ಅಣ್ಣಾವ್ರ ಜೊತೆ ಕಳೆದ ಕ್ಷಣವನ್ನು ನೆನಪಿಸಿಕೊಂಡ ಮಾಸ್ಟರ್ ಅನಂದ್. ಬೆಳ್ಳಿ ಕಾಲುಂಗುರ ಸಮಯದಲ್ಲಿ ನಡೆದ ಕ್ಷಣ....
90ರ ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟ ಮಾಸ್ಟರ್ ಆನಂದ್ ಸದ್ಯ ಬೇಡಿಕೆಯಲ್ಲಿ ಇರುವ ನಿರೂಪಕ. ಜೀ ಕನ್ನಡ ವಾಹಿನಿಯಲ್ಲಿ ಹಲವು ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡುತ್ತಿರುವ ಆನಂದ್ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ವೇದಿಕೆಯ ಮೇಲೆ ತಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣವನ್ನು ಹಂಚಿಕೊಂಡಿದ್ದಾರೆ.
'DKD ಸೆಟ್ ಇರುವ ಜಾಗದಲ್ಲಿ ಜೀವನ ಚೈತ್ರ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ನಾವು ಬೆಳ್ಳಿ ಕಾಲುಂಗುರ ಚಿತ್ರೀಕರಣ ಮಾಡುತ್ತಿದ್ವಿ ಆಗ ಇಲ್ಲಿ ಅಣ್ಣಾವ್ರು ಇದ್ದಾರೆ ಅಂತ ತಿಳಿಯಿತ್ತು, ಅಣ್ಣಾವ್ರು ಇದ್ದ ಸೆಟ್ ಚಿತ್ರೀಕರಣ ನೋಡುವುದೇ ಒಂದು ಮಜಾ. ಕ್ಯಾಮೆರಾ ಪಕ್ಕ ನಿಂತುಕೊಂಡು ಮಾನಿಟರ್ ನೋಡುತ್ತಿದ್ದೆ, ಎರಡು ಮಾರ್ಕ್ ಜಾಗದಲ್ಲಿ ಅಣ್ಣಾವ್ರು ಮತ್ತು ಮಾದವಿ ಮೇಡಂ ನಿಂತಿದ್ದರು. ಟೇಕ್ ಓಕೆ ಆದ ಮೇಲೆ ಕ್ಯಾಮೆರಾ ಕಡೆ ನೋಡಿ ನನಗೆ ಆನಂದೂ ಕರೆಕ್ಟ್ ಆಗಿ ಬಂತೇನಪ್ಪಾ ಎಂದು ಕೇಳಿದರು. ಖುರ್ಚೆ ಮೇಲೆ ಅಣ್ಣಾವ್ರು ಎಲ್ಲರೂ ಕುಳಿತಿದ್ದರೂ ಆಗ ನಾನು ಹೋಗಿ ಅಂಕಲ್ ಅಂಕಲ್ ನೀವು ಮಾಡಿದನ್ನು ನಾನು ಮಾಡ್ಲಾ ಎಂದು ಕೇಳಿದೆ. ನಾವು ಮಾಡಿದ್ದು ನೀನು ಮಾಡುತ್ತೀಯಾ ಎಂದು ಆಶ್ಚರ್ಯದಿಂದ ಅಣ್ಣಾವ್ರು ಹೇಳಿದ್ದರು' ಎಂದು ಮಾಸ್ಟರ್ ಆನಂದ್ ಮಾತನಾಡಿದ್ದಾರೆ.
ಗಂಡು ಮಗುವಿಗೆ ಜನ್ಮ ನೀಡಿದ ಪ್ರಣಿತಾ ಶುಭಾಷ್; ಈ ಸಲ ಯಾರ ಸಲಹೆನೂ ತೆಗೆದುಕೊಳ್ಳಲ್ಲ ಎಂದ ನಟಿ!
'ಇಲ್ಲಿ ನಿಂತರೆ ನೀವು ಅಲ್ಲಿ ನಿಂತರೆ ಮೇಡಂ ಹೀಗೆ ಎಂದು ಫುಲ್ ಸೀನ್ ಮಾಡಿ ತೋರಿಸಿಬಿಟ್ಟೆ. ಅದನ್ನು ನೋಡಿ ಖುಷಿಪಟ್ಟ ಅಣ್ಣಾವ್ರು ನನ್ನನ್ನು ತೊಡೆ ಮೇಲೆ ಕೂರಿಸಿಕೊಂಡು ನನ್ನ ಪಾಲಿಗೆ ದೊಡ್ಡ ಮಾತು ಹೇಳಿದ್ದರು, ಅ ಮಾತು ನ್ಯಾಷನಲ್ ಅವಾರ್ಡ್ ಅಥವಾ ಆಸ್ಕರ್ ಅವಾರ್ಡ್‌ಗಿಂತ ದೊಡ್ಡದು. 'ನೋಡಿ ಕಲೆ ಅನ್ನೋದು ಯಾರ ಸೊತ್ತು ಅಲ್ಲ ನಾವು ಮೂರು ಜನ ಅಷ್ಟೋತ್ತು ಮಾಡಿದ್ದನ್ನು ಮಾನಿಟರ್‌ನಲ್ಲಿ ನೋಡಿಕೊಂಡು ಅಷ್ಟೂ ಡೈಲಾಗ್ ಅವನು ಸೇರಿಸಿ ಹೇಳಿದ...ನನಗೆ ಕರ್ನಾಟಕದಲ್ಲಿ ಕೋಟ್ಯಾಂತರ ಅಭಿಮಾನಿಗಳು ಇದ್ದಾರೆ ಆದರೆ ನಾನು ಈ ಪುಟ್ಟ ಹುಡುಗಿನಿ ಅಭಿಮಾನಿ' ಅನ್ನೋ ಮಾತನ್ನು ಅಣ್ಣಾವ್ರು ಹೇಳಿದ್ದರು' ಅಂದು ನಡೆದ ಘಟನೆಯನ್ನು ಮಾಸ್ಟರ್ ಆನಂದ್ ನೆನಪಿಸಿಕೊಂಡಿದ್ದಾರೆ.
ಹೇಮಾ ಸಮಿತಿ; ಕಾಮಕಾಂಡ ಬಯಲು ಮಾಡಲು ನಟಿ ಅನುಷ್ಕಾ ಶೆಟ್ಟಿ ಪೋಸ್ಟ್
'ನೀನು ಮಾಡಿರುವ ರೆಕಾರ್ಡ್‌ನ ಸದ್ಯಕ್ಕೆ ಯಾವ ಮಕ್ಕಳು ಮಾಡಲು ಆಗುವುದಿಲ್ಲ. ನೀವು ಮಾಡಿರುವ ರೆಕಾರ್ಡ್‌ಗಳಿಗೆ ಜನುಮಾಂತರದ ಪುಣ್ಯ. ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡುವುದಕ್ಕೂ ದೇವರ ಆಶೀರ್ವಾದ ಇರಬೇಕು ಶಾರದೆಯ ಆಶೀರ್ವಾದ ಇರಬೇಕು. ನಿನಗೆ ಶಾರದೆ ಆಶೀರ್ವಾದ ಮಾಡಿದ್ದಾಳೆ' ಎಂದು ಆನಂದ್ ಬಗ್ಗೆ ನಟ ಜಗ್ಗೇಶ್ ಮಾತನಾಡಿದ್ದಾರೆ.