ನಿಮ್ಗೊತ್ತಾ..? ಮಂಗಳವಾರ ರಜಾದಿನ ಕತೆ ಹೊಳೆದದ್ದು ಕಟ್ಟಿಂಗ್ ಶಾಪ್‌ನಲ್ಲಿ

Suvarna News   | Asianet News
Published : Feb 04, 2021, 04:08 PM IST
ನಿಮ್ಗೊತ್ತಾ..? ಮಂಗಳವಾರ ರಜಾದಿನ ಕತೆ ಹೊಳೆದದ್ದು ಕಟ್ಟಿಂಗ್ ಶಾಪ್‌ನಲ್ಲಿ

ಸಾರಾಂಶ

ಮಂಗಳವಾರ ರಜಾದಿನ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಚಂದನಾ ಆಚಾರ್, ಲಾಸ್ಯ ನಾಗರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ನಿಮ್ಮ ಹಿನ್ನಲೆ ಏನು?

ಬೆಂಗಳೂರಿನಲ್ಲೇ ಹುಟ್ಟಿ ಬೆಳದವನು. ಮ‘್ಯಮ ವರ್ಗದ ಕುಟುಂಬ ನಮ್ಮದು. ಅಪ್ಪ ಚಾಲಕ. ಚಿಕ್ಕಂದಿನಿಂದಲೂ ಸಿನಿಮಾಗಳ ಕಡೆಗೆ ಇದ್ದ ಆಕರ್ಷಣೆ, ಕನಸು ಇಲ್ಲಿಯವರೆಗೂ ಕರೆದುಕೊಂಡು ಬಂತು.
ನಿರ್ದೇಶನಕ್ಕಿಳಿಯುವ ಮುನ್ನ ಏನೆಲ್ಲ ಮಾಡಿಕೊಂಡಿದ್ರಿ?

ಚಿತ್ರರಂಗಕ್ಕೆ ಬಂದು ನಾಲ್ಕು ವರ್ಷ. ಒಂದಿಷ್ಟು ಸಿನಿಮಾಗಳಿಗೆ ರೈಟರ್, ಅಸೋಸಿಯೇಟ್ ಆಗಿ ಕೆಲಸ ಮಾಡುವ ಜತೆಗೆ ಡೈಲಾಗ್ ಕೂಡ ಬರೆದಿದ್ದೇನೆ. ಯೋಗರಾಜ್ ‘ಟ್ ತಂಡದಲ್ಲಿ ಕೆಲಸ ಮಾಡುತ್ತ ಸಿನಿಮಾ ಪಾಠಗಳನ್ನು ಕಲಿತಿರುವೆ.

ನಿರ್ದೇಶನವನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ?

ನಾನು ಉಪೇಂದ್ರ ಅವರ ದೊಡ್ಡ ಅಭಿಮಾನಿ. ನಿರ್ದೇಶಕನಾಗಬೇಕು ಎನ್ನುವ ನನ್ನ ಆಸೆಗೆ ಅವರೇ ಸ್ಫೂರ್ತಿ. ಜತೆಗೆ ಒಂಚೂರು ಬರವಣಿಗೆ ಇತ್ತು. ಡ್ರಾಮಾಗಳನ್ನು ಮಾಡಿಸುತ್ತಿದ್ದೆ. ಇದರಿಂದ ಸಹಜವಾಗಿ ನನಗೆ ನಿರ್ದೇಶನದ ಕಡೆ ಹೆಚ್ಚು ಒಲವು ಮೂಡಿತು.

ಚಿತ್ರಮಂದಿರಕ್ಕಿದ್ದ ನಿರ್ಬಂಧ ಕ್ಯಾನ್ಸಲ್: ಹೊಸ ಗೈಡ್‌ಲೈನ್ಸ್ ಹೀಗಿವೆ

ಮಂಗಳವಾರ ರಜಾದಿನ ಚಿತ್ರದ ಮೂಲಕ ಏನು ಹೇಳಲು ಹೊರಟಿದ್ದೀರಿ?
ಸಂಬಂ‘ಗಳು ಬೆಲೆ, ಮೌಲ್ಯಗಳ ಮಹತ್ವ ಹೇಳುತ್ತಿದ್ದೇನೆ. ಹಾಗಂತ ಬೋ‘ನೆ ರೀತಿ ಇರಲ್ಲ. ಎಲ್ಲವನ್ನೂ ಮನರಂಜನೆಯ ‘ಾಟಿಯಲ್ಲೇ ಹೇಳಿದ್ದೇನೆ. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದಾರೆ.

ಈ ಕತೆ ಹೊಳೆದಿದ್ದು ಹೇಗೆ, ಅದಕ್ಕೆ ಟೈಟಲ್ ಯಾವ ರೀತಿ ಸೂಕ್ತ?

ಕಟ್ಟಿಂಗ್ ಶಾಪ್‌ನಲ್ಲಿ. ನನಗೆ ಕಟ್ಟಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಸುದೀಪ್ ಅವರಿಗೆ ಹೇರ್ ವಿನ್ಯಾಸ ಮಾಡಬೇಕು ಎಂಬುದು ಬಹು ದೊಡ್ಡ ಕನಸು. ಆತನ ಕನಸೇ ಚಿತ್ರದ ಅಡಿಪಾಯ. ಇನ್ನೂ ಟೈಟಲ್ ಹುಟ್ಟಿಕೊಳ್ಳದ ಕಾರಣ ನನ್ನ ತಾಯಿ ಪದ್ಮಾ ಅವರು ಒಂದು ದಿನ ನಾನು ಕಟ್ಟಿಂಗ್ ಮಾಡಿಕೊಳ್ಳಲು ಹೋಗಿ ಬರುತ್ತೇನೆ ಎಂದಾಗ ‘ಇವತ್ತು ಮಂಗಳವಾರ ರಜಾದಿನ’ ಎಂದರು. ಅದೇ ನನ್ನ ತಲೆಯಲ್ಲಿ ಉಳಿದುಕೊಂಡು ಈಗ ಸಿನಿಮಾ ಹೆಸರಾಗಿದೆ.

ನಿಮ್ಮ ಈ ಚಿತ್ರಕ್ಕೆ ಕಲಾವಿದರು ಹೇಗೆ ಸೂಕ್ತ?

ಬೇರೆ ಬೇರೆಯವರಿಗೆ ಈ ಕತೆ ಹೇಳಿದ್ದು ನಿಜ. ಆದರೆ, ಅವರಿಗಾಗಿ ಕಾಯಲು ಆಗುತ್ತಿರಲಿಲ್ಲ. ನಾವೇ ಸಾಲ ಮಾಡಿ ಸಿನಿಮಾ ಮಾಡುವ ಪರಿಸ್ಥಿತಿಯಲ್ಲಿ ಕಾಯುವುದು ಸೂಕ್ತ ಅಲ್ಲ ಎನಿಸಿದಾಗ ಚಂದನ್ ಆಚಾರ್ ನೆನಪಾಗಿ ಅವರಿಗೆ ಕತೆ ಹೇಳಿದೆ. ಇಷ್ಟವಾಗಿ ಒಪ್ಪಿದರು. ಲಾಸ್ಯ ನಾಗರಾಜ್ ಟಾಮ್ ಪಾತ್ರ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ