
ನಾಯಕ ನಟ ಒಂದು ಹಾಡನ್ನೂ ಹಾಡುವುದು ಈಚೀಚೆಗೆ ಜನಪ್ರಿಯವಾಗುತ್ತಿದೆ. ಅದನ್ನು ಪಾಲಿಸುವುದಕ್ಕೆ ಲೈಫ್ ಈಸ್ ಬ್ಯೂಟಿಫುಲ್ ಚಿತ್ರದ ನಾಯಕ ಪೃಥ್ವಿ ಅಂಬಾರ್ ಕೂಡ ಮುಂದಾಗಿದ್ದಾರೆ. ಈ ಹಿಂದೆ ತುಳು ಆಲ್ಬಮ್‌ಗಳಲ್ಲಿ ಹಾಡಿದ ಅನುಭವದಿಂದಲೇ ಸಿನಿಮಾಕ್ಕೂ ಹಾಡಿರುವ ಪೃಥ್ವಿ ತಮ್ಮ ಗಾಯನ ಪ್ರತಿಭೆಯ ಕುರಿತು ಹೇಳಿದ್ದಿಷ್ಟು:
‘ನಾನು ಸಂಗೀತ ಕಲಿತಿಲ್ಲ. ಅವಕಾಶ ಸಿಕ್ಕಾಗ ಆರ್ಕೆಸ್ಟ್ರಾಗಳಲ್ಲಿ ಖುಷಿಗಾಗಿ ಹಾಡುತ್ತಿದ್ದೆ. ಮೈಕಲ್ ಜಾಕ್ಸನ್ ನನ್ನ ಅಚ್ಚುಮೆಚ್ಚಿನ ಕಲಾವಿದ. ಅವರಂತೆ ನೃತ್ಯ ಮಾಡುತ್ತ ಹಾಡುವುದು ಅಭ್ಯಾಸ ಮಾಡುತ್ತಿದ್ದೆ. ಅದೇ ಹಾಡಿನ ಒಲವು ಈಗ ನನ್ನದೇ ಚಿತ್ರದಲ್ಲಿ ಹಾಡುವುದಕ್ಕೆ ದಾರಿ ಮಾಡಿಕೊಟ್ಟಿದೆ’.
ಕಾಡು, ಮಳೆಯಲ್ಲಿ ಆನೆ ಜತೆ ಸುದೀಪ್ ಹೆಜ್ಜೆ
ನೋಬಿನ್ ಪೌಲ್ ಸಂಯೋಜನೆ ಮಾಡಿರುವ ಟ್ಯೂನ್‌ಗೆ ಪೃಥ್ವಿ ತಮ್ಮದೇ ಸಾಹಿತ್ಯ ಬರೆದು ಖುಷಿಗೆ ಹಾಡುತ್ತಿದ್ದಾಗ, ಧ್ವನಿ ಚೆನ್ನಾಗಿದೆ ಅನಿಸಿತಂತೆ. ಹೀಗಾಗಿ ಚಿತ್ರದಲ್ಲೂ ಹಾಡಿಸಿದ್ದಾರೆ.
ಪೃಥ್ವಿ ಹಾಡಿರುವ ಹಾಡಿಗೆ ಸಾಹಿತ್ಯ ಬರೆದಿರುವುದು ಪತ್ರಕರ್ತ ಮದನ್ ಬೆಳ್ಳಿಸಾಲು. ಅರುಣ್ ಕುಮಾರ್ ಎಂ ಹಾಗೂ ಸಾಬು ಅಲೋಶಿಯಸ್ ಜಂಟಿಯಾಗಿ ನಿರ್ದೇಶನದ ಮಾಡಿರುವ ಈ ಚಿತ್ರಕ್ಕೆ ಕಿಶೋರ್ ನರಸಿಂಹಯ್ಯ ನಿರ್ಮಾಪಕರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.