
'ಹಾಡಿದ್ದು ಸಾಕಾಗಿದೆ. ಹಾಡ ಬೇಕಾದವರು ಹಲವರಿದ್ದಾರೆ. ಇಷ್ಟು ವರ್ಷ ಹಾಡಿರುವ ನನಗೆ ಸಂತೃಪ್ತಿಯಾಗಿದೆ. ಅದಕ್ಕಾಗಿ ಗಾಯನ ನಿಲ್ಲಿಸುತ್ತಿರುವೆ.' ಎಂದು ಹೇಳುತ್ತ, ಕನ್ನಡನಾಡಿನ ಮೈಸೂರಿನಲ್ಲಿಯೇ ತಮ್ಮ ಕೊನೆಯ ಸಂಗೀತ ಕಾರ್ಯಕ್ರಮ (2017) ಮುಗಿಸಿದ್ದರು ಎಸ್ ಜಾನಕಿ. ಇಂದು ಅದೇ ಮೈಸೂರಿನಲ್ಲಿ ಜೀವನದ ಹಾಡು ಮುಗಿಸಿ ಹೊರಟುಹೋಗಿದ್ದಾರೆ ಎಸ್ ಜಾನಕಿ. ಭಾರತದ ಮೇರು ಗಾಯಕಿ, ಪದ್ಮಭೂಷಣ ಪ್ರಶಸ್ತಿ ವಿಜೇತೆ ಎಸ್ ಜಾನಕಿಯವರು ಇನ್ನಿಲ್ಲ ಎಂಬುದು ಸಿನಿರಸಿಕರಿಗೆ, ಸಂಗೀತಪ್ರೇಮಿಗಳಿಗೆ ಅರಗಿಸಿಕೊಳ್ಳಲಾಗದ ಸಂಗತಿಯಾಗಿದೆ.
88 ವರ್ಷ ವಯಸ್ಸಿನ ಎಸ್ ಜಾನಕಿಯವರು ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಜೊತೆಗೆ ಮಗನ ಸಾವಿನಿಂದ ಕೂಡ ಕಂಗೆಟ್ಟಿದ್ದರು. ತೀರಾ ಇತ್ತೀಚೆಗೆ ಕಾಲು ಜಾರಿ ಬಿದ್ದು ಏಟು ಮಾಡಿಕೊಂಡಿದ್ದ ಎಸ್ ಜಾನಕಿಯವರು ವೀಲ್‌ಚೇರ್ ಸಹಾಯದಿಂದ ಓಡಾಡುತ್ತಿದ್ದರು. ಇಂದು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಂತಿಮ ಉಸಿರು ಚೆಲ್ಲಿದ್ದಾರೆ. ಈ ಮೂಲಕ ಭಾರತದ ಹಾಡುಹಕ್ಕಿ ಶಾಶ್ವತವಾಗಿ ಹಾಡು ನಿಲ್ಲಿಸಿ ಮರೆಯಾಗಿದೆ.
1952ರಲ್ಲಿ ಜಿ.ಕೆ. ವೆಂಕಟೇಶ್ ಅವರು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಿ.ಬಿ.ಶ್ರೀನಿವಾಸ್ ಅವರೊಂದಿಗೆ ಹಾಡಿದ್ದ ಎಸ್ ಜಾನಕಿಯವರು, ಮತ್ತೆ ಅಕ್ಟೋಬರ್ 28ರಂದು ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ಗಾನಸುಧೆ ಹರಿಸಿದ್ದೇ ಕೊನೆಯ ಕಾರ್ಯಕ್ರಮ. ಅಂದು ಸಂಭ್ರಮ, ವಿದಾಯದ ನೋವು, ಸಂಗೀತದ ಪಯಣ ಎಲ್ಲವನ್ನೂ ಮನಸಾರೆ ಹೇಳಿಕೊಂಡಿದ್ದ ಎಸ್ ಜಾಕಿಯವರು ಮತ್ತೆ ಯಾವತ್ತೂ ಸಾರ್ವಜನಿಕ ವೇದಿಕೆಗಳಲ್ಲಿ ಹಾಡಲಿಲ್ಲ. ಸ್ವತಃ ಎಸ್ ಜಾನಕಿಯವರಿಗೆ ಹಾಗೂ ಕನ್ನಡನಾಡು ಹಾಗೂ ಭಾರತದ ಎಲ್ಲಾ ಸಂಗೀತ ಪ್ರೇಮಿಗಳಿಗೆ ಕರ್ನಾಟಕದ ಮೈಸೂರು ಕೊನೆಯ ಸಂಗೀತದ ಕಾರ್ಯಕ್ರಮದ ವೇದಿಕೆಯಾಗಿದ್ದು ಇತಿಹಾಸದ ಪುಟದಲ್ಲಿ ಮರೆಯಲಾದ ಕ್ಷಣವಾಗಿ ಅಚ್ಚಳಿಯದೇ ಉಳಿಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.