ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಕನ್ನಡದ ಬಿಗ್ ಸ್ಟಾರ್‌ ಚಿತ್ರದಲ್ಲಿ 'ಮಹಾಕುಂಭ ಮೇಳ'ದ ಮೊನಾಲಿಸಾ!

Published : Feb 05, 2025, 03:37 PM ISTUpdated : Feb 05, 2025, 03:45 PM IST
ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಕನ್ನಡದ ಬಿಗ್ ಸ್ಟಾರ್‌ ಚಿತ್ರದಲ್ಲಿ 'ಮಹಾಕುಂಭ ಮೇಳ'ದ ಮೊನಾಲಿಸಾ!

ಸಾರಾಂಶ

ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಜಪಮಾಲೆ ಮಾರುತ್ತಿದ್ದ ಮೊನಾಲಿಸಾ, ವಿಶಿಷ್ಟ ನೀಲಿ ಕಣ್ಣುಗಳಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಪಡೆದರು. ಬಾಲಿವುಡ್ ನಂತರ, ಶಿವರಾಜ್‌ಕುಮಾರ್ ಅಭಿನಯದ 'ಆರ್‌ಸಿ 16' ಕನ್ನಡ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಈ ಮೂಲಕ ನಟಿ ಮೊನಾಲಿಸಾ ಆಗಿ ಹೊರಹೊಮ್ಮಲಿದ್ದಾರೆ.

ಭಾರತದಲ್ಲಿ, ಅಷ್ಟೇ ಏಕೆ ಹೆಚ್ಚೂಕಡಿಮೆ ಜಗತ್ತಿನಲ್ಲೇ ಸದ್ಯಕ್ಕೆ ಸೆನ್ಸೇಷನ್ ಸೃಷ್ಟಿರುವ ಹಲವೇ ವ್ಯಕ್ತಿಗಳ ಪೈಕಿ ಮೊನಾಲಿಸಾ (Monalisa) ಕೂಡ ಒಬ್ಬರು. ಸದ್ಯ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ (Mahakumbha Mela) ಯೂಟ್ಯೂಬರ್‌ ಒಬ್ಬರ ಕಣ್ಣಿಗೆ ಬಿದ್ದವರು ಈ ಮೊನಾಲಿಸಾ. ಹೊಟ್ಟೆಪಾಡಿಗಾಗಿ ಮಹಾಕುಂಭ ಮೇಳದಲ್ಲಿ ಜಪಸರಮಾಲೆಗಳನ್ನು ಮಾರುತ್ತಿದ್ದ ಈ ಮೊನಾಲಿಸಾ ಆ ಯೂಟ್ಯೂಬರ್ ಹರಿಬಿಟ್ಟ ವಿಡಿಯೋ ಮೂಲಕ ರಾತ್ರಿ ಬೆಳಗಾಗುವುದರಲ್ಲಿ ಜಗತ್ತೇ ನೋಡುವಂತಾಯ್ತು! ಸದ್ಯ ಅವರಿಗೆ ಬಾಲಿವುಡ್ ಸಿನಿಮಾ ಆಫರ್ ಸಿಕ್ಕಿರುವುದು ಗೊತ್ತೇ ಇದೆ. 

ಇವೆಲ್ಲಾ ಹಳೆಯ ಸಂಗತಿಗಳಾಯ್ತು.. ಹೊಸ ಸಂಗತಿ ಏನೆಂದರೆ, ಈ ಮೊನಾಲಿಸಾಗೆ ಸದ್ಯ ಸ್ಯಾಂಡಲ್‌ವುಡ್‌ ಸ್ಟಾರ್ ನಟರ ಸಿನಿಮಾವೊಂದರಿಂದ ಆಫರ್ ಸಿಕ್ಕಿದೆ. ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಸದ್ಯ ಕನ್ನಡದ ಸ್ಟಾರ್ ನಟರೊಬ್ಬರ ಮುಂಬರುವ ಸಿನಿಮಾದಲ್ಲಿ ಕೂಡ ಮೊನಾಲಿಸಾಗೆ ಆಫರ್ ನೀಡಲಾಗಿದೆ. ಈಗಾಗ್ಲೇ ಬಾಲಿವುಡ್ ಸಿನಿಮಾದ;ಲ್ಲಿ ನಟಿಸಲು ಬಲಗಾಲಿಟ್ಟು ಹೋಗಿರುವ ಮೊನಾಲಿಸಾ ಕನ್ನಡದ ಆಫರ್‌ಅನ್ನು ಖಂಡಿತ ತಿರಸ್ಕರಿಸುವುದಿಲ್ಲ. ಹೇಳಿಕೇಳಿ ಕನ್ನಡದ ಆ ಸ್ಟಾರ್ ನಟ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಕೂಡ ಹೌದು!

ನೇರ ನುಡಿಯ ಬೆಂಕಿ ಚೆಂಡು ತನಿಷಾ ಕುಪ್ಪಂಡ ಸದ್ಯ ಸುದ್ದಿಯಲ್ಲಿಲ್ಲ ಯಾಕೆ? ಇರ್ಲಿ ಬಿಡಿ, ಫೋಟೋಸ್ ನೋಡಿ!

ಮೊನಾಲಿಸಾ ಅಷ್ಟೊಂದು ಖ್ಯಾತಿ ಪಡೆಯಲು ಕಾರಣವಾಗಿದ್ದು ಅವರ ಕಣ್ಣು ಎಂಬುದು ಎಲ್ಲರಿಗೂ ಗೊತ್ತು. ಆಕೆಯ ನೀಲಿ ಮಿಶ್ರಿತ ಜೇನು ಬಣ್ಣದ ಕಣ್ಣು ಅವರನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ಬಾಲಿವುಡ್ ಬಳಿಕ ಕನ್ನಡದ ಸ್ಟಾರ್‌ ನಟರ ಸಿನಿಮಾದಿಂದಲೂ ಅವಕಾಶ ಗಿಟ್ಟಿಸಿಕೊಂಡ ಮೊನಾಲಿಸಾ, ಇನ್ಮುಂದೆ ನಟಿ ಮೊನಾಲಿಸಾ ಎಂಬ ಪಟ್ಟ ಪಡೆಯುವುದರಲ್ಲಿ ಸಂದೇಹವೇ ಇಲ್ಲ ಎನ್ನಲಾಗುತ್ತಿದೆ. ಇನ್ನೊಂದು ಸಂಗತಿ ಎಂದರೆ, ಅವರ ಹೆಸರು! ಸೌಂದರ್ಯಕ್ಕೆ ಇನ್ನೊಂದು ಹೆಸರೇ ಮೊನಾಲಿಸಾ ಅಂತಾರೆ!

ಬೇರೆ ಸಂಗತಿ ಏನೇ ಇರಲಿ, ಇಂದು ಸೋಷಿಯಲ್ ಮೀಡಿಯಾಗಳು ಹಾಗೂ ಏಐ ಜಮಾನಾ. ಇವತ್ತು ಹೀಗಿದ್ದವರು ನಾಳೆ ಹೇಗೋ ಆಗಬಹುದು. ಸೋಷಿಯಲ್ ಮೀಡಿಯಾ ಮೂಲಕ ರಾತ್ರಿ ಬೆಳಗಾಗುವುದರೊಳಗೆ ಅದೆಷ್ಟೊ ಮಂದಿ ಸ್ಟಾರ್‌ಗಳಾಗಿ ಮೆರೆಯಬಹುದು. ಮೇಲಿದ್ದ ಕೆಲವರು ಕೆಳಗೆ ಬೀಳಲೂಬಹುದು. ಸದ್ಯ ಮೊನಾಲಿಸಾ ಟಾಕ್ ಆಫ್‌ ದಿ ನೇಶನ್ ಎಂಬಂತೆ ಇದ್ದಾರೆ. ಕೇವಲ ವಿಭಿನ್ನ ಕಣ್ಣುಗಳನ್ನು ಹೊಂದಿರುವ ಕಾರಣಕ್ಕೆ ಜನರ ಮೆಚ್ಚುಗೆ ಗಳಿಸಿರುವ ಆಕೆಗೆ ಸಿನಿಮಾ ಆಫರ್ ಕೂಡ ಒಂದಾದ ಮೇಲೆ ಮತ್ತೊಂದು ಎಂಬಂತೆ ಸಿಗುತ್ತಿದೆ.

ರಾಧಿಕಾ ಕುಮಾರಸ್ವಾಮಿ ಯಶಸ್ಸಿನ 'ಆ ಗುಟ್ಟು' ಯಾರೂ ಹೇಳ್ತಿಲ್ಲ ಯಾಕೆ?.... ಗಟ್ಸ್ ಇಲ್ವಾ? 

'ಎಲ್ಲವೂ ಓಕೆ, ಕನ್ನಡದ ಯಾವ ನಟರ ಸಿನಿಮಾದಲ್ಲಿ ಮೊನಾಲಿಸಾ ನಟಿಸಲಿದ್ದಾರೆ?' ಎಂಬ ನಿಮ್ಮ ಪ್ರಶ್ನೆಗೆ ಉತ್ತರ, ಕನ್ನಡದ ಹಿರಿಯ ನಟ. ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್. ಹೌದು, ಸಿಕ್ಕ ಮಾಹಿತಿ ಪ್ರಕಾರ, ಕನ್ನಡದ ನಟ ಶಿವರಾಜ್‌ಕುಮಾರ್ ನಟನೆಯ ಮುಂಬರುವ 'ಆರ್‌ಸಿ 16 (RC 16)' ಚಿತ್ರದಲ್ಲಿ ಈ ಮೊನಾಲಿಸಾ ನಟಿಸಲಿದ್ದಾರೆ. ಈಗಾಗಲೇ ಆಕೆಗೆ ಆಫರ್ ಕೊಟ್ಟಾಗಿದೆ, ಮೊನಾಲಿಸಾ ಒಪ್ಪಿದ್ದೂ ಆಗಿದೆ. ಹಾಗಿದ್ದರೆ ಮುಂದೇನು? ನೀವು ಸಿನಿಮಾ ನೋಡಲು ರೆಡಿಯಾಗಬೇಕಷ್ಟೇ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ