
ಚಿರು ಪತ್ನಿ ಮೇಘನಾ ರಾಜ್ ಸರ್ಜಾ ಚೆಕ್ ಅಪ್ ಮುಗಿಸಿದ್ದಾರೆ. ಮೇಘನಾ ರಾಜ್ ಚಿಕಿತ್ಸೆ ಮುಗಿಸಿ ಜೆಪಿ ನಗರದ ಮನೆಯತ್ತ ಹೊರಟಿದ್ದಾರೆ. ನಟಿಯ ಜೊತೆ ಸುಂದರ್ ರಾಜ್ ಹಾಗೂ ಪ್ರಮಿಳಾ ಜೋಷಾಯಿ ಮತ್ತು ಗೆಳತಿ ಅನನ್ಯ ಕೂಡಾ ಇದ್ದರು.
ಮೇಘನಾ ಜೊತೆಯಲ್ಲಿ ಆಸ್ಪತ್ರೆಗೆ ಆಗಮಿಸಿದ ಮಲೆಯಾಳಂ ನಟಿ ಅನನ್ಯ ಮೇಘನಾ ಸೀಮಂತದಲ್ಲೂ ಭಾಗಿಯಾಗಿದ್ದರು. ಮೇಘನಾ ನಾಳೆ ಡೆಲಿವರಿಗಾಗಿ ಆಸ್ಪತ್ರೆಗೆ ದಾಖಲಾಗಲಿದ್ದಾರೆ.
'ಚಿರು, ನಿನ್ನ ಹಾಗೆ ನಮ್ಮ ಮಗುವನ್ನು ಬೆಳೆಸ್ತೀನಿ' ಮೇಘನಾ ಭಾವುಕ ಮಾತು, ವಿಡಿಯೋ ವೈರಲ್
ಸಮಯ ನಿಗದಿ ಮಾಡಿಕೊಂಡು ಆಸ್ಪತ್ರೆಗೆ ಬರಲು ಸಿದ್ದತೆ ಮಾಡಿಕೊಳ್ತಿರೋ ಕುಟುಬಂಸ್ಥರು ಇನ್ನೆರಡು ದಿನಗಳಲ್ಲಿ ಡೆಲಿವರಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆಸ್ಪತ್ರೆ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು, ಮೇಘನಾಗೆ ಚಿಕಿತ್ಸೆ ಡಾ ಮಾಧುರಿ ಸುಮಂತ್ ಚಿಕಿತ್ಸೆ ನೀಡುತ್ತಿದ್ದು ಇನ್ನೆರಡು ದಿನದಲ್ಲಿ ಡೆಲಿವರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಡಾ ಮಾಧುರಿ ಸುಮಂತ್ ಚಿರಂಜೀವಿ ಸರ್ಜಾ ಸ್ನೇಹಿತೆಯೂ ಹೌದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.