ಟೈಗರ್ ಪ್ರಭಾಕರ್ ಸಾವಿನ ಹಿಂದಿದೆ ದೊಡ್ಡ ಕರಾಳ ಸತ್ಯ! ಗ್ಯಾಂಗ್ರಿನ್ ಆಗಿದ್ದು ಹೇಗೆ ಗೊತ್ತಾ?

By Shriram Bhat  |  First Published Oct 17, 2024, 1:41 PM IST

ಅದೊಂದು ದಿನ ಜಿಮ್ ಮುಗಿಸಿ ಮನೆಗೆ ಬರುತ್ತಿದ್ದ ಟೈಗರ್ ಪ್ರಭಾಕರ್ ಅವರ ಬೈಕಿಗೂ ಎದುರುಗಡೆ ಬರುತ್ತಿದ್ದ ಲಾರಿಗೂ ಅಪಘಾತವಾಗಲಿತ್ತು. ಅದನ್ನು ತಪ್ಪಿಸುವ ಪ್ರಯತ್ನದಲ್ಲಿ ನಟ ಟೈಗರ್ ಪ್ರಭಾಕರ್ ಅವರು ಎದುರಿದ್ದ  ಮೋರಿಗೆ ಹೋಗಿ ಬಿದ್ದಿದ್ದರು!


ಭಾರತೀಯ ಚಿತ್ರರಂಗದ ಖ್ಯಾತ ನಟ ಟೈಗರ್ ಪ್ರಭಾಕರ್ (Tiger Prabhakar) ಬಾಳಿನಲ್ಲಿ ನಡೆದ ದುರಂತ ಘಟನೆ ಹಲವರಿಗೆ ಗೊತ್ತಿರಲಿಕ್ಕಿಲ್ಲ. ಅವರು ಗ್ಯಾಂಗ್ರಿನ್‌ ಖಾಯಿಲೆಯಿಂದ ತೀರಿಕೊಂಡಿದ್ದು ಬಹುತೇಕರಿಗೆ ಗೊತ್ತಿದೆ. ಆದರೆ, ಆ ಗ್ಯಾಂಗ್ರಿನ್‌ಗೆ ನಟ ಟೈಗರ್ ಪ್ರಭಾಕರ್ ತುತ್ತಾಗಿದ್ದು ಹೇಗೆ? ಅದರ ಹಿಂದಿನ ಅಸಲಿಯತ್ತೇನು ಎಂಬುದು ಬಹಳಷ್ಟು ಜನರಿಗೆ ಗೊತ್ತೇ ಇಲ್ಲ. ಹಾಗಿದ್ದರೆ, ನಟ ಟೈಗರ್ ಪ್ರಭಾಕರ್ ಅವರ ಸಾವಿನ ಹಿಂದಿನ ಘಟನೆಯ ಘೋರ ದುರಂತ ಕಥೆಯ ಬಗ್ಗೆ ಸ್ವಲ್ಪ ಮಾಹಿತಿ ಇಲ್ಲಿ ನೋಡಿ.. 

ನಟ ಟೈಗರ್ ಪ್ರಭಾಕರ್ ಅವರು ವಿಲನ್ ಪಾತ್ರದ ಹೊರತಾಗಿಯೂ ಸಾಕಷ್ಟು ಸಿನಿಮಾಗಳಲ್ಲಿ ನಾಯಕರಾಗಿಯೂ ನಟಿಸಿದ್ದಾರೆ. ಅವರು ಒಳ್ಳೆಯ ಫುಟ್‌ಬಾಲ್ ಪ್ಲೇಯರ್ ಆಗಿದ್ದರು, ಜಿಮ್, ಕಸರತ್ತು ಎಲ್ಲಾ ಮಾಡಿಕೊಂಡು ತಮ್ಮ ದೇಹವನ್ನೂ ಚೆನ್ನಾಗಿ ಇಟ್ಟುಕೊಂಡಿದ್ದರು. ಅಮ್ಮನ ಬಳಿ ಹಠ ಮಾಡಿ ಒಂದು ಬುಲ್ಲೆಟ್ ಬೈಕ್‌ ಕೂಡ ಖರೀದಿ ಮಾಡಿದ್ದರು, ಅದರಲ್ಲೇ ಓಡಾಡುತ್ತಿದ್ದರು ಟೈಗರ್ ಪ್ರಭಾಕರ್!

Tap to resize

Latest Videos

undefined

ದರ್ಶನ್ ಮೂವಿ 'ಕಲಾಸಿಪಾಳ್ಯ' ಡೈರೆಕ್ಟರ್ ಓಂ ಪ್ರಕಾಶ್ ರಾವ್ ಎಂಥವ್ರು? ಜಗತ್ತು ಕಾಣದ ಮತ್ತೊಂದು ಮುಖ ಬಯಲು..!

ಅದೊಂದು ದಿನ ಜಿಮ್ ಮುಗಿಸಿ ಮನೆಗೆ ಬರುತ್ತಿದ್ದ ಟೈಗರ್ ಪ್ರಭಾಕರ್ ಅವರ ಬೈಕಿಗೂ ಎದುರುಗಡೆ ಬರುತ್ತಿದ್ದ ಲಾರಿಗೂ ಅಪಘಾತವಾಗಲಿತ್ತು. ಅದನ್ನು ತಪ್ಪಿಸುವ ಪ್ರಯತ್ನದಲ್ಲಿ ನಟ ಟೈಗರ್ ಪ್ರಭಾಕರ್ ಅವರು ಎದುಗಡೆ ಇದ್ದ ಮೋರಿಗೆ ಹೋಗಿ ಬಿದ್ದಿದ್ದರು. ಜೀವವೇನೋ ಉಳಿದಿತ್ತು, ಆದರೆ ಕಾಲಿಗೆ ವಿಪರೀತ ಪೆಟ್ಟು ಬಿದ್ದಿತ್ತು. ಟ್ರೀಟ್‌ಮೆಂಟ್‌ಗೆಂದು ಆಸ್ಪತ್ರೆಗೆ ಹೋಗಿ ಸೇರಿಕೊಂಡರು. ವೈದ್ಯರು ಆರಂಭದಲ್ಲೇ ಲಂಚ ಕೇಳಿಬಿಟ್ಟರಂತೆ. ಆದರೆ ಟೈಗರ್ ಪ್ರಭಾಕರ್‌ ಅವರು ಲಂಚ ಕೊಡೋದಿಲ್ಲ ಅಂತ ನೇರಾನೇರವಾಗಿಯೇ ಹೇಳಿದರಂತೆ. 

ಲಂಚ ಕೊಡೋದಿಲ್ಲ ಎಂದಿದ್ದ ನಟ ಟೈಗರ್ ಪ್ರಭಾಕರ್ ಅವರ ಮೇಲಿನ ಕೋಪಕ್ಕೋ, ಅಥವಾ ಬೈ ಮಿಸ್ಟೇಕ್ ಆಗಿಯೋ ಏನೋ ವೈದ್ಯರು ಪ್ರಭಾಕರ್‌ ಅವರ ಮುಖ್ಯ ರಕ್ತನಾಳವನ್ನೇ ಕತ್ತರಿಸಿಬಿಟ್ಟಿದ್ದರಂತೆ. ಟೈಗರ್ ಪ್ರಭಾಕರ್ ಅವರು ತಾಯಿಯೇ ಸ್ವತಃ ವೈದ್ಯೆ ಆಗಿದ್ದರಿಂದ, ಆ ವೈದ್ಯರು ಮಾಡಿದ್ದ ಎಡವಟ್ಟು ಗೊತ್ತಾಗಿತ್ತು. ಆದರೆ, ಅಷ್ಟರಲ್ಲಾಗಲೇ ಕಾಲ ಮೀರಿತ್ತು! ಆಸ್ಪತ್ರೆಯಿಂದ ಮನೆಗೆ ತಾಯಿ ಕರೆದುಕೊಂಡು ಬಂದು, ಆರೈಕೆ ಮಾಡಿದರೂ ಅವರನ್ನು ಆ ದುರಂತ ಘಟನೆ ಜೀವನವೀಡಿ ಕಾಡಿಬಿಡುತ್ತೆ.

ಇದೀ ಘಟನೆ ನಟ ಟೈಗರ್ ಪ್ರಭಾಕರ್ ಅವರ ಜೀವನದ ದಿಕ್ಕನ್ನೇ ಬದಲಾಯಿಸಿಬಿಡುತ್ತೆ. ಅವರಿಗೆ ಆ ಗಾಯ ಗ್ಯಾಂಗ್ರಿನ್ ಆಗಿ ಬದಲಾಯ್ತು. ಜೀವ ಹಿಂಡುವ ಅದೇ ನೋವಿನಲ್ಲಿ ಅವರು ಹೇಗೋ ಬದುಕು ಸಾಗಿಸುತ್ತಿದ್ದರು. ಆದರೆ, ಗ್ಯಾಂಗ್ರಿನ್ ಕ್ರಮೇಣ ಹೆಚ್ಚುತ್ತಾ ಹೋಗಿ ಅದೇ ಅವರ ಸಾವಿಗೂ ಕಾರಣವಾಯ್ತು. ಟೈಗರ್ ಪ್ರಭಾಕರ ಅವರ ಜೀವನದಲ್ಲಿ ನಡೆದ ಬೈಕ್ ಅಪಘಾತ, ವೈದ್ಯರುಮಾಡಿದ ಎಡವಟ್ಟು, ಅದರಿಂದ ಅವರಿಗೆ ಕಾಡಿದ ಗ್ಯಾಂಗ್ರಿನ್, ಹೀಗೆ ಎಲ್ಲ ಕಾರಣಗಳೂ ಸೇರಿ, ನಟ ಟೈಗರ್ ಪ್ರಭಾಕರ್ ಅವರ ಜೀವನದ ಅಂತ್ಯಕ್ಕೆ ಕಾರಣವಾಯ್ತು. 

ಅಪ್ಪು ಫ್ಯಾನ್ಸ್‌ ಪೇಜ್‌ನಲ್ಲಿ ಶಂಕರ್‌ ನಾಗ್, ಏನೆಲ್ಲಾ ಪೋಸ್ಟ್ ಮಾಡಿದಾರೆ ನೋಡಿ!

ಕನ್ನಡದ ನಾಯಕನಟ, ಖ್ಯಾತ ಖಳನಟ ಗ್ಯಾಂಗ್ರಿನ್‌ಗೆ ಬಲಿಯಾಗಿ ಹೋದರು. ಹುಲಿ ಹೆಜ್ಜೆ, ಹುಲಿ ಹೆಬ್ಬುಲಿ ಸೇರಿದಂತೆ ಕನ್ನಡದಲ್ಲಿ ನೂರಾರು ಸಿನಿಮಾಗಳಲ್ಲಿ ಟೈಗರ್ ಪ್ರಭಾಕರ್ ನಟಿಸಿದ್ದಾರೆ. ಎರಡುನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಸೇರಿದಂತೆ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ನಟ ಟೈಗರ್ ಪ್ರಭಾಕರ್ ಮಿಂಚಿದ್ದರು. ಅಷ್ಟೇ ಅಲ್ಲ, ಹತ್ತು ಚಿತ್ರಗಳನ್ನು ನಿರ್ದೇಶಿಸಿದ್ದ ಟೈಗರ್ ಪ್ರಭಾಕರ್ ಅವರು ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದರು.

click me!