ನಿರ್ದೇಶಕ ಗುರುಪ್ರಸಾದ್‌ಗೆ ಏನಾಗಿತ್ತು? ಹಣದ ವ್ಯವಹಾರವೇ ಮುಳುವಾಯ್ತಾ?

By Shriram Bhat  |  First Published Nov 3, 2024, 1:15 PM IST

ಹಣದ ವ್ಯವಹಾರ ಕೋರ್ಟ್ ಮೆಟ್ಟಿಲೇರಿತ್ತು. ಕಳೆದ 24 ನೇ ತಾರೀಖು ಕೋರ್ಟ್ ವಿಚಾರಣೆ ಇತ್ತು. ಮೆಡಿಕಲ್ ರಿಪೋರ್ಟ್ ಕೊಟ್ಟು ಪ್ರಕರಣ ಮುಂದಕ್ಕೆ ಹಾಕಿಸಿಕೊಂಡಿದ್ರು ಗುರುಪ್ರಸಾದ್. ನಿನ್ನೆ ಗುರು ಪ್ರಸಾದ್ ಹುಟ್ಟುಹಬ್ಬ ಇತ್ತು. ವಿಶ್ ಮಾಡಲು ಯಾರೇ ಫೋನ್ ಕಾಲ್ ಮಾಡಿದರೂ ಗುರುಪ್ರಸಾದ್ ಪಿಕ್ ಮಾಡಿಲ್ಲ..


ಗುರು ಪ್ರಸಾದ್ ಆತ್ಮಹತ್ಯೆ ಹಿನ್ನೆಲೆ ಏನು..? 

ನಿರ್ದೇಶಕ ಗುರುಪ್ರಸಾದ್ (Guruprasad) ಕೋರ್ಟ್ ಕೇಸ್ ನಡೀತಾ ಇತ್ತು ಎನ್ನಲಾಗಿದೆ. ಶ್ರೀನಿವಾಸ್ ಗೌಡ ಅನ್ನೋರ ಜೊತೆ ಹಣದ ವ್ಯವಹಾರ ಇತ್ತು, ಗುರು ಪ್ರಸಾದ್ ಅವರಿಗೆ 25 ಲಕ್ಷ ಹಣ ಕೊಟ್ಟಿದ್ದರು ಶ್ರೀನಿವಾಸ್ ಗೌಡ. ಶ್ರೀನಿವಾಸ್ ಗೌಡ ಗುರು ಪ್ರಸಾದ್ ಅವರ ಅಭಿಮಾನಿ ಆಗಿದ್ದರಂತೆ. ಅವರ ಬರವಣಿಗೆ ಮೆಚ್ಚಿ ಅವರ ಜೊತೆ ಇದ್ರು ಎನ್ನಲಾಗಿದೆ. ಹಣ ವಾಪಸ್ ಕೊಡಲಾಗದೇ ಗುರುಪ್ರಸಾದ್ ಸಮಸ್ಯೆ ಮಾಡಿಕೊಂಡಿದ್ದರಂತೆ. 

Tap to resize

Latest Videos

undefined

ಶ್ರೀನಿವಾಸ್ ಗೌಡ ಅವರ ಜೊತೆಗಿನ ಈ ಹಣದ ವ್ಯವಹಾರ ಕೋರ್ಟ್ ಮೆಟ್ಟಿಲೇರಿತ್ತು. ಕಳೆದ 24 ನೇ ತಾರೀಖು ಕೋರ್ಟ್ ವಿಚಾರಣೆ ಇತ್ತು. ಮೆಡಿಕಲ್ ರಿಪೋರ್ಟ್ ಕೊಟ್ಟು ಪ್ರಕರಣ ಮುಂದಕ್ಕೆ ಹಾಕಿಸಿಕೊಂಡಿದ್ರು ಗುರುಪ್ರಸಾದ್. ನಿನ್ನೆ ಗುರು ಪ್ರಸಾದ್ ಹುಟ್ಟುಹಬ್ಬ ಇತ್ತು. ವಿಶ್ ಮಾಡಲು ಯಾರೇ ಫೋನ್ ಕಾಲ್ ಮಾಡಿದರೂ ಗುರುಪ್ರಸಾದ್ ಪಿಕ್ ಮಾಡಿಲ್ಲ, ಆಗ ಹಲವರಿಗೆ ಶಾಕ್ ಆಗಿದ್ದು, ಬಳಿಕ ವಿಷಯ ಬೆಳಕಿಗೆ ಬಂದಿದೆ.   

ಮಠ ಖ್ಯಾತಿಯ ಕನ್ನಡ ನಿರ್ದೇಶಕ ಗುರು ಪ್ರಸಾದ್ ಸಾವಿಗೆ ಶರಣು!

ಕನ್ನಡದ ನಿರ್ದೇಶಕ ಗುರು ಪ್ರಸಾದ್ ಅವರು 'ಇನ್ಸ್ ಟ್ಯೂಟ್ ಆಪ್ ಸ್ಕ್ರಿಪ್ಟ್ ರೈಟಿಂಗ್ ಹಾಗು ಡೈರೆಕ್ಷನ್ ಅನ್ನೋ ಸ್ಕೂಲ್ ನಡೆಸುತ್ತಿದ್ದರು. ಜಿಯೋ ಸ್ವಾದ್ ಅನ್ನೋ ಶಾಲೆ ಸಹ ನಡೆಸುತ್ತಿದ್ರು ಎನ್ನಲಾಗಿದೆ. ಇತ್ತೀಚಿಗೆ ಬಿಡುಗಡೆ ಕಂಡಿದ್ದ 'ರಂಗನಾಯಕ' ಸಿನಿಮಾ ತೀವ್ರ ಸೋಲು ಅನುಭವಿಸಿತ್ತು. ಇದೀಗ ಸಾವಿಗೆ ಶರಣಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಎನ್ನಲಾಗುತ್ತಿದೆ. ಮೃತರಾಗಿ ಹತ್ತು ದಿನಗಳು ಆಗಿದ್ದಿರಬಹುದು ಎನ್ನಲಾಗುತ್ತಿದ್ದು, ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ

ಜಗ್ಗೇಶ್ ಹಾಗೂ ಹಲವಾರು ಖ್ಯಾತ ಕಲಾವಿದರ ನಟನೆಯ 'ಮಠ' ಸಿನಿಮಾ ಖ್ಯಾತಿಯ ಕನ್ನಡ ನಿರ್ದೇಶಕ ಗುರು ಪ್ರಸಾದ್ (Guruprasad) ನಿಧನರಾಗಿದ್ದಾರೆ. ಸಾವಿಗೆ ಶರಣಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಎನ್ನಲಾಗುತ್ತಿದೆ. ಕನ್ನಡ ಹೆಸರಾಂತ ನಿರ್ದೇಶಕ ಗುರುಪ್ರಸಾದ್ ಕೊನೆಯುಸಿರು ಎಳೆದಿದ್ದಾರೆ. ನಿರ್ದೇಶಕ ಗುರು ಪ್ರಸಾದ್ ಅವರಿಗೆ 52 ವರ್ಷ ವಯಸ್ಸಾಗಿತ್ತು. ಸಾವಿಗೆ ಶರಣಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಎನ್ನಲಾಗುತ್ತಿದೆ. ಮೃತರಾಗಿ ಹತ್ತು ದಿನಗಳು ಆಗಿದ್ವಾದಿರಬಹುದು ಎನ್ನಲಾಗುತ್ತಿದ್ದು, ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ.

ಬಿಗ್ ಬಾಸ್ ಮನೇಲಿರೋ ಧರ್ಮ ಭೂಮಿ ತೂಕದವ್ರಂತೆ! ಅಷ್ಟೊಂದು ಸಾಚಾ ಅಂತಿರೋದ್ಯಾಕೆ?

2006 ರಲ್ಲಿ 'ಮಠ' ಸಿನಿಮಾ ಮೂಲಕ ನಿರ್ದೇಶಕ ಆಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್ , ಎರಡನೇ ಸಲ ಸಿನಿಮಾಗಳನ್ನ ನಿರ್ದೇಶಿಸಿದ್ರು. 'ರಂಗನಾಯಕ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಇತ್ತೀಚೆಗೆ ರಂಗನಾಯಕ ಚಿತ್ರದ ಸುದ್ದಿಗೋಷ್ಠಿ ವೇಳೆ ಸಾಕಷ್ಟು ಸುದ್ದಿಯಾಗಿದ್ದರು. ಕನ್ನಡದ ಬಗ್ಗೆ, ಕನ್ನಡ ಸಿನಿಮಾ ಬಗ್ಗೆ ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು. 

ಬಿಗ್ ಬಾಸ್ ಸೇರಿದಂತೆ, ಕಿರುತೆರೆಯಲ್ಲೂ ಸಾಕಷ್ಟು ರಿಯಾಲಿಟಿ ಶೋ ಗಳಲ್ಲಿ ಭಾಗಿ ಆಗಿದ್ರು. ಬಿಗ್ ಬಾಸ್ ನಲ್ಲೂ ಮಿಂಚಿದ್ದ ಗುರು ಪ್ರಸಾದ್, ವಿವಾದಗಳಿಂದಲೂ ಆಗಾಗ ಹೆಸರುವಾಸಿಯಾಗಿದ್ದರು. ಇದೀಗ ಆತ್ಮಹತ್ಯೆ ಮೂಲಕ  ಗುರು ಪ್ರಸಾದ್ ಸಿನಿಪ್ರಿಯರ ಕಣ್ಣಲ್ಲಿ ನೀರು ತರಿಸಿದ್ದಾರೆ. ಯಾಕೆ ಆತ್ಮಹತ್ಯೆ ಮಾಡಿಕೊಂಡರು? ಅಂತಹ ಕಾರಣವೇನಿತ್ತು ಎಂಬುದು ಇನ್ನಷ್ಟೇ ಬಹಿರಂಗ ಆಗಬೇಕಿದೆ. 

ಕಾಂತಾರ ಪ್ರೀಕ್ವೆಲ್​​​ಗೆ ರಾಜಮೌಳಿ ಮೆಚ್ಚಿದ್ದ ಆ್ಯಕ್ಷನ್ ಡೈರೆಕ್ಷನ್ ಟೊಡರ್ ಲ್ಯಾಜರೋವ್!

ಗುರುಪ್ರಸಾದ್ ನಿರ್ದೇಶನದ 'ರಂಗನಾಯಕ' ಚಿತ್ರದಲ್ಲಿ ನವರಸನಾಯಕ ಜಗ್ಗೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇದ್ದಕ್ಕಿದ್ದಂತೆ ನಿರ್ದೇಶಕ ಗುರುಪ್ರಸಾದ್ ಕಣ್ಮರೆಯಾಗಿದ್ದಾರೆ. ಈ ಸಂಗತಿ ತಿಳಿದು ಕನ್ನಡ ಸಿನಿಪ್ರಿಯರು ದಿಗ್ಭ್ರಾಂತರಾಗಿದ್ದಾರೆ. ಹಲವರು ಈ ಸುದ್ದಿ ತಿಳಿದು ಅದೆಷ್ಟು ಶಾಕ್ ಆಗಿದ್ದಾರೆ ಎಂದರೆ, ಈ ಸಂಗತಿಯನ್ನು ನಂಬಲಿಕ್ಕೂ ಕಷ್ಟವಾಗುತ್ತಿದೆ ಎಂದೇ ಹೇಳುತ್ತಿದ್ದಾರೆ.

click me!