ಡಾ.ರಾಜ್​ಗೂ ಇತ್ತು ಸ್ಮೋಕಿಂಗ್​ ಚಟ: ಆ ರಾತ್ರಿ ನಡೆದ ಸ್ವಾರಸ್ಯಕರ ಘಟನೆ ನೆನಪಿಸಿಕೊಂಡ 'ಮುಖ್ಯಮಂತ್ರಿ' ಚಂದ್ರು

Published : Mar 01, 2025, 04:46 PM ISTUpdated : Mar 01, 2025, 07:07 PM IST
ಡಾ.ರಾಜ್​ಗೂ ಇತ್ತು ಸ್ಮೋಕಿಂಗ್​ ಚಟ: ಆ ರಾತ್ರಿ ನಡೆದ ಸ್ವಾರಸ್ಯಕರ ಘಟನೆ ನೆನಪಿಸಿಕೊಂಡ 'ಮುಖ್ಯಮಂತ್ರಿ' ಚಂದ್ರು

ಸಾರಾಂಶ

ಡಾ. ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಮೇರುನಟ, ಆದರ್ಶ ವ್ಯಕ್ತಿ. ಅವರು ಹಿಂದೆ ಸಿಗರೇಟ್ ಸೇದುತ್ತಿದ್ದರು. ಆದರೆ, ಲೈಟ್ ಬಾಯ್ ಅವರನ್ನ ನೋಡಿದಾಗ, ಸಾರ್ವಜನಿಕ ಜೀವನದಲ್ಲಿ ಮಾದರಿಯಾಗಿರಬೇಕು ಎಂದು ಅರಿತುಕೊಂಡರು. ಮುಖ್ಯಮಂತ್ರಿ ಚಂದ್ರು ಅವರೊಂದಿಗೆ ಈ ಅನುಭವ ಹಂಚಿಕೊಂಡರು. ಸಾರ್ವಜನಿಕ ವ್ಯಕ್ತಿಗಳು ಜನರಿಗಾಗಿ ಕೆಟ್ಟ ಅಭ್ಯಾಸಗಳನ್ನು ಬಿಡಬೇಕು ಎಂದು ರಾಜ್‌ಕುಮಾರ್ ಸಲಹೆ ನೀಡಿದರು.

ಕನ್ನಡ ಚಿತ್ರರಂಗ ಕಂಡ ಮೇರುನಟ ಡಾ.ರಾಜ್​ಕುಮಾರ್​ ಎನ್ನುವಲ್ಲಿ ಎರಡು ಮಾತೇ ಇಲ್ಲ. ಇವರ ಜೀವನದ ಪ್ರತಿಯೊಂದು ಕ್ಷಣವೂ ಎಲ್ಲರಿಗೂ ಮಾದರಿ. ಕೇವಲ ನಟನಾಗಿ ಮಾತ್ರವಲ್ಲದೇ ಇವರು ತಮ್ಮ ಜೀವನದಿಂದ ಹಲವರಿಗೆ ಹಲವಾರು ಬಗೆಯ ಪಾಠಗಳನ್ನು ಕಲಿಸಿ ಹೋಗಿದ್ದಾರೆ. ಅದ್ಭುತ ನಟನೆ, ಕಂಠಸಿರಿಯಿಂದ ಮಾತ್ರವಲ್ಲದೇ ತಮ್ಮ ಜೀವನದ ಅಮೂಲ್ಯ ಗುಣಗಳಿಂದಲೂ ಎಲ್ಲರಿಗೂ ಮಾದರಿ ಅಣ್ಣಾವ್ರು. ಇದೇ ಕಾರಣಕ್ಕೆ ಸ್ಯಾಂಡಲ್​ವುಡ್​ ಎಂದರೆ ಬರುವ ಮೊದಲ ಹೆಸರೇ ಡಾ.ರಾಜ್​ಕುಮಾರ್​. 

ತಮ್ಮ ಜೀವನದಲ್ಲಿ ಹಲವಾರು ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಿದವರಲ್ಲಿ ಡಾ.ರಾಜ್​ ಕೂಡ ಒಬ್ಬರು. ಇವರು ತಮ್ಮ ಚಿತ್ರಗಳಲ್ಲಿ ಕೂಡ ಮಾದಕ ವ್ಯಸನಕ್ಕೆ ಆಸ್ಪದ ಕೊಟ್ಟವರಲ್ಲ. ಆದರೆ ಒಂದು ಕಾಲದಲ್ಲಿ ಡಾ.ರಾಜ್​ಕುಮಾರ್​ ಕೂಡ ಸಿಗರೆಟ್​ ಸೇವನೆ ಮಾಡುತ್ತಿದ್ದರಂತೆ ಖುದ್ದು ಅವರೇ ಈ ವಿಷಯವನ್ನು ಹೇಳಿಕೊಂಡಿದ್ದು, ಅದರ ಬಗ್ಗೆ 'ಮುಖ್ಯಮಂತ್ರಿ' ಚಂದ್ರು ತಿಳಿಸಿದ್ದಾರೆ. ಕಲಾಮಾಧ್ಯಮದ ಜೊತೆಗಿನ ಸಂಭಾಷಣೆಯಲ್ಲಿ ಚಂದ್ರು ಅವರು ಡಾ.ರಾಜ್​ ಅವರ ಕುರಿತ ಒಡನಾಟದ ಬಗ್ಗೆ ಮಾತನಾಡುತ್ತಾ, ಡಾ. ರಾಜ್​ಕುಮಾರ್​ ಅವರು ತಮಗೆ ಹೇಳಿದ ಬುದ್ಧಮಾತನ್ನು ಹೇಳಿದ್ದಾರೆ. ಡಾ.ರಾಜ್​ಕುಮಾರ್​ ಅವರ ಜೊತೆಗಿನ ಶೂಟಿಂಗ್​ ಒಂದರ ಸಮಯದಲ್ಲಿ, ಗೆಸ್ಟ್​ಹೌಸ್​ಗೆ ಹೋದಾಗ ನಡೆದ ಘಟನೆಯನ್ನು ಚಂದ್ರು ಅವರು ವಿವರಿಸಿದ್ದಾರೆ.

ರಾಜ್​ಕುಮಾರರ ಮಟನ್​ ಚಾಪ್ಸ್​, ದರ್ಶನ್​ ಅಮ್ಮನ ಬಟಾಣಿ ಹಲ್ವಾ... ಅಂದಿನ ಘಟನೆ ನೆನೆದ ಸಿಹಿಕಹಿ ಚಂದ್ರು

'ಅದೊಂದು ದೊಡ್ಡ ಗೆಸ್ಟ್​ ಹೌಸ್​. ನಮಗೆಲ್ಲಾ ಆಗ ಕುಡಿಯೋ, ತಿನ್ನೋ, ಸಿಗರೆಟ್​ ಸೇಯೊ ಅಭ್ಯಾಸ. ಅದೇ ಕಾರಣಕ್ಕೆ ನಾವೆಲ್ಲಾ ಒಟ್ಟಿಗೇ ಹೋಗಿದ್ವಿ. ಆದರೆ ಡಾ.ರಾಜ್​ಕುಮಾರ್​ ಅವರಿಗೆ ಇದೆಲ್ಲಾ ಗೊತ್ತಾಗಬಾರದು ಎಂದು, ನಮ್ಮ ಕೋಣೆಗೆ ಅವರನ್ನು ಬಿಡಬೇಡಿ ಎಂದು ಪಾರ್ವತಮ್ಮಾ ಅವರಿಗೂ ಹೇಳಿದ್ವಿ. ನಾವು ಮದ್ಯ ಎಲ್ಲಾ ಇಟ್ಟುಕೊಂಡು, ಇಸ್ಪಿಟ್​ ಆಡುತ್ತಿದ್ವಿ. ನಮ್ಮ ಕಿತಾಪತಿ ಡಾ.ರಾಜ್​ ಅವರಿಗೆ ತಿಳಿದಿತ್ತು. ಅವರು ಹಿಂಬಾಗಿಲಿನಿಂದ ಮೆಲ್ಲಗೆ ಬಂದು ನನ್ನ ಬೆನ್ನು ತಟ್ಟಿದರು. ನನಗೆ ಶಾಕ್​ ಆಗೋಯ್ತು. ಇಲ್ಯಾಕೆ ಬರೋಕೆ ಹೋದ್ರಿ ಅಂದೆ. ಅದಕ್ಕೆ ಅವರು, ನೀವು ಹೀಗೆಲ್ಲಾ ಮಾಡುತ್ತೀರಿ ಎಂದು ಗೊತ್ತಿತ್ತು ಎನ್ನುತ್ತಲೇ ಇವೆಲ್ಲಾ ಬಿಟ್ಟುಬಿಡಿಯಪ್ಪಾ, ಎಲ್ಲಾ ಇತಿಮಿತಿಯಲ್ಲಿ ಇರಲಿ, ನೀವು ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರು, ಕುಟುಂಬಕ್ಕಾಗಿ ಅಲ್ಲದಿದ್ದರೂ ಜನರಿಗಾಗಿ ಇವೆಲ್ಲಾ ಮಾಡಬಾರದು, ನೀವು ಮಾದರಿಯಾಗಬೇಕು' ಎಂದು ಪಾಠ ಮಾಡಿದರು ಎಂದು ಚಂದ್ರು ನೆನಪಿಸಿಕೊಂಡಿದ್ದಾರೆ.

ನಾನೂ ನಿಮ್ಮ ಹಾಗೆ ಹಿಂದೆ ಇದೆಲ್ಲಾ ಮಾಡಿದವನೇ. ಆಮೇಲೆ ಅದು ಕೆಟ್ಟದ್ದು ಎಂದು ಗೊತ್ತಾಗಿ ಬಿಟ್ಟೆ ಎಂದೂ ಡಾ.ರಾಜ್​ಕುಮಾರ್​ ಹೇಳುವ ಮೂಲಕ ನಮ್ಮೆಲ್ಲರ ಕಣ್ಣು ತೆರೆಸಿದರೆ. ಏಕಾಏಕಿ ಇವೆಲ್ಲಾ ಬಿಡುವುದು ನಮಗೂ ಕಷ್ಟವಾಯಿತು. ಆದರೆ ರಾಜ್​ಕುಮಾರ್​ ಅವರಂಥವರ ಮಾತು ಕೇಳಿ ಅಂದಿನಿಂದ ಕ್ರಮೇಣ ಎಲ್ಲವನ್ನೂ ಕಡಿಮೆ ಮಾಡುತ್ತಾ ಬಂದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. ಅಷ್ಟಕ್ಕೂ, ಡಾ.ರಾಜ್​ಕುಮಾರ್​ ಅವರು ಅಪರೂಪಕ್ಕೆ ಹಿಂದೆ ಸ್ಮೋಕ್ ಮಾಡುತ್ತಿದ್ದರು. ಆದರೆ ಒಮ್ಮೆ ಶೂಟಿಂಗ್ ಸೆಟ್​ನಲ್ಲಿ  ಮರೆಯಲ್ಲಿ ನಿಂತು ಡಾ.ರಾಜ್‌ಕುಮಾರ್ ಸಿಗರೇಟ್ ಸೇಯುವಾಗ ಸಿನಿಮಾದ ಲೈಟ್ ಬಾಯ್ ಡಾ.ರಾಜ್‌’ಕುಮಾರ್ ಅವರನ್ನು ನೋಡಿ ಮುಖ ತಿರುಚಿದಾಗಲೇ ತಾವೆಂಥ ತಪ್ಪು ಮಾಡುತ್ತಿದ್ದೇವೆ ಎಂದು ರಾಜ್​ಕುಮಾರ್​ ಅವರಿಗೆ ಅನ್ನಿಸಿ ಸಿಗರೆಟ್​ ಸೇವನೆಯನ್ನೇ ಬಿಟ್ಟುಬಿಟ್ಟರು.  ಏಕೆಂದರೆ ನಟರು ಎಂದರೆ ತಮ್ಮನ್ನು ಆದರ್ಶರನ್ನಾಗಿ ನೋಡುತ್ತಾರೆ. ಇಂಥವರಿಗೆ ಕೆಟ್ಟ ಸಂದೇಶ ಕೊಟ್ಟ ಹಾಗೆ ಆಗುತ್ತದೆ ಎಂದು ಅವರು ಹೇಳಿದ್ದರು. ಆದರೆ ಇಂದಿನ ನಾಯಕರು ಸಿನಿಮಾದಲ್ಲಿಯೇ ಲಾಂಗು, ಮಚ್ಚು ಹಿಡಿದುಕೊಂಡು ರಕ್ತಪಾತ ಹರಿಸಿ ಹೀರೊ ಎನ್ನಿಸಿಕೊಳ್ಳುತ್ತಿರುವುದು ಮಾತ್ರ ವಿಚಿತ್ರವಾದರೂ ಸತ್ಯ!

ಸಾಲದ ಸುಳಿಯಲ್ಲಿ ಬೀದಿಪಾಲಾದಾಗ ದೇಗುಲದಲ್ಲಿ ಪವಾಡ: ಮರುದಿನವೇ 'ಬೊಂಬಾಟ್​ ಭೋಜನ'! ಸಿಹಿಕಹಿ ಚಂದ್ರು ಕಥೆ ಕೇಳಿ..
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!