ಜಗ್ಗೇಶ್ 'ರಂಗನಾಯಕ' ರಿಲೀಸ್ ವೇಳೆ ಆಡಿದ್ದ ಗುರುಪ್ರಸಾದ್ ಮಾತು ನಿಜವಾಗಿದ್ದು ದುರಾದೃಷ್ಟ!

By Shriram Bhat  |  First Published Nov 3, 2024, 2:01 PM IST

ಇದೇ ದಿನ ಒಂದು ವರ್ಷದ ಹಿಂದೆ ರಕ್ತ ವಾಂತಿ ಮಾಡಿಕೊಂಡಿದ್ದ ಗುರು ಪ್ರಸಾದ್ ಎನ್ನಲಾಗಿದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೂಡ ಪಡೆದಿದ್ರು ಎಂಬ ಮಾಹಿತಿಯೂ ಇದೆ. ತುಂಬಾ ಮದ್ಯಪಾನ ಮಾಡುತ್ತಿದ್ದರಿಂದ ಸಮಸ್ಯೆ ಆಗಿದೆ ಅಂತ..


ಕನ್ನಡದ ಖ್ಯಾತ ನಿರ್ದೇಶಕ ಗುರುಪ್ರಸಾದ್ (Guruprasad) ಸಾವಿಗೆ ಶರಣಾಗಿದ್ದಾರೆ. 'ಮಠ' ಕನ್ನಡ ಸಿನಿಮಾ ಮೂಲಕ ಕರುನಾಡಿನಲ್ಲಿ ಖ್ಯಾತಿ ಹೊಂದಿದ್ದ ಗುರುಪ್ರಸಾದ್, ಸಾವಿಗೆ ಶರಣಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಎನ್ನಲಾಗುತ್ತಿದೆ. ಇತ್ತೀಚಿಗೆ ಅವರ 'ರಂಗನಾಯಕ' ಸಿನಿಮಾ ಬಿಡುಗಡೆಗೊಂಡು ಸೋಲು ಅನುಭವಿಸಿತ್ತು. 

ತಮ್ಮ ಸಿನಿಮಾ 'ರಂಗನಾಯಕ (Ranganayaka)' ಸಿನಿಮಾ ಸೋತರೆ ಬದುಕಲ್ಲ ಎಂದಿದ್ದರು ಗುರುಪ್ರಸಾದ್. ಅದೀಗ ದುರದೃಷ್ಟವಶಾತ್ ನಿಜವಾಗಿಬಿಟ್ಟಿದೆ. 'ನನ್ನ ಬರವಣಿಗೆ, ನಿರ್ದೇಶನ ಶಕ್ತಿ ಹೋದ ದಿನದಿಂದ ನಾನು ಬದುಕಿರಲ್ಲ..' ಎಂದಿದ್ದರು ಗುರುಪ್ರಸಾದ್. ಈ ಮಾತನ್ನು ಅವರು ತಮ್ಮ 'ರಂಗನಾಯಕ' ಬಿಡುಗಡೆ ಸಮಯದಲ್ಲಿ ಹೇಳಿದ್ದರು. ಅಂದಹಾಗೆ, ರಂಗನಾಯಕ ಸಿನಿಮಾದಲ್ಲು ಜಗ್ಗೇಶ್ ಪ್ರಮುಖ ಪಾತ್ರ ಮಾಡಿದ್ದರು. 

Tap to resize

Latest Videos

undefined

ಅಷ್ಟೇ ಅಲ್ಲ, ಇದೇ ದಿನ ಒಂದು ವರ್ಷದ ಹಿಂದೆ ರಕ್ತ ವಾಂತಿ ಮಾಡಿಕೊಂಡಿದ್ದ ಗುರು ಪ್ರಸಾದ್ ಎನ್ನಲಾಗಿದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೂಡ ಪಡೆದಿದ್ರು ಎಂಬ ಮಾಹಿತಿಯೂ ಇದೆ. ತುಂಬಾ ಮದ್ಯಪಾನ ಮಾಡುತ್ತಿದ್ದರಿಂದ ಸಮಸ್ಯೆ ಆಗಿದೆ ಅಂತ ಅಂತ ವೈದ್ಯರು ತಿಳಿಸಿದ್ರು, ಒಂದಷ್ಟು ದಿನ ಮದ್ಯಪಾನ ಬಿಟ್ಟಿದ್ದರು ಗುರು ಪ್ರಸಾದ್. ಸಿನಿಮಾ ಸಿಗುತ್ತಿಲ್ಲ ಎಂದು ಮತ್ತೆ ಕುಡಿಯೋಕೆ ಶುರು ಮಾಡಿದ್ರು ಎನ್ನಲಾಗ್ತಿದೆ!

ನಿರ್ದೇಶಕ ಗುರುಪ್ರಸಾದ್‌ಗೆ ಏನಾಗಿತ್ತು? ಹಣದ ವ್ಯವಹಾರವೇ ಮುಳುವಾಯ್ತಾ?

ರಂಗನಾಯಕ ಸಿನಿಮಾ ತೆರೆಗೆ ಬಂದು ಸೋತಮೇಲೆ, ಸಿನಿಮಾ ಆಫರ್ ಗಳು ಕಡಿಮೆ ಆಗಿದ್ವು, ಸಿನಿಮಾ ಆಪರ್ ಗಾಗಿ ತುಂಬಾನೇ ಹುಡುಕುತ್ತಿದ್ದರು. ಸಿನಿಮಾ ಆಫರ್ ಇಲ್ಲ ಅಂತ ನೊಂದುಕೊಳ್ಳುತ್ತಿದ್ದರು ಗುರು ಪ್ರಸಾದ್ ಎನ್ನಲಾಗಿದೆ. ಈ ಕಾರಣಕ್ಕೆ, ಕುಡಿತ ಇನ್ನೂ ಹೆಚ್ಚಾಗಿತ್ತು ಎನ್ನಲಾಗಿದೆ. ರಂಗನಾಯಕ ಸಿನಿಮಾ ಬಾಕ್ಸ್ ಆಫಿಸ್ ನಲ್ಲಿ ಹೀನಾಯ ಸೋಲು ಕಂಡಿತ್ತು. ಅದೇ ಈ ದುರಂತಕ್ಕೆ ಕಾರಣವಾಗಿದೆ ಎನ್ನಲಾಗಿದೆ. 

2006 ರಲ್ಲಿ 'ಮಠ' ಸಿನಿಮಾ ಮೂಲಕ ನಿರ್ದೇಶಕ ಆಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್ , ಎರಡನೇ ಸಲ ಸಿನಿಮಾಗಳನ್ನ ನಿರ್ದೇಶಿಸಿದ್ರು. 'ರಂಗನಾಯಕ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದರು. ಇತ್ತೀಚೆಗೆ ರಂಗನಾಯಕ ಚಿತ್ರದ ಸುದ್ದಿಗೋಷ್ಠಿ ವೇಳೆ ಸಾಕಷ್ಟು ಸುದ್ದಿಯಾಗಿದ್ದರು. ಕನ್ನಡದ ಬಗ್ಗೆ, ಕನ್ನಡ ಸಿನಿಮಾ ಬಗ್ಗೆ ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು. 

ಬಿಗ್ ಬಾಸ್ ಸೇರಿದಂತೆ, ಕಿರುತೆರೆಯಲ್ಲೂ ಸಾಕಷ್ಟು ರಿಯಾಲಿಟಿ ಶೋ ಗಳಲ್ಲಿ ಭಾಗಿ ಆಗಿದ್ರು. ಬಿಗ್ ಬಾಸ್ ನಲ್ಲೂ ಮಿಂಚಿದ್ದ ಗುರು ಪ್ರಸಾದ್, ವಿವಾದಗಳಿಂದಲೂ ಆಗಾಗ ಹೆಸರುವಾಸಿಯಾಗಿದ್ದರು. ಇದೀಗ ಆತ್ಮಹತ್ಯೆ ಮೂಲಕ  ಗುರು ಪ್ರಸಾದ್ ಸಿನಿಪ್ರಿಯರ ಕಣ್ಣಲ್ಲಿ ನೀರು ತರಿಸಿದ್ದಾರೆ. ಯಾಕೆ ಆತ್ಮಹತ್ಯೆ ಮಾಡಿಕೊಂಡರು? ಅಂತಹ ಕಾರಣವೇನಿತ್ತು ಎಂಬುದು ಇನ್ನಷ್ಟೇ ಬಹಿರಂಗ ಆಗಬೇಕಿದೆ. 

ಬಿಗ್ ಬಾಸ್ ಮನೇಲಿರೋ ಧರ್ಮ ಭೂಮಿ ತೂಕದವ್ರಂತೆ! ಅಷ್ಟೊಂದು ಸಾಚಾ ಅಂತಿರೋದ್ಯಾಕೆ?

ಗುರುಪ್ರಸಾದ್ ನಿರ್ದೇಶನದ 'ರಂಗನಾಯಕ' ಚಿತ್ರದಲ್ಲಿ ನವರಸನಾಯಕ ಜಗ್ಗೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದರು. ಚಿತ್ರದ ಶೂಟಿಂಗ್ ಸಾಗುತ್ತಿತ್ತು. ಆದರೆ, ಇದ್ದಕ್ಕಿದ್ದಂತೆ ನಿರ್ದೇಶಕ ಗುರುಪ್ರಸಾದ್ ಕಣ್ಮರೆಯಾಗಿದ್ದಾರೆ. ಈ ಸಂಗತಿ ತಿಳಿದು ಕನ್ನಡ ಸಿನಿಪ್ರಿಯರು ದಿಗ್ಭ್ರಾಂತರಾಗಿದ್ದಾರೆ. ಹಲವರು ಈ ಸುದ್ದಿ ತಿಳಿದು ಅದೆಷ್ಟು ಶಾಕ್ ಆಗಿದ್ದಾರೆ ಎಂದರೆ, ಈ ಸಂಗತಿಯನ್ನು ನಂಬಲಿಕ್ಕೂ ಕಷ್ಟವಾಗುತ್ತಿದೆ ಎಂದೇ ಹೇಳುತ್ತಿದ್ದಾರೆ.

click me!