ರಾಜ್ ಬಿ ಶೆಟ್ಟಿ ಹೊಸ ಸಿನಿಮಾ ಟೋಬಿಯ ಫರ್ಸ್ಟ್ ಲುಕ್ ರಿಲೀಸ್ ಆಗಿದೆ. ರಾಜ್ ಬಿ ಶೆಟ್ಟಿ ರುದ್ರಭಯಂಕರವಾಗಿ ಇದರಲ್ಲಿ ಕಂಡಿದ್ದಾರೆ. ಚಿತ್ರ ಆಗಸ್ಟ್ 25 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಬೆಂಗಳೂರು (ಜೂ.29): ರಾಜ್ ಬಿ ಶೆಟ್ಟಿ ಯಾವುದೇ ಸಿನಿಮಾ ಮಾಡಿದರೂ ತುಂಬು ತೀವ್ರತೆಯಿಂದ ಮಾಡುತ್ತಾರೆ ಎಂಬುದಕ್ಕೆ ಸಾಕ್ಷಿಯೇ ‘ಟೋಬಿ’ ಸಿನಿಮಾದ ಪೋಸ್ಟರ್‌ಗಳು. ಸದ್ಯ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಪೋಸ್ಟರ್ ಸಿನಿಮಾ ಪ್ರೇಮಿಗಳನ್ನು ಅಚ್ಚರಿಗೆ ದೂಡಿದೆ. ಪೋಸ್ಟರ್‌ನಲ್ಲಿ ಬಳೆಯಾಕಾರದ ದೊಡ್ಡದೊಂದು ಮೂಗುತಿ ಧರಿಸಿರುವ ರಾಜ್ ಬಿ ಶೆಟ್ಟಿ ಕಣ್ಣಲ್ಲಿ ಬೆಂಕಿಯುಗುಳುವಂತೆ ಕಾಣಿಸಿಕೊಂಡಿದ್ದಾರೆ. ಅವರ ಮುಖದಲ್ಲಿ ಗಾಯಗಳಿವೆ. ಎದೆಯಲ್ಲಿ ಬೆಂಕಿಯುರಿಯುವಂತೆ ಪೋಸ್ಟರ್‌ನಲ್ಲಿ ಭಾಸವಾಗುತ್ತಿದೆ.
ಟೋಬಿ ಸಿನಿಮಾ ಟಿಕೆ ದಯಾನಂದ ಅವರ ಕತೆ ಆಧರಿಸಿದ ಸಿನಿಮಾ. ದಯಾನಂದರ ಕತೆಯನ್ನು ಚಿತ್ರಕತೆ ರೂಪಕ್ಕೆ ತಂದಿದ್ದು ಖುದ್ದು ರಾಜ್ ಬಿ ಶೆಟ್ಟಿ. ಆ ಚಿತ್ರಕತೆಯನ್ನಿಟ್ಟುಕೊಂಡು ಬಾಸಿಲ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ತಂಡ ಕಡಿಮೆ ದಿನದಲ್ಲಿ, ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡುವುದಕ್ಕೆ ಸಿದ್ಧಹಸ್ತಕು. ಈ ಸಿನಿಮಾವನ್ನು ಕೂಡ ಕಡಿಮೆ ಬಜೆಟ್‌ನಲ್ಲಿ ರೂಪಿಸಿದ್ದಾರೆ. ಹೆಚ್ಚು ಸದ್ದು ಮಾಡದೆ ಮಂಗಳೂರಿನ ಆಸುಪಾಸಲ್ಲೇ ಈ ಸಿನಿಮಾ ರೂಪಿಸಿರುವುದು ಸಿನಿಮಾದ ವಿಶೇಷ.
ಬರವಣಿಗೆ ಕುರಿತಾಗಿ ತುಂಬಾ ಶ್ರದ್ಧೆ ತೋರಿಸುವ ರಾಜ್ ಬಿ ಶೆಟ್ಟಿ ಅನವಶ್ಯಕವಾಗಿ ಎಲ್ಲಿಯೂ ಮಾತನಾಡುವುದಿಲ್ಲ. ಸಿನಿಮಾ ಬಿಡುಗಡೆಗೆ ಬಂದಾಗ ಎಲ್ಲಿಯೂ ಮಾತನಾಡುವುದಕ್ಕೆ ಹಿಂಜರಿಯುವುದಿಲ್ಲ. ಸಿನಿಮಾವನ್ನು ಅಪಾರವಾಗಿ ಪ್ರೀತಿಸುವ ಅವರು ಇತ್ತೀಚೆಗೆ ಅನೇಕ ಕಡೆಗಳಲ್ಲಿ ಮಾತನಾಡಿದ್ದಾರೆ. ಅಲ್ಲಿ ಮಾತನಾಡಿದ ಅವರ ಕೆಲವು ಮಾತುಗಳು ವೈರಲ್ ಆಗುತ್ತಿವೆ.
1. ಸಿನಿಮಾ ರಂಗದಲ್ಲಿ ಬರಹಗಾರರಿಗೆ ಮನ್ನಣೆ ಕೊಡುವುದಿಲ್ಲ. ಸರಿಯಾದ ಸಂಭಾವನೆ ನೀಡುವುದಿಲ್ಲ. ಒಂದು ವೇಳೆ ಸರಿಯಾದ ಸಂಭಾವನೆ ಮತ್ತು ಗೌರವ ನೀಡಿದರೆ ಒಳ್ಲೆಯ ಸಿನಿಮಾಗಳು ಬರುತ್ತವೆ. ಬರವಣಿಗೆಯನ್ನೇ ನಂಬಿಕೊಂಡ ಬರಹಗಾಗರರಿಗೆ ಸೂಕ್ತವಾದ ಸಂಭಾವನೆಯನ್ನು ನೀಡಬೇಕು.
2. ನನ್ನ ಸಿನಿಮಾ ಸಿದ್ಧವಾದ ಮೇಲೆ ನಾನು ಅದನ್ನು ನೋಡುವುದಿಲ್ಲ. ಸಿನಿಮಾದ ಪ್ರೀಮಿಯರ್ ಪ್ರದರ್ಶನ ಶುರುವಾದ ಕೂಡಲೇ ನಾನು ಹೊರಗೆ ಬರುತ್ತೇನೆ. ನಾನು ಆ ಸಿನಿಮಾವನ್ನು ಅಲ್ಲಿಗೆ ಬಿಟ್ಟು ಬಿಡುತ್ತೇನೆ. ಒಂದು ವೇಳೆ ನಾನು ಅದನ್ನು ಹಿಡಿದುಕೊಂಡರೆ ಹೊಸತಿಗೆ ಹೋಗಲು ಸಾಧ್ಯವಿಲ್ಲ. ಆಯಾ ಸಿನಿಮಾದ ಪಾತ್ರವನ್ನು ಅಲ್ಲಿಯೇ ಬಿಡಬೇಕು. ಆಗ ಮಾತ್ರ ನಮ್ಮಲ್ಲಿ ಹೊಸತು ಹುಟ್ಟುತ್ತದೆ. ಹೊಸತು ಹುಟ್ಟುವ ಪ್ರಕ್ರಿಯೆ ಕಡೆ ಹೋಗುವುದು ನನಗೆ ಇಷ್ಟ.
Time to halt your clocks and... feel the fever!! Lifting the drape on the fiery rendition of 🤗❤️🔥
𝐈𝐍 𝐂𝐈𝐍𝐄𝐌𝐀𝐒 𝟐𝟓 𝐀𝐔𝐆𝐔𝐒𝐓, 𝟐𝟎𝟐𝟑 pic.twitter.com/sJlJVCMejU
Toby: ರಾಜ್ ಬಿ ಶೆಟ್ಟಿ ಮುಂದಿನ ಚಿತ್ರ 'ಟೋಬಿ', ನಟನೆ ಜೊತೆಗೆ ನಿರ್ದೇಶನ
ರಾಜ್ ಬಿ ಶೆಟ್ಟಿ ಮಾತುಗಳು ಎಷ್ಟು ಕುತೂಹಲಕರವಾಗಿವೆಯೋ ಟೋಬಿ ಸಿನಿಮಾದ ಪೋಸ್ಟರ್ ಕೂಡ ಅಷ್ಟೇ ಕುತೂಹರವಾಗಿ ಕಾಣಿಸುತ್ತಿದೆ. ಈ ಸಿನಿಮಾ ಆಗಸ್ಟ್ 25ರಂದು ಬಿಡುಗಡೆಯಾಗುತ್ತಿದ್ದು, ಸಿನಿಮಾದ ಪ್ರಚಾರ ಕಾರ್ಯ ಎರಡು ತಿಂಗಳು ಮೊದಲೇ ಆರಂಭವಾಗಿದೆ. ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿಯವರ ಜೊತೆಗೆ ಸಂಯುಕ್ತಾ ಹೊರನಾಡು ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ರಾಜ್ ಬಿ ಶೆಟ್ಟಿ ಹೊಸ ಸಿನಿಮಾ ಟೋಬಿ;ಚಿತ್ರೀಕರಣ ಮುಗಿದಿದೆ, 2 ವರ್ಷ ಬ್ಯುಸಿಯಾಗಿದ್ದಾರೆ?