ಸಖತ್ ಮೋಡಿ ಮಾಡಿದ ಆದಿತ್ಯ ಶಶಿಕುಮಾರ್ 'ಮೊದಲ ಪ್ರೀತಿ'.. 'ರಾಶಿ' ಮೊದಲ ಹಾಡು ಭಾರೀ ವೈರಲ್!

Published : Aug 16, 2026, 12:50 PM IST
Aditya Shashikumar

ಸಾರಾಂಶ

ವಿಜಯ್ ಪಾಳೇಗಾರ್ ನಿರ್ದೇಶನದ , ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ನಾಯಕತ್ವದ ‘ರಾಶಿ’ ಚಿತ್ರದ ಮೊದಲ ಹಾಡು "ಮೊದಲ ಪ್ರೀತಿ" ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರದ ನಿರ್ದೇಶಕ ವಿಜಯ್ ಪಾಳೇಗಾರ್ ಬರೆದು, ಸಂಗೀತ ಸಂಯೋಜಿಸಿರುವ ಈ ಹಾಡನ್ನು ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಹಾಡಿದ್ದಾರೆ.

Aditya Shashikumar Raashi Movie Song Modala Preethi goes Viral: ಧುವನ್ ಫಿಲಂಸ್ ಲಾಂಛನದಲ್ಲಿ ಅಖಿಲೇಶ್ ಎಂ ಅವರು ನಿರ್ಮಿಸಿ, ವಿಜಯ್ ಪಾಳೇಗಾರ್ ನಿರ್ದೇಶಿಸಿರುವ ಹಾಗೂ ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸಿರುವ "ರಾಶಿ" ಚಿತ್ರದ ಮೊದಲ ಹಾಡು "ಮೊದಲ ಪ್ರೀತಿ" ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರದ ನಿರ್ದೇಶಕ ವಿಜಯ್ ಪಾಳೇಗಾರ್ ಬರೆದು, ಸಂಗೀತ ಸಂಯೋಜಿಸಿರುವ ಈ ಹಾಡನ್ನು ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಹಾಡಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಆದಿತ್ಯ ಶಶಿಕುಮಾರ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಶಶಿಕುಮಾರ್ ಮಗ ಆದಿತ್ಯ ನಾಯಕತ್ವದ ರಾಶಿ

ಆದಿತ್ಯ ಸಹ ತಂದೆ ಶಶಿಕುಮಾರ್ ಹಾಗೆಯೇ ಉತ್ತಮ ನೃತ್ಯಗಾರ. ಆದಿತ್ಯ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗುವುದಂತೂ ಖಂಡಿತ. ಹೆಸರಾಂತ ಡಿ ಬಿಟ್ಸ್ ಕಂಪನಿಯ ಮೂಲಕ ಈ ಹಾಡು ಬಿಡುಗಡೆಯಾಗಿದ್ದು, ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಗಿದೆ, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯೂ ಆಗುತ್ತಿದೆ. ಚಿತ್ರದಲ್ಲಿ ಒಟ್ಟು ಆರು ಗೀತೆಗಳಿವೆ. ಆ ಪೈಕಿ ಐದು ಚಿತ್ರದಲ್ಲಿದ್ದು, ಒಂದು ಪ್ರಚಾರಗೀತೆಯಾಗಿರಲಿದೆ. ಕುನಾಲ್ ಗಾಂಜಾವಾಲ, ವಿಜಯ್ ಯೇಸುದಾಸ್, ಅನುರಾಧಾ ಭಟ್, ಶರಣ್, ಮಳವಳ್ಳಿ ಮಹದೇಸ್ವಾಮಿ, "ಸಿಟಿ ಲೈಟ್ಸ್", "ಭಾವ ಭಾವ" ಖ್ಯಾತಿಯ ಅಂಕಿತ್ ಮುಂತಾದವರು ಹಾಡುಗಳನ್ನು ಹಾಡಿದ್ದಾರೆ.

ಈಗಾಗಲೇ ಚಿತ್ರೀಕರಣ ಪೂರೈಸಿ ತೆರೆಗೆ ಬರಲು ಅಣಿಯಾಗುತ್ತಿರುವ ಈ ಚಿತ್ರವನ್ನು ಅಖಿಲೇಶ್ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಕಾಮಿಡಿ, ಲವ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ಮಾಪಕ ಅಖಿಲೇಶ್ ಕಥೆ ಬರೆದಿದ್ದಾರೆ. ಚಿತ್ರಕಥೆ ಬರೆದಿರೋದು ನಿರ್ದೇಶಕರಾದ ವಿಜಯ್ ಪಾಳೇಗಾರ್. ನವೀನ್ ಸೂರ್ಯ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಮಹೇಶ್ ಸಾತನೂರು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಆದಿತ್ಯ ಶಶಿಕುಮಾರ್ ಅವರಿಗೆ ನಾಯಕಿಯಾಗಿ ಸಮೀಕ್ಷಾ ನಟಿಸಿದ್ದಾರೆ. ರಮೇಶ್ ಇಂದಿರಾ, ತಬಲ‌ ನಾಣಿ, ವೀಣಾ ಸುಂದರ್, ಮಂಜು ಪಾವಗಡ, ಕರಿ ಸುಬ್ಬು, ವಿನೋದ್ ಗೊಬ್ಬರಗಾಲ, ಹುಲಿ ಕಾರ್ತಿಕ್, ವರ್ಧನ್ ತೀರ್ಥಹಳ್ಳಿ, ಉಗ್ರಂ ರವಿ, ಭಜರಂಗಿ ಪ್ರಸನ್ನ ಮುಂತಾದವರು "ರಾಶಿ" ಚಿತ್ರದ ತಾರಾಬಳಗದಲ್ಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆ ನಟನ ಸಿನಿಮಾ ನೋಡುವುದನ್ನೇ ನಿಲ್ಲಿಸಿದ್ದೆ, ಮುಖ ನೋಡಲೂ ಇಷ್ಟಪಡುತ್ತಿರಲಿಲ್ಲ: ಯಶ್ ಹೇಳಿದ್ದು ಯಾರಿಗೆ?
ರಶ್ಮಿಕಾ ಮಂದಣ್ಣ 'ಶೋ-ಆಫ್' ಕಾಮೆಂಟ್‌ಗೆ ಯಶ್ ಖಡಕ್ ಉತ್ತರ; ಆದ್ರೆ ಟಾಂಗ್ ಕೊಟ್ಟಿದ್ದು ಯಾರಿಗೆ ನೋಡಿ!