Meghana Raj Gets Emotional: ಚಿರು ತೋಳು ಬಳಸಿ ನನ್ನ ಮದ್ವೆ ಆಗ್ಲೇ ಬೇಕು ಎಂದಿದ್ದ ಮೇಘನಾ..!

Published : Jan 13, 2022, 07:11 PM ISTUpdated : Jan 13, 2022, 07:17 PM IST
Meghana Raj Gets Emotional: ಚಿರು ತೋಳು ಬಳಸಿ ನನ್ನ ಮದ್ವೆ ಆಗ್ಲೇ ಬೇಕು ಎಂದಿದ್ದ ಮೇಘನಾ..!

ಸಾರಾಂಶ

ಕಾರ್ಯಕ್ರಮದ ವೇದಿಕೆಯಲ್ಲೇ ಚಿರು ತೋಳು ಬಳಸಿ ನನ್ನ ಮದ್ವೆ ಆಗ್ಲೇ ಬೇಕು ಎಂದಿದ್ದ ಮೇಘನಾ ಶಾಕ್ ಆಗಿದ್ದ ಚಿರು ಹೇಳಿದ್ದೇನು ಗೊತ್ತಾ ? ಹಳೆಯ ನಗುವಿನ ವಿಡಿಯೋ ನೋಡಿ ಕಣ್ಣೀರಾದ್ರು ಮೇಘನಾ ರಾಜ್

ಮೇಘನಾ ರಾಜ್(Meghana Raj Sarja) ಈಗ ಡ್ಯಾನ್ಸ್ ಚಾಂಪಿಯನ್(Dance Champion) ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಚಿರು ಅಗಲಿಕೆಯ ನಂತರ ಇದೀಗ ಮತ್ತೆ ಶೋ ಒಂದರಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುಭಾಷಾ ನಟಿ ವೇದಿಕೆಯಲ್ಲಿ ಚಿರುನನ್ನು ನೆನಪಿಸಿಕೊಂಡಿದ್ದಾರೆ. ಪುಟ್ಟ ರಾಯನ್ ಸರ್ಜಾ ಆರೈಕೆಯಲ್ಲಿ ಬ್ಯುಸಿಯಾಗಿರುವ ನಟಿ ಕಂದನ ನಗುವಿನಲ್ಲಿ ನೋವನ್ನು ಮರೆತು ಖುಷಿ ಖುಷಿಯಾಗಿದ್ದಾರೆ. ಆದರೆ ಡ್ಯಾನ್ಸ್ ಚಾಂಪಿಯನ್ ವೇದಿಕೆಯಲ್ಲಿ ಮೇಘನಾ ಹಳೆಯ ವಿಡಿಯೋ ಒಂದನ್ನು ನೋಡಿ ಭಾವುಕರಾಗಿ ಕಣ್ಣೀರಾಗಿದ್ದಾರೆ. ತಮ್ಮ ಹಾಗೂ ಚಿರು ಸರ್ಜಾ ಅವರ ಹಳೆಯ ವಿಡಿಯೋದಲ್ಲಿ ಜೋಡಿ ಖುಷಿ ಖುಷಿಯಾಗಿ ಮಾತನಾಡುವುದನ್ನು ಕಾಣಬಹುದು. ಫನ್ ತುಂಬಿದ್ದ ವಿಡಿಯೋವನ್ನು ಮೇಘನಾ ಅವರಿಗಾಗಿ ವೇದಿಕೆಯಲ್ಲಿ ಪ್ರದರ್ಶಿಸಲಾಗಿತ್ತು.

ಈ ಶೋವನ್ನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ. ನನಗೆ ಡ್ಯಾನ್ಸ್ ಎಷ್ಟು ಇಷ್ಟವೂ ಇನ್ನೊಬ್ಬೆಉ ಡ್ಯಾನ್ಸ್ ಮಾಡೋದನ್ನು ನೋಡುವುದಕ್ಕೂ ತುಂಬಾ ಇಷ್ಟ. ತುಂಬಾ ದಿನ ಆದಮೇಲೆ ಈ ರೀತಿ ಶೋಗೆ ಬರುತ್ತಿದ್ದೇನೆ. ತುಂಬಾ ರಿಲ್ಯಾಕ್ಸ್ ಫೀಲಾಗುತ್ತಿದೆ ಎಂದಿದ್ದಾರೆ ನಟಿ. ನನ್ನ ಕಳೆದ ಎರಡು ವರ್ಷಗಳು ಚಾಲೆಂಜ್ ಅಲ್ಲ, ಅದನ್ನು ಮೀರಿ ನಾನು ದಾಟಿ ಬರುತ್ತೇನೆ ಎಂದಲ್ಲ. ಆದರೆ ಇದು ಯಾವಾಗಲೂ ನನ್ನ ಜೊತೆಗಿರುತ್ತದೆ ಎಂದಿದ್ದಾರೆ.

ಅಮ್ಮ ಅಂದ್ರೆ ಅಪ್ಪ ಅಪ್ಪ ಅಂತಾನೆ ರಾಯನ್..! ಭಾವುಕರಾದ ಮೇಘನಾ

ಇಲ್ಲಿ ಅಕುಲ್, ರಾಘು, ಮಯೂರಿ ಮ್ಯಾಮ್, ಕಂಟೆಸ್ಟೆಂಟ್ಸ್ ಇದ್ದಾರೆ. ಈ ಮೊಮೆಂಟ್ ನನಗೆ ಎಂಜಾಯ್ ಮಾಡಬೇಕು. ಚಿರು ಇದ್ದಿದ್ದರೆ ಅವರು ಇದನ್ನೇ ಮಾಡುತ್ತಿದ್ದರು. 2020 ನನಗೆ ಕಲಿಸಿರೋ ಪಾಠ ನಗು. ಚಿರು ಬೇಜಾರಾಗಲ್ಲಿರೋದಾಗಲಿ, ಅಳೋದಾಗಲಿ ಯಾರು ನೋಡಿರೋಕೆ ಸಾಧ್ಯವಿಲ್ಲ. ಅವರು ಯಾವಾಗಲೂ ನಗುತ್ತಲೇ ಇರುತ್ತಿದ್ದರು. ಖುಷಿ ಹಂಚುತ್ತಿದ್ದರು, ನನ್ನ ಪತಿ ಹೀಗಿದ್ದರು ಅಂದರೆ ನಾನೂ ಹಾಗೆ ಇರಬೇಕು ಅಲ್ವಾ ಎಂದಿದ್ದಾರೆ ಮೇಘನಾ.

ಚಿರುನ ಪಕ್ಕ ಕುಳಿತ ಮೇಘನಾ ಚಿರು ತೋಳು ಹಿಡಿದು ನೀವು ನನ್ನ ಮದ್ವೆ ಆಗ್ಲೇ ಬೇಕು ಎಂದು ಎರಡು ಬಾರಿ ಹೇಳಿದ್ದು ಚಿರು ಶಾಕ್ ಆಗಿ ಅಯಯ್ಯೋ ನೋಡೋರು ಏನ್ ಅನ್ಕೊಳ್ತಾರೆ ಎಂದು ಜೋರಾಗಿ ನಗುವುದನ್ನು ಕಾಣಬಹುದು. ಮೇಘನಾ ಹಾಗೂ ಚಿರು ಫನ್ ಮೊಮೆಂಟ್‌ಗಳು ಶಾರ್ಟ್‌ ವಿಡಿಯೋದಲ್ಲಿ ಸೆರೆಯಾಗಿದ್ದು ಇದನ್ನು ನೋಡಿದ ಮೇಘನಾ ಭಾವುಕರಾಗಿ ಕಣ್ಣೀರಾಗಿದ್ದಾರೆ.

ಚಿರು ಫ್ಯಾಮಿಲಿ ಫೋಟೋ ಚಿತ್ರ ಬಿಡಿಸಿದ ಫ್ಯಾನ್..! ಹೀಗಿತ್ತು ಮೇಘನಾ ರಿಯಾಕ್ಷನ್

ಬಹುಭಾಷಾ ನಟಿ ಮೇಘನಾ ರಾಜ್ ಸರ್ಜಾ ಈಗ ಮುದ್ದು ಮಗ ರಾಯನ್ ರಾಯ್ ಸರ್ಜಾನ ಆರೈಕೆಯಲ್ಲಿ ದಿನಕಳೆಯುತ್ತಿದ್ದಾರೆ. ಮುದ್ದು ಮಗನ ಆಟ, ತುಂಟಾಟ ನೋಡುತ್ತಾ ಅಭಿಮಾನಿಗಳೊಂದಿಗೂ ಇದನ್ನು ಶೇರ್ ಮಾಡುತ್ತಿರುತ್ತಾರೆ. ಅಪ್ಪನ ತರನೇ ತುಂಬಾ ತರ್ಲೆ ಮಾಡ್ತಾನಂತೆ ರಾಯನ್ ರಾಯ್ ಸರ್ಜಾ. ಯಾವಾಗಲೂ ಅಮ್ಮ ಅನ್ನು ಅಮ್ಮ ಅನ್ನು ಎಂದರೆ ಪುಟ್ಟ ಕಂದ ಅಪ್ಪ ಅಪ್ಪ ಎನ್ನುತ್ತಾನೆ ಎಂದಿದ್ದಾರೆ ನಟಿ. ಚಿರು ಬಗ್ಗೆ ಆಲೋಚಿಸಿದಾಗ ಅಲ್ಲಿ ಅವನಲ್ಲಿ ಯಾವಾಗಲೂ ನಗು ಇತ್ತು. ಇವತ್ತು ಎಲ್ಲರೂ ಚಿರುನನ್ನು ನೆನಪಿಸಿಕೊಳ್ಳುವಾಗ ಅವನ ನಗುವನ್ನೇ ನೆನಪಿಸಿಕೊಳ್ಳುತ್ತಾರೆ. ಖುಷಿಯನ್ನೇ ಹಂಚುತ್ತಾರೆ. ಮುಂದೆ ಏನಾಗುತ್ತೋ ಆಗಲಿ, ಹಿಂದೇನಾಯ್ತೋ ನಮಗೆ ಬೇಕಾಗಿಲ್ಲ. ಈಗಿನ ಕ್ಷಣ ಖುಷಿಯಾಗಿರಬೇಕು ಎನ್ನುತ್ತಿದ್ದ ಚಿರು ನೆನೆದು ನಟಿ ಭಾವುಕರಾಗಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ವಿಡಿಯೋ ಇದರಲ್ಲಿ ಮೇಘನಾ ಬ್ಲಾಕ್‌ಔಟ್‌ಫೀಟ್‌ನಲ್ಲಿರುವುದನ್ನು ಕಾಣಬಹುದು. ಹಾಗೆಯೇ ಚಿರು ಮೇಘನಾರ ತ್ರೋನ್ಯಾಕ್ ವಿಡಿಯೋವನ್ನು ತೋರಿಸಲಾಗಿದ್ದು ಇದು ವೀಕ್ಷಕನ್ನೂ ಭಾವುಕರಾಗಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್‌ ಡೆವಿಲ್‌ ಸಿನಿಮಾದ ಫಸ್ಟ್ ಡೇ ಫಸ್ಟ್‌ ಶೋ ಹೌಸ್‌ಫುಲ್‌: ಎಷ್ಟು ಕೋಟಿ ಕಲೆಕ್ಷನ್ ಆಗಿದೆ ಗೊತ್ತಾ?
ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!