ಗೌರಿ ಗಣೇಶ ಹಬ್ಬದ ಮುನ್ನವೇ ಮನೆ ಪುಟ್ಟ ಗಣೇಶನನ್ನು ಕರೆದುಕೊಂಡು ಬಂದ ನಟಿ. ಸೋಷಿಯಲ್ ಮೀಡಿಯಾ ತುಂಬಾ ಶುಭಾಶಯಗಳು.....
ಕನ್ನಡ ಚಿತ್ರರಂಗದಲ್ಲಿ ಪೊರ್ಕಿ ಚಿತ್ರದ ಮೂಲಕ ಸಿನಿ ಪ್ರೇಮಿಗಳ ಮನಸ್ಸಿಗೆ ಹತ್ತಿರವಾದ ನಟಿ ಪ್ರಣಿತಾ ಸುಭಾಷ್ ಗಂಡು ಮಗುವಿಗೆ ತಾಯಿ ಆಗಿದ್ದಾರೆ. ಸಿಕ್ಕಾಪಟ್ಟೆ ಹಾಟ್ ಫೋಟೋಶೂಟ್ ಮೂಲಕ ಎರಡನೇ ಪ್ರೆಗ್ನೆನ್ಸಿಯನ್ನು ಪ್ರಣಿತಾ ರಿವೀಲ್ ಮಾಡಿದ್ದಾರೆ.
'ತುಂಬಾ ಖುಷಿಯಾಗುತ್ತಿದೆ, ಪುಟ್ಟ ಮಗುವನ್ನು ನೋಡಿ ಮಗಳು ಆರ್ನಾ ಆಕಾಶದಲ್ಲಿ ತೇಲುತ್ತಿದ್ದಾಳೆ. ಆಕೆ ತಮ್ಮನನ್ನು ಬೇಬಿ ಎಂದು ಕರೆಯುತ್ತಿದ್ದಾಳೆ ಏಕೆಂದರೆ ಆಕೆಗೆ ಇನ್ನೂ ಅರ್ಥವಾಗಿಲ್ಲ ಅವನೇ ತಮ್ಮ' ಎಂದು ಟೈಮ್ಸ್ ಜೊತೆ ಪ್ರಣಿತಾ ಸುಭಾಷ್ ಖುಷಿ ಹಂಚಿಕೊಂಡಿದ್ದಾರೆ.
ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ 'ಪೊರ್ಕಿ' ಸುಂದರಿ ಪ್ರಣೀತಾ ಮತ್ತೊಂದು ಫೋಟೋ ವೈರಲ್!
'ಮೊದಲ ಮಗುವಿಗೆ ಪ್ರೆಗ್ನೆಂಟ್ ಆಗಿದ್ದಾಗ ಪ್ರತಿಯೊಬ್ಬರ ಸಲಹೆನೂ ಕೇಳಿಸಿಕೊಳ್ಳುತ್ತಿದ್ದ ನಡೆಯುವಂತೆ ನಡೆಯಲಿ ಎಂದು ಸುಮ್ಮನಿದ್ದೆ. ಆಗ ನನಗೆ ಏನೂ ಅರ್ಥವಾಗುತ್ತಿರಲಿಲ್ಲ. ಎರಡನೇ ಮಗುವಿನ ವಿಚಾರದಲ್ಲಿ ತುಂಬಾ ಕೂಲ್ ಆಗಿದ್ದೀನಿ ಏಕೆಂದರೆ ನನ್ನ ಮಗುವಿಗೆ ಏನು ಮಾಡಬೇಕು ಹೇಗೆ ನೋಡಿಕೊಳ್ಳಬೇಕು ಎಂದು ಅರ್ಥವಾಗಿದೆ. ಈಗಾಗಲೆ ಸರಿಯಾಗಿ ನಿದ್ದೆ ಆಗುತ್ತಿಲ್ಲ ಆದರೂ ಈ ಫೇಸ್‌ನ ಎಂಜಾಯ್ ಮಾಡುತ್ತಿದ್ದೀನಿ ಹೀಗಾಗಿ ಯಾವುದು ಒತ್ತಡ ಅನಿಸುತ್ತಿಲ್ಲ' ಎಂದು ಪ್ರಣಿತಾ ಹೇಳಿದ್ದಾರೆ.
ಪ್ರಣಿತಾ ಸುಭಾಷ್ ಮತ್ತೆ ಪ್ರೆಗ್ನೆಂಟ್: ಸಾಮಾಜಿಕ ಜಾಲತಾಣದಲ್ಲಿ ಖುಷಿ ವಿಷಯವನ್ನು ಹಂಚಿಕೊಂಡ ಪೊರ್ಕಿ ನಟಿ
'ಈಗ ನಾನು ರೆಸ್ಟ್ ತೆಗೆದುಕೊಳ್ಳುತ್ತಿರುವೆ ಆದರೆ ಜಾಸ್ತಿ ದಿನ ಹೀಗೆ ರೆಸ್ಟ್ ಮಾಡಿಕೊಂಡು ಚಿಲ್ ಮಾಡುವುದಕ್ಕೆ ಆಗಲ್ಲ. ನನ್ನ ಮೊದಲ ಮಗು ಹುಟ್ಟಿದಾಗಲೂ ನಾನು ಕೆಲಸದಿಂದ ಹೆಚ್ಚಿನ ದಿನ ದೂರ ಉಳಿಯಲಿಲ್ಲ. ನನಗೆ ಕೆಲಸ ಮಾಡುವುದು ಅಂದ್ರೆ ತುಂಬಾನೇ ಇಷ್ಟ ..ಆದಷ್ಟು ಬೇಗ ಕೆಲಸ ಶುರು ಮಾಡಬೇಕು' ಎಂದಿದ್ದಾರೆ ಪ್ರಣಿತಾ.