ಮಾಸ್ಟರ್ ಮಂಜುನಾಥ್ ಚೆನ್ನೈನಲ್ಲಿ ಸಿಕ್ಕಾಗ ಡಾ ರಾಜ್‌ಕುಮಾರ್ ಮಾಡಿದ್ದೇನು? ಏನದು ಒನ್‌, ಟೂ, ತ್ರಿ...?!

Published : Mar 09, 2025, 06:13 PM ISTUpdated : Mar 09, 2025, 06:40 PM IST
ಮಾಸ್ಟರ್ ಮಂಜುನಾಥ್ ಚೆನ್ನೈನಲ್ಲಿ ಸಿಕ್ಕಾಗ ಡಾ ರಾಜ್‌ಕುಮಾರ್ ಮಾಡಿದ್ದೇನು? ಏನದು ಒನ್‌, ಟೂ, ತ್ರಿ...?!

ಸಾರಾಂಶ

ಮಾಸ್ಟರ್ ಮಂಜುನಾಥ್ ಅವರು ಡಾ ರಾಜ್‌ಕುಮಾರ್ ಬಗ್ಗೆ ಮಾತನ್ನಾಡಿದ್ದು ಇದೀಗ ವೈರಲ್ ಆಗುತ್ತಿದೆ. 'ಡಾ ರಾಜ್‌ಕುಮಾರ್ ಜೊತೆ ನನ್ನ ಒಡನಾಟ ತುಂಬಾ ಏನೂ ಇರಲಿಲ್ಲ. ನಾನು ಬಹುಶಃ ನಾಲ್ಕೈದು ಬಾರಿ ಅವರನ್ನು ಭೇಟಿ ಆಗಿದ್ದೆ. ನಾನು..

ಮೂವತ್ತು ವರ್ಷಗಳ ಹಿಂದೆ ಮಾಸ್ಟರ್ ಮಂಜುನಾಥ್ (Master Manjunath) ಎಂಬ ಬಾಲನಟ ತುಂಬಾ ಸೆನ್ಸೇಷನ್ ಸೃಷ್ಟಿಸಿದ್ದರು. ಈಗಿನ ಭಾಷೆಯಲ್ಲಿ ಅದನ್ನು ವೈರಲ್ ಎನ್ನಬಹುದು. ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ 'ರಣಧೀರ' ಚಿತ್ರದ 'ಏನ್ ಹುಡ್ಗಿರೋ, ಇದ್ಯಾಕಿಂಗ್ ಆಡ್ತಾರೋ..ಲವ್ವು ಲವ್ವು ಲವ್ವು ಅಂತ ಕಣ್ಣೀರಿಡ್ತಾರೋ..' ಹಾಡನ್ನು ಆ ಕಾಲದಲ್ಲಿ ಕೇಳದವರೇ ಇಲ್ಲ. ಆಕಾಶವಾಣಿಯಲ್ಲಿ ಅದೇ ಹಾಡು ದಿನವೂ ಕೇಳಿಬರುತ್ತಿತ್ತು. ಅಂದು ಮಾಸ್ವರ್ ಮಂಜುನಾಥ್‌ ಅವರಿಗೆ ಬಹಳಷ್ಟು ಫ್ಯಾನ್ಸ್ ಕೂಡ ಇದ್ದರು. 

ಇಂಥ ಮಾಸ್ಟರ್ ಮಂಜುನಾಥ್ ಅವರು ಡಾ ರಾಜ್‌ಕುಮಾರ್ (Dr Rajkumar) ಬಗ್ಗೆ ಮಾತನ್ನಾಡಿದ್ದು ಇದೀಗ ವೈರಲ್ ಆಗುತ್ತಿದೆ. 'ಡಾ ರಾಜ್‌ಕುಮಾರ್ ಜೊತೆ ನನ್ನ ಒಡನಾಟ ತುಂಬಾ ಏನೂ ಇರಲಿಲ್ಲ. ನಾನು ಬಹುಶಃ ನಾಲ್ಕೈದು ಬಾರಿ ಅವರನ್ನು ಭೇಟಿ ಆಗಿದ್ದೆ. ನಾನು ಖುಷಿ ಪಡೋ ಒಂದು ಭೇಟಿ ಅಂದ್ರೆ ಅದು 'ಏನ್ ಹುಡ್ಗಿರೋ ಅದ್ಯಾಕಿಂಗ್ ಆಡ್ತಾರೋ.. ' ಹಾಡಿನ ರೆಕಾರ್ಡಿಂಗ್ ಸಮಯವದು. ಚೆನ್ನೈನಲ್ಲಿ ಆ ಹಾಡಿನ ರೆಕಾರ್ಡಿಂಗ್‌ಗಾಗಿ ಹಂಸಲೇಖಾ ಅವರು ಕರೆದುಕೊಂಡು ಹೋಗಿದ್ದರು. ನನ್ನ ಪುಣ್ಯ ಎಂಬಂತೆ, ಅದೇ ದಿನ ಡಾ ರಾಜ್‌ಕುಮಾರ್ ಅವರು ಅಯ್ಯಪ್ಪ ಸ್ವಾಮಿ ಸಾಂಗ್ಸ್ ರೆಕಾರ್ಡಿಂಗ್ ಮಾಡುತ್ತಿದ್ದರು. 

ಅಣ್ಣಾವ್ರು ಬೇರೆಯವ್ರ ಸಿನಿಮಾ ನೋಡ್ತಿದ್ರಾ?.. ಯಾರ ಸಿನಿಮಾನ ಯಾಕೆ ನೋಡ್ತಾ ಇದ್ರು? ಗುಟ್ಟು ರಟ್ಟಾಯ್ತು...!

ಅವರು ಊಟಕ್ಕೆ ಹೋಗುವ ಸಮಯದಲ್ಲಿ ಮಾತನಾಡಿಸಿದೆ. ಹಾಗೂ ಅವರು ಕೇಳಿದ್ದಕ್ಕೆ ಹಾಡು ಹೇಳಲು ಬಂದಿರುವುದಾಗಿ ತಿಳಿಸಿದೆ. ಆಗ 'ತುಂಬಾ ಖುಷಿಯಾಯ್ತು' ಎಂದರು, ಜೊತೆಗೆ, ನನ್ನನ್ನೂ ಊಟಕ್ಕೆಕರೆದುಕೊಂಡು ಹೋದರು. ತಮಗೆ ಬಂದಿದ್ದ ಊಟವನ್ನು ಎಲ್ಲರಿಗೂ ಹಂಚಿದರು. ನಮಗೆ ಅದು ದೇವರ ಪ್ರಸಾದ ಎಂಬಂತೆ ಆಗಿತ್ತು. ಅದೇ ಸಮಯದಲ್ಲಿ 'ನೀನು ಈ ಮೊದಲು ಹಾಡಿಲ್ಲ ಅಲ್ವಾ?' ಎಂದ್ರು. ನಾನು ಇಲ್ಲ ಎನ್ನಲು 'ಅವರು ಒನ್‌, ಟೂ, ತ್ರಿ ಅಂತ ಹೇಳ್ತಾರೆ.. ನೀನು ಹಾಡಿಬಿಡು, ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡ..

ಡಾ ರಾಜ್‌ಕುಮಾರ್ ಅವರು ಅಂದು ಇನೋಸೆಂಟ್‌ ಅಗಿ,ಮುದ್ದುಮುದ್ದಾಗಿ ನನಗೆ ಸಲಹೆ ಕೊಟ್ಟರು. ಆ ಹಾಡನ್ನು ನಾನು ಅದೆಷ್ಟೋ ಕೆಟ್ಟದಾಗಿ ಹಾಡಿದ್ದರೂ ಆ ಹಾಡು ಸೂಪರ್ ಹಿಟ್ ಆಗಿದ್ದು ಅವರ ಆಶೀರ್ವಾದ ಎಂದೇ ನನ್ನ ಭಾವನೆ. ಹಂಸಲೇಕಾ ಅವರ ಹಾಡು ಸೂಪರ್ ಹಿಟ್ ಎಂಬುದು ಒಂದು ವಿಷಯ, ಆದ್ರೆ ನಾನು ಹಾಡಿದ್ದು ಡಾ ರಾಜ್‌ಕುಮಾರ್ ಅವರ ಆಶೀರ್ವಾದದ ಬಲದಿಂದ ಎಂಬುದು ನನ್ನ ನಂಬಿಕೆ. ಆ ಸಮಯವನ್ನು, ಸಂದರ್ಭವನ್ನು ನಾನೆಂದಿಗೂ ಮರೆಯಲಾರೆ. 

ಭಾರತಿಯನ್ನು ನಾನು ಮದುವೆ ಆಗುವಂತೆ ಮಾಡಿದ್ದು ರಾಜನ್‌-ನಾಗೇಂದ್ರ; ನಟ ವಿಷ್ಣುವರ್ಧನ್!

ಅವರು ಕೊಟ್ಟ ಸಲಹೆ ನನ್ನ ತಲೆಗೆ ಎಷ್ಟರಮಟ್ಟಿಗೆ ಹೋಯ್ತೋ ಏನೋ ಗೊತ್ತಿಲ್ಲ. ಆದ್ರೆ, ಅಣ್ಣಾವ್ರು ಮನಸಾರೆ ನನ್ನ ಬೆನ್ನ ಮೇಲೆ ಕೈ ಇಟ್ಟು ಮಾತನ್ನಾಡಿಸಿದ್ದು, ಅವರೊಂದಿಗೆ ಊಟಕ್ಕೆ ಕುಳಿತದ್ದು ಎಲ್ಲವೂ ಇಂದಿಗೂ ನನಗೆ ಮೆಯಲಾಗದ ಖುಷಿಯ ವಿಚಾರ..' ಎಂದಿದ್ದಾರೆ ಮಾಜಿ ನಟ ಮಾಸ್ಟರ್ ಮಂಜುನಾಥ್. ಅವರೀಗ ನಟನೆ ಮಾಡುತ್ತಿಲ್ಲ, ಆದ್ದರಿಂದ ಅವರನ್ನು ಮಾಜಿ ಎಂದು ಕರೆದರೆ ತಪ್ಪಿಲ್ಲ. ಆದರೆ, ಈಗಲೂ ಅಲ್ಲಿ ಇಲ್ಲಿ ಎಂಬಂತೆ ಅವರ ಕೆಲವು ಸಂದರ್ಶನಗಳು ಓಡಾಡುತ್ತಿರುತ್ತವೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ