ಮನೆಗೆ ಪುಟ್ಟ ಮಹಾಲಕ್ಷ್ಮಿಯನ್ನು ಬರ ಮಾಡಿಕೊಂಡ ನಟಿ ಭಾಮಾ!

Published : Mar 16, 2021, 03:02 PM IST
ಮನೆಗೆ ಪುಟ್ಟ ಮಹಾಲಕ್ಷ್ಮಿಯನ್ನು ಬರ ಮಾಡಿಕೊಂಡ ನಟಿ ಭಾಮಾ!

ಸಾರಾಂಶ

ಬಹುಭಾಷಾ ನಟಿ ಭಾಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗುವಿನ ಆರೋಗ್ಯ ವಿಚಾರಿಸಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

'ಮೊದಲಾಸಲ', 'ಶೈಲೂ', 'ರಾಗ' ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿರುವ ನಟಿ ಭಾಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪುಟ್ಟ ಮಹಾಲಕ್ಷ್ಮಿ ಆಗಮನದ ಬಗ್ಗೆ ತಿಳಿಯುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

ಗಂಡು ಮಗುವಿಗೆ ಜನ್ಮ ನೀಡಿದ 'ಅಶ್ವಿನಿ ನಕ್ಷತ್ರ' ನಟಿ ಮಯೂರಿ! 

ನಟಿ ಭಾಮಾ ತಮ್ಮ ಪ್ರೆಗ್ನೆಂಸಿ ವಿಚಾರವನ್ನು ತುಂಬಾನೇ ಸೀಕ್ರೆಟ್‌ ಆಗಿಟ್ಟಿದ್ದರು. ಸೋಷಿಯಲ್ ಮೀಡಿಯಾದಿಂದ ದೂರವೇ ಉಳಿದಿರುವ ಭಾಮಾ ಎಲ್ಲಿಯೋ ಈ ಬಗ್ಗೆ ಮಾಹಿತಿ ಹಂಚಿಕೊಂಡಿರಲಿಲ್ಲ ಹಾಗೂ ಯಾವುದೇ ರೀತಿ ಫೋಟೋ ಶೂಟ್ ಮಾಡಿಸಿಕೊಂಡ ಸುಳಿವೂ ನೀಡಿರಲಿಲ್ಲ. ಇದೀಗ ಮಗುವಾದ ವಿಚಾರದ ಬಗ್ಗೆಯೂ ಕುಟುಂಬವೇ ಸ್ಪಷ್ಟನೆ ನೀಡಬೇಕಿದೆ. ಆದರಿದು ಬಹುತೇಕ ಖಚಿತ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ. 

ಜನವರಿ 30 ,2020ರಲ್ಲಿ ಭಾಮಾ ಹಾಗೂ ಅರ್ಜುನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ತಮ್ಮ ವೈವಾಹಿಕ ಜೀವನದ ಬಗ್ಗೆ ಪ್ರೈವೇಟ್‌ ಆಗಿಟ್ಟರು. ದುಬೈನಲ್ಲಿ ಉದ್ಯಮಿ ಆಗಿರುವ ಅರ್ಜುನ್, ಭಾಮಾ ಸಹೋದರನ ಸ್ನೇಹಿತ. ಕಳೆದ ವರ್ಷ ಕೊರೋನಾ ವೈರಸ್ ವಕ್ಕರಿಸುವ ಕೆಲವು ದಿನಗಳ ಮುನ್ನ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಟೋಗಳು ಹರಿದಾಡಿದ್ದವು. ಈಗ ಮಗುವಾಗಿರುವ ಸುದ್ದಿಯೂ ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ತೇಲಾಜುತ್ತಿದೆ. ತಾಯಿ ಹಾಗೂ ಮಗು ಆರೋಗ್ಯವಾಗಿರಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕರ್ಲಿ ಹೇರ್, ಹಳದಿ ಡ್ರೆಸ್: ಸಂಗೀತಾ ಶೃಂಗೇರಿ ಹೊಸ ಅವತಾರ ನೋಡಿ ನೆಟ್ಟಿಗರು ಏನಂದ್ರು?
ಹಿಮವದ್ ಗೋಪಾಲಸ್ವಾಮಿ ದೇವರ ದರ್ಶನಕ್ಕೆ ಬಂದ ನಟ ಚಿಕ್ಕಣ್ಣ-ಪಾವನಾ: ಅಲ್ಲೇ ಸಿಕ್ತು ಸಿಹಿ ಸುದ್ದಿ!