
ತಾಯ್ತನದ ಹೊಸ್ತಿಲಲ್ಲಿರುವ ಮೇಘನಾ ರಾಜ್ ಭಾವನಾತ್ಮಕ ವೀಡಿಯೋವೊಂದನ್ನು ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎರಡು ನಿಮಿಷದ ಈ ವೀಡಿಯೋದಲ್ಲಿ, ತನ್ನ ಬಾಲ್ಯ, ವಿವಾಹದ ಆಲ್ಬಂ ತಿರುವುತ್ತಾ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಆಲ್ಬಂ ನೋಡಿ ಮಾತನಾಡಿದ ಮೇಘನಾ, ‘ಆಲ್ಬಂನ ಒಂದೊಂದು ಫೋಟೋವೂ ನನ್ನ ಬಾಲ್ಯವನ್ನು ನೆನಪಿಸುತ್ತದೆ. ಚಿರುವಿನ ಜೊತೆಗೆ ಕಳೆದ ಕ್ಷಣಗಳನ್ನೂ. ನನ್ನ ಪ್ರೀತಿಯ ಚಿರು, ಬದುಕಿನ ಸಂತಸದ ಕ್ಷಣಗಳನ್ನು ನಿನ್ನ ಜೊತೆಗೆ ಕಳೆದಿದ್ದೇನೆ. ಆ ಕ್ಷಣಗಳೇ ನಿತ್ಯ ಬದುಕಿಗೆ ಸ್ಫೂರ್ತಿ ತುಂಬುತ್ತದೆ ಎಂದಿದ್ದಾರೆ.
ಮೇಘನಾ ರಾಜ್‌ಗೆ ಸರ್ಪ್ರೈಸ್ ಬೇಬಿ ಶವರ್ ಮಾಡಿಸಿದ ಧ್ರುವ; ಫೋಟೋ ನೋಡಿ!
ನೀನಿದ್ದಾಗ ಏನೂ ಕೊರತೆಯಿಲ್ಲದಂತೆ ನೋಡಿಕೊಂಡಿದ್ದಿ. ಆ ನೆನಪುಗಳೇ ನನಗೀಗ ಬದುಕಾಗಿದೆ. ನಿನ್ನ ದೈವಿಕ ಆಶೀರ್ವಾದದೊಂದಿಗೆ ಈಗ ನನ್ನ ತಾಯ್ತನದ ಜರ್ನಿ ಸಾಗುತ್ತಿದೆ. ಈ ಹೊತ್ತಲ್ಲಿ ನಿನಗೆ ನಾನೊಂದು ಪ್ರಾಮಿಸ್ ಮಾಡುತ್ತೇನೆ ಎಂದಿದ್ದಾರೆ.
ನಮ್ಮ ಮಗುವನ್ನು ಮಾನವೀಯ ವ್ಯಕ್ತಿಯಾಗಿ ಬೆಳೆಸುತ್ತೇನೆ, ನಿನ್ನ ಹಾಗೆಯೇ. ಮತ್ತೆ ಹೊಸ ಬದುಕಿಗೆ ಹೊಸ ಕನಸಿನೊಂದಿಗೆ ಮುಂದಡಿ ಇಡುತ್ತೇನೆ’ ಎನ್ನುವ ವೀಡಿಯೋ ಈಗ ವೈರಲ್ ಆಗಿದೆ. ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನ ಈ ವೀಡಿಯೋ ನೋಡಿ ಮೇಘನಾಗೆ ಶುಭ ಹಾರೈಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.