂದಿರುವ ನಟಿ ಅನುಪಮಾ, ತಮಗೆ ಯಾವ ರೀತಿಯ ಮಸಾಜ್ ಬೇಕು ಎನ್ನುವ ಚಿತ್ರವೊಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಅವರು ರೋಡ್ ರೋಲರ್ ಒಂದು ಮನುಷ್ಯನ ಬೆನ್ನ ಮೇಲೆ ಹೋಗ್ತಿರೋ ಫೋಟೋ ಇದೆ. ಅದೇ ರೀತಿ ಮಸಾಜ್ ಬೇಕಂತೆ ಈ ನಟಿಗೆ! ಇದಕ್ಕೆ ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗುತ್ತದೆ.
ಅವನ ಜೀವನ ನಾನು ಹಾಳು ಮಾಡಿದ್ನಾ? ರಸ್ತೆಯಲ್ಲಿ ಹೋಗ್ತಿರೋನನ್ನು ಎಳ್ಕೊಂಡು ಬಂದು ಇಟ್ಕೊಂಡ್ನಾ ಅಥ್ವಾ...
ಅಷ್ಟಕ್ಕೂ ನಟಿ ಹಾಟ್ ಸೀನ್ ಮಾಡಿ ಸಕತ್ ಟ್ರೋಲ್ಗೂ ಒಳಗಾದವರು. ಇದಕ್ಕೆ ಬೇಸರದ ಜೊತೆ ಕಿಡಿ ಕಾರಿದ್ದ ನಟಿ, ಏನೋ ಅಪರಾಧ ಮಾಡಿದವರ ರೀತಿಯಲ್ಲಿ ಮಾತನಾಡುತ್ತೀರಲ್ಲ. ಲಿಪ್ ಲಾಕ್ ದೃಶ್ಯವನ್ನು ಮಾಡಿ ನಾನು ಅನ್ಯಾಯ ಮಾಡಿದ್ದೇನಾ? 18 ವರ್ಷದವಳಿದ್ದಾಗ ಚುಂಬನ ಮತ್ತು ದಪ್ಪ ದೃಶ್ಯಗಳ ಕಟ್ಟುನಿಟ್ಟಾದ ನೀತಿಯನ್ನು ಹೊಂದಿದ್ದೆ. ಆಗ ಆ ರೀತಿ ಹೇಳಿಕೆ ಕೊಟ್ಟಿದ್ದೆ ಅಷ್ಟೆ. ಆದರೆ ಈಗ ಪರಿಪೂರ್ಣ ನಟಿಯಾಗಿದ್ದೇನೆ. ಕಥೆಗೆ ಅಗತ್ಯವಿರುವ ದೃಶ್ಯಗಳನ್ನು ತೆಗೆದುಕೊಳ್ಳುವಷ್ಟು ಪ್ರಬುದ್ಧರಾಗಿರಬೇಕು ಮತ್ತು ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ನನಗೆ ಎನಿಸುತ್ತಿದೆ ಎಂದಿದ್ದರು. ಸ್ಟೀರಿಯೊಟೈಪಿಕಲ್ ಪಾತ್ರಗಳನ್ನು ಮಾಡಲು ಬೇಸರಗೊಂಡು ಈ ರೀತಿ ಮಾಡಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದರು.
ಇದೇ ವೇಳೆ ಮೊದಲ ಬಾರಿಗೆ ಲಿಪ್ಲಾಕ್ ಅನುಭವ ಹಂಚಿಕೊಂಡ ನಟಿ, ಕಾರಿನಲ್ಲಿ ತಮಗೆ ಲಿಪ್ ಲಾಕ್ ಮಾಡಲು ಕಷ್ಟವಾಯಿತು ಎಂದಿದ್ದರು. ನೂರಾರು ಜನರ ಎದುರು, ಅದೂ ಕಾರಿನಲ್ಲಿ ಅಂತಹ ದೃಶ್ಯ ಮಾಡುವಾಗ ಬೇರೆಯದ್ದೇ ಮನಸ್ಥಿತಿ ಬೇಕಾಗುತ್ತದೆ. ಹಾಗಾಗಿ ಆ ದೃಶ್ಯದಲ್ಲಿ ನಟಿಸುವಾಗ ನನಗೆ ತೀರಾ ಕಷ್ಟವಾಯಿತು. ಆದರೆ, ಅದು ಬೇರೆಯದ್ದೇ ರೀತಿಯ ಪಾತ್ರವಾಗಿದ್ದರಿಂದ ಮಾಡಿದೆ ಎಂದು ಅನುಪಮಾ ಮಾತನಾಡಿದ್ದರು. ಅಷ್ಟಕ್ಕೂ ನಟಿ ಮಲಯಾಳಂ ಬಳಿಕ ತೆಲುಗಿಗೆ ಕಾಲಿಟ್ಟವರು. ತೆಲುಗು ಚಿತ್ರರಂಗದಲ್ಲಿ ಅವರಿಗೆ ಸಾಕಷ್ಟು ಅವಕಾಶ ಸಿಕ್ಕಿತು. ಟಾಲಿವುಡ್ನಿಂದ ಕಾಲಿವುಡ್ ಪ್ರವೇಶಿಸಿದ್ದ ನಟಿ, ಅಲ್ಲಿಂದ ಪುನೀತ್ ರಾಜ್‌ಕುಮಾರ್ ಜೊತೆ ನಟಸಾರ್ವಭೌಮದಲ್ಲಿಯೂ ನಟಿಸಿದರು.
ಸುಲಭದ ಪ್ರಶ್ನೆಗೂ ಉತ್ತರಿಸಲಾಗದೇ ಪೇಚಿಗೆ ಸಿಲುಕಿದ ರಾಮ್ - 'ಅಯ್ಯೋ ರಾಮ' ಅಂದ ನೆಟ್ಟಿಗರು