
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗಕ್ಕೆ ಸಹೋದರರು ಮತ್ತು ಸಹೋದರಿಯರು ಎಂಟ್ರಿ ಕೊಡುತ್ತಿದ್ದರು. ಆಗ ಪವಿತ್ರಾ ಲೋಕೇಶ್ ನಂತರ ಆದಿ ಲೋಕೇಶ್ ಎಂಟ್ರಿ ಕೊಟ್ಟರು. ಯಾವ ಸಿನಿಮಾ ನೋಡಿದರೂ ಇವರಿಬ್ಬರು ಇರುತ್ತಿದ್ದರು ಅಷ್ಟರ ಮಟ್ಟಕ್ಕೆ ಕನ್ನಡ ಚಿತ್ರರಂಗವನ್ನು ರೂಲ್ ಮಾಡುತ್ತಿದ್ದರು. ಪವಿತ್ರಾ ನಟಿಸಿರುವ ಮತ್ತೆ ಮದುವೆ ಸಿನಿಮಾ ಹೇಗಿದೆ ನೋಡಿದ್ದೀರಾ ಎಂದು ಪ್ರಶ್ನೆ ಮಾಡಿದಾಗ ಆದಿ ಉತ್ತರ ಕೊಟ್ಟಿದ್ದಾರೆ.
'ನಾನು ಮತ್ತೆ ಮದುವೆ ಸಿನಿಮಾವನ್ನು ನೋಡಿಲ್ಲ. ನಮ್ಮ ಮನೆಯಲ್ಲಿ ಒಂದೇ ಟೆಬಲ್ ಮೇಲೆ ಕುಳಿತುಕೊಂಡು ಊಟ ಮಾಡುವುದು ಆಗ ನೀನು ಯಾವ ಸಿನಿಮಾ ಮಾಡುತ್ತಿರುವೆ ಯಾವ ಸಿನಿಮಾ ಚಿತ್ರೀಕರಣ ಮಾಡುತ್ತಿರುವ ಯಾವ ಸಿನಿಮಾ ರೆಜೆಕ್ಟ್ ಮಾಡಿದೆ ಅನ್ನೋ ಚರ್ಚೆ ಮಾಡುವುದಿಲ್ಲ. ಮನೆಯಲ್ಲಿ ಮನೆ ವಿಚಾರ ಮಾತನಾಡುತ್ತೀವಿ ಮನೆ ಊಟ ಮಾಡುತ್ತೀವಿ ಅಷ್ಟೇ ಹೊರತು ಸಿನಿಮಾ ಬಗ್ಗೆ ಮಾತನಾಡುವುದಿಲ್ಲ. ನೀನು ಆರ್ಟಿಸ್ಟ್ ಅಲ್ಲ ನಾನು ಆರ್ಟಿಸ್ಟ್ ಅಲ್ಲ ನಾನು ನನ್ನ ಅಪ್ಪ ಅಮ್ಮನ ಮಗ ನೀನು ನಿಮ್ಮ ಅಪ್ಪ ಅಮ್ಮನ ಮಗಳು ಅಷ್ಟಲೇ ಇರುತ್ತೆ ನಮ್ಮಬ್ಬಿರ ಸಂಬಂಧ' ಎಂದು ಆದಿ ಲೋಕೇಶ್ ಖಾಸಗಿ ಚಾನೆಲ್ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
450-600 ಸಿನಿಮಾಗಳಿಗೆ ಬಿಟ್ಟಿ ಪ್ರಚಾರ; ಮಜಾ ಟಾಕೀಸ್ ನಿಲಿಸುವುದಕ್ಕೆ ಕಾರಣ ಬಿಚ್ಚಿಟ್ಟ ಸೃಜನ್ ಲೋಕೇಶ್!
'ಅವಳ ಕೆಲಸದ ಬಗ್ಗೆ ನಾನು ಕೇಳಲ್ಲಿ ಆಕೆನೂ ಕೇಳಲ್ಲಿ ನಾವು ಜಸ್ಟ್ ಅಕ್ಕ ತಮ್ಮ. ಎಲ್ಲಾ ಬರ್ತಡೇಗಳನ್ನು ಮತ್ತು ಹಬ್ಬಗಳನ್ನು ಒಟ್ಟಿಗೆ ಆಚರಣೆ ಮಾಡುತ್ತೀವಿ ಆದರೆ ವೃತ್ತಿ ಜೀವನವನ್ನು ಮಾತನಾಡುವುದಿಲ್ಲ ಅಕ್ಕ ಮಾತ್ರವಲ್ಲ ನನ್ನ ಹೆಂಡತಿ ಕೂಡ ಸಿನಿಮಾ ಬಗ್ಗೆ ಮಾತನಾಡುವುದಿಲ್ಲ ಪ್ರಶ್ನೆ ಮಾಡುವಂತಿಲ್ಲ..ಯಾಕೆ ಈ ರೀತಿ ಹೇಳುತ್ತಿರುವೆ ಅಂದ್ರೆ ಸುಮಾರು 3 ತಿಂಗಳು ಕಾಲ ನಾವು ಚಿತ್ರೀಕರಣದಲ್ಲಿ ಬ್ಯುಸಿಯಾಗಿರುತ್ತೀವಿ ಮನೆಗೆ ಬಂದಾಗ ಒಬ್ಬರಿಗೊಬ್ಬರು ಸಮಯ ಕೊಡಬೇಕು ಅವ್ರು ನಮ್ಮನ್ನು ಮಿಸ್ ಮಾಡಿಕೊಳ್ಳುತ್ತಾರೆ ನಾವು ಅವ್ರುನ ಮಿಸ್ ಮಾಡಿಕೊಳ್ಳುತ್ತೀವಿ ಹೀಗಿರುವಾಗ ಮನೆಗೆ ಬಂದು ಸಿನಿಮಾ ಮಾತನಾಡುತ್ತಿದ್ದರೆ ಆ ಮೂರು ತಿಂಗಳು ಅವರು ಎದುರಿಸಿದ ಕಷ್ಟ ಸುಖಗಳು ಗೊತ್ತಾಗುವುದಿಲ್ಲ. ನಾವು ತಿಳಿದುಕೊಳ್ಳಬೇಕು ಅರ್ಥ ಮಾಡಿಕೊಳ್ಳಬೇಕು..ಒಂದು ಸೆಕೆಂಡ್ ಜೀವನದಲ್ಲಿ ಮಿಸ್ ಮಾಡಿಕೊಂಡರೆ ಮತ್ತೆ ಸಿಗುವುದಿಲ್ಲ ಫ್ಯಾಮಿಲಿ ಜೊತೆ ಹೆಚ್ಚಿಗೆ ಸಮಯ ಕಳೆಯಬೇಕು ಇದ್ದಾಗ ಸಮಯ ಕೊಡಿ ಇಲ್ಲದಿದ್ದಾಗ ಸುಮ್ಮನೆ ಯಾಕೆ ಮಿಸ್ ಮಾಡಿಕೊಳ್ಳುತ್ತೀರಾ?' ಎಂದು ಆದಿ ಲೋಕೇಶ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.