ನಾನು ತಪ್ಪು ಮಾಡಿದ್ದು ಹೌದು, ಅದಕ್ಕೆ ಜನರೂ ದುರ್ವರ್ತನೆ ತೋರಿದ್ರು: Huchcha Venkat

By Suvarna NewsFirst Published Jan 13, 2022, 4:10 PM IST
Highlights

ಹೊಸ ಸಿನಿಮಾ ಅನೌನ್ಸ್‌ ಮಾಡಿದ ಹುಚ್ಚ ವೆಂಕಟ್. ತಮ್ಮ ಬದಲಾವಣೆ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. 

ಭಾರತೀಯ (India Films) ಸಿನಿಮಾಗಳಲ್ಲಿ ಪ್ರಚಾರಕ್ಕೆ ಮತ್ತು ಹಣಕ್ಕೆ ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ತೋರಿಸಬಾರದು. ಅದು ಬ್ಯಾನ್ ಆಗಬೇಕು ಎಂದು ನಟ ಹುಚ್ಚ ವೆಂಕಟ್ (Huccha Venkat) ಪದೇ ಪದೇ ಧ್ವನಿ ಎತ್ತಿರುವುದರ ಬಗ್ಗೆ ನಾನು ಈಗಾಗಲೇ ಸಾಕಷ್ಟು ಬಾರಿ ನೋಡಿದ್ದೀವಿ. ಹೆಣ್ಣು ಮಕ್ಕಳನ್ನು ಗೌರವಿಸಬೇಕು, ಸಿನಿಮಾದಲ್ಲಿ ಒಳ್ಳೆಯ ಸಂದೇಶ ಇರಬೇಕು. ಇಡೀ ಕುಟುಂಬ ಸಿನಿಮಾ (Family Film) ವೀಕ್ಷಿಸಬೇಕು, ಎನ್ನುವ ಉದ್ದೇಶದಿಂದ ಸಿನಿಮಾ ನಿರ್ದೇಶನ ಕೂಡ ಮಾಡಿದ್ದರು.ಇದೀಗ ಮತ್ತೊಂದು ಸಿನಿಮಾ ಅನೌನ್ಸ್ ಮಾಡುವ ಮೂಲಕ ವೆಂಕಟ್ ಕಮ್ ಬ್ಯಾಕ್ ಮಾಡುತ್ತಿದ್ದಾರೆ. 

ಪ್ರೆಸ್‌ ಕ್ಲಬ್‌ನಲ್ಲಿ (Press Club) ಸುದ್ದಿಗೋಷ್ಠಿ ನಡೆಸಿದ ವೆಂಕಟ್‌ ಅವರು ತಮ್ಮ ತಂದೆಯ ಆಸೆ ಬಗ್ಗೆ ಹಂಚಿಕೊಂಡು, ಚಿತ್ರದ ಟೈಟಲ್  'ತಿಕ್ಲ ಹುಚ್ಚ ವೆಂಕಟ್' (Thikla Huccha Venkat) ಎಂದು  ಅನೌನ್ಸ್ ಮಾಡಿದ್ದಾರೆ.  ವೆಂಕಟ್ ಅವರ ಸಿನಿಮಾ ಟೈಟಲ್‌ಗಳು ತುಂಬಾನೇ ವಿಭಿನ್ನವಾಗಿರುತ್ತದೆ. ಬಿಗ್ ಬಾಸ್‌ (Bigg Boss) ಮನೆಯಲ್ಲಿದ್ದಾಗ, ಹೊರಗಿನ ಜನರ ಜೊತೆ ವರ್ತಿಸಿರುವ ಅವರ ಸಾಕಷ್ಟು ವಿಚಾರಗಳು ಕೇಳಿ ಬಂದಿದ್ದವು. ವೆಂಕಟ್ ಹುಚ್ಚ ಅಗಿದ್ದಾರೆ, ಯಾರಿಗೋ ಹೊಡೆದಿದ್ದಾರೆ, ಅಲ್ಲಿ ಏನೋ ಕಿರಿಕ್ ಮಾಡಿಕೊಂಡರಂತೆ, ಅದು ಇದು ಅಂತ.....'ನಾನು ಬದಲಾಗಿದ್ದೀನಿ' ಎಂದು ಹೇಳುವ ಮೂಲಕ ಎಲ್ಲರ ಅಪವಾದಗಳಿಗೆ ಬ್ರೇಕ್ ಹಾಕಿದ್ದಾರೆ. 

'ನನ್ನ ವರ್ತನೆ ಕೆಟ್ಟದಾಗಿತ್ತು. ಹಾಗಾಗಿ ಸಾರ್ವಜನಿಕರೂ ನನ್ನೊಟ್ಟಿಗೆ ಕೆಟ್ಟದಾಗಿ ವರ್ತಿಸಿದ್ದರು. ಆದರೆ ಅವುಗಳನ್ನೆಲ್ಲ ನೆನಪು ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ. ತಪ್ಪು ಮಾಡುವವರ ಮುಂದೆ ಈ ಹಿಂದೆ ಇದ್ದಂತೆಯೇ ಒರಟಾಗಿಯೇ ಇರುತ್ತೇನೆ. ಆದರೆ ಪ್ರೀತಿಸುವವರ ಮುಂದೆ ಮಗುವಿನಂತೆ ಇರುತ್ತೇನೆ. ಜನರು ನನ್ನನ್ನು ಪ್ರೀತಿಸುತ್ತಿದ್ದಾರೆ. ಹಾಗಿರುವಾಗ ನಾನೇಕೆ ಯಾರ ಮೇಲಾದರೂ ಕೋಪ (Anger) ಮಾಡಿಕೊಳ್ಳಲಿ?' ಎಂದು ವೆಂಕಟ್ ಮಾತನಾಡಿದ್ದಾರೆ. 

ನನ್ನ ತಂದೆಗೆ ಹುಷಾರಿಲ್ಲ, ಬಾಡಿಗೆ ಹಣವನ್ನು ನಟಿ ವಿಜಯಲಕ್ಷ್ಮಿಗೆ ನೀಡುವೆ: ಹುಚ್ಚ ವೆಂಕಟ್

ಮನೆಯವರನ್ನು ಈ ಹಿಂದಿಗಿಂತ ಹೆಚ್ಚು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡ ವೆಂಕಟ್ ಲಾಕ್‌ಡೌನ್‌ಗೆ (Lockdown) ಕ್ರೆಡಿಟ್ ನೀಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ಮನೆಯವರುನ್ನು ಅರ್ಧ ಮಾಡಿಕೊಳ್ಳಲು ಸುಲಭವಾಯಿತು ಎಂದಿದ್ದಾರೆ. 'ತಿಕ್ಲ ಹುಚ್ಚ ವೆಂಕಟ್' ಸಿನಿಮಾವನ್ನು ಕಡಿಮೆ ಬಜೆಟ್‌ನಲ್ಲಿ (Small budget films) ನಿರ್ಮಾಣ ಮಾಡಿ ಚಿತ್ರಮಂದಿರ ಮತ್ತು ಓಟಿಟಿಯಲ್ಲಿ ಬಿಡುಗಡೆ ಮಾಡುವ ಪ್ಲ್ಯಾನ್ ಮಾಡುತ್ತಿದ್ದಾರಂತೆ.

ಯಾನ (Yaana), ಮಾಯಾಬಜಾರ್ (Maya Bajar), ನವಮಿ, ಅಂತಿಮ ಸತ್ಯ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡ ನಂತರ 'ಲೈಫ್ ಓಕೆ' (Life Ok) ಎಂದು ಖಾಸಗಿ ಟಿವಿ ಕಾರ್ಯಕ್ರಮಗಳಲ್ಲಿ ಸ್ಪರ್ಧಿಸಿದ್ದರು. ಅದಲ್ಲದೆ ಅನೇಕ ಯುಟ್ಯೂಬ್ ಚಾನೆಲ್‌ಗಳಲ್ಲಿ (Youtube Channel) ಸಂದರ್ಶನ ಕೊಟ್ಟಿದ್ದರು. 'ಜನರು ತಮ್ಮ ಮನೆಯ ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸಿದ್ದಾರೆ. ನಾನು ಕೇಳದೇ ಹೋದರೂ, ಅಗತ್ಯವಿದ್ದಾಗ ಅವರು ಹಣ ನೀಡಿದ್ದಾರೆ,' ಎಂದು ವೆಂಕಟ್ ಭಾವುಕರಾಗಿ ಮಾತನಾಡಿದ್ದಾರೆ. 

2020ರಲ್ಲಿ ಶ್ರೀರಂಗಪಟ್ಟಣ ಮತ್ತು ಮಡಿಕೇರಿಯಲ್ಲಿ (Madikeri) ಹುಚ್ಚ ವೆಂಕಟ್ ಬೀದಿ ಬೀದಿಯಲ್ಲಿ ಅಲೆದಾಡಿ ಸರ್ವಜನಿಕರ ಜೊತೆ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಅವರು ಮಾನಸಿಕ ಅಸ್ವಸ್ಥರಂತೆ ನಡೆದುಕೊಳ್ಳುತ್ತಿದ್ದೆಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಯಾರೂ ವೆಂಕಟ್ ಅವರಿಗೆ ಹೊಡೆಯಬೇಡಿ, ಎಂದು ಚಿತ್ರರಂಗದ ಸ್ಟಾರ್ ನಟರು ಮನವಿ ಮಾಡಿಕೊಂಡಿದ್ದರು. 

ಲಾಕ್‌ಡೌನ್‌ ಅವಧಿಯಲ್ಲಿ ಮಂಗಳೂರಿನ (Mangalore) ಮೀನು ಮಾರಾಟಗಾರರಿಗೆ ತೊಂದರೆ ಆಗಬಾರದು ಎಂದು ಫುಡ್‌ ಕಿಟ್ ವಿತರಣೆ ಮಾಡಿದ್ದರು. ಇದರ ಜೊತೆ ನಟಿ ವಿಜಯಲಕ್ಷ್ಮಿ (Vijaya Lakshmi) ಅವರ ತಾಯಿ ಮತ್ತು ತಂಗಿ ಆರೋಗ್ಯ ಚಿಕಿತ್ಸೆಗೆಂದು ತಮ್ಮ ಮನೆಯ ಒಂದು ತಿಂಗಳ ಬಾಡಿಯನ್ನು ಅವರಿಗೆ ನೀಡುವುದಾಗಿಯೂ ಹೇಳಿ, ತಮ್ಮ ಹೃದಯ ಶ್ರೀಮಂತಿಕೆಯನ್ನು ತೋರಿಸಿದ್ದರು ವೆಂಕಟ್.

click me!