ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯತೆಗೆ ಕೊಂಡೊಯ್ದ ನಟ ಯಶ್ ನಟಿಸುತ್ತಿರುವ ಮುಂದಿನ ಚಿತ್ರ ಟಾಕ್ಸಿಕ್. ಕೆಜಿಎಫ್ ಚಿತ್ರದ ಮೂಲಕ ಪ್ರಶಾಂತ್ ನೀಲ್ ಹಾಗೂ ಯಶ್ ಜೋಡಿ ಭಾರೀ ಮೋಡಿ ಮಾಡಿತ್ತು.
ಸ್ಯಾಂಡಲ್‌ವುಡ್ ಹೀರೋ ಯಶ್ (Rocking Star Yash)ಈಗ ಭಾರತದ ಅತ್ಯಂತ ಪ್ರಸಿದ್ಧ ನಟ. ಕೆಜಿಎಫ್ ಖ್ಯಾತಿಯ ಬಳಿಕ ನಟ ಯಶ್ ಅವರು ಬಹುಬೇಡಿಕೆ ನಟರಾಗಿದ್ದು, ಬಹುತೇಕ ಇಡೀ ಜಗತ್ತು ಅವರನ್ನು ಗುರುತಿಸುತ್ತದೆ, ಗೌರವಿಸುತ್ತದೆ. ಕೆಜಿಎಫ್ ಹಾಗು 'ಕೆಜಿಎಫ್ 2' ಬಳಿಕ ನಟ ಯಶ್ ಸದ್ಯ ಹೊಸ ಸಿನಿಮಾ 'ಟಾಕ್ಸಿಕ್' ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಗೀತೂ ಮೋಹನ್‌ದಾಸ್ (Geethu Mohandas) ನಿರ್ದೇಶನದ ಟಾಕ್ಸಿಕ್ (Toxic) ಸಿನಿಮಾ ಈಗ ಭಾರೀ ಕುತೂಹಲದ ಕೇಂದ್ರಬಿಂಧುವಾಗಿದೆ. ಇಂಥ ನಟ ಯಶ್ ತಮ್ಮ ನಟನೆ ಬಗ್ಗೆ ಮಾತನಾಡಿರುವ ವೀಡಿಯೋವೊಂದು ಸಖತ್ ವೈರಲ್ ಆಗಿದೆ.
ಈ ಬಗ್ಗೆ ನಟ ಯಶ್ 'ನಿಜವಾಗಿ ನಾನು ವೀಕ್ ಆಗಿದ್ದರೂ ಸಿನಿಮಾದಲ್ಲಿ ಡೈರೆಕ್ಟರ್ ನನ್ನನ್ನು ಸ್ಟ್ರಾಂಗ್ ಆಗಿ ತೋರಿಸಬಹುದು. ನಾನು ಚೆನ್ನಾಗಿ ಪರ್ಫಾಮೆನ್ಸ್ ಮಾಡದಿದ್ದರೂ ಬೇರೆ ಅದೂ ಇದೂ ಕ್ಯಾಪ್ಚರ್ ಮಾಡಿ ನನಗೆ ಬ್ಯಾಕ್ ಅಪ್ ನೀಡಬಹುದು. ಮ್ಯೂಸಿಕ್ ಡೈರೆಕ್ಟರ್ಸ್ ನನ್ನ ನಟನೆಯನ್ನು ಚೆನ್ನಾಗಿ ಕಾಣುವಂತೆ ಎನ್‌ಹ್ಯಾನ್ಸ್ ಮಾಡಬಹುದು. ಹೀಗಾಗಿ ನಾನು ಸಿನಿಮಾದ ನನ್ನ ನಟನೆ ಬಗ್ಗೆ ಹೆಚ್ಚು ಕ್ರೆಡಿಟ್ ತೆಗೆದುಕೊಳ್ಳುವುದಿಲ್ಲ. ಏಕೆಂದರೆ, ಅದು ನನ್ನೊಬ್ಬರ ಪರ್ಫಾಮೆನ್ಸ್ ಆಗಿರುವುದಿಲ್ಲ. ಅದು ಸಿನಿಮಾದಲ್ಲಿ ಕೆಲಸ ಮಾಡುವ ಎಲ್ಲಾ ಟೆಕ್ನಿಶಿಯನ್ಸ್ ಕೊಡುಗೆ ಹಾಗೂ ಅದನ್ನೆಲ್ಲ ನಾನು ಹೇಗೆ ಎಂಜಾಯ್ ಮಾಡಿದ್ದೇನೆ ಎಂಬುವುದರ ಪ್ರತಿಬಿಂಬ ಆಗಿರುತ್ತದೆ.
ಕಾಂತಾರ ನಟ-ನಿರ್ದೇಶಕ ರಿಷಬ್ ಶೆಟ್ಟಿ ಬಗ್ಗೆ ಸಪ್ತಮಿ ಗೌಡ ಬಾಯ್ಬಿಟ್ಟ 'ಸತ್ಯ ಸಂಗತಿ' ಇದು ನೋಡಿ!
ಒಟ್ಟಾರೆ ಹೇಳಬೇಕೆಂದರೆ, ಸಿನಿಮಾದಲ್ಲಿನ ನನ್ನ ನಟನೆ ಎಂದರೆ, ನಾನು ಮಾಡುವ ನಟನೆ ಜತೆ ಅಲ್ಲಿನ ಎಲ್ಲ ಸೌಲಭ್ಯಗಳನ್ನು ನಾನು ಬಳಸಿಕೊಂಡು ಅದನ್ನು ಎಂಜಾಯ್ ಮಾಡುವ ನಾನೇ ಆಗಿರುತ್ತೇನೆ' ಎಂದಿದ್ದಾರೆ ಪ್ಯಾನ್ ಇಂಡಿಯಾ ನಟ, ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್ ಸರಣಿ ಸಿನಿಮಾಗಳ ಬಳಿಕ ಕನ್ನಡದ ನಟ ಯಶ್ ಪ್ಯಾನ್ ಇಂಡಿಯಾ ನಟರಾಗಿ ಬೆಳೆದು, ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವುದು ಗೊತ್ತೇ ಇದೆ. ಇಂಥ ನಟ ಯಶ್ ಬಾಯಲ್ಲಿ ಎಂಥ ಗ್ರೇಟ್ ಮಾತು ಬಂದಿದೆ ನೋಡಿ. ತಮ್ಮ ನಟನೆಯ ಕ್ರೆಡಿಟ್ ಅನ್ನು ಕೂಡ ಅವರು ತಾವೊಬ್ಬರೇ ತೆಗೆದುಕೊಳ್ಳಲು ಬಯಸದೇ ಅದನ್ನು ಕೂಡ ಇಡೀ ಟೀಮ್‌ಗೆ ಅರ್ಪಿಸಿದ್ದಾರೆ.
ತಲೆಗೆ ಹೊಡೆದು ಇದನ್ನೆಲ್ಲ ಮನೆಲ್ಲಿ ಇಟ್ಕೋಬೇಡ ಅಂದಿದ್ರು ನನ್ನ ಅಮ್ಮ; ನಟಿ ಪ್ರಿಯಾಂಕಾ ಚೋಪ್ರಾ
ಏಕೆಂದರೆ, ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯತೆಗೆ ಕೊಂಡೊಯ್ದ ನಟ ಯಶ್ ನಟಿಸುತ್ತಿರುವ ಮುಂದಿನ ಚಿತ್ರ ಟಾಕ್ಸಿಕ್. ಕೆಜಿಎಫ್ ಚಿತ್ರದ ಮೂಲಕ ಪ್ರಶಾಂತ್ ನೀಲ್ ಹಾಗೂ ಯಶ್ ಜೋಡಿ ಭಾರೀ ಮೋಡಿ ಮಾಡಿತ್ತು. ಈಗ ಅದಕ್ಕಿಂತಲೂ ಹೆಚ್ಚಿನದನ್ನು ಯಶ್ ಹಾಗು ಗೀತೂ ಮೋಹನ್ ದಾಸ್ ಅವರಿಂದ ನಿರೀಕ್ಷೆ ಮಾಡಲಾಗುತ್ತಿದೆ. ಅದಕ್ಕೆ ಸರಿಯಾಗಿಯೇ ಎಂಬಂತೆ, ಟಾಕ್ಸಿಕ್ ಟೀಮ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್, ಸಾಯಿ ಪಲ್ಲವಿ ಸಹ ನಟಿಸುತ್ತಿರುವುದು ಕನ್ಫರ್ಮ್ ಆಗಿದೆ.
ಮಹಾಲಿಂಗ ಭಾಗವತರ್ ನನ್ನ ಪತಿಯಲ್ಲ, ಗಾಡ್ ಫಾದರ್ ಅಷ್ಟೇ; ಆಪ್ತರ ಬಳಿ ಹೇಳಿದ್ರಂತೆ ನಟಿ ಲೀಲಾವತಿ!
ಟಾಕ್ಸಿಕ್ ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೇ ಶುರುವಾಗಿದ್ದು, ಎಲ್ಲಿ ನಡೆಯುತ್ತಿದೆ, ಶೂಟಿಂಗ್ ಶೆಡ್ಯೂಲ್ ಯಾವತ್ತೆಲ್ಲ ಇದೆ ಎಂಬ ಬಗ್ಗೆ ಮಾಹಿತಿ ಸೀಕ್ರೆಟ್ ಆಗಿದೆ. ಆದರೆ, ಕೆಜಿಎಫ್ ಬಳಿಕ ನಟ ಯಶ್ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಬಹುದು ಎಂಬುದಕ್ಕೆ 'ಟಾಕ್ಸಿಕ್' ಎಂಬ ಉತ್ತರ ದೊರಕಿದ್ದು, ಇದು ಯಶ್ ಅಭಿಮಾನಿಗಳಿಗೆ ಬಹಳಷ್ಟು ಖುಷಿ ಕೊಟ್ಟಿದೆ. ಸದ್ಯ ತೀವ್ರ ಕೂತೂಹಲ ಕೆರಳಿಸುತ್ತಿರುವ ಟಾಕ್ಸಿಕ್ ಸಿನಿಮಾದಲ್ಲಿ ಬೇರೆ ಯಾವೆಲ್ಲ ಕಲಾವಿದರು ನಟಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.