
ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ 'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮಯೂರಿ ಸ್ಯಾಂಡಲ್‌ವುಡ್ ಮುದ್ದು ಮುಖದ ಚೆಲುವೆಯಾಗಿ ಗುರುತಿಸಿಕೊಂಡವರು. ಹತ್ತು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಹುಡುಗ ಅರುಣ್ ಜೊತೆ 2020 ಜೂನ್ 12ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ಕುಟುಂಬಕ್ಕೆ ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ.
ಮಕ್ಕಳ ದಿನಾಚರಣೆ ವಿಶೇಷವಾಗಿ ಪ್ರೆಗ್ನೆನ್ಸಿ ವಿಚಾರ ರಿವೀಲ್ ಮಾಡಿದ್ದ ಮಯೂರಿ, ಮಾಡ್ರನ್ ಹಾಗೂ ಟ್ರೆಡಿಷನಲ್ ರೀತಿಯಲ್ಲಿ ಫೋಟೋಶೂಟ್ ಮಾಡಿಸುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪ್ರೆಗ್ನೆನ್ಸಿ ಜರ್ನಿ ಬಗ್ಗೆ ಹಂಚಿ ಕೊಳ್ಳುತ್ತಿದ್ದರು. ಮಾರ್ಚ್ 15ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈಗಾಗಲೇ 'ಸ್ಟಾರ್‌ಬಾಯ್'ಗೆ ಇನ್‌ಸ್ಟಾಗ್ರಾಂ ಖಾತೆ ಕೂಡ ತೆರೆಯಲಾಗಿದೆ.
ನಟಿ ಮಯೂರಿ ಹಾಟ್ ಫೋಟೋಶೂಟ್; ಬೇಬಿ ಬಂಪ್ ಪ್ರದರ್ಶಿಸಿದ್ದು ಹೀಗೆ!
'We made it. ಗಂಡು ಮಗು. ಮಾರ್ಚ್ 15 ಜನಿಸಿದ್ದು. ಪದಗಳಲ್ಲಿ ನಮ್ಮ ಹೊಸ ಜರ್ನಿ ಆರಂಭಿಸುವುದರ ಬಗ್ಗೆ ವರ್ಣಿಸಲು ಅಸಾಧ್ಯ. ನಮಗೆ ಪ್ರೀತಿ ತೋರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು,' ಎಂದು ಮಯೂರಿ ಬರೆದುಕೊಂಡಿದ್ದಾರೆ. ಸ್ಟಾರ್‌ಬಾಯ್ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದು, ಈಗಾಗಲೆ 1 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.