ಮೂರು ಚಿತ್ರಗಳ ಬಿಡುಗಡೆಗೆ ಕಾದಿರುವ ನಟ ಚಂದನ್ ಶೆಟ್ಟಿ ಹೈ ಫೈ ಮೊಟ್ಟೆ ಫ್ರೈ ಮಾಡುತ್ತಲೇ ಬದುಕಿನ ಬಹು ದೊಡ್ಡ ನಿರ್ಧಾರಗಳ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು?
ಗಾಯಕ, ರ‍್ಯಾಪರ್ ಜೊತೆ ಈಗ ನಟ ಕೂಡ ಆಗಿರುವ ಚಂದನ್ ಶೆಟ್ಟಿಯವರು ಹೈ ಫೈ ಎಗ್ ಫ್ರೈ ಮಾಡಿದ್ದಾರೆ. ಹೌದು! ಮೊಟ್ಟೆಯ ಫ್ರೈ ಮಾಡುವುದನ್ನು ಕಲಿಸಿಕೊಟ್ಟ ಚಂದನ್ ಶೆಟ್ಟಿಯರು ಈ ಮೂಲಕ ಅಡುಗೆ ಮಾಡುವುದಕ್ಕೂ ತಾವು ಸಿದ್ಧ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಸವಿರುಚಿ ಕಾರ್ಯಕ್ರದಲ್ಲಿ ಚಂದನ್ ಶೆಟ್ಟಿ ಅವರು ಮೊಟ್ಟೆ ಫ್ರೈ ಮಾಡುವ ವಿಧಾನವನ್ನು ಹೇಳಿಕೊಟ್ಟಿದ್ದಾರೆ. ಮೊಟ್ಟೆ ತಿನ್ನುವವರು ಎಲ್ಲರೂ ಈ ಫ್ರೈ ಮಾಡುತ್ತಾರೆ ಎಂದು ನಿರೂಪಕಿ ಹೇಳಿದಾಗ, ಚಂದನ್ ಶೆಟ್ಟಿ ಅವರು, ಬದುಕಿನಲ್ಲಿ ಎಲ್ಲವೂ ಹೈ ಫೈ ಆಗಿರಬೇಕು. ನಾವು ಮಾಡುವ ಯಾವುದೇ ಕೆಲಸವಿದ್ದರೂ ಅದನ್ನು ಹೈ ಫೈ ಎಂದುಕೊಂಡೇ ಮಾಡಬೇಕು, ಅದ್ದರಿಂದ ಮೊಟ್ಟೆ ಫ್ರೈಗೂ ಹಾಗೆಯೇ ಹೇಳುತ್ತಿದ್ದೇನೆ ಎಂದಿದ್ದಾರೆ. ಆ ಬಳಿಕ ತಮ್ಮ ಜೀವನ, ಸಿನಿಮಾಗಳ ಕುರಿತೂ ಮಾತನಾಡಿದ್ದಾರೆ ಅವರು.
ಮೊದಲಿಗೆ ಚಂದನ್ ಶೆಟ್ಟಿ ಹೇಳಿಕೊಟ್ಟ ಮೊಟ್ಟೆ ಫ್ರೈ ಮಾಡುವುದು ಹೇಗೆ ಎನ್ನುವುದನ್ನು ನೋಡೋಣ. ಮೊದಲು ಮೊಟ್ಟೆಯನ್ನು ಬೇಯಿಸಿಕೊಂಡು ಅದನ್ನು ಎರಡು ಭಾಗ ಮಾಡಿಟ್ಟುಕೊಳ್ಳಬೇಕು. ಎಣ್ಣೆಯನ್ನು ಕಾಯಿಸಲು ಇಡಬೇಕು. ಇತ್ತ ಕಡೆ ಸ್ವಲ್ಪ ಖಾರದ ಪುಡಿ, ಸ್ವಲ್ಪ ಕಾಳು ಮೆಣಸಿನ ಪುಡಿ (ಪೆಪ್ಪರ್), ಸ್ವಲ್ಪ ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಬೇಕು. ಅದಕ್ಕೆ ಬೇಯಿಸಿ ಎರಡು ಭಾಗ ಮಾಡಿದ ಮೊಟ್ಟೆಯನ್ನು ಲೇಪಿಸಿ ಎಣ್ಣೆಯಲ್ಲಿ ಎರಡೂ ಕಡೆ ಫ್ರೈ ಮಾಡಬೇಕು. ಇದು ಚಂದನ್ ಶೆಟ್ಟಿ ಅವರ ರೆಸಿಪಿ.
undefined
ಚಂದನ್ ಶೆಟ್ಟಿ ವಿರುದ್ಧ ಅಂದು ಹಾಗೆ ಮಾತಾಡಿದ್ದೇ ನನಗೆ ದೊಡ್ಡ ಬ್ರೇಕ್ ಕೊಟ್ಟಿತು! Rapper ರಾಹುಲ್ ಓಪನ್ ಮಾತು
ಇದೇ ವೇಳೆ ಸಿನಿಮಾದ ಕುರಿತು ಮಾತನಾಡಿದ ಚಂದನ್ ಶೆಟ್ಟಿ, ಮೂರು ಸಿನಿಮಾ ಶೂಟಿಂಗ್ ಮುಗಿದು ರಿಲೀಸ್ಗೆ ರೆಡಿ ಇದೆ. ಮೊದಲಿಗೆ ರಿಲೀಸ್ ಆಗ್ತಿರೋದು ವಿದ್ಯಾರ್ಥಿ ವಿದ್ಯಾರ್ಥಿನಿಯರೇ. ಅದನ್ನು ಬಿಟ್ಟು ಸೂತ್ರಧಾರಿ ಮತ್ತು ಎಲ್ಲರ ಕಾಲೆಳೆಯುತ್ತೆ ಕಾಲ ಈ ಚಿತ್ರಗಳೂ ರೆಡಿ ಇವೆ. ಇವೆರಡರಲ್ಲಿ ಯಾವುದು ಮೊದಲು ರಿಲೀಸ್ ಆಗುತ್ತದೆಯೋ ಗೊತ್ತಿಲ್ಲ ಎಂದಿದ್ದಾರೆ. ಇನ್ನು ಪರ್ಸನಲ್ ಲೈಫ್ನಲ್ಲಿ ಹೇಗೆ? ಏನು ಯೋಚನೆ ಮಾಡಿರುವಿರಿ ಎಂದು ಪ್ರಶ್ನೆ ಕೇಳಿದಾಗ, ಸದ್ಯ ಪರ್ಸನಲ್ ಲೈಫ್ನಲ್ಲಿ ಯಾವುದೇ ಬದಲಾವಣೆ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಫೋಕಸ್ ಇರುವುದು ನನ್ನ ಸಕ್ಸಸ್ಗೋಸ್ಕರ ಮಾತ್ರ. ಮೊದಲು ಸಕ್ಸಸ್, ಆ ಮೇಲೆ ಉಳಿದದ್ದು, ಸಿನಿಮಾದಲ್ಲಿ ಸದ್ಯ ಸಕ್ಸಸ್ ಕಾಣಬೇಕಿದೆ. ಅದಾದ ಬಳಿಕ ಬೇರೆಯದ್ದರ ಬಗ್ಗೆ ಯೋಚನೆ ಮಾಡುತ್ತೇನೆ. ಸದ್ಯಕ್ಕೆ ನನಗೆ ಜೀವನದಲ್ಲಿ ದೊಡ್ಡ ಬ್ರೇಕ್ ಬೇಕಾಗಿದೆ. ಅದಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಉಳಿದವುಗಳ ಕಡೆ ನಂತರದಲ್ಲಿ ಯೋಚಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ಕನಸಿನ ಪಾತ್ರದ ಕುರಿತು ಚಂದನ್ ಶೆಟ್ಟಿ ಮಾತನಾಡಿದ್ದಾರೆ. ಕನಸಿನ ಪಾತ್ರ ಇಂಥದ್ದೇ ಅಂತೇನೂ ಇಲ್ಲ. ಮಾಡುವ ಪಾತ್ರಗಳಲ್ಲಿ ವಿಭಿನ್ನತೆ ಇರಬೇಕು. ನಾವು ಮಾಡುವ ಪಾತ್ರಗಳು ಎಮೋಷನ್ ಕ್ಯಾರಿ ಮಾಡ್ತಾ ಇದೆಯಾ ಎನ್ನೋದನ್ನು ನೋಡಬೇಕು. ಪಾಸಿಟಿವ್ ಅಥವಾ ನೆಗೆಟಿವ್ ಯಾವುದೇ ಪಾತ್ರ ಇರಲಿ, ಅದು ವೀಕ್ಷಕರಿಗೆ ಇಂಪ್ರೆಷನ್ ಕೊಡ್ತಾ ಇದೆಯಾ ಎನ್ನುವುದು ಮುಖ್ಯ ಎಂದಿದ್ದಾರೆ. ಇದೇ ವೇಳೆ, ಡಾ.ರಾಜ್ಕುಮಾರ್ ಅವರ ಉದಾಹರಣೆಯನ್ನು ಕೊಟ್ಟ ಅವರು, ಡಾ.ರಾಜ್ ಅವರು ಎಂಥದ್ದೇ ಪಾತ್ರ ಮಾಡಿದ್ದರೂ ಅದು ಇಂಪ್ರೆಷನ್ ಕೊಡ್ತಾ ಇತ್ತು. ಅದು ಮುಖ್ಯ ಎಂದಿದ್ದಾರೆ. ಇನ್ನು ಚಂದನ್ ಶೆಟ್ಟಿಯವರ ಕುರಿತು ಹೇಳುವುದಾದರೆ, ನಿವೇದಿತಾ ಗೌಡ ಅವರಿಂದ ಡಿವೋರ್ಸ್ ಪಡೆದು ಎರಡು ತಿಂಗಳಾಗುತ್ತಾ ಬಂದಿದೆ. ಗಲಾಟೆ, ಗದ್ದಲ, ಕೂಗಾಟ, ಕಿರುಚಾಟ, ಮಾಧ್ಯಮಗಳ ಮುಂದೆ ಬಂದು ಪರಸ್ಪರ ಆರೋಪ... ಹೀಗೆ ಏನೂ ಇಲ್ಲದೇ ಯಾರಿಗೂ ತಿಳಿಯದಂತೆ ಫ್ರೆಂಡ್ಲಿ ಡಿವೋರ್ಸ್ ಎನ್ನುವ ರೀತಿಯಲ್ಲಿ ವಿಚ್ಛೇದನ ಮಾಡಿಕೊಂಡ ದಂಪತಿಗೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿತ್ತು.
ಅವಳು ನನ್ನ ಹೋಮ್ವರ್ಕ್ ಮಾಡ್ತಿದ್ಲು... ಕಾಲೇಜ್ನ ಕ್ರಷ್ ಒಂದಾ, ಎರಡಾ... ಚಂದನ್ ಶೆಟ್ಟಿ ಓಪನ್ ಮಾತು