ನಟಿ ಸಪ್ತಮಿ ಗೌಡ ನಟಿಸಿರುವ 'ಯುವ' ಚಿತ್ರವು ನಿನ್ನೆ ಕರ್ನಾಟಕ ಸೇರಿದಂತೆ ಹಲವು ಕಡೆ 600ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಯುವ ಚಿತ್ರದಲ್ಲಿ ಡಾ ರಾಜ್‌ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್ ಎರಡನೇ ಮಗ ಯುವ ರಾಜ್‌ಕುಮಾರ್ ಮೊಟ್ಟಮೊದಲ ಬಾರಿಗೆ ನಾಯಕರಾಗಿ ನಟಿಸಿದ್ದಾರೆ.
ನಟ-ನಿರ್ದೇಶಕ ರಿಷಬ್ ಶೆಟ್ಟಿ (Rishab Shetty)ಅವರ 'ಕಾಂತಾರ' ಸಿನಿಮಾ ಸಕ್ಸಸ್ ಬಗ್ಗೆ ಹೊಸದಾಗಿ ಏನೂ ಹೇಳಬೇಕಿಲ್ಲ. ಸುಮಾರು 15 ಕೋಟಿ ಬಜೆಟ್‌ನಲ್ಲಿ ನಿರ್ಮಾಣದವಾದ ಕಾಂತಾರ ಸಿನಿಮಾ ಬರೋಬ್ಬರಿ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದಿರುವುದು ಅಚ್ಚರಿ. ಯಾರೂ ಊಹಿಸಿರದ ರೀತಿಯಲ್ಲಿ ಕಾಂತಾರ ಸಿನಿಮಾ ಇಡೀ ಭಾರತವೂ ಸೇರಿದಂತೆ, ಜಗತ್ತಿನಾದ್ಯಂತ ಭಾರೀ ಮೆಚ್ಚುಗೆ ಗಳಿಸಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರಿಗೆ ಜೋಡಿಯಾಗಿ ನಟಿ ಸಪ್ತಮಿ ಗೌಡ ನಟಿಸಿದ್ದಾರೆ.
ಇವೆಲ್ಲ ಎಲ್ಲರಿಗೂ ಗೊತ್ತಿರುವ ಕಥೆಯೇ ಆಗಿದ್ದರೆ ಗೊತ್ತಿಲ್ಲದ ಸಂಗತಿಯೊಂದನ್ನು ಕಾಂತಾರ ನಾಯಕಿ ನಟಿ ಸಪ್ತಮಿ ಗೌಡ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 'ಗುಳಿಗ ಪೋರ್ಶನ್ ಅನ್ನು ರಿಷಬ್ ಸರ್ ಸ್ಟಾರ್ಟ್ ಮಾಡಿದ್ರಲ್ಲಾ, ಆಗ ನಾವು ಅಲ್ಲಿದ್ದವರು ಅಷ್ಟೂ ಜನ ಕೈ ಮುಗಿದು ನಿಂತ್ಕೊಂಡ್ವಿ. ಹಂಗ್ ಮಾಡಿದ್ರು, ಹೆಂಗ್ ಆಯ್ತು ಆ ಗುಳಿಗ ಪೋರ್ಶನ್ ಅಂತ ಯಾರಿಗೂ ಗೊತ್ತಿಲ್ಲ. ಆ ಎನರ್ಜಿ ಇತ್ತಲ್ಲಾ ರಿಷಬ್ ಸರ್ ಅವ್ರದ್ದು, ಅದು ಸ್ಕ್ರೀನ್ ಮೇಲೆ ಹಾಗೇ ಟ್ರಾನ್ಸ್‌ಫರ್ ಅಯ್ತು.
ತಲೆಗೆ ಹೊಡೆದು ಇದನ್ನೆಲ್ಲ ಮನೆಲ್ಲಿ ಇಟ್ಕೋಬೇಡ ಅಂದಿದ್ರು ನನ್ನ ಅಮ್ಮ; ನಟಿ ಪ್ರಿಯಾಂಕಾ ಚೋಪ್ರಾ
ನೆಕ್ಸ್ಟ್ ಪಂಜುರ್ಲಿ ಬಂತಲ್ಲ, ಅಷ್ಟೊಂದು ಎನರ್ಜಿ ಇತ್ತಲ್ಲ ಆ ರಿಷಬ್ ಸರ್‌ನ, ತುಂಬಾ ಕಾಮ್ ಆಗಿ ನೋಡಿದ್ದು. ಒಂದು ಸಾರಿ ಅಂತೂ ನಾನು, ಅಮ್ಮ ಹೋದ್ವಿ ರಷಬ್ ಸರ್ ಹತ್ರ, ಸರ್ ಈಗ ಶಾಟ್ ಇದೆಯಾ ಅಂತ ಕೇಳಿದ್ರೆ, ಅವ್ರು ನಮ್ ಕಡೆ ತಿರುಗಿ 'ಅಷ್ಟೇ ಕೂಲಾಗಿ 'ಹ' ಅಂದ್ರು. ನಾನು ಅಷ್ಟೂ ದಿನದಲ್ಲಿ ಯಾವತ್ತೂ ರಿಷಬ್ ಸರ್‌ನ ಆ ಥರ ನೋಡಿರ್ಲೇ ಇಲ್ಲ. ಕಾಂತಾರ ನೋಡಿದವ್ರು ಅಷ್ಟೂ ಜನ ಮಾತಾಡ್ತಾರಲ್ಲ, ಅದು ಅಷ್ಟೂ ಕ್ರೆಡಿಟ್ ನಿಜವಾಗ್ಲೂ ರಿಷಬ್ ಸರ್‌ಗೆ ಹೋಗ್ಬೇಕು' ಎಂದಿದ್ದಾರೆ ನಟಿ, ಕಾಂತಾರ ಚೆಲುವೆ ಸಪ್ತಮಿ ಗೌಡ.
ಮಹಾಲಿಂಗ ಭಾಗವತರ್ ನನ್ನ ಪತಿಯಲ್ಲ, ಗಾಡ್ ಫಾದರ್ ಅಷ್ಟೇ; ಆಪ್ತರ ಬಳಿ ಹೇಳಿದ್ರಂತೆ ನಟಿ ಲೀಲಾವತಿ!
ಅಂದಹಾಗೆ, ನಟಿ ಸಪ್ತಮಿ ಗೌಡ ನಟಿಸಿರುವ 'ಯುವ' ಚಿತ್ರವು ನಿನ್ನೆ ಕರ್ನಾಟಕ ಸೇರಿದಂತೆ ಹಲವು ಕಡೆ 600ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಯುವ ಚಿತ್ರದಲ್ಲಿ ಡಾ ರಾಜ್‌ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್ ಎರಡನೇ ಮಗ ಯುವ ರಾಜ್‌ಕುಮಾರ್ ಮೊಟ್ಟಮೊದಲ ಬಾರಿಗೆ ನಾಯಕರಾಗಿ ನಟಿಸಿದ್ದಾರೆ. ಕಾಂತಾರ ಬಳಿಕ ಅಭಿಷೇಕ್ ಅಂಬರೀಷ್ ಜತೆ 'ಕಾಳಿ' ಚಿತ್ರದಲ್ಲಿ ನಟಿಸಿರುವಸಪ್ತಮಿ ಗೌಡ, ಬಳಿಕ ಯುವ ರಾಜ್‌ಕುಮಾರ್ ಅವರಿಗೆ 'ಯುವ' ಸಿನಿಮಾಗೆ ನಾಯಕಿಯಾಗಿದ್ದಾರೆ.
ಹಿಂದಿ ಭಾಷಿಗರಿಗೆ ಯಾಕೆ 'ಥ್ಯಾಂಕ್ಸ್' ಹೇಳಿದ್ರು ತೆಲುಗು ನಟ ರಾಮ್ ಚರಣ್; ಸೌತ್ ಸಿನಿಮಂದಿ ಏನಂದ್ರು?