ನಿರ್ದೇಶಕ ಗುರುಪ್ರಸಾದ್ ಸಾವಿನ ಬಗ್ಗೆ ನಟಿ ಶೃತಿಯಿಂದ ಆಘಾತಕಾರಿ ಹೇಳಿಕೆ: ದೊಡ್ಡ ನಗುವಿನ ಹಿಂದೆ...

Published : Nov 03, 2024, 01:11 PM ISTUpdated : Nov 03, 2024, 02:13 PM IST
ನಿರ್ದೇಶಕ ಗುರುಪ್ರಸಾದ್ ಸಾವಿನ ಬಗ್ಗೆ ನಟಿ ಶೃತಿಯಿಂದ ಆಘಾತಕಾರಿ ಹೇಳಿಕೆ: ದೊಡ್ಡ ನಗುವಿನ ಹಿಂದೆ...

ಸಾರಾಂಶ

ನಿರ್ದೇಶಕ ಗುರುಪ್ರಸಾದ್ ಅವರ ಆತ್ಮಹತ್ಯೆ ಬಗ್ಗೆ ನಟಿ ಶೃತಿ ಆಘಾತ ವ್ಯಕ್ತಪಡಿಸಿದ್ದಾರೆ. ಅವರ ನಗು ಮುಖದ ಹಿಂದೆ ನೋವನ್ನು ಅರಿಯಲು ಸಾಧ್ಯವಾಗಿಲ್ಲ ಎಂದು ಶೃತಿ ತಿಳಿಸಿದ್ದಾರೆ. ಒಬ್ಬ ಪ್ರತಿಭಾವಂತ ನಿರ್ದೇಶಕನ ಆತ್ಮಹತ್ಯೆ ದುರಂತ ಎಂದು ಹೇಳಿದ್ದಾರೆ.

ಬೆಂಗಳೂರು (ನ.03): ಕನ್ನಡ ಚಿತ್ರರಂಗದಲ್ಲಿ ಅತಿ ಸಣ್ಣ ವಯಸ್ಸಿನಲ್ಲಿ ಅತಿಹೆಚ್ಚು ಪ್ರಬುದ್ಧತೆಯನ್ನು ಹೊಂದಿದ ವ್ಯಕ್ತಿ ಎಂದರೆ ನಟ ಹಾಗೂ ನಿರ್ದೇಶಕ ಗುರುಪ್ರಸಾದ್ ಅವರಾಗಿದ್ದಾರೆ. ಕೇವಲ 40 ವರ್ಷಕ್ಕೆ ತುಂಬಾ ದೊಡ್ಡ ಜ್ಞಾನವನ್ನು ಹೊಂದಿದ್ದರು. ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದ ದೊಡ್ಡ ಧೀಮಂತ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದೇ ನಂಬರಾರದ ಘಟನೆಯಾಗಿದೆ. ಅವರು ದೊಡ್ಡದಾಗಿ ನಗುತ್ತಿದ್ದರ ಹಿಂದಿನ ನೋವಿನ ಮನಸ್ಸು ಯಾರಿಗೂ ಅರ್ಥವೇ ಆಗಲಿಲ್ಲ ಎಂದು ನಟಿ ಶೃತಿ ಅವರು ಹೇಳಿದ್ದಾರೆ.

ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಫೋನೋದಲ್ಲಿ ಮಾತನಾಡಿದ ಅವರು, ಒಬ್ಬ ವ್ಯಕ್ತಿ ಸದಾ ನಗುತ್ತಿರುತ್ತಾರೆ ಎಂದರೆ ಅವರ ಜೀವನದಲ್ಲಿ ಯಾವುದೇ ದಃಖ ಹಾಗೂ ನೋವು ಇಲ್ಲವೆಂದಿಲ್ಲ. ಅವರು ಕಳೆದ ಒಂದೂವರೆ ತಿಂಗಳ ಹಿಂದೆ ಅವರೊಂದಿಗೆ ನಾವು ತುಂಬಾ ಆತ್ಮೀಯವಾಗಿ ಮಾತನಾಡಿದ್ದೆವು. ಅವರು ಸಿನಿಮಾ ಸ್ಕ್ರಿಪ್ಟ್, ಸಾಹಿತ್ಯ ಹಾಗೂ ನಟನೆಯ ಬಗ್ಗೆಯೂ ಹಂಚಿಕೊಂಡಿದ್ದರು. ಇನ್ನು ಅವರು ಅತಿ ಸಣ್ಣ ವಯಸ್ಸಿಗೆ ದೊಡ್ಡ ಮಟ್ಟದ ಪ್ರಬುದ್ಧತೆಯನ್ನು ಹೊಂದಿದ್ದರು. ಅವರ ಸಾಹಿತ್ಯ, ಜ್ಞಾನ ಹಾಗೂ ಸಮಾಜದ ಬಗ್ಗೆ ಇರುವ ಕಾಳಜಿಯನ್ನು ನೋಡಿ ನಮಗೆ ಹೆಮ್ಮೆ ಆಗುತ್ತಿತ್ತು ಎಂದು ಹೆಳಿದ್ದಾರೆ.

ಇದನ್ನೂ ಓದಿ: ಬರ್ತಡೇಗೂ ಮುನ್ನವೇ ಡೆತ್ ಡೇ ಮಾಡಿಕೊಂಡ ನಿರ್ದೇಶಕ ಗುರುಪ್ರಸಾದ್!

ಪ್ರತಿ ನಿರ್ದೇಶಕರು ಮಾನಸಿಕವಾಗಿ ತುಂಬಾ ಗಟ್ಟಿಯಾಗಿರಬೇಕು. ಮಾನಸಿಕವಾಗಿ ಗಟ್ಟಿ ನಿರ್ಧಾರವಿಲ್ಲದಿದ್ದರೆ ನಿರ್ದೇಶಕರಾಗಲು ಸಾಧ್ಯವೇ ಇಲ್ಲ. ನಿರ್ದೇಶಕರಾಗಿ ಗೆದ್ದಿರುವ ವ್ಯಕ್ತಿ ಜೀವನದಲ್ಲಿ ಹೇಗೆ ಸೋಲಲು ಸಾಧ್ಯ ಎಂಬುದು ತಿಳಿಯುತ್ತಿಲ್ಲ. ಗುರುಪ್ರಸಾದ್ ಅವರು ಇತ್ತೀಚೆಗೆ ಗಿಚ್ಚಿಗಿಲಿಗಿಲಿ ರಿಯಾಲಿಟಿ ಶೋಗೆ ಅತಿಥಿಯಾಗಿ ಬಂದಿದ್ದಾಗ ತುಂಬಾ ಜೋರಾಗಿ ನಗುತ್ತಿದ್ದರು. ಆದರೆ, ಅವರು ಅಷ್ಟೊಂದು ಜೋರಾಗಿ ನಗುವುದಕ್ಕೆ ಕಾರಣ ಅವರ ಮನಸ್ಸಿನಲ್ಲಿದ್ದ ನೋವೇ ಕಾರಣವೆಂದು ಹೇಳಬಹುದು. ಅವರ ನಗು ಮುಖದ ಹಿಂದೆ ನೋವಿದೆ ಎಂಬುದರ ಸುಳಿವನ್ನೂ ನೀಡಿರಲಿಲ್ಲ. ಅವರು ತಮ್ಮ ಮನಸ್ಸಲ್ಲಿ ಇರುವ ನೋವನ್ನು ಮರೆಯುವುದಕ್ಕೆಂದೇ ದೊಡ್ಡದಾಗಿ ನಗುತ್ತಿದ್ದರು ಎಂದು ಈಗ ಅನಿಸುತ್ತಿದೆ ಎಂದು ಹೇಳಿಕೊಂಡರು.

ಕನ್ನಡ ಒಬ್ಬ ಖ್ಯಾತ ನಿರ್ದೇಶಕ, ನಟರಾಗಿರುವ ಗುರುಪ್ರಸಾದ್ ಅವರು ಇಷ್ಟೊಂದು ದುರಂತವಾಗಿ ಅಂತ್ಯ ಕಂಡಿದ್ದಾರೆ ಎಂಬುದು ತುಂಬಾ ನೋವಿನ ಸಂಗತಿ ಆಗಿದೆ. ಅವರು, ಒಬ್ಬ ನಿರ್ದೇಶಕರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಅವರ ಮನೆಯವರಿಗೆ ಏಕೆ ಗೊತ್ತಾಗಿಲ್ಲ ಎಂಬುದು ನನಗೆ ತಿಳಿಯುತ್ತಿಲ್ಲ. ಅದರಲ್ಲಿಯೂ ವೈಯಕ್ತಿಕ ಎಲ್ಲ ಸಮಸ್ಯೆಗಳನ್ನು ಮೀರಿ ಬದುಕುವಂತಹ ಶಕ್ತಿ ಇದ್ದಂತಹ ಗುರು ಪ್ರಸಾದ್ ಅವರೇ ಹೀಗೆ ಮಾಡಿಕೊಂಡಿದ್ದಾರೆ ಎಂಬುದು ನಂಬಲು ಅಸಾಧ್ಯವಾಗುತ್ತಿದೆ ಎಂದು ನಟಿ ಶೃತಿ ಹೇಳಿದರು.

ಇದನ್ನೂ ಓದಿ: ಮಠ ಖ್ಯಾತಿಯ ಕನ್ನಡ ನಿರ್ದೇಶಕ ಗುರು ಪ್ರಸಾದ್ ಆತ್ಮಹತ್ಯೆ ಶರಣು!

ಘಟನೆಯ ವಿವರ: ನಟ ನಿರ್ದೇಶಕ ಗುರುಪ್ರಸಾದ್ ಅವರು ಬೆಂಗಳೂರಿನ ಹೊರವಲಯದ ಅವರ ಮಾದನಾಯಕನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೂರ್ನಾಲ್ಕು ದಿನಗಳು ಕಳೆದರೂ ಯಾರಿಗೂ ಗೊತ್ತಾಗಿಲ್ಲ. ಇನ್ನು ಪಕ್ಕದ ಮನೆಯವರಿಗೆ ದುರ್ವಾಸನೆ ಬಂದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ತಪಾಸಣೆ ಮಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡು ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?