
ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ (Shivarajkumar) ಅವರು ಅನಾರೋಗ್ಯಕ್ಕೆ ಒಳಗಾಗಿದ್ದು, ಕ್ಯಾನ್ಸರ್ ಕಾಯಿಲೆ ಅನುಭವಿಸಿ ಅದಕ್ಕಾಗಿ ಅಮೆರಿಕಾದಲ್ಲಿ ಸರ್ಜರಿ ಮಾಡಿಸಿಕೊಂಡು ಬಂದಿದ್ದು, ಬಹುತೇಕ ಎಲ್ಲರಿಗೂ ಗೊತ್ತು. ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ನಟ ಶಿವಣ್ಣ. ಆದರೆ, ಅಂದು ಕಾಯಿಲೆ ಅನುಭವಿಸುತ್ತಿದ್ದಾಗ ಸಹಜವಾಗಿಯೇ ಅವರಿಗೂ ಭಯವಾಗಿತ್ತು. ಇದನ್ನು ಸ್ವತಃ ಶಿವಣ್ಣ ಹಲವಾರು ಕಡೆ ಹೇಳಿಕೊಂಡಿದ್ದಾರೆ. ಕ್ಯಾನ್ಸರ್ ಕಾಯಿಲೆ ಬಂದಾಗ ಸಹಜವಾಗಿಯೇ ಎಲ್ಲರಿಗೂ ಭಯವಾಗುತ್ತೆ, ಶಿವಣ್ಣ ಕೂಡ ಅದಕ್ಕೆ ಹೊರತಲ್ಲ.
ಅ ಸಮಯದಲ್ಲಿ ತಮಗೆ ಹೇಗೆ ಭಯವಾಗಿತ್ತು? ಆಗ ಅನುಭವಿಸಿದ ಭಯ ಹಾಗೂ ಅನಾರೋಗ್ಯದ ಬಗ್ಗೆ ನಟ ಶಿವಣ್ಣ ಅದೇನು ಹೇಳಿದ್ದಾರೆ? ಸರ್ಜರಿ ಆದ್ಮೇಲೆ ಕೂಡ ನಟ ಶಿವಣ್ಣ ಅವರು ಮೊದಲಿನಂತೆ ಚೆನ್ನಾಗಿ ಊಟ ಮಾಡೋದಿಲ್ವಂತೆ.. ಈ ಬಗ್ಗೆ ಶಿವರಾಜ್‌ಕುಮಾರ್ ಅದೇನು ಹೇಳಿದ್ದಾರೆ ನೋಡಿ.. ಊಟ ಮಾಡಲು ಕೂಡ ಯೋಚನೆ ಮಾಡಬೇಕಾದ ಸ್ಥಿತಿ ಶಿವಣ್ಣ ಅನುಭವಿಸುತ್ತಿದ್ದಾರೆ ಎಂಬುದನ್ನು ತಿಳಿದಾಗ ನಿಜವಾಗಲೂ ಎಲ್ಲರಿಗೂ ಸಂಕಟವಾಗುತ್ತೆ.
ಅಣ್ಣಾವ್ರು ಬೇರೆಯವ್ರ ಸಿನಿಮಾ ನೋಡ್ತಿದ್ರಾ?.. ಯಾರ ಸಿನಿಮಾನ ಯಾಕೆ ನೋಡ್ತಾ ಇದ್ರು? ಗುಟ್ಟು ರಟ್ಟಾಯ್ತು...!
'ನನಗೆ ಊಟ ಮಾಡ್ಬೇಕು ಅನ್ಸುತ್ತೆ, ಆದ್ರೆ ನಾನು ಈಗ ಹೆಚ್ಚು ತಿನ್ನೋದಿಲ್ಲ.. ಕಡಿಮೆ ಆಹಾರವನ್ನೇ ತಿನ್ನುತ್ತೇನೆ.. ಹೆಲ್ತ್ ಚಾಲೆಂಜಸ್ ಅಂತ ಬಂದಾಗ ಎಲ್ಲರಿಗೂ ಭಯವಾಗುತ್ತೆ.. ಅದರಲ್ಲೂ ಸರ್ಜರಿ ಅಂದಾಗ ನನಗೂ ಭಯವಾಗಿತ್ತು. ನಾನು ಸರ್ಜರಿಗಿಂತ ಮೊದಲು ನನ್ನ ಸಿನಿಮಾ ಕಂಪ್ಲೀಟ್ ಮಾಡ್ಬೇಕು ಅನ್ನೋದು ನನ್ನ ಆಸೆಯಾಗಿತ್ತು..' ಎಂದಿದ್ದಾರೆ ನಟ ಶಿವರಾಜ್‌ಕುಮಾರ್. ಇಲ್ಲೂ ಕೂಡ ನಟ ಶಿವಣ್ಣ ಅವರು ತಮ್ಮ ವೃತ್ತಿಪರತೆ ಪ್ರದರ್ಶಿಸಿದ್ದಾರೆ. ಅವರಿಗೆ ತಮ್ಮ ಆರೋಗ್ಯಕ್ಕಿಂತಲೂ ಸಿನಿಮಾ ಶೂಟಿಂಗ್ ಮುಗಿಸಿಕೊಡುವುದು ಮುಖ್ಯ ಎನ್ನಿಸಿತ್ತು.
ಹೌದು, ನಟ ಶಿವಣ್ಣ ಅವರಿಗೆ ಯಾವತ್ತೂ ಸಿನಿಮಾ ಪ್ರೀತಿ ಜಾಸ್ತಿನೇ ಇದೆ. ಅವರ ಸಿನಿಮಾ ಸೋಲಲಿ ಗೆಲ್ಲಲೀ ಅವರು ನಿರಂತರವಾಗಿ ಸಿನಿಮಾ ಮಾಡುತ್ತಲೇ ಇರುತ್ತಾರೆ. ಮಾಡಿದ ಎಲ್ಲಾ ಸಿನಿಮಾ ಗೆಲ್ಲಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತು. ಆದರೆ, ತಾವು ಸಿನಿಮಾ ಮಾಡುತ್ತಿರುವ ಮೂಲಕ ತಮ್ಮಂತೆ ಸಿನಿಮಾ ಉದ್ಯಮವನ್ನೇ ನಂಬಿಕೊಂಡಿರುವ ಹಲವರಿಗೆ ಅದು ಸಹಾಯ ಮಾಡುತ್ತದೆ ಎಂಬುದು ಶಿವಣ್ಣರ ನಂಬಿಕೆ. ಒಟ್ಟಿನಲ್ಲಿ, ದೊಡ್ಮನೆ ಹಿರಿಮಗ ಶಿವಣ್ಣ ಅವರು ಈಗ ಮತ್ತೆ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.
Chhaava: ತೆಲುಗಿನಲ್ಲಿ ಭರ್ಜರಿ ಕಮಾಯಿ ಮಾಡ್ತಿದೆ ವಿಕ್ಕಿ-ರಶ್ಮಿಕಾ 'ಛಾವಾ'.. ವೀಕೆಂಡ್ ಕಲೆಕ್ಷನ್ ಎಷ್ಟು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.