
ಅಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಮೇಘನಾ ರಾಜ್ ಬಾಂಡ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗುತ್ತಿದೆ. ಅದರಲ್ಲೂ ಸರ್ಜಾ ಫ್ಯಾಮಿಲಿ ಜೊತೆ ರಾಜ್ ಫ್ಯಾಮಿಲಿ ಸರಿಯಾಗಿಲ್ಲ ಮನಸ್ತಾಪವಿದೆ ಎಂದು ಹರಿದಾಡುತ್ತಿತ್ತು. ಈ ಎಲ್ಲಾ ಮಾತುಗಳಿಗೆ ಬ್ರೇಕ್ ಹಾಕಲು ಸರಿಯಾಗಿ ಉತ್ತರ ಕೊಟ್ಟಿದ್ದಾರೆ.
ಧ್ರುವ ಸರ್ಜಾ ನನ್ನ ತಮ್ಮ:
'ನನ್ನ ಧ್ರುವ ಸರ್ಜಾ ಸಂಬಂಧ ಯಾರಿಗೂ ಅರ್ಥವಾಗಲ್ಲ. ಚಿರುಗೆ ಗೊತ್ತು ಧ್ರುವಗೆ ಗೊತ್ತು ಆಮೇಲೆ ನನಗೆ ಗೊತ್ತು. ಧ್ರುವ ಯಾವತ್ತೂ ಹೇಳಿಕೊಂಡಿಲ್ಲ ಯಾವತ್ತೂ ಹೇಳಿಕೊಳ್ಳುವುದಿಲ್ಲ ಎಂದು ನನಗೆ ಗೊತ್ತು. ತತ್ಸಮ ತದ್ಭುವ ಸಿನಿಮಾ ಟೀಸರ್‌ನ ಧ್ರುವ ಸರ್ಜಾಗೆ ಕಳುಹಿಸಿದಾಗ ತುಂಬಾನೇ ಎಕ್ಸೈಟ್ ಆಗಿದ್ದ ಆಮೇಲೆ ಕೆಲವೊಂದು ವಿಚಾರಗಳನ್ನು ಚರ್ಚೆ ಮಾಡಿದ್ವಿ ಆಗ ಯಾವ ಪಾಯಿಂಟ್ ಧ್ರುವಗೆ ಅದರಲ್ಲಿ ಇಷ್ಟವಾಗಿಲ್ಲ ಅನ್ನೋದು ಅರ್ಥವಾಗಿತ್ತು. ಯಾರಿಗೂ ನಮ್ಮ ಬಾಂಡ್ ಹೇಳಿಕೊಳ್ಳುವ ಅವಶ್ಯಕತೆ ಇಲ್ಲ. ನಾವು ಪಬ್ಲಿಕ್ ಫಿಗರ್ ಆದ್ಮೇಲೆ ಜನರಿಗೆ ನಮ್ಮ ಮೇಲೆ ಕ್ಯೂರಿಯಾಸಿಟಿ ಇದೆ ಜನೆರಲ್ ಆಗಿ ನಮ್ಮ ಬಗ್ಗೆ ನಿಮಗೆ ಗೊತ್ತಿರಬೇಕು ಹಾಗಂತ ನನ್ನ ಪರ್ಸನಲ್ ವಿಚಾರಗಳನ್ನು ಟಾರ್ಗೆಟ್ ಮಾಡಿ ಅದರ ಬಗ್ಗೆ ಮಾತನಾಡುವುದು ನನಗೆ ಇಷ್ಟವಿಲ್ಲ ನಾನು ಮಾಡಲ್ಲ ಅಲ್ಲದೆ ನನಗೆ ಗೊತ್ತು ಯಾವುದು ಪರ್ಸನಲ್ ಆಗಿರಬೇಕು ಯಾವುದು ಪಬ್ಲಿಕ್ ಆಗಿರಬೇಕು ಎಂದು' ಎಂದು ಮೇಘನಾ ರಾಜ್ ಖಾಸಗಿ ಟಿವಿ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಕೂತ್ಕೊಂಡು ಮಜಾ ನೋಡೋಕೆ ಕಾಯುತ್ತಿದ್ದರು; ಸರ್ಜಾ ಫ್ಯಾಮಿಲಿ ಜೊತೆ ಮನಸ್ತಾಪ ಬಗ್ಗೆ ಮೇಘನಾ ರಾಜ್ ಕ್ಲಾರಿಟಿ!
'ಹಬ್ಬ ವಿಶೇಷ ದಿನಗಳಲ್ಲಿ ನಾನು ಅತ್ತೆ ಮಾವ ಮನೆಗೆ ಹೋಗಿ ಬರುವೆ ಫ್ಯಾಮಿಲಿ ಎಂದು ಹೇಳುವುದೇ ಈ ಬಂಧಕ್ಕೆ. ಹಬ್ಬ ಹರಿ ದಿನ ಅಂತ ಬೇಕಿಲ್ಲ ಕಾರಣ ಬೇಕಿಲ್ಲ ಭೇಟಿ ಮಾಡುವುದಕ್ಕೆ ಆಗಾಗ ಕರೆ ಮಾಡಿ ಮಾತನಾಡುತ್ತೀವಿ. ನಮ್ಮ ಬಗ್ಗೆ ಸೊಸೈಟಿ ಎನು ಅಂದುಕೊಳ್ಳುತ್ತೆ ಅಂತ ಯೋಚನೆ ಮಾಡುವ ವಾತಾವರಣದಲ್ಲಿ ಬೆಳೆದಿಲ್ಲ. ಎಲ್ಲಿಗೆ ಬೇಕಿದ್ದರೂ ಹೋಗುತ್ತೀನಿ ಎಲ್ಲಿ ಇಷ್ಟ ಅಗುತ್ತೆ ಅಲ್ಲಿ ಹೋಗುವೆ ನನಗೆ ಸಣ್ಣ ಗ್ರೂಪ್ ಫ್ರೆಂಡ್ಸ್ ಇದ್ದಾರೆ ಅವರ ಜೊತೆ ಹೋಗುತ್ತೀನಿ ಯಾವತ್ತೂ ಒಬ್ಬರ ನನ್ನ ಬಗ್ಗೆ ಅಥವಾ ನನ್ನ ಮಗನ ಬಗ್ಗೆ ಹೀಗೆ ಯೋಚನೆ ಮಾಡುತ್ತಾರೆ ಅಂದುಕೊಂಡಿಲ್ಲ ಆತರ ಯೋಚನೆ ಕೂಡ ನನಗೆ ಬರುವುದಿಲ್ಲ' ಎಂದು ಮೇಘನಾ ರಾಜ್ ಹೇಳಿದ್ದಾರೆ.
ಧ್ರುವ ಸರ್ಜಾ ಇನ್ನೂ ಎಳಸು ಅಷ್ಟು ಶಕ್ತಿ ಇಲ್ಲ, ರಾಯನ್‌ಗೂ ಅವನಿಗೂ ವ್ಯತ್ಯಾಸವಿಲ್ಲ: ಮೇಘನಾ ರಾಜ್
ಮನಸ್ತಾಪ:
'ಸರ್ಜಾ ಕುಟುಂಬ ಮತ್ತು ರಾಜ್ ಕುಟುಂಬದ ನಡುವೆ ಮನಸ್ತಾಪ ಇದೆ ಅನ್ನೋದಕ್ಕೆ ನನ್ನ ಬಳಿ ಉತ್ತರವಿಲ್ಲ ಈ ವಿಚಾರವಾಗಿ ಯಾವತ್ತೂ ಕ್ಲಾರಿಫೈ ಮಾಡಿಲ್ಲ ಹಾಗೂ ಮಾಡುವ ಅಗತ್ಯವೂ ಬಂದಿಲ್ಲ...ನಿಜ ಹೇಳಬೇಕು ಅಂದ್ರೆ ಸ್ಪಷ್ಟನೆ ನೀಡಲೂ ಏನೂ ಇಲ್ಲ. ಎರಡು ಕುಟುಂಬಗಳು ತುಂಬಾ ದುಖಃದಲ್ಲಿದ್ದಾಗ ನಮಗೆ ಸಪೋರ್ಟಿವ್ ಅಗಿರುವ ಬದಲಾಗಿ ನಮ್ಮಳಿ ಎಂದು ಅಲ್ಲಿಂದ ಏನೋ ಕೊಂಕು ಮಾಡುವುದು ಅಥವಾ ಅಲ್ಲಿಂದ ಏನೋ ತಿಳಿದುಕೊಂಡು ಬಂದು ನಮ್ಮ ಬಳಿ ಕೊಂಕು ಮಾಡುವುದು ..ಹೀಗೆ ಇರದರಿಂದ ಮಜಾ ನೋಡುವುದಕ್ಕೆ ಬಹಳಷ್ಟು ಜನರು ಕಾಯುತ್ತಿದ್ದರು ಪಾಪ ಅವರಿಗೆ ಏನೂ ಸಿಗಲಿಲ್ಲ. ಬಹಳ ಸಲ ಹೇಳಿರುವ ನನ್ನ ಮತ್ತು ಧ್ರುವ ಸರ್ಜಾ ಬಾಂಡ್ ಹೇಗಿದೆ ಎಂದು ಕೂತು ಬಿಡಿಸಿ ಜನರಿಗೆ ಅರ್ಥ ಮಾಡಿಸುವ ಅಗತ್ಯವಿಲ್ಲ ..ಏನೋ ಹೇಳ್ಕೋಬೇಕು ಜನರ ತಲೆಗೆ ಹಾಕಬೇಕು ಅಂತ ಏನೂ ಇಲ್ಲ ಏಕೆಂದು ಇದು ನನ್ನ ಪರ್ಸನಲ್ ವಿಚಾರ ನನ್ನ ಫ್ಯಾಮಿಲಿ ವಿಚಾರ' ಎಂದಿದ್ದಾರೆ ಮೇಘನಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.