ನನ್​ ಕನಸಿನ ಹುಡ್ಗನೇ ಬೇರೆ ಇದ್ದ, ಅವ್ರನ್ನ ಯಾಕೆ ಒಪ್ಪಿಕೊಂಡ್ನೋ ಈಗ್ಲೂ ಗೊತ್ತಾಗ್ತಿಲ್ಲ: ಅದಿತಿ ಹೇಳಿದ್ದೇನು?

By Suchethana D  |  First Published Sep 5, 2024, 9:26 AM IST

ಅದಿತಿ ಮತ್ತು ಯಶಸ್​​ ದಂಪತಿ ಈಗ ಒಂದು ಪುಟ್ಟ ಮಗುವಿನ ಅಪ್ಪ-ಅಮ್ಮ ಆಗಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮದುವೆಯ ಬಗ್ಗೆ ಮೆಲುಕು ಹಾಕಿದ್ದಾರೆ ಅದಿತಿ ಪ್ರಭುದೇವ.
 


‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’, ಅಲೆಕ್ಸಾ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ  ಸ್ಯಾಂಡಲ್​ವುಡ್​ ಬೆಡಗಿ ಅದಿತಿ ಪ್ರಭುದೇವ ಈಗ ಮೂರು ತಿಂಗಳ ಪುಟಾಣಿ ಮಗಳ ಅಮ್ಮ ಆಗಿದ್ದಾರೆ.   ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ,  ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಮಗು ಎರಡೂವರೆ ತಿಂಗಳು ಇರುವಾಗಲೇ ಜೀ ಕನ್ನಡದ ರಾಜಾ ರಾಣಿ ಷೋನಲ್ಲಿ ತೀರ್ಪುಗಾರರಾಗಿಯೂ ಬಂದು ಕೆಲಸ ಶುರು ಮಾಡಿಕೊಂಡಿದ್ದಾರೆ, ಜೊತೆಗೆ ಸೋಷಿಯಲ್​ ಮೀಡಿಯಾದಲ್ಲಿಯೂ ನಟಿ ಆ್ಯಕ್ಟೀವ್​ ಆಗಿದ್ದಾರೆ.

ಇದೀಗ ಅದಿತಿ ಅವರು ರ್ಯಾಪಿಡ್​ ರಶ್ಮಿ ನಡೆಸಿಕೊಡುವ ಷೋನಲ್ಲಿ ಕಾಣಿಸಿಕೊಂಡಿದ್ದು, ಬದುಕಿನ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.  ಉದ್ಯಮಿ ಯಶಸ್ ಜೊತೆಗಿನ ಮದುವೆಯ ರೋಚಕ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ. ಕೈಯಲ್ಲಿ ನಾಲ್ಕೈದು ಚಿತ್ರಗಳು ಇದ್ದ ಟೈಮ್​ ಅದು. ಮದುವೆ-ಗಿದುವೆ ಅಂತೆಲ್ಲಾ ಯೋಚನೇನೆ ಮಾಡಿರಲಿಲ್ಲ. ಆದರೆ ಯಶಸ್​ ಮನೆಯವರ ಕಡೆಯಿಂದ ಹುಡುಗಿ ನೋಡಬೇಕು ಎಂದು ಬಂದರು. ನಮ್ಮ ಮನೆಯಲ್ಲಿಯೂ ಓಕೆ ನೋಡು ಎಂದರು. ನಾನು ಕೂಡ ಓಕೆ ಎಂದೆ. ಅಲ್ಲಿಯವರೆಗೂ ನನ್ನ ಹುಡುಗನ ಕಲ್ಪನೆ ಬೇರೆಯದ್ದೇ ರೀತಿ ಇತ್ತು. ಉದ್ಯಮಿ ಎಲ್ಲಾ  ನನಗೆ ಇಷ್ಟ ಇರಲಿಲ್ಲ. 9-6 ಜಾಬ್​ ಆಗಿರಬೇಕು ಎಂದು ಏನೇನೋ ಕಲ್ಪನೆ ಇತ್ತು. ಯಶಸ್​ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೂ ಓಕೆ ಎಂದು ಒಪ್ಪಿಕೊಂಡೆ ಎಂದು ಹೆಣ್ಣು ನೋಡುವ ಶಾಸ್ತ್ರದ ಕುರಿತು ಮಾತನಾಡಿದ್ದಾರೆ. 

Tap to resize

Latest Videos

undefined

ನಿರ್ಬಂಧಿತ ಪ್ರದೇಶದಲ್ಲಿ ಅದಿತಿ ಪ್ರಭುದೇವ ಫೋಟೋಶೂಟ್! ನಟಿಯ ಕಾಲೆಳೆಯುತ್ತಿರೋ ನೆಟ್ಟಿಗರು

ಮೊದಲಿಗೆ ಯಶಸ್​ ಫೋಟೋ ಕಳಿಸಿದ್ರು. ಏನು ಮಾಡಿದ್ರೂ ಜೂಮ್​  ಮಾಡಿದಾಗಲೆಲ್ಲಾ ಮುಖದ ಮೇಲೆ ಫೋಕಸ್ಸೇ ಆಗ್ತಿರಲಿಲ್ಲ. ಪ್ಯಾಂಟ್​, ಷರ್ಟ್​ ಹೀಗೆ ಹೋಗ್ತಿದ್ದು. ಆಮೇಲೆ ಅಂತೂ ಮುಖ ನೋಡಿದಾಗ ಹುಡುಗ ಓಕೆ ಎನ್ನಿಸಿತು. ಅವರನ್ನು ಮೀಟ್​ ಮಾಡಿದಾಗ ಹೊಸಬರು ಎನ್ನಿಸಲೇ ಇಲ್ಲ. ತುಂಬಾ ಫ್ರೆಂಡ್ಲಿಯಾಗಿ ಮಾತನಾಡಿದರು. ಮದುವೆಯಾದ್ರೆ ಇಂಡಸ್ಟ್ರಿಯ ಬಿಡ್ತೀರಾ, ಬಿಟ್ಟರೆ ಚೆನ್ನಾಗಿತ್ತು. ನೀವೇ ಡಿಸೈಡ್​ ಮಾಡಿ ಅಂತೆಲ್ಲಾ ಏನೇನೋ ಹೇಳಿದ್ರು. ಮನಸ್ಸಿನಲ್ಲಿ ಇದ್ದದ್ದನ್ನೆಲ್ಲಾ ಹೇಳಿದ್ದು ಕೇಳಿ ನನಗೆ ತುಂಬಾ ಖುಷಿಯಾಯಿತು ಎಂದಿದ್ದಾರೆ ಅದಿತಿ. ಒಳಗಡೆ ಏನೂ ಇಟ್ಟುಕೊಳ್ಳದೇ  ಎಷ್ಟು ಚೆನ್ನಾಗಿ ಮಾತನಾಡಿದ್ದಕ್ಕೆ ನಾನು ಫಿದಾ ಆಗಿ ಬಿಟ್ಟೆ. ಅದರಲ್ಲಿಯೂ, ನಟಿ ಎಂದ ಮೇಲೆ ಅವರನ್ನು ನೋಡುವ ದೃಷ್ಟಿಯೇ ಬೇರೆ ರೀತಿ ಇರುತ್ತದೆ, ಆ್ಯಟಿಟ್ಯೂಡ್​ ಜಾಸ್ತಿ, ಸಂಬಂಧ, ಅದೂ ಇದೂ ಎಂದೆಲ್ಲಾ. ಆದರೆ ಯಶಸ್​ಗಾಗಲೀ, ಅವರ ಅಪ್ಪ-ಅಮ್ಮಂಗಾಗಲೀ ಅದೆಲ್ಲ ಇರಲೇ ಇಲ್ಲ. ತುಂಬಾ ಚೆನ್ನಾಗಿ ಮಾತನಾಡಿದ್ರು. ನಾನು ಯಾಕೆ ಒಪ್ಪಿಕೊಂಡೆ ಎಂದು ಈಗಲೂ ಗೊತ್ತಿಲ್ಲ. ನನ್ನ ಕನಸಿನ ಹುಡುಗನೂ ಹೀಗೆ ಇರಲಿಲ್ಲ. ಎಲ್ಲಾ ತದ್ವಿರುದ್ಧವೇ ಇತ್ತು. ನಮ್ಮಿಬ್ಬರ ಕ್ಯಾರೆಕ್ಟರ್​, ಟೇಸ್ಟ್​ ಎಲ್ಲವೂ ಭಿನ್ನ. ಆದರೂ ಅದ್ಯಾಕೆ ಒಪ್ಪಿಕೊಂಡೆನೋ ಗೊತ್ತಿಲ್ಲ. ಮದುವೆಗೆ ಹೂಂ ಅಂದುಬಿಟ್ಟೆ ಎಂದಿದ್ದಾರೆ.  

ಇವತ್ತು ನೋಡಿದೆ, ನಾಳೆ ಓಕೆ ಎಂದೆ. ಹುಡುಗನ ಮನೆಯ ಬ್ಯಾಕ್​ಗ್ರೌಂಡ್​, ಹುಡುಗ ಏನು ಮಾಡ್ತಾನೆ ಏನೂ ಗೊತ್ತೇ ಇರಲಿಲ್ಲ. ಅಷ್ಟೊತ್ತಿಗೆ ಇಬ್ಬರ ನಡುವೆ ಲವ್​ ಶುರುವಾಗಿತ್ತು. ಅವರ ಜೊತೆ ಕನ್​ಫರ್ಟ್​ ಎನಿಸಿತ್ತು. ಇವೆಲ್ಲಾ ಆದ ಮೇಲೆ ಮನೆತನ ಅದೂ-ಇದೂ ಅಂತೆಲ್ಲಾ ನೋಡಿದ್ರು ನಮ್ಮ ಅಪ್ಪ-ಅಮ್ಮ. ಅಷ್ಟೊತ್ತಿಗಾಗಲೇ ಲವ್​ ಆ್ಯಟ್​ ಫಸ್ಟ್​ ಸೈಟ್​ ಅಂತಾರಲ್ಲ, ಹಾಗೆ ಆಗಿ ಹೋಗಿತ್ತು. ಮದುವೆನೂ ಆಯಿತು. ಈಗ ತುಂಬಾ ಹ್ಯಾಪ್ಪಿ ಆಗಿದ್ದೇನೆ. ಸೈಲೆನ್ಸ್​ ಎಂಜಾಯ್​ ಮಾಡೋದನ್ನು ಅವರಿಂದ ಕಲಿತಿದ್ದೇನೆ. ನನ್ನಿಂದ ಅವರು ಪಟಪಟ ಅಂತ ಆ್ಯಕ್ಟೀವ್​ ಇರೋದನ್ನು ಕಲಿತಿದ್ದಾರೆ. ಆದರೂ ನೆನಪಿಸಿಕೊಂಡಾಗ ನಾನು ಹೇಗೆ ಓಕೆ ಅಂದೆ ಎನ್ನೋದೇ ಇನ್ನೂ ವಿಚಿತ್ರ ಎನಿಸುತ್ತದೆ ಎಂದಿದ್ದಾರೆ. 

ಮದ್ವೆಯಾದ ತಕ್ಷಣ ಮಗುವಾಗಿದ್ದು ಇದ್ಕೇ ಅಂತೆ! ನಟಿ ಅದಿತಿ ಮಾತಿಗೆ ತಾರಾ, ಶ್ರುತಿನೇ ನಾಚಿಕೊಂಡುಬಿಟ್ರು...

click me!