ಏಕಾಏಕಿ ಯಾಕಾಗಿ 'ಮದಗಜ' ಮಹೇಶ್ 'ಡಿ ಬಾಸ್' ಪರ ನಿಂತಿದಾರೆ? ಅಸಲಿ ಕಹಾನಿ ಇಲ್ಲಿದೆ ನೋಡಿ!

By Shriram Bhat  |  First Published Jul 26, 2024, 5:37 PM IST

ನಾನು ಈಗಾಗ್ಲೇ ಅಯೋಗ್ಯ, ಮದಗಜ ಅಂತ ಯಶಸ್ವೀ ಸಿನಿಮಾ ಕೊಟ್ಟು, ಒಂದು ಸಕ್ಸಸ್ ವೇನಲ್ಲಿ ಹೋಗ್ತಾ ಇರೋವಾಗ ನಮ್ಗೆ ಸಿನಿಮಾಗಳು ಫ್ಲೋನಲ್ಲಿ ಬರ್ತಾ ಇರ್ತವೆ. ಬಾಸ್‌ ನನ್ನನ್ನು ಕಳೆದ ಹತ್ತು ವರ್ಷಗಳಿಂದ ಬಲ್ಲರು, ನಾಲ್ಕು ವರ್ಷಗಳಿಂದ ನಾನು ಅವ್ರ ಕ್ಲೋಸ್ ಬಳಗದಲ್ಲಿ ಇದೀನಿ.. 


ಮದಗಜ, ಅಯೋಗ್ಯ ಸಿನಿಮಾಗಳ ಖ್ಯಾತಿಯ ನಿರ್ದೇಶಕರಾದ ಮಹೇಶ್ ಕುಮಾರ್ (Mahesh Kumar) ಅವರು ನಟ ದರ್ಶನ್ (Darshan) ಅವರಿಗೆ ಮುಂದೆ ಮೈಥಾಲಜಿ ಸಿನಿಮಾ ಮಾಡ್ತಾರಂತೆ. ಹಾಗಂತ ಅವರು ತಮ್ಮ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ. ಕೇಳಿದ್ದ ಪ್ರಶ್ನೆಗೆ ಉತ್ತರಿಸುತ್ತ ಮಹೇಶ್ ಕುಮಾರ್ ಅವರು 'ಇಲ್ಲಿಯವರೆಗೆ ನಮ್ ಬಾಸ್ ಮೈಥಾಲಜಿ ಸಬ್ಜೆಕ್ಟ್ ಟಚ್ ಮಾಡಿಲ್ಲ, ಅದನ್ನು ಇಟ್ಕೊಂಡು ಸಿನಿಮಾ ಮಾಡ್ಬೇಕು ಅಂತ ಇದೀನಿ.. 

ಖಂಡಿತ ಅವ್ರ ಕಡೆಯಿಂದ ನನಗೆ ಒಂದು ಗ್ರೀನ್ ಸಿಗ್ನಲ್ ಇದೆ.  ಅದು ಯಾವತ್ತೇ ಇದ್ರೂ ಸಿನಿಮಾ ಆಗುತ್ತೆ. ಯಾವತ್ತು ಅನ್ನೋದಕ್ಕೆ, ಅವ್ರ ಡೇಟ್ಸ್ ಸಿಗ್ಬೇಕು ಹಾಗೇ ನಾನು ಕೂಡ ಕೈನಲ್ಲಿ ಈಗಾಗ್ಲೇ ಇರೋ ಬೇರೆ ಸಿನಿಮಾ ಮುಗ್ಸಿ ಆ ಸಿನಿಮಾಕ್ಕೆ ಬೇಸಿಕ್ ಕೆಲ್ಸ ಮುಗಿಸಿರ್ಬೇಕು. ಆಗ ನಮ್ಮಿಬ್ಬರ ಕಾಂಬಿನೇಶನ್ ಸಿನಿಮಾ ಶುರುವಾಗುತ್ತೆ ಖಂಡಿತ. ಇನ್ನೂ ಒಂದು ವಿಷ್ಯ ಏನಂದ್ರೆ,  ಅವ್ರು ಸಿನಿಮಾ ಕೊfಟರೂ ಕೊಡದೇ ಇದ್ರೂ ನಾನು ಅವ್ರ ಅಭಿಮಾನಿನೇ. 

Tap to resize

Latest Videos

undefined

ಅವರು ಜೈಲಿನಲ್ಲಿದ್ದರೂ ಹವಾ ನಡೆಯುತ್ತೆ, ಡಿ ಬಾಸ್ ಅಪರಾಧಿಯಲ್ಲ, ಆರೋಪಿ; ಮಹೇಶ್ ಕುಮಾರ್

ನಾನು ಡಿ ಬಾಸ್ ಜತೆ ಸಿನಿಮಾ ಮಾಡ್ಬೇಕು ಅನ್ನೋ ಕಾರಣಕ್ಕೆ ಮೈಕ್ ಹಿಡಿದ ತಕ್ಷಣ ಅವ್ರ ಅಭಿಮಾನಿ ಅಂತ ಹೇಳ್ಕೊತಾ ಇಲ್ಲ. ನನ್ನ ಪ್ರಕಾರ, ನಾವು ಕೆಲಸ ಕಲಿತಿದ್ರೆ, ನಾವ್ ಸಕ್ಸಸ್‌ಫುಲ್ ಸಿನಿಮಾ ಕೊಡ್ತಾ ಇದ್ರೆ ನಮ್ಗೆ ಯಾರೇ ಆದ್ರೂ ಸಿನಿಮಾ ಮಾಡೋ ಜವಾಬ್ದಾರಿ ಕೊಡ್ತಾರೆ. ಮೈಕ್ ಮುಂದೆ ಮಾತಾಡಿದೀವಿ ಅನ್ನೋ ಕಾರಣಕ್ಕೆ ಯಾರೂ ನಮ್ಗೆ ಸಿನಿಮಾ ಕೊಡಲ್ಲ ಆಯ್ತಾ..! ಅದು ನಮ್ ಡಿ ಬಾಸ್ ಆಗಿರ್ಬಹುದು ಅಥವಾ ಯಾರೇ ಆಗಿರ್ಬಹುದು. 

ನಾನು ಈಗಾಗ್ಲೇ ಅಯೋಗ್ಯ, ಮದಗಜ ಅಂತ ಯಶಸ್ವೀ ಸಿನಿಮಾ ಕೊಟ್ಟು, ಒಂದು ಸಕ್ಸಸ್ ವೇನಲ್ಲಿ ಹೋಗ್ತಾ ಇರೋವಾಗ ನಮ್ಗೆ ಸಿನಿಮಾಗಳು ಫ್ಲೋನಲ್ಲಿ ಬರ್ತಾ ಇರ್ತವೆ. ಬಾಸ್‌ ನನ್ನನ್ನು ಕಳೆದ ಹತ್ತು ವರ್ಷಗಳಿಂದ ಬಲ್ಲರು, ನಾಲ್ಕು ವರ್ಷಗಳಿಂದ ನಾನು ಅವ್ರ ಕ್ಲೋಸ್ ಬಳಗದಲ್ಲಿ ಇದೀನಿ.. ನನ್ ಬಗ್ಗೆ ಎಲ್ಲಾ ಗೊತ್ತು ಅವ್ರಿಗೆ. ನಾನು ಅವ್ರಿಗೆ ಸಿನಿಮಾ ಮಾಡಿದಾಗ ಅದನ್ನ ಮೈಥಾಲಜಿನೇ ಮಾಡ್ತೀನಿ.. ಅದಕ್ಕೂ ಮೊದಲು ಬೇರೆ ಯಾರೇ ಅದನ್ನ ಕೊಟ್ರೂ ನಂಗೆ ಖುಷಿನೇ. 

ಡಿ ಬಾಸ್ ಅವ್ರನ್ನ ತೆರೆಮೇಲೆ ನೋಡೋದೇ ಒಂದು ಖುಷಿ. ಅವ್ರು ಸಾಕಷ್ಟು ಕನ್ನಡ ಸಿನಿಮಾ ಮಾಡುವಂಥದ್ದು ಇದೆ. ಅದ್ರಲ್ಲೂ ಮುಖ್ಯವಾಗಿ ಅವ್ರು ಕನ್ನಡ ಡೈರೆಕ್ಷರ್‌ಗಳನ್ನೇ ಹುಡುಕಿ ಹುಡುಕಿ ಸಿನಿಮಾ ಮಾಡೋದಕ್ಕೆ ಚಾನ್ಸ್ ಕೊಡ್ತಾರೆ. ಅವ್ರು ಬೇರೆ ಭಾಷೆ ನಿರ್ದೇಶಕರ ಜೊತೆ ಕೆಲಸ ಮಾಡಿರೋದು ನೋಡಿದೀರಾ? ಅವ್ರ ಟೀಮ್‌ನ ಒಮ್ಮೆ ನೋಡಿ ನೀವು, ಅವ್ರು ಫಸ್ಟ್ ನಮ್ ಫೈಟ್ ಮಾಸ್ಟರ್, ವಿನೋದ್ ಮಾಸ್ಟರ್, ಅರ್ಜುನ್, ರವಿವರ್ಮ ಹೀಗೇನೇ.. 

ಪುನೀತ್, ಶಿವಣ್ಣ ಹಾಗು ದರ್ಶನ್ ಅವ್ರೆಲ್ರೂ ನಮ್ ಕನ್ನಡ ಟೆಕ್ನಿಷನ್ಸ್ ಬಗ್ಗೆ ಯಾವತ್ತೂ ಹೆಚ್ಚಿನ ಒಲವು ಇಟ್ಕೊಂಡಿದಾರೆ. ಅದ್ರಲ್ಲೂ ನಮ್ ಬಾಸು ಕನ್ನಡ ತಂತ್ರಜ್ಞರ ಬಗ್ಗೆ ದೊಡ್ಡ ಒಲವು ಇಟ್ಕೊಂಡಿದಾರೆ. ಅವ್ರಿಂದ ಇಂಡಸ್ಟ್ರಿಗೆ ತುಂಬಾ ಲಾಭನೇ. ಕೆಲವೊಬ್ಬರು ಅವ್ರು ಇಲ್ಲದೇ ಇರುವಾಗ ಖುಷಿ ಪಡ್ತಾ ಇದಾರೆ, ಅಂಥವ್ರಿಗೂ ಈಗ ಗೊತ್ತಾಗ್ತಾ ಇದೆ, ಒಬ್ರು ಸ್ಟಾರ್ ನಟ ಇಲ್ದೇ ಇದ್ರೆ ನಮ್ ಇಂಡಸ್ಟ್ರಿಗೆ ಎಷ್ಟು ದೊಡ್ಡ ನಷ್ಟ ಆಗ್ತಿದೆ ಅಂತ. ಒಂದ್ ಕಡೆ ಅಪ್ಪು ಸರ್ ಇಲ್ಲ, ಇನ್ನೊಂದ್ ಕಡೆ ಡಿ ಬಾಸ್ ಅಟ್ ಪ್ರೆಸೆಂಟ್ ಸಿಗೋ ತರ ಇಲ್ಲ. ಹೊಸಬರ ಸಿನಿಮಾಗಳಿಂದ ಫ್ಲೋ ಆಗ್ಬೇಕು. 

ದರ್ಶನ್ ಕಷ್ಟ ಪಟ್ಟಿರೋದು ನೋಡಿದ್ರೆ ತುಂಬಾ ಸಂಕಟ ಆಗುತ್ತೆ: ಗಿರಿಜಾ ಲೋಕೇಶ್ ಕಣ್ಣೀರು!

ಯೋಗರಾಜ್ ಭಟ್ ಸರ್ ಯಾವತ್ತೂ ಹೇಳ್ತಾರೆ, ಅದು ತಕ್ಕಡಿ ಇದ್ದಂಗೆ, ತೂಗುತ್ತೆ.. ಆವಾಗ ಪ್ರೇಕ್ಷಕರ ಫ್ಲೋ ಆಗುತ್ತೆ.. ಆಗ ಅವುಗಳ ಮಧ್ಯೆ ಹೊಸಬರ ಸಿನಿಮಾಗಳು ಬಂದ್ರೆ ಗೆಲ್ಲುತ್ತೆ.. ಸ್ಟಾರ್‌ಗಳ ಸಿನಿಮಾ ಬರ್ತಾ ಇರ್ಬೇಕು, ಕನ್ನಡ ಸಿನಿಮಾಗಳು ಗೆಲ್ಬೇಕು, ನಂಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಗೊತ್ತಿಲ್ಲ.. ಆದ್ರೆ ಒಂದಂತೂ ಖಂಡಿತ, ಕನ್ನಡ ಸಿನಿಮಾಗಳು ಗೆಲ್ಬೇಕು, ಆ ಮೂಲಕ ಕನ್ನಡ ಇಂಡಸ್ಟ್ರಿ ಬೆಳಿಬೇಕು' ಎಂದಿದ್ದಾರೆ ನಿರ್ದೇಶಕರು ಮಹೇಶ್ ಕುಮಾರ್.
 

click me!