ನಟ, ಅತ್ಯದ್ಭುತ ಡೈರೆಕ್ಟರ್ ಶಂಕರ್ ನಾಗ್ ಅವರು ಇಂದು ನಮ್ಮೊಂದಿಗೆ ಇಲ್ಲ. ಬದುಕಿದ್ದ 35 ವರ್ಷದಲ್ಲಿ 82 ಸಿನಿಮಾಗಳನ್ನು ಮಾಡಿ, ಸದ್ದಿಲ್ಲದೇ ಎದ್ದುಹೋದ ಶಂಕರ್ ನಾಗ್ ಅವರನ್ನು ಕರುನಾಡು ಎಂದೂ ಮರೆಯಲಾಗದು. ದಾವಣಗೆರೆ ಬಳಿ ಆನಗೋಡು...
ಕನ್ನಡದ ನಟ ವಿಜಯಕಾಶಿ (Vijayakashi) ಅವರು ದಿವಂಗತ ನಟ-ನಿರ್ದೇಶಕ ಶಂಕರ್ ನಾಗ್ (Shankar Nag) ಬಗ್ಗೆ ಸಂದರ್ಶನವೊಂದರಲ್ಲಿ ಮಾತನ್ನಾಡಿದ್ದಾರೆ. 'ಗೌರೀಶ್ ಅಕ್ಕಿ ಸ್ಟುಡಿಯೋ'ದಲ್ಲಿ ಖ್ಯಾತ ನಿರೂಪಕ ಗೌರೀಶ್ ಅಕ್ಕಿ (Gaurish Akki) ಅವರೊಂದಿಗೆ ಮಾತನಾಡುತ್ತ ನಟ ವಿಜಯಕಾಶಿ ಅವರು ಇಂದು ನಮ್ಮೊಂದಿಗಿಲ್ಲದ ಶಂಕರ್ ನಾಗ್ ಬಗ್ಗೆ ಮತನಾಡಿದ್ದಾರೆ. ಹಾಗಿದ್ದರೆ ವಿಜಯಕಾಶಿ ಅವರು ಹೇಳಿದ್ದೇನು? ಗೌರೀಶ್ ಅಕ್ಕಿ ಅವರೊಂದಿಗೆ ಯಾವೆಲ್ಲಾ ಸಂಗತಿಗಳನ್ನು ಹಂಚಿಕೊಂಡಿದ್ದಾರೆ?
ಓವರ್ ಟು ವಿಜಯಕಾಶಿ.. 'ಶಂಕರ್ ನಾಗ್ ಅವರು ಅದ್ಭುತ ವ್ಯಕ್ತಿ. ಅವ್ರು ಸೆಟ್ಟಲ್ಲಿ ಬಂದು ಶೂಟಿಂಗ್ ಇಲ್ಲ ಅಂದ್ರೆ ಅಥವಾ ಲೈಟಿಂಗ್ ರೆಡಿ ಮಾಡ್ತಾ ಇದ್ರೆ ನಮ್ ತರಹ ಸುಮ್ನೆ ಕೂತ್ಕೊತಾ ಇರ್ಲಿಲ್ಲ. ಎನೋ ಬರಿತಾ ಇದ್ರು, ಸ್ಕ್ರಿಪ್ಟ್ ರೆಡಿ ಮಾಡ್ಕೊತಾ ಇದ್ರು.. ಒಮ್ಮೆ ಹೈಗ್ರೌಂಡ್ ಪೊಲೀಸ್ ಸ್ಟೇಷನ್‌ನಲ್ಲಿ ಶೂಟಿಂಗ್. ಒಂದು ನಿಮಿಷ ಕೂಡ ಸುಮ್ನೆ ಕೂತ್ಕೊತಾ ಇರ್ಲಿಲ್ಲ ಆ ಮನುಷ್ಯ. ನಾನು 'ಸರ್, ಏನಿದು, ಇಷ್ಟೊಂದು..' ಅಂತಿದ್ರೆ, 'ಸುಮ್ನೆ ಕೂತ್ಕೊಂಡು ಏನ್ ಮಾಡೋದು ಕಾಶೀ.. ಅದು ಹಂಗೆ ಮಾಡು, ಇದು ಹಿಂಗೆ ಮಾಡು' ಅಂತಿದ್ರು.
undefined
ಮತ್ತೆ ಇಡೀ ದೇಶ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಕರ್ನಾಟಕ, ಓಂ ಕಮಾಲ್ ಕಥೆ ಗೊತ್ತಾ?
ಲಂಚ್ ಆದ್ಮೇಲೆ ಲೈಟ್ ಬಾಯ್ಸ್, ಹುಡುಗ್ರೆಲ್ಲಾ ಒಂದು ಕಡೆ ಮೂಲೆನಲ್ಲಿ ಹೋಗಿ ಮಲಗಿದ್ರೆ, ಶಂಕರ್ ನಾಗ್ ಅವ್ರು ಹೋಗಿ ತಟ್ಟಿ ಎಬ್ಬಿಸ್ತಾ ಇದ್ರು.. 'ಏ ಏಳ್ರೋ, ಮಲಗೋದು ಇದ್ದೇ ಇದೆ.. ಎದ್ದು ಏನಾದ್ರೂ ಮಾಡ್ರೋ.. ಯಾಕ್ರೋ ಟೈಮ್ ವೇಸ್ಟ್ ಮಾಡ್ತೀರಾ?' ಅಂತಿದ್ರು. ಯಾರಿಗೂ ಟೈಂ ವೇಸ್ಟ್ ಮಾಡೋಕೆ ಬಿಡ್ತಿರ್ಲಿಲ್ಲ. ಕೂತಲ್ಲೇ ಏನೋ ಕೆಲಸ ಮಧ್ಯೆ ಹೇಳೋರು 'ಅಲ್ಲಿ ನಂದಿ ಹಿಲ್ಸ್‌ನಲ್ಲಿ ಒಂದು ರೂಫ್ ವೇ ಮಾಡಿಸಿಬಿಟ್ರೆ.. ಬಹಳ ಚೆನ್ನಾಗಿರುತ್ತೆ ಅನ್ನೋರು! ಈ ಥರದ್ದೇ ಅನೇಕ ಐಡಿಯಾಸ್..; ಅಂದಿದ್ದಾರೆ ನಟ ವಿಜಯಕಾಶಿ.
ಹೌದು, ಕನ್ನಡದ ಮೇರು ನಟ, ಅತ್ಯದ್ಭುತ ಡೈರೆಕ್ಟರ್ ಶಂಕರ್ ನಾಗ್ ಅವರು ಇಂದು ನಮ್ಮೊಂದಿಗೆ ಇಲ್ಲ. ಬದುಕಿದ್ದ ಕೇವಲ 35 ವರ್ಷದಲ್ಲಿ 82 ಸಿನಿಮಾಗಳನ್ನು ಮಾಡಿ, ಸದ್ದಿಲ್ಲದೇ ಎದ್ದುಹೋದ ಶಂಕರ್ ನಾಗ್ ಅವರನ್ನು ಕರುನಾಡು ಎಂದೂ ಮರೆಯಲಾಗದು. ದಾವಣಗೆರೆ ಬಳಿ ಆನಗೋಡು ಎಂಬ ಊರಿನ ಸಮೀಪ ಹೈವೇನಲ್ಲಿ 30 ಸೆಪ್ಟೆಂಬರ್ 1990ರಂದು ಕಾರು-ಲಾರಿ ಮುಖಾಮುಖಿ ಅಪಘಾತದಲ್ಲಿ ನಿಧನರಾದರು ಶಂಕರ್ ನಾಗ್.
ಡಾ ರಾಜ್ ಮೇಲಿದ್ದ ಭಾರೀ ಆರೋಪವೇನು? ಏನೇ ಇದ್ದರೂ ಅವೆಲ್ಲವೂ ಸತ್ಯಕ್ಕೆ ದೂರ ಅಂದ್ರಲ್ಲ!