
ಚಿತ್ರಮಂದಿರಗಳಿಗೆ ಮಾತ್ರವಲ್ಲ, ಪಿವಿಆರ್ ಐನಾಕ್ಸ್‌ನಂತಹ ಮಲ್ಟಿಪ್ಲೆಕ್ಸ್‌ಗಳಿಗೂ ಸ್ಟಾರ್‌ಗಳ ಸಿನಿಮಾ ಬೇಕು ಅನ್ನುವುದಕ್ಕೆ ಪುರಾವೆ ಸಿಕ್ಕಿದೆ. ಕಳೆದ ಕೆಲವು ವಾರಗಳಿಂದ ಕನ್ನಡದ ಯಾವುದೇ ಸ್ಟಾರ್ ಸಿನಿಮಾ ಬಿಡುಗಡೆ ಆಗಿಲ್ಲ. ಆದ್ದರಿಂದ ಹಲವಾರು ಚಿತ್ರಮಂದಿರಗಳು ಪ್ರೇಕ್ಷಕರಿಲ್ಲದೆ ಖಾಲಿ ಹೊಡೆಯುತ್ತಿವೆ. ವಿಶೇಷವೆಂದರೆ ಮಲ್ಟಿಪ್ಲೆಕ್ಸ್‌ಗಳಿಗೂ ಸ್ಟಾರ್ ಸಿನಿಮಾಗಳಿಲ್ಲದ ಬಿಸಿ ತಾಗಿದೆ. ಅದಕ್ಕಾಗಿ ಪಿವಿಆರ್, ಐನಾಕ್ಸ್‌ಗಳು ಮರಳಿಗೆ ಸ್ಟಾರ್ ಸಿನಿಮಾಗಳ ಕಡೆಗೆ ಮುಖ ಮಾಡಿವೆ. ಸ್ಟಾರ್ ಸಿನಿಮಾಗಳ ಮರು ಪ್ರದರ್ಶನ ಮೂಲಕವಾದರೂ ಪ್ರೇಕ್ಷಕರನ್ನು ಮಲ್ಟಿಪ್ಲೆಕ್ಸ್‌ಗಳಿಗೆ ಕರೆತರಬೇಕು ಎಂದು ಹೊರಟಿದೆ.
ಈ ಪ್ರಯುಕ್ತ ಪಿವಿಆರ್ ಹಾಗೂ ಐನಾಕ್ಸ್‌ನಲ್ಲಿ ಮೇ 19ರಿಂದ 25ರವರೆಗೆ ಕನ್ನಡದ ಸೂಪರ್ ಹಿಟ್ ಚಿತ್ರಗಳ ಮರು ಪ್ರದರ್ಶನ ನಡೆಯಲಿದೆ. ರು.99 ಟಿಕೆಟ್ ದರ ನಿಗದಿಗೊಳಿಸಲಾಗಿದೆ.
ಪುನೀತ್ ರಾಜ್‌ಕುಮಾರ್ ನಟನೆಯ ‘ರಾಜಕುಮಾರ’ ಮತ್ತು ‘ಗಂಧದಗುಡಿ’, ಯಶ್ ಅಭಿನಯದ ‘ಕೆಜಿಎಫ್ 1’ ಮತ್ತು ‘ಮಾಸ್ಟರ್ ಪೀಸ್’, ಶ್ರೀಮುರಳಿ, ಶಿವಣ್ಣ ಕಾಂಬಿನೇಶನ್‌ನ ‘ಮಫ್ತಿ’, ರಾಜ್ ಬಿ ಶೆಟ್ಟಿನಿರ್ದೇಶನ, ನಟನೆಯ ‘ಗರುಡ ಗಮನ ವೃಷಭ ವಾಹನ’ ಚಿತ್ರಗಳು ಈಗ ಪ್ರದರ್ಶನಗೊಳ್ಳುತ್ತಿವೆ. ಬುಕ್ ಮೈ ಶೋನಲ್ಲಿ ಟಿಕೆಟ್‌ಗಳು ಲಭ್ಯವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.