ನಟಿಯಾಗಿ ನೋಡಿ, ಮನೆಯೊಳಗೆ ಇಣುಕಬೇಡಿ: ಪವಿತ್ರಾ ಲೋಕೇಶ್‌

Published : May 19, 2023, 10:50 AM ISTUpdated : May 19, 2023, 10:58 AM IST
ನಟಿಯಾಗಿ ನೋಡಿ, ಮನೆಯೊಳಗೆ ಇಣುಕಬೇಡಿ: ಪವಿತ್ರಾ ಲೋಕೇಶ್‌

ಸಾರಾಂಶ

ನಾವಿಬ್ಬರೂ ಲಿವ್‌ಇನ್‌ ರಿಲೇಶನ್‌ಶಿಪ್‌ನಲ್ಲಿದ್ದೀವಿ ಎಂದು ಮತ್ತೆ ಮದುವೆ ಸಿನಿಮಾ ಪ್ರೆಸ್‌ಮೀಟ್‌ನಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಮಾತನಾಡಿದ್ದಾರೆ. ಅಲ್ಲದೆ ನಟಿಯಾಗಿ ನೋಡಿ ಎಂದು ಪವಿತ್ರಾ ಮನವಿ ಮಾಡಿಕೊಂಡಿದ್ದಾರೆ. 

ಸಾಕಷ್ಟುವಿವಾದ ಸೃಷ್ಟಿಸಿದ್ದ ಪವಿತ್ರಾ ಲೋಕೇಶ್‌ ಹಾಗೂ ನರೇಶ್‌ ಜೋಡಿ ‘ಮತ್ತೆ ಮದುವೆ’ ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಮೇ 26ಕ್ಕೆ ಈ ಚಿತ್ರ ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ರಿಲೀಸ್‌ ದಿನಾಂಕವನ್ನು ಶೀಘ್ರ ಘೋಷಿಸುವುದಾಗಿ ಚಿತ್ರತಂಡ ತಿಳಿಸಿದೆ. ಈ ಸಂಬಂಧ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪವಿತ್ರಾ ಲೋಕೇಶ್‌ ಹಾಗೂ ನರೇಶ್‌ ಅನೇಕ ವಿಚಾರ ಹಂಚಿಕೊಂಡರು.

ಪವಿತ್ರಾ ಲೋಕೇಶ್‌, ‘ನನ್ನ ತಂದೆ ಕನ್ನಡ ಚಿತ್ರರಂಗದಲ್ಲಿದ್ದವರು. ಅಣ್ಣಾವ್ರು ಅಪ್ಪನಿಗೆ ಕೊಟ್ಟಬೆಳ್ಳಿ ಲೋಟದಲ್ಲಿ ಹಾಲು ಕುಡಿದು ಬೆಳೆದವಳು ನಾನು. ತಂದೆ ತೀರಿಕೊಂಡ ಮೇಲೆ ನಾನು ನಟಿಸಲು ಶುರು ಮಾಡಿದೆ. ತಾಯಿ ಶಿಕ್ಷಕಿ. ಸುಶಿಕ್ಷಿತ ಕುಟುಂಬ ನಮ್ಮದು. ಅನೇಕ ಪಾತ್ರಗಳನ್ನು ಮಾಡುತ್ತಾ ಬಿಡುವಿಲ್ಲದೆ ದುಡಿದು ಹಣ ಸಂಪಾದನೆ ಮಾಡಿದ್ದೇನೆಯೇ ಹೊರತು ಇನ್ನೊಬ್ಬರನ್ನು ದೋಚಿಲ್ಲ. ಆ ಬುದ್ಧಿ ನನಗಿಲ್ಲ. ಇತ್ತೀಚಿನ ಬೆಳವಣಿಗೆಗಳಲ್ಲಿ ಕೆಲವರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಒಂದಿಷ್ಟುಮಂದಿ ನನ್ನ ಹೆಗಲ ಮೇಲೆ ಗನ್‌ ಇಟ್ಟು ನರೇಶ್‌ ಅವರನ್ನ ಶೂಟ್‌ ಮಾಡೋ ಪ್ರಯತ್ನ ಮಾಡಿದರು. ಇದು ದ್ಜುದೃಷ್ಟ. ನನ್ನನ್ನು ನಟಿಯಾಗಿ ನೋಡಿದರೆ ಸಾಕು, ಕದ್ದು ನನ್ನ ಮನೆಯೊಳಗೆ ಇಣುಕುವ ಪ್ರಯತ್ನ ಬೇಡ’ ಎಂದರು.

ದೇವ್ರು ರಾಜರು 2-3 ಮದ್ವೆ ಆಗಿಲ್ವಾ?; ಪವಿತ್ರಾ ಲೋಕೇಶ್‌ 3ನೇ ಮದುವೆ ಗಾಸಿಪ್‌ಗೆ ಸಿಕ್ಕ ಉತ್ತರವಿದು

‘ನಮ್ಮಿಬ್ಬರ ಬಗೆಗೆ ಎದ್ದಿರುವ ವಿವಾದದ ಬಗ್ಗೆ ಸ್ಪಷ್ಟನೆ ಕೊಡಬೇಕಿದ್ದರೆ ಒಂದು ಯೂಟ್ಯೂಬ್‌ ವೀಡಿಯೋ ಮಾಡಿದ್ದರೆ ಸಾಕಿತ್ತು. ಕೋಟಿಗಟ್ಟಲೆ ಸುರಿದು ಸಿನಿಮಾ ಮಾಡೋ ರಿಸ್‌್ಕ ತೆಗೆದುಕೊಳ್ಳಬೇಕಿರಲಿಲ್ಲ. ಮತ್ತೆ ಮದುವೆ ಸಿನಿಮಾಕ್ಕೂ ನಮ್ಮ ವೈಯುಕ್ತಿಕ ಬದುಕಿಗೂ ಸಂಬಂಧ ಇಲ್ಲ. ವೈಯುಕ್ತಿಕ ವಿಚಾರಕ್ಕೆ ಬರೋದಾದ್ರೆ ಜೊತೆಯಾಗಿ ಬಾಳ್ವೆ ಮಾಡಲು ಸಂಪ್ರದಾಯಬದ್ಧ ಮದುವೆಯೇ ಆಗಬೇಕಿಲ್ಲ. ನಾವಿಬ್ಬರೂ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದೇವೆ’ ಎಂದರು ನರೇಶ್‌. ‘ಮತ್ತೆ ಮದುವೆ ಸಿನಿಮಾ ಆಧುನಿಕ ಕಾಲಘಟ್ಟದ ವೈವಾಹಿಕ ಸಂಬಂಧಗಳ ಸಂಕೀರ್ಣತೆಯ ಬಗ್ಗೆ ಇದೆ’ ಎಂದೂ ಅವರು ಈ ವೇಳೆ ಹೇಳಿದರು.ನಿರ್ದೇಶಕ ಎಂ ಎಸ್‌ ರಾಜು ಸಿನಿಮಾ ಬಗ್ಗೆ ಮಾತನಾಡಿದರು. ಸಾಹಿತ್ಯ ಬರೆದ ವರದರಾಜು ಚಿಕ್ಕಬಳ್ಳಾಪುರ, ಗಾಯಕ ವಾಸುಕಿ ವೈಭವ್‌ ಇದ್ದರು.

ಪವಿತ್ರಾ ಲೋಕೇಶ್ 'ಮತ್ತೆ ಮದುವೆ'?; ನರೇಶ್‌ ಜೊತೆ ಲೀವಿಂಗ್‌ ರಿಲೇಶನ್‌ಶಿಪ್‌ ನಿಜವೇ?

ಟ್ರೈಲರ್‌ನಲ್ಲ ಸುಚೇಂದ್ರ ಪ್ರಸಾದ್ ವಿಲನ್ ರೀತಿ ತೋರಿಸಿದ್ದಾರಾ?
ಟಾಲಿವುಡ್ ನಟ ನರೇಶ್ ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್ ನಟಿಸಿರುವ ಮತ್ತೆ ಮದುವೆ ಸಿನಿಮಾದ ಟ್ರೇಲರ್‌ನಲ್ಲಿ ತಮ್ಮದೇ ರಿಯಲ್ ಲೈಫ್ ಘಟನೆಯನ್ನು ಈ ಜೋಡಿ ಸಿನಿಮಾ ಮಾಡಿದಂತೆ ಕಾಣುತ್ತಿದೆ. ಈ ಹಿಂದೆ ರಿಲೀಸ್ ಆಗಿದ್ದ ಟೀಸರ್ ಬಹಳ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಈಗ ಬಿಡುಗಡೆಯಾಗಿರುವ ಮತ್ತೆ ಮದುವೆ ಟ್ರೈಲರ್ ಸಂಚಲನ ಸೃಷ್ಟಿಸಿದ್ದು ಸುಳ್ಳಲ್ಲ. ಪವಿತ್ರಾ ಲೋಕೇಶ್ ಹಾಗೂ ನರೇಶ್ ನಡುವೆ ಪ್ರೀತಿ ಹುಟ್ಟಲು ಕಾರಣವೇನು? ಈ ಪ್ರೀತಿಗೆ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿಯೇ ವಿಲನ್ ಆಗಿದ್ರಾ? ಈ ಮೂವರ ಜಗಳ ಹಾದಿ ಬೀದಿ ರಂಪವಾಗಿದ್ದು. ಮೈಸೂರು ಹೋಟೆಲ್‌ವೊಂದರಲ್ಲಿ ಪವಿತ್ರಾ-ನರೇಶ್ ಜೊತೆಗಿದ್ದ ರೂಮ್ ಮುಂದೆ ರಮ್ಯಾ ಮಾಡಿದ ಹೈಡ್ರಾಮಾ ಎಲ್ಲವೂ ಈ ಚಿತ್ರದಲ್ಲಿ ದೃಶ್ಯ ರೂಪದಂತೆ ಕಾಣಿಸಿದ್ದು ಸ್ಪಷ್ಟವಾಗುತ್ತದೆ.. ಈ ವಯಸ್ಸಿನಲ್ಲಿ ನರೇಶ್ ಮತ್ತೆ ಪ್ರೀತಿಯಲ್ಲಿ ಬಿದ್ದಿರುವ ಬಗ್ಗೆ ಜನ ಹೀಯಾಳಿಸುತ್ತಲೇ ಇದ್ದಾರೆ. ದುಡ್ಡಿಗಾಗಿ ನರೇಶ್ ಹಿಂದೆ ಪವಿತ್ರಾ ಬಿದ್ದಿದ್ದಾರೆಂದು ಹೇಳಲಾಗುತ್ತಿದೆ. ಇದಕ್ಕೆಲ್ಲವೂ ಈ ಚಿತ್ರದಲ್ಲಿ ಸ್ಪಷ್ಟನೆ ನೀಡಿದಂತಿದೆ ಈ ಚಿತ್ರ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Kichcha Sudeep: 'ಲಾಡು ತಿನ್ನುವ ಸಮಯದಲ್ಲಿ ಮೆಣಸಿನಕಾಯಿ ಯಾಕೆ' ಎಂದಿರೋ ಕಿಚ್ಚ ಸುದೀಪ್!
ಕಾಲ ಬದಲಾದ್ರೂ ಈ ಸೌಂಡ್​ ಮಾತ್ರ ಬದಲಾಗಲ್ಲ ನೋಡಿ! Radhika Pandit ಕುತೂಹಲದ ಪೋಸ್ಟ್​