ಜ್ಯೇಷ್ಠವರ್ಧನ್ ಗ್ರಾಂಡ್ ಎಂಟ್ರಿ.. ವಿಷ್ಣುವರ್ಧನ್ ಮೊಮ್ಮಗ, ಅನಿರುದ್ದ್ ಮಗನ ಸಿನಿಮಾ ಶೀಘ್ರದಲ್ಲೇ ಶುರು!

Published : Aug 15, 2026, 08:10 PM ISTUpdated : Aug 15, 2026, 08:16 PM IST
Jyesta Vardhan

ಸಾರಾಂಶ

'ಹೆಚ್ಚಿನ ಮನೆಗಳಲ್ಲಿ ನನ್ನ ವಯಸ್ಸಿನ ಹುಡುಗರಿಗೆ 'ಓದು' ಎಂದು ಹೇಳಿದರೆ, ನಮ್ಮ ಮನೆಯಲ್ಲಿ ಮಾತ್ರ 'ಸಿನಿಮಾ ನೋಡು' ಎಂದು ಪ್ರೋತ್ಸಾಹಿಸುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಮನೆಯೇ ನನ್ನ ಮೊದಲ ಪಾಠಶಾಲೆ' ಎಂದಿದ್ದಾರೆ ಜ್ಯೇಷ್ಠವರ್ಧನ್. ಸದ್ಯದಲ್ಲೇ ಸಿನಿಮಾ ಶುರುವಾಗಲಿದೆ.

Dr Vishnuvardhan Grand Son-Aniruddha Jatkar son-Jyesta Vardhan Grand debut for Kannada film soon: ಡಾ. ವಿಷ್ಣುವರ್ಧನ್‌ ಮೊಮ್ಮಗ, ಬಹುಮುಖ ಪ್ರತಿಭೆಯ ನಟ ಅನಿರುದ್ದ್ ಮಗ ಜ್ಯೇಷ್ಠವರ್ಧನ್‌ ಕನ್ನಡ ಚಿತ್ರರಂಗಕ್ಕೆ ಗ್ರಾಂಡ್ ಎಂಟ್ರಿ!

ಕರ್ನಾಟಕ ರತ್ನ' ಡಾ. ವಿಷ್ಣುವರ್ಧನ್‌ ಮೊಮ್ಮಗ, ಬಹುಮುಖ ಪ್ರತಿಭೆಯ ನಟ ಅನಿರುದ್ದ್ ಮಗ ಜ್ಯೇಷ್ಠವರ್ಧನ್‌ ಕನ್ನಡ ಚಿತ್ರರಂಗಕ್ಕೆ ಗ್ರಾಂಡ್ ಎಂಟ್ರಿಗೆ ಮುಹೂರ್ತ ಸನ್ನಿಹಿತವಾಗಿದೆ. ಸಾಹಸಸಿಂಹ ವಿಷ್ಣುವರ್ಧನ್ ಅಳಿಯ ನಟ ಅನಿರುದ್ದ್ ಜತ್ಕರ್ ಮಗ ಜ್ಯೇಷ್ಠವರ್ಧನ್ ಅವರು ಇನ್ನೇನು ಸದ್ಯದಲ್ಲೇ ಸ್ಯಾಂಡಲ್‌ವುಡ್‌ ಸಿನಿಮಾದಲ್ಲಿ ನಟನೆ ಶುರುಮಾಡಲಿದ್ದಾರೆ. ಈಗಾಗಲೇ ಕಥೆ ಫೈನಲ್ ಹಂತಕ್ಕೆ ಬಂದಿದ್ದು, ಮುಹೂರ್ತ ಘೋಷಣೆಯಷ್ಟೇ ಬಾಕಿ ಇದೆ.

ವಿಷ್ಣುವರ್ಧನ್ ಹಾಗೂ ಜತ್ಕರ್ ಕುಟುಂಬದ ಪರಂಪರೆ ಎಂಬಂತೆ ನೇರವಾಗಿ ನಟನೆಗೆ ಇಳಿಯದೆ ಕಳೆದ ಹಲವು ವರ್ಷಗಳಿಂದ ನೃತ್ಯ ಮತ್ತು ನಟನೆಯಲ್ಲಿ ಸಾಕಷ್ಟು ತರಬೇತಿ ಪಡೆದಿದ್ದಾರೆ ಜ್ಯೇಷ್ಠವರ್ಧನ್. ಡಾ ವಿಷ್ಣುವರ್ಧನ್ ಮೊಮ್ಮಗ ಕನ್ನಡ ಚಿತ್ರರಂಗಕ್ಕೆ ಪ್ರವೇಶ ನೀಡಲಿದ್ದಾರೆ ಎಂಬ ಮಾತುಗಳು ಹಲವು ಕಾಲದಿಂದ ಕೇಳಿಬರುತ್ತಿದ್ದವು. ಆದರೆ ಕಾಲ ಈಗ ಕೂಡಿಬಂದಿದೆ. ಅವಸರ ಮಾಡದೆ, ಅನನ್ಯ ತಾಳ್ಮೆ, ಶ್ರದ್ಧಯೆ ಮೂಲಕವೇ ಸಿನಿಮಾರಂಗದಲ್ಲಿ ತಮ್ಮ ಹಾದಿಯನ್ನು ರೂಪಿಸಿಕೊಳ್ಳಲು ಸಜ್ಜಾಗಿದ್ದಾರೆ ಜ್ಯೇಷ್ಠವರ್ಧನ್.

'ರಾಜಹಂಸ' ಚಿತ್ರದಲ್ಲಿ ಬಾಲನಟನಾಗಿ ಕ್ಯಾಮರಾ ಎದುರಿಸಿದ್ದ ಜ್ಯೇಷ್ಠವರ್ಧನ್, ಬಳಿಕ ತಮ್ಮ ಶಿಕ್ಷಣದ ಕಡೆ ಒತ್ತುಕೊಟ್ಟು ನಾಯಕನಟನಾಗಿ ಚಿತ್ರರಂಗ ಪ್ರವೇಶಿಸಲು ಈಗ ಸಜ್ಜಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನಟನೆ, ನೃತ್ಯವನ್ನು ಕಲಿಯುತ್ತಿದ್ದ ಜ್ಯೇಷ್ಠ, 'ಆದಿ ಶಕ್ತಿ ಥಿಯೇಟರ್'ನಲ್ಲಿ ನಟನಾ ತರಬೇತಿ, 'ರಂಗಶಂಕರ'ದಲ್ಲಿ ಕಾರ್ಯಾಗಾರಗಳು ಹಾಗೂ ಗೌರಿ ದತ್ತು ಅವರ ಮಾರ್ಗದರ್ಶನದಲ್ಲಿ ನಟನೆಯ ವಿವಿಧ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದಾರೆ. ಜೊತೆಗೆ, ಕಾಲೇಜ್‌ ಶಿಕ್ಷಣ ಕೂಡ ಮುಂದುವರೆಯುತ್ತಿದೆ.

ಜ್ಯೇಷ್ಠವರ್ಧನ್ ಸದ್ಯ ಪಬ್ಲಿಕೇಶನ್ ಮತ್ತು ಅಡ್ವರ್ಟೈಸಿಂಗ್‌ನಲ್ಲಿ ಎಂಬಿಎ ಪದವಿ ಪಡೆಯುತ್ತಿದ್ದಾರೆ. "ನಟನೆ ಕಲೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಒಮ್ಮೆಲೇ ಸಿನಿಮಾರಂಗಕ್ಕೆ ಕಾಲಿಡಲು ನನಗೆ ಇಷ್ಟವಿರಲಿಲ್ಲ. ನಾನು ಕೇವಲ ಸ್ಕ್ರೀನ್‌ ಮೇಲೆ ಕಾಣಿಸಿಕೊಳ್ಳುವುದರ ಬದಲು ಸಂಪೂರ್ಣ ಸಿದ್ಧನಾಗಿ ಬರಲು ಬಯಸಿದ್ದೆ" ಎಂದಿದ್ದಾರೆ ಜ್ಯೇಷ್ಠವರ್ಧನ್.

ಬೆಳ್ಳಿತೆರೆಗೆ ನಾನು ಪ್ರಾಮಾಣಿಕ ಆಗಿರಬೇಕು

'ಸಹಜವಾಗಿಯೇ ನಮ್ಮ ಮನೆಯಲ್ಲಿ ಪ್ರತಿದಿನವೂ ಸಿನಿಮಾ ಕುರಿತ ಚರ್ಚೆಗಳೇ ನಡೆಯುತ್ತಿರುತ್ತವೆ. ಬಣ್ಣದ ಬದುಕಿನೆಡೆಗೆ ಸಹಜವಾಗಿ ನಾನು ಆಕರ್ಷಿತನಾಗಿರುವೆ. ಸಿನಿಮಾ ಕ್ಷೇತ್ರದಲ್ಲಿ ನಾನು ಯಾವುದೇ ಹಾದಿ ಆಯ್ದುಕೊಂಡರೂ ನನ್ನ ಕುಟುಂಬದ ಬೆಂಬಲ ಸದಾ ಇರುತ್ತದೆ. ನಮ್ಮ ಮನೆಯಲ್ಲಿ 'ಬೆಳ್ಳಿತೆರೆಗೆ ಯಾವತ್ತೂ ಪ್ರಾಮಾಣಿಕವಾಗಿರು, ಇಲ್ಲಿ ಪ್ರತಿಭೆ-ಪರಿಶ್ರಮ ಮಾತ್ರ ಎಂದಿಗೂ ಕೈಹಿಡಿಯುವುದು ಎಂದಿದ್ದಾರೆ. ಈ ಮಾತನ್ನೇ ಮಂತ್ರವನ್ನಾಗಿಸಿಕೊಂಡು ನಾನೀಗ ಸಿನಿಮಾ ಎಂಟ್ರಿಗೆ ಸಜ್ಜಾಗಿದ್ದೇನೆ' ಎಂದಿದ್ದಾರೆ ಜ್ಯೇಷ್ಠವರ್ಧನ್.

ಹೊಸ ಕಥೆಗಳು-ಓಕೆ ಆಗಿರೋ ಫೈನಲ್ ಸ್ಕ್ರಿಪ್ಟ್- ಜ್ಯೇಷ್ಠವರ್ಧನ್ ಎಂಟ್ರಿಗೆ ಕೌಂಟ್‌ಡೌನ್!

"ಸಿನಿಮಾ ಬರವಣಿಗೆ, ಸಿನಿಮಾಟೋಗ್ರಫಿ ಹೀಗೆ ಎಲ್ಲದರ ಬಗ್ಗೆಯೂ ನನಗೆ ಕುತೂಹಲವಿದೆ. ಓದುತ್ತಿರುವಾಗಲೇ ನಾನು ಸಿನಿಮಾರಂಗದಲ್ಲೇ ಮುಂದುವರಿಯಬೇಕು ಅಂತ ನಿರ್ಧರಿಸಿದೆ. ನಟನೆ ಮಾತ್ರವಲ್ಲದೆ, ಸಿನಿಮಾ ನಿರ್ಮಾಣ ಸೇರಿದಂತೆ ಇನ್ನಿತರ ಮಗ್ಗುಲುಗಳ ಬಗ್ಗೆಯೂ ಆಸಕ್ತಿಯನ್ನು ಹೊಂದಿದ್ದೇನೆ. ಕಾಲ ಕೂಡಿ ಬಂದಾಗ ಎಲ್ಲವನ್ನೂ ಮಾಡಲಿದ್ದೇನೆ. ನನ್ನ ಮೊದಲ ಸಿನಿಮಾ ಯಾವುದೇ ಒಂದು ನಿರ್ದಿಷ್ಟ ಜಾನರ್‌ಗೆ ಸೀಮಿತವಾಗಬಾರದು. ಆ ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗುವಂತಿರಬೇಕು' ಎಂದಿದ್ದಾರೆ ಜ್ಯೇಷ್ಠವರ್ಧನ್.

"ಹೆಚ್ಚಿನ ಮನೆಗಳಲ್ಲಿ ನನ್ನ ವಯಸ್ಸಿನ ಹುಡುಗರಿಗೆ 'ಓದು' ಎಂದು ಹೇಳಿದರೆ, ನಮ್ಮ ಮನೆಯಲ್ಲಿ ಮಾತ್ರ 'ಸಿನಿಮಾ ನೋಡು' ಎಂದು ಪ್ರೋತ್ಸಾಹಿಸುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಮನೆಯೇ ನನ್ನ ಮೊದಲ ಪಾಠಶಾಲೆ' ಎಂದಿರುವ ಜ್ಯೇಷ್ಠವರ್ಧನ್ ಸಿನಿಮಾಗೆ ಬರಲು ತುಂಬಾ ಆಸಕ್ತಿ-ಉತ್ಸಾಹ ಹೊಂದಿದ್ದಾರೆ. ಇನ್ನೇನು ಅತೀ ಶೀಘ್ರದಲ್ಲಿ ಜ್ಯೇಷ್ಠವರ್ಧನ್ ಸಿನಿಮಾ ಜರ್ನಿ ಶುರುವಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ಟಾಕ್ಸಿಕ್’ನಲ್ಲಿ ಮೆಲ್ಲಿಸಾ ಪಾತ್ರವೇ ವಿಭಿನ್ನ: ಯಶ್ ಜೊತೆ ನಟಿಸಿದ ಅನುಭವದ ಬಗ್ಗೆ ರುಕ್ಮಿಣಿ ವಸಂತ್ ಮಾತು
ಕುಮಟಾದಲ್ಲಿ ಶೂಟಿಂಗ್.. ಮತ್ತೆ ಕನ್ನಡಕ್ಕೆ ಬಂದ 'ಕೆಜಿಎಫ್‌' ನಟಿ ಶ್ರೀನಿಧಿ ಶೆಟ್ಟಿ; ಹೀರೋ ಯಾರು? ಯಾವ ಸಿನಿಮಾ?