
ಬೆಂಗಳೂರು: ಸ್ಯಾಂಡಲ್‌ವುಡ್ ಹಾಸ್ಯ ನಟ ಚಿಕ್ಕಣ್ಣ ನಾಯಕನಾಗಿ ನಟಿಸಿರುವ 'ಲಕ್ಷ್ಮೀ ಪುತ್ರ' ನವೆಂಬರ್ 27 ರಂದು ರಾಜ್ಯಾದ್ಯಂತ 120ಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ರಿಲೀಸ್ ಆಗ್ತಿದೆ. ಸದ್ಯ ಚಿಕ್ಕಣ್ಣ ಅವರು ಸಿನಿಮಾ ಪ್ರಮೋಷನ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸುತ್ತಾಟ ನಡೆಸ್ತಿದ್ದಾರೆ. ಇದೇ ಸಂದಭದಲ್ಲಿ ತಮ್ಮ ಸಿನಿಮಾ ಜರ್ನಿಗೆ ಪತ್ನಿ ನೀಡುತ್ತಿರುವ ಸಹಕಾರದ ಬಗ್ಗೆ ಮಾತನ್ನಾಡಿದ್ದಾರೆ.
ಸಂದರ್ಶನ ಒಂದರಲ್ಲಿ ಮಾತನ್ನಾಡಿರುವ ಚಿಕ್ಕಣ್ಣ.. ನನಗೆ ಎರಡೇ ಎರಡು ಖುಷಿ ಇದೆ. ಒಂದು ಮದ್ವೆಯಾದ ಬಳಿಕ ಮೊದಲನೇ ದೀಪಾವಳಿ. ಇನ್ನೊಂದು ದೀಪಾವಳಿಗೆ ಲಕ್ಷ್ಮಿ ಪೂಜೆ ಮಾಡ್ತಾರೆ ಎಂದು. ಸೋ ಲಕ್ಷ್ಮಿ ಪೂಜೆ ಮಾಡಿ 'ಲಕ್ಷ್ಮಿಪುತ್ರ'ನ ಬಿಡುಗಡೆಗೆ ಸಿದ್ಧವಾಗಿದೆ ಎಂದು ನಕ್ಕಿದ್ದಾರೆ.
ಪಾವನಾ ಬಗ್ಗೆ ಹೇಳಬೇಕು ಅಂದರೆ.. ಅದೇ ಹೇಳ್ತಾರಲ್ಲ ಜೀವನ ಅನ್ನೋದು ಎರಡು ಚಕ್ರ ಈಕ್ವಲ್ ಆಗಿದ್ರೆ ಸುಗಮವಾಗಿ ಸಾಗುತ್ತೆ ಎಂದು. ಪ್ರೊಫೆಷನ್‌ನ ಇಷ್ಟಪಡುವ ಮತ್ತೆ ಸಪೋರ್ಟ್ ಮಾಡುವ ವೈಫ್ ಸಿಕ್ಕಿದ್ದಾರೆ. ಎಲ್ಲವೂ ಬರೋದು ಪ್ರೊಫೆಷನ್‌ನಿಂದಾನೇ ಅಲ್ವಾ? ಇವರದೊಂದು ಜಾಬ್ ಅವರದೊಂದು ಜಾಬ್, ಇವರದು ಅವರಿಗೆ ಇಷ್ಟ ಇಲ್ಲ, ಅವರಿಗೆ ಇವರದು ಇಷ್ಟ ಇರಲ್ಲ ಎಂದಾಗ ಮನಸ್ತಾಪಗಳು ಶುರುವಾಗುತ್ವೆ. ನನಗೆ ಅದು ಯಾವ ಟೆನ್ಷನ್ ಇಲ್ಲ. ನನಗೆ ಸಪೋರ್ಟಿವ್ ಆಗೂ ಇದ್ದಾರೆ. ನನ್ನ ಪ್ರೊಫೆಷನ್ ಇಷ್ಟಪಡ್ತಾರೆ. ಹೆಂಡತಿಗೆ ಸ್ವಲ್ಪ ದೈವಭಕ್ತಿ ಜಾಸ್ತಿ. ಅವರು ದೇವರ ಮೊರೆ ಹೋಗೋದು ಜಾಸ್ತಿ, ಎಲ್ಲಾ ಪೂಜೆಗಳನ್ನೂ ಮಾಡ್ತಾ ಇದ್ದಾರೆ. ಹೆಂಡತಿಯಿಂದ ಒಂದು ಒಳ್ಳೆ ಪಾಸಿಟಿವ್ ಸಪೋರ್ಟ್ ಸಿಕ್ಕಿದಾಗ ತುಂಬಾ ಖುಷಿಯಾಗುತ್ತೆ. ನಾನು ಲಕ್ಕಿ ಅಷ್ಟೇ ಎಂದಿದ್ದಾರೆ.
ಇದೇ ವೇಳೆ ನಿರೂಪಕರು ಪತ್ನಿಗೆ 'ಐ ಲವ್ ಯು' ಹೇಳಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು.. ನಾನು ತುಂಬಾ ಸಲ ಹೇಳಿದ್ದೀನಿ. ಹೇಳ್ತಾನೇ ಇರ್ತೀನಿ ಎಂದು ನಕ್ಕಿದ್ದಾರೆ. ಎಲ್ಲವೂ 'ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯಃ' ಅಂತ. ಭಗವಂತ ಬರೆದಿದ್ದ ಮೇ ಬಿ ಪಾವನಾನೇ ಸಿಗಬೇಕು ಎಂದು. ಚೆನ್ನಾಗಿದ್ದೀವಿ, ಆಮೇಲೆ ಸಪೋರ್ಟಿವ್ ವೈಫ್. ಈಗ ಸಿಕ್ಕಿದ್ದಾರೆ ನೋಡೋಣ, ಇನ್ನೂ ದೊಡ್ಡ ಸಕ್ಸಸ್, ಜನಗಳ ಆಶೀರ್ವಾದ ಇನ್ನೂ ಸಿಗಬಹುದು ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಮದುವೆನೇ ಆದ್ಮೇಲೆ ಲವ್ ಆಗಿದ್ರೆ ಲವ್ ಅಂತಿದ್ದೆ, ಅರೇಂಜ್ ಆಗಿದ್ರೆ ಅರೇಂಜ್ ಅಂದಿದ್ದೆ. ಅದನ್ನು ಕದ್ದು ಮುಚ್ಚಿ ಇಡೋದರಲ್ಲಿ ಏನಿದೆ? ಏನೋ ಲವ್ ಮಾಡ್ಕೊಂಡು ಯಾರಿಗೂ ಗೊತ್ತಾಗದಂಗೆ ಓಡಾಡ್ತಿದ್ದಾರೆ ಅಂದ್ರೆ ಅವಾಗ ಸುಳ್ಳು ಹೇಳೋದರಲ್ಲಿ ಅರ್ಥ ಇದೆ. ನಾವು ಮದುವೆ ಆದ್ಮೇಲೂ ಸುಳ್ಳು ಹೇಳಿಲ್ಲ, ಅರೇಂಜ್ ಮ್ಯಾರೇಜ್ ಸರ್. ಅರೇಂಜ್ ಆಗಿ ಹತ್ತತ್ರ ಒಂದು ವರ್ಷ, ಫಿಕ್ಸ್ ಆದ್ಮೇಲೆ ಒಂದು ವರ್ಷ ಮದುವೆನೇ ಆಗ್ಲಿಲ್ಲ. ಎಲ್ಲಾ ಕಡೆ ಓಡಾಡ್ಕೊಂಡು ಆರಾಮಾಗಿ ಇದ್ವಲ್ಲ, ಹಂಗಾಗಿ ನೋಡಿದವರಿಗೆ ಯಾರಿಗೂ ಇದು ಅರೇಂಜ್ ಮ್ಯಾರೇಜ್ ಅಂತ ಎನಿಸಲಿಲ್ಲ.
ಲಕ್ಷ್ಮೀ ಪುತ್ರ್ ಸಿನಿಮಾದ ಫಸ್ಟ್ ಡೇ ಖಂಡಿತವಾಗಿಯೂ ಕರ್ಕೊಂಡು ಬರ್ತೀನಿ. ಯಾಕಂದ್ರೆ ಅವರು ಎಕ್ಸೈಟ್ಮೆಂಟ್‌ನಲ್ಲಿ ಇದ್ದಾರೆ. ಮದುವೆಯಾದ್ಮೇಲೆ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ. ಅವಳಿಗೆ ಆ ಎಕ್ಸೈಟ್‌ಮೆಂಟ್ ಇದೆ. ಇದಕ್ಕೂ ಮುಂಚೆ ಇಬ್ಬರೂ ಒಟ್ಟಿಗೆ ಎರಡು ಸಿನಿಮಾ ನೋಡಿದ್ವಿ. ಫಸ್ಟ್ ನಾವಿಬ್ಬರೂ ಹೋಗಿ ನೋಡಿದ್ದು 'ಡೆವಿಲ್', ಸೆಕೆಂಡ್ ಸಿನಿಮಾ 'ಟಾಕ್ಸಿಕ್', ಈ ಮೂರನೇದು 'ರಾಮಾಯಣ' ನೋಡಬೇಕು. 'ಪ್ರೇಮದ ಊರಲ್ಲಿ' ಸಿನಿಮಾಗೆ ನಾನು ಹೋಗೋಕೆ ಆಗಿಲ್ಲ, ಬಟ್ ಅವಳು ಹೋಗಿ ನೋಡ್ಕೊಂಡು ಬಂದಿದ್ದಾಳೆ ಎಂದಿದ್ದಾರೆ. ಇದೇ ವೇಳೆ ತಾವು ಪತ್ನಿಗೆ ನೀಡಿದ ಮೊದಲ ಗಿಫ್ಟ್ ಬಗ್ಗೆಯೂ ಮಾತನ್ನಾಡಿದ್ದಾರೆ. ಮೊದಲನೇ ಗಿಫ್ಟ್ ರಿಂಗ್ ಕೊಟ್ಟಿದ್ದೆ. ಅದು ಎಂಗೇಜ್ಮೆಂಟ್ ರಿಂಗ್ ಅಲ್ಲ, ಅದಾದ್ಮೇಲೆ ಬರ್ತ್‌ಡೇಗೆ ಒಂದು ರಿಂಗ್ ಕೊಟ್ಟಿದ್ದೆನೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.